For Quick Alerts
ALLOW NOTIFICATIONS  
For Daily Alerts

ದೇಶದಲ್ಲಿ ನಿರುದ್ಯೋಗ ಇಳಿಕೆ ಎಂದು ವರದಿ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ

|

ನವದೆಹಲಿ, ಜೂನ್ 4: ಕೊರೊನಾವೈರಸ್ ಲಾಕ್‌ಡೌನ್ ಪರಿಣಾಮವಾಗಿ ಇಂದು ಅನೇಕ ಜನ ಉದ್ಯೋಗ ನಷ್ಟ ಭೀತಿಯಲ್ಲಿದ್ದಾರೆ. ಆದರೆ, ಇದಕ್ಕೆ ಕೇಂದ್ರ ಸರ್ಕಾರ ಗುರುವಾರ ಬಿಡುಗಡೆ ಮಾಡಿರುವ ಅಂಕಿ ಅಂಶಗಳು ವ್ಯತಿರಿಕ್ತವಾಗಿದೆ.

 

ಕೇಂದ್ರ ಸರ್ಕಾರ 2018-19 ನೇ ಸಾಲಿನ ತನ್ನ periodic labour force survey report ವರದಿಯನ್ನು ಗುರುವಾರ ಬಿಡುಗಡೆ ಮಾಡಿದೆ. ಈ ವರದಿಯು ಜುಲೈ, 2018 ಮತ್ತು ಜುಲೈ, 2019 ರ ನಡುವೆ ಸಂಗ್ರಹಿಸಿದ ದತ್ತಾಂಶವನ್ನು ಒಳಗೊಂಡಿದೆ. ಈ ವರದಿಯ ಪ್ರಕಾರ ಭಾರತದಲ್ಲಿ ನಿರುದ್ಯೋಗ ದರವು ಆರ್ಥಿಕ ವರ್ಷ 2018-19ರಲ್ಲಿ ಶೇ 5.8 ಕ್ಕೆ ಇಳಿದಿದೆ.

Ministry of Statistics and Programme Implementation (MoSPI) ಪ್ರಕಾರ ಕಳೆದ ವರ್ಷವೇ ದೇಶದಲ್ಲಿ ನಿರುದ್ಯೋಗ ಪ್ರಮಾಣ ( 6.01%) ಹೆಚ್ಚಿತ್ತು ಎಂಬುದು ಈ ಮೂಲಕ ಸಾಬೀತಾಗುತ್ತದೆ.

ಯಾವುದೇ ಸಾಮಾಜಿಕ ಭದ್ರತೆ ಪಡೆದುಕೊಳ್ಳುತ್ತಿಲ್ಲ

ಯಾವುದೇ ಸಾಮಾಜಿಕ ಭದ್ರತೆ ಪಡೆದುಕೊಳ್ಳುತ್ತಿಲ್ಲ

Ministry of Statistics and Programme Implementation (MoSPI) ಅಂಕಿಅಂಶಗಳ ಪ್ರಕಾರ, ಕೃಷಿಯೇತರ ವಲಯದ ನಿಯಮಿತ ಸಂಬಳ ಪಡೆಯುವ ನೌಕರರಲ್ಲಿ ಶೇಕಡ 51.9 ರಷ್ಟು ಜನರು ಯಾವುದೇ ಸಾಮಾಜಿಕ ಭದ್ರತೆ ಪಡೆದುಕೊಳ್ಳುತ್ತಿಲ್ಲ. ಇವರ ಸಂಖ್ಯೆ ಪುರುಷರಲ್ಲಿ ಶೇಕಡಾ 51.2 ಮತ್ತು ಮಹಿಳೆಯರಲ್ಲಿ ಶೇಕಡಾ 54.4 ರಷ್ಟಿದೆ ಎಂದು ವರದಿ ಹೇಳುತ್ತದೆ. ಇದಲ್ಲದೆ, ಕೃಷಿಯೇತರ ವಲಯದ ಶೇಕಡಾ 69.5 ರಷ್ಟು ಸಾಮಾನ್ಯ ಸಂಬಳ ಪಡೆಯುವ ನೌಕರರಿಗೆ ಯಾವುದೇ ಉದ್ಯೋಗ ಒಪ್ಪಂದಗಳಿಲ್ಲ. ಈ ಸ್ಥಿತಿಯನ್ನು ಪುರುಷರಲ್ಲಿ ಶೇಕಡಾ 70.3 ರಷ್ಟಿದ್ದರೆ, ಮಹಿಳೆಯರಲ್ಲಿ ಶೇಕಡಾ 66.5 ರಷ್ಟಿದೆ.

ಅಲ್ಪಸಂಖ್ಯಾತರಲ್ಲಿ ನಿರುದ್ಯೋಗ

ಅಲ್ಪಸಂಖ್ಯಾತರಲ್ಲಿ ನಿರುದ್ಯೋಗ

2018-19ರಲ್ಲಿ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ (ಎಸ್‌ಸಿ / ಎಸ್‌ಟಿ) ದಲ್ಲಿ ನಿರುದ್ಯೋಗ ದರ ಏರಿಕೆಯಾಗಿದೆ ಎಂದು Ministry of Statistics and Programme Implementation (MoSPI) ಅಕಿ ಅಂಶ ತೋರಿಸುತ್ತದೆ. ಇದಲ್ಲದೆ, ಈ ಸಮಯದಲ್ಲಿ ಅಲ್ಪಸಂಖ್ಯಾತರಲ್ಲಿ ನಿರುದ್ಯೋಗ ದರವೂ ಏರಿಕೆ ಕಂಡಿದೆ.

ನಗರ ಪ್ರದೇಶಗಳಲ್ಲಿ
 

ನಗರ ಪ್ರದೇಶಗಳಲ್ಲಿ

ನಗರ ಪ್ರದೇಶಗಳಲ್ಲಿ ಐದು ಯುವಕರಲ್ಲಿ, ನಾಲ್ಕು ಮಹಿಳೆಯರಲ್ಲಿ ನಿರುದ್ಯೋಗಿಗಳಾಗಿದ್ದಾರೆ. 2018-19ರಲ್ಲಿ ಎಸ್‌ಸಿಗಳಲ್ಲಿ ನಿರುದ್ಯೋಗ ದರವು ಶೇಕಡ 6.3 ರಿಂದ 6.4 ಕ್ಕೆ ಏರಿದರೆ, ಎಸ್‌ಟಿಗಳ ಹಿಂದಿನ ಪ್ರಮಾಣವು ಹಿಂದಿನ 4.3 ಶೇಕಡಕ್ಕಿಂತ 4.5 ಕ್ಕೆ ಏರಿದೆ. ಅದೇ ಸಮಯದಲ್ಲಿ, ಒಬಿಸಿಗಳಲ್ಲಿ (ಇತರ ಹಿಂದುಳಿದ ವರ್ಗಗಳು) ನಿರುದ್ಯೋಗ ದರವು ಹಿಂದಿನ 6 ಪ್ರತಿಶತಕ್ಕಿಂತ 5.9 ಕ್ಕೆ ಇಳಿದಿದೆ. ಇತರರಿಗೆ 6.7 ರಿಂದ 5.9 ಕ್ಕೆ ಇಳಿದಿದೆ.

ವಿವಿಧ ವರ್ಗಗಳಲ್ಲಿ ನಿರುದ್ಯೋಗ ಪ್ರಮಾಣ

ವಿವಿಧ ವರ್ಗಗಳಲ್ಲಿ ನಿರುದ್ಯೋಗ ಪ್ರಮಾಣ

ಆದಾಗ್ಯೂ, ಹೆಚ್ಚು ಆತಂಕಕಾರಿ ಸಂಗತಿಯೆಂದರೆ 15-29 ವರ್ಷ ವಯಸ್ಸಿನ ವಿದ್ಯಾವಂತ ಯುವಕರಲ್ಲಿ ನಿರುದ್ಯೋಗ ದರವು 2018-19ರಲ್ಲಿ ಶೇ 17.3 ರಷ್ಟಿತ್ತು. ಅನಕ್ಷರಸ್ಥರೆಂದು ಗುರುತಿಸಲ್ಪಟ್ಟ ನಾಗರಿಕರ ನಿರುದ್ಯೋಗ ದರವು ಶೇಕಡ 1.1 ರಿಂದ 1.2 ಕ್ಕೆ ಇಳಿದಿದೆ ಎಂದು ಡೇಟಾ ತೋರಿಸುತ್ತದೆ. ಅಂತೆಯೇ, ಸಾಕ್ಷರರು ಮತ್ತು ಪ್ರಾಥಮಿಕ ಹಂತದವರ ಪ್ರಮಾಣವು ಶೇಕಡಾ 2.7 ರಿಂದ 2.4 ಕ್ಕೆ ಸುಧಾರಿಸಿದೆ. ಮಧ್ಯಮ ಶಾಲಾ ಪದವೀಧರರಿಗೆ, ನಿರುದ್ಯೋಗವು 2018-19ರಲ್ಲಿ ಶೇ 5.5 ರಿಂದ ಶೇ 4.8 ಕ್ಕೆ ಇಳಿದಿದೆ. ಕ್ರಿಶ್ಚಿಯನ್ನರಿಗೆ, ನಿರುದ್ಯೋಗ ದರವು ಶೇಕಡಾ 8.7 ರಿಂದ 7.2 ಕ್ಕೆ ಇಳಿದಿದ್ದರೆ, ಸಿಖ್ಖರಿಗೆ ಇದೇ ಪ್ರಮಾಣವು 7.9 ಶೇಕಡಕ್ಕೆ ಏರಿದೆ. ಹಿಂದೂಗಳಿಗೆ ನಿರುದ್ಯೋಗ ದರವು ಶೇಕಡಾ 5.8 ರಿಂದ 5.6 ಕ್ಕೆ ಇಳಿದಿದೆ ಮತ್ತು ಮುಸ್ಲಿಮರಿಗೆ ಇದೇ ಅವಧಿಯಲ್ಲಿ ಶೇ 6.8 ರಿಂದ ಶೇ 7.3 ಕ್ಕೆ ಏರಿದೆ ಎಂದು Ministry of Statistics and Programme Implementation (MoSPI) ಹೇಳಿದೆ.

English summary

There Is No Jobs Cut In India During In 2018-19 Reports Says

There Is No Jobs Cut In India During In 2018-19 Reports Says, according to Ministry of Statistics and Programme Implementations (MoSPI) periodic labour force survey report.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X