For Quick Alerts
ALLOW NOTIFICATIONS  
For Daily Alerts

ಈ 40 ಪೈಲಟ್ ಗಳಿಗೆ ತಿಂಗಳಿಗೆ 8 ಲಕ್ಷ, ಭತ್ಯೆ ಪ್ರತ್ಯೇಕ

|

ಏರ್ ಇಂಡಿಯಾದಿಂದ ನಲವತ್ತು ಮಂದಿ ಅತ್ಯಂತ ಹಿರಿಯ ಪೈಲಟ್ ಗಳನ್ನು ಆರಿಸಲಾಗಿದೆ. ಅವರನ್ನು ನಿಯೋಜಿಸಿರುವ ಕೆಲಸ, ದೊರೆಯುವ ವೇತನ, ಭತ್ಯೆ ಇತ್ಯಾದಿಗಳನ್ನು ತಿಳಿದುಕೊಂಡರೆ ಎಂಥವರೂ ಅರೆ ಕ್ಷಣ ಬಿಟ್ಟ ಬಾಯಿ ಮುಚ್ಚುವುದಿಲ್ಲ. ಅಂದ ಹಾಗೆ ಇರುವ ಕಸ್ಟಮೈಸ್ಡ್ ವಿಮಾನಗಳ ಹಾರಾಟಕ್ಕೆ ಅಂತಲೇ ನೇಮಕ ಆಗಿದ್ದು, ಅವುಗಳನ್ನು ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಹಾಗೂ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಬಳಸುತ್ತಾರೆ.

ಅಂದ ಹಾಗೆ ಈ ಪೈಲಟ್ ಹುದ್ದೆಗಳಿಗೆ ಮೇ 15ನೇ ತಾರೀಕು ಅರ್ಜಿ ಕರೆಯಲಾಗಿತ್ತು. ಈ ನಲವತ್ತು ಪೈಲಟ್ ಗಳು ಎರಡು ಬೋಯಿಂಗ್ 777 ಹಾರಾಟಕ್ಕೆ ನೇಮಕವಾಗಿದ್ದಾರೆ. ಅವುಗಳು ಜುಲೈನಿಂದ ಹಾರಾಟಕ್ಕೆ ಲಭ್ಯ ಆಗಲಿವೆ. ಸದ್ಯಕ್ಕೆ ವಿವಿಐಪಿ ಏರ್ ಇಂಡಿಯಾ B747 ಇದ್ದು, ಅವುಗಳನ್ನು ಏರ್ ಇಂಡಿಯಾ ಒನ್ ಎನ್ನಲಾಗುತ್ತದೆ. ಇನ್ನು ಮುಂದೆ ಹೊಸ ವಿಮಾನಗಳಿಗೂ ಅದೇ ಹೆಸರಿನಿಂದ ಕರೆಯಲಾಗುತ್ತದೆ.

B777 ವಿಮಾನದ ಬೆಲೆ 1425 ಕೋಟಿ

B777 ವಿಮಾನದ ಬೆಲೆ 1425 ಕೋಟಿ

B777 ವಿಮಾನದ ಬೆಲೆ 19 ಕೋಟಿ ಅಮೆರಿಕನ್ ಡಾಲರ್. ಭಾರತದ ರುಪಾಯಿ ಲೆಕ್ಕದಲ್ಲಿ ಹೇಳಬೇಕೆಂದರೆ, 1425 ಕೋಟಿ, ಅತ್ಯಾಧುನಿಕವಾದ ರಕ್ಷಣಾ ವ್ಯವಸ್ಥೆಗಳು ಇದರಲ್ಲಿವೆ. ಈ ಹಿಂದೆ ಭಾರತೀಯ ವಾಯು ಸೇನೆಯ ಪೈಲಟ್ ಗಳನ್ನು ನೇಮಿಸಬೇಕು ಎಂಬ ಚಿಂತನೆ ಇತ್ತು. ಆದರೆ ಯೋಜನೆ ಬದಲಾಯಿತು. ಈಗ ಪೈಲಟ್ ಆಗಿ ನಲವತ್ತು ಮಂದಿ ಆಯ್ಕೆ ಆಗಿದ್ದಾರಲ್ಲ, ಅವರ ಈ ಹೈ ಪ್ರೊಫೈಲ್ ಉದ್ಯೋಗಕ್ಕೆ ಸಿಗುತ್ತಿರುವ ಸಂಬಳ- ಸವಲತ್ತು ಈ ತನಕ ಕಂಡು ಕೇಳರಿಯದಂಥದ್ದು. ಇವರ ವೇತನ ಏರ್ ಇಂಡಿಯಾ ಮೂಲಕವೇ ಸಿಗುತ್ತದೆ. ಭತ್ಯೆಗಳು, ವಾರ್ಷಿಕ ವೇತನ ಹೆಚ್ಚಳ ಸಿಗುತ್ತದೆ. ಜತೆಗೆ ಓವರ್ ಟೈಮ್ ಮತ್ತು 70 ಗಂಟೆಗಳ ಕಾಲ ಖಾತ್ರಿ ಹಾರಾಟ ಭತ್ಯೆ ಸಿಗುತ್ತದೆ.

ನಿಶ್ಚಿತವಾದ ಭತ್ಯೆ 1200 ಅಮೆರಿಕನ್ ಡಾಲರ್

ನಿಶ್ಚಿತವಾದ ಭತ್ಯೆ 1200 ಅಮೆರಿಕನ್ ಡಾಲರ್

ಈ ಪೈಲಟ್ ಗಳು ಎಷ್ಟು ಗಂಟೆ ವಿಮಾನ ಹಾರಾಟ ನಡೆಸಿದರು ಎಂಬುದರ ಲೆಕ್ಕವನ್ನು ಏನೂ ತೆಗೆದುಕೊಳ್ಳದೆ ಈಗ ಆಯ್ಕೆ ಆಗಿರುವ ನಲವತ್ತೂ ಮಂದಿಗೆ ಪ್ರತಿ ತಿಂಗಳು ನಿಶ್ಚಿತವಾದ ಭತ್ಯೆ 1200 ಅಮೆರಿಕನ್ ಡಾಲರ್ (ಭಾರತದ ರುಪಾಯಿ ಲೆಕ್ಕದಲ್ಲಿ 90,000) ದೊರೆಯುತ್ತದೆ. ಇದರ ಹೊರತುಪಡಿಸಿ ಎಕ್ಸಾಮಿನರ್ ಹಾಗೂ ಇನ್ ಸ್ಟ್ರಕ್ಟರ್ ಗಳಾಗಿಯೂ ಗಳಿಸುವ ಭತ್ಯೆ ದೊರೆಯಲಿದೆ. ಈ ಅರ್ಜಿದಾರರು B777 ಕಮ್ಯಾಂಡರ್ಸ್ ಆಗಿರಬೇಕು, ಲೈನ್ ಟ್ರೈನಿಂಗ್ ಕ್ಯಾಪ್ಟನ್, ಟೈಪ್ ರೇಟಿಂಗ್ ಇನ್ ಸ್ಟ್ರಕ್ಟರ್ ಅಥವಾ ನಿಯೋಜಿತ ಎಕ್ಸಾಮಿನರ್ ಗಳಾಗಿರಬೇಕಿತ್ತು. ಅಂಥವರನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲಾಗಿದೆ.

ತಿಂಗಳಿಗೆ ಎಂಟು ಲಕ್ಷ ವೇತನ

ತಿಂಗಳಿಗೆ ಎಂಟು ಲಕ್ಷ ವೇತನ

ಪೈಲಟ್ ಗಳು ಐಎಎಫ್ ವಿಮಾ ಸೇವೆಗಳನ್ನು ಮಾತ್ರ ಕೈಗೊಳ್ಳುತ್ತಾರೆ. ಲೈಸೆನ್ಸ್ ಕರೆನ್ಸಿ ಅಗತ್ಯಗಳಿಗೆ ಮಾತ್ರ ಏರ್ ಇಂಡಿಯಾ ವಿಮಾನಗಳ ಸೇವೆ ನೀಡುತ್ತಾರೆ ಎಂದು ಏರ್ ಇಂಡಿಯಾವು ಅರ್ಜಿ ಆಹ್ವಾನದ ವೇಳೆ ತಿಳಿಸಿತ್ತು. ಹಾಗಿದ್ದರೆ ಈ ಪೈಲಟ್ ಗಳಿಗೆ ದೊರೆಯುವ ವೇತನ ಎಷ್ಟು? ಉಸಿರು ಬಿಗಿ ಹಿಡಿದುಕೊಳ್ಳಿ. ತಿಂಗಳಿಗೆ ಎಂಟು ಲಕ್ಷ ವೇತನ ಮತ್ತು ಭತ್ಯೆಗಳು. ವರ್ಷದಲ್ಲಿ ಎಷ್ಟು ಸಮಯ ವಿಮಾನ ಹಾರಾಟದ ಕರ್ತವ್ಯ ಇರುತ್ತದೆ ಅಂತ ನೋಡಿದರೆ ಅದು ಕೂಡ ತುಂಬ ಕಡಿಮೆ. ಇವೆಲ್ಲವನ್ನೂ ಗಮನಿಸಿದರೆ ಒಂದು ವಿಷಯವನ್ನು ಅನುಮಾನವೇ ಇಲ್ಲದೆ ಹೇಳಬಹುದು: ದೇಶದಲ್ಲೇ ಅತ್ಯಂತ ಹೆಚ್ಚು ವೇತನ ಪಡೆಯುವ ಪೈಲಟ್ ಗಳು ಇವರು. ಹಾಗಿದ್ದರೆ ಎರಡು B777 ವಿಮಾನಕ್ಕೆ ನಲವತ್ತು ಪೈಲಟ್ ಬೇಕಾ? ಹನ್ನೆರಡು ಪೈಲಟ್ ಸಾಕಿತ್ತು ಎನ್ನುತ್ತಾರೆ ಅಧಿಕಾರಿಗಳು.

ವಿಮಾನದ ವಿಶೇಷಗಳೇನು ಗೊತ್ತಾ?

ವಿಮಾನದ ವಿಶೇಷಗಳೇನು ಗೊತ್ತಾ?

ಇನ್ನು ಹೊಸ ವಿಮಾನದ ವಿಶೇಷಗಳೇನು ಗೊತ್ತಾ? ಇದರಲ್ಲಿ ಕ್ಷಿಪಣಿ ಎಚ್ಚರಿಕೆ ಸೆನ್ಸರ್ ಗಳಿವೆ. ಕೌಂಟರ್ ಮೆಷರ್ ಡಿಸ್ಪೆನ್ಸಿಂಗ್ ವ್ಯವಸ್ಥೆ ಇದೆ. ಅತ್ಯಾಧುನಿಕವಾದ ಇಂಟಿಗ್ರೇಟೆಡ್ ಡಿಫೆನ್ಸಿವ್ ಎಲೆಕ್ಟ್ರಾನಿಕ್ ವಾರ್ ಫೇರ್ ಸ್ಯೂಟ್ಸ್ ಇವೆ. ಇಷ್ಟೆಲ್ಲ ಇರುವ ವಿಮಾನಕ್ಕೆ ಆರಂಭದಲ್ಲಿ ಭಾರತದ ವಾಯು ಸೇನೆ ಪೈಲಟ್ ಗಳನ್ನು ಆರಿಸಿದ್ದರಲ್ಲಿ ಯಾವ ಅಚ್ಚರಿ ಇರಲಿಲ್ಲ. ಆದರೆ ಏರ್ ಇಂಡಿಯಾ ಪೈಲಟ್ ಗಳಿಗೆ ಐಎಎಫ್ ಕಮ್ಯುನಿಕೇಷನ್ ಸ್ಕ್ವಾಡ್ರನ್ ಗಳು ತರಬೇತಿ ನೀಡಿದ್ದಾರೆ. ಅತಿ ಗಣ್ಯರು, ಗಣ್ಯರು ವಿದೇಶಕ್ಕೆ ಭೇಟಿ ನೀಡುವಾಗ ಅವರಿಗೆ ಬೆಂಗಾವಲಾಗಿ ತೆರಳುವುದಕ್ಕೆ ಅಂತಲೇ ನಿಯೋಜಿತರಾದವರು ಈ ಸ್ಕ್ವಾಡ್ರನ್ ಗಳು. ಆದರೆ ಅವರನ್ನು ಬಿಟ್ಟು, ಏರ್ ಇಂಡಿಯಾ ಪೈಲಟ್ ಗಳನ್ನೇ ಆರಿಸಿರುವ ಅಚ್ಚರಿ ತರಿಸಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

English summary

These 40 Pilots Highest Paid In The Country With 8 Lakh Per Month

These 40 senior most Air India pilots paid monthly pay of 8 lakh and other allowance. Highest paid in the country.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X