For Quick Alerts
ALLOW NOTIFICATIONS  
For Daily Alerts

ಸ್ಫೋಟಕ ತಯಾರಿಸುವ ಈ ಕಂಪನಿಯ ಷೇರು ಕೊಂಡವರಿಗೆ 2 ವರ್ಷದಲ್ಲಿ 4 ಪಟ್ಟು ಲಾಭ

|

ಮುಂಬೈ, ನ. 9: ಷೇರುಪೇಟೆಯಲ್ಲಿ ಹಣ ಹೂಡಿ ಭರ್ಜರಿ ಲಾಭ ಮಾಡಬೇಕು ಎಂಬುದು ಎಲ್ಲರ ಆಸೆ. ಆದರೆ ಅದು ಸುಲಭದ ಮಾತಲ್ಲ. ಅದೃಷ್ಟ ಬೇಕು. ಅದೃಷ್ಟ ತರುವ ಕುದುರೆಯ ಬಾಲ ಹಿಡಿಯಬೇಕು. ಯಾವ ಕಂಪನಿ ಯಾವ ಸಮಯದಲ್ಲಿ ಮಿಂಚಿನ ಓಟ ಮಾಡುತ್ತದೆ ಎಂದು ಗುರುತಿಸುವ ನಿಪುಣತೆ, ಮತಿ ಇರಬೇಕು. ಆದರೆ, ಅನಿಶ್ಚಿತ ಆರ್ಥಿಕ ವಾತಾವರಣದಲ್ಲಿ ಅದು ಕಷ್ಟ. ಅದೇನೇ ಇರಲಿ, ಸ್ಫೋಟಕ ಕ್ಷೇತ್ರದಲ್ಲಿರುವ ಮಧ್ಯಮ ಗಾತ್ರದ ಸೋಲಾರ್ ಇಂಡಸ್ಟ್ರೀಸ್ ಸಂಸ್ಥೆ ಷೇರುಪೇಟೆಯಲ್ಲಿ ಇತ್ತೀಚೆಗೆ ಕಲರವ ನಡೆಸುತ್ತಿದೆ. ಕೇವಲ 2 ವರ್ಷದ ಹಿಂದಷ್ಟೇ 1 ಸಾವಿರ ರೂ ಬೆಲೆ ಹೊಂದಿದ್ದ ಸೋಲಾರ್ ಇಂಡಸ್ಟ್ರೀಸ್ ಷೇರು ಇದೀಗ 4 ಸಾವಿರ ರೂ ಗಡಿ ದಾಟಿ ಹೋಗಿದೆ.

 

2022ರ ಸೆಪ್ಟೆಂಬರ್ ಅಂತ್ಯದ ತ್ರೈಮಾಸಿಕದಲ್ಲಿ ಸೋಲಾರ್ ಇಂಡಸ್ಟ್ರೀಸ್ ತನ್ನ ವಾರ್ಷಿಕ ಆದಾಯ ಲೆಕ್ಕದ ವರದಿ ನೀಡಿದೆ. ಈ ಅವಧಿಯಲ್ಲಿ ಸಂಸ್ಥೆ 1,567 ಕೋಟಿ ರೂ ಆದಾಯ ಹಾಗು 189 ಕೋಟಿ ರೂ ನಿವ್ವಳ ಲಾಭ ಗಳಿಸಿರುವುದನ್ನು ವರದಿಯಲ್ಲಿ ತೋರಿಸಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಗಳಿಸಿದ್ದಕ್ಕಿಂತ ಶೇ. 99 ಆದಾಯ ಮತ್ತು ಶೇ. 152ರಷ್ಟು ನಿವ್ವಳ ಲಾಭದಲ್ಲ ಹೆಚ್ಚಳವಾಗಿದೆ.

ಈ ವರದಿ ಬಂದ ಬೆನ್ನಲ್ಲೇ ಸೋಲಾರ್ ಇಂಡಸ್ಟ್ರೀಸ್ ಷೇರುಪೇಟೆಯಲ್ಲಿ ಹೂಡಿಕೆದಾರರನ್ನು ಇನ್ನಷ್ಟು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಬಿಎಸ್‌ಇ ಸೆನ್ಸೆಕ್ಸ್‌ನಲ್ಲಿ ಸೋಮವಾರ ಈ ಸಂಸ್ಥೆಯ ಷೇರು 4200.15 ರೂಪಾಯಿಗೆ ಬಿಕರಿಯಾಗುತ್ತಿತ್ತು. ಸದ್ಯ ಇವತ್ತು ಬುಧವಾರ 4,176.70 ರೂಪಾಯಿ ಬೆಲೆಯಲ್ಲಿ ಷೇರು ಮಾರಾಟವಾಗುತ್ತಿದೆ.

ಗಮನಾರ್ಹವಾಗಿ ವೃದ್ಧಿ

ಗಮನಾರ್ಹವಾಗಿ ವೃದ್ಧಿ

2022 ಫೆಬ್ರುವರಿ 15ರಂದು ಸೋಲಾರ್ ಇಂಡಸ್ಟ್ರೀಸ್ ಕಂಪನಿಯ ಷೇರು 2,160.05 ರೂಪಾಯಿ ಬೆಲೆ ಹೊಂದಿತ್ತು. 8 ತಿಂಗಳ ಅಂತರದಲ್ಲಿ ಶೇ. 90ರಷ್ಟು ಷೇರುಬೆಲೆ ಹೆಚ್ಚಳವಾಗಿದೆ.

ಕುತೂಹಲವೆಂದರೆ 2020ರಲ್ಲಿ ಈ ಸಂಸ್ಥೆಯ ಷೇರು 1,029 ರೂ ಬೆಲೆಯಲ್ಲಿ ಮಾರಾಟವಾಗುತ್ತಿತ್ತು. ಎರಡು ವರ್ಷದ ಅಂತರದಲ್ಲಿ ನಾಲ್ಕು ಪಟ್ಟು ಬೆಳೆದಿರುವುದು ಗಮನಾರ್ಹವೆನಿಸಿದೆ. ಎರಡು ವರ್ಷದ ಹಿಂದೆ ಸೋಲಾರ್ ಇಂಡಸ್ಟ್ರೀಸ್ ಕಂಪನಿಯ ಷೇರುಗಳ ಮೇಲೆ 1 ಲಕ್ಷ ರೂ ಹೂಡಿಕೆ ಮಾಡಿದ್ದವರು ಈಗ 4 ಲಕ್ಷ ರೂ ಬಾಚಿಕೊಳ್ಳುವ ಅವಕಾಶ ಸಿಕ್ಕಿದೆ.

 

ಯಾವುದಿದು ಸೋಲಾರ್ ಇಂಡಸ್ಟ್ರೀಸ್?

ಯಾವುದಿದು ಸೋಲಾರ್ ಇಂಡಸ್ಟ್ರೀಸ್?

1995ರಲ್ಲಿ ಸತ್ಯನಾರಾಯಣ್ ನಂದಿಲಾಲ್ ಎಂಬುವವರು ಆರಂಭಿಸಿದ ಸೋಲಾರ್ ಗ್ರೂಪ್‌ಗೆ ಸೇರಿದ ಉದ್ಯಮ ಸೋಲಾರ್ ಇಂಡಸ್ಟ್ರೀಸ್. ಔದ್ಯಮಿಕ ಸ್ಫೋಟಕಗಳನ್ನು ತಯಾರಿಸುತ್ತಿದ್ದ ಸೋಲಾರ್ ಇಂಡಸ್ಟ್ರೀಸ್ ಇದೀಗ ರಕ್ಷಣಾ ಕ್ಷೇತ್ರಕ್ಕೂ ಉತ್ಪನ್ನಗಳನ್ನು ವಿಸ್ತರಿಸಿದೆ.

ಮಿಲಿಟರಿ ಡ್ರೋನ್ ಇತ್ಯಾದಿಗಳಿಗೆ ವಾರ್ ಹೆಡ್‌ಗಳನ್ನು (ಸ್ಫೋಟಕ) ತಯಾರಿಸಿಕೊಡುತ್ತದೆ. ಭಾರತೀಯ ಸೇನೆಗೆ ಬಹಳಷ್ಟು ಮದ್ದು ಗುಂಡುಗಳನ್ನು ಸರಬರಾಜು ಮಾಡುತ್ತದೆ. ಒಂದು ವರ್ಷದಲ್ಲಿ 3 ಲಕ್ಷ ಮೆಟ್ರಿಕ್ ಟೆನ್‌ನಷ್ಟು ಎಕ್ಸ್‌ಪ್ಲೋಸಿವ್‌ಗಳನ್ನು ಉತ್ಪಾದಿಸಿದ ಭಾರತದ ಕಂಪನಿ ಎಂದು ಸೋಲಾರ್ ಇಂಡಸ್ಟ್ರೀಸ್ ಹೇಳಿಕೊಂಡಿದೆ.

ಸೋಲಾರ್ ಇಂಡಸ್ಟ್ರೀಸ್‌ನ ಒಟ್ಟು ಮಾರುಕಟ್ಟೆ ಬಂಡವಾಳ 36,990 ಕೋಟಿ ರೂಪಾಯಿ ಎನ್ನಲಾಗಿದೆ. ಹಲವು ದೇಶಗಳಿಗೆ ಸ್ಫೋಟಕ ಸಾಮಗ್ರಿ ಸರಬರಾಜು ಮಾಡುವ ಈ ಕಂಪನಿಯಲ್ಲಿ ಮಾರ್ಚ್ 31ರ ದತ್ತಾಂಶದ ಪ್ರಕಾರ 7500ಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಾರೆ.

 

ಭವಿಷ್ಯ ಉಜ್ವಲ?
 

ಭವಿಷ್ಯ ಉಜ್ವಲ?

ಸೋಲಾರ್ ಇಂಡಸ್ಟ್ರೀಸ್ ಸಂಸ್ಥೆಯ ಮತ್ತೊಂದು ಹೆಗ್ಗಳಿಕೆ ಅದರ ಲಾಯ್ಟರಿಂಗ್ ಮೂನಿಶನ್ಸ್‌ನ ತಯಾರಿಕೆ. ಭಾರತದ ರಕ್ಷಣಾ ಕ್ಷೇತ್ರಕ್ಕೆ ಈ ಎಲ್‌ಎಂ ಶಸ್ತ್ರಗಳು ಬಹಳ ಅಗತ್ಯ. ಆತ್ಮನಿರ್ಭರ್ ಭಾರತ್ ಯೋಜನೆ ಅಡಿ ದೇಶೀಯವಾಗಿ ಎಲ್‌ಎಂಗಳನ್ನು ತಯಾರಿಸಲು ಸರ್ಕಾರ ಉತ್ತೇಜನ ನೀಡುತ್ತಿದೆ. ಸೋಲಾರ್ ಇಂಡಸ್ಟ್ರೀಸ್ ಈ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಕಂಪನಿ. ಇದು ತಯಾರಿಸಿದ ಎಲ್ ಎಂ ಅನ್ನು ಈಗಾಗಲೇ ಪರೀಕ್ಷಾರ್ಥ ಪ್ರಯೋಗ ಮಾಡಲಾಗಿದೆ.

ಹೀಗಾಗಿ, ಮುಂದಿನ ದಿನಗಳಲ್ಲಿ ಸೋಲಾರ್ ಇಂಡಸ್ಟ್ರೀಸ್ ಇನ್ನಷ್ಟು ವೇಗದಲ್ಲಿ ಬೆಳೆಯುವ ಎಲ್ಲಾ ಸಾಧ್ಯತೆ ದಟ್ಟವಾಗಿದೆ. ಈ ಅಂಶ ಕೂಡ ಹೂಡಿಕೆದಾರರನ್ನು ಆಕರ್ಷಿಸಲು ಕಾರಣವಾಗಿರಬಹುದು. ಮುಂದೆಯೂ ಈ ಕಂಪನಿಯ ಷೇರಿಗೆ ಬೇಡಿಕೆ ಹೆಚ್ಚಿದರೆ ಅಚ್ಚರಿ ಇಲ್ಲ.

ಏನಿದು ಎಲ್‌ಎಂ?
ಲಾಯ್ಟರಿಂಗ್ ಮೂನಿಶನ್ ಎಂಬುದು ಒಂದು ವಿಶೇಷ ವಾರ್ ಡ್ರೋನ್. ಸಿಡಿಮದ್ದು ಇರುವ ಡ್ರೋನ್ ಮೇಲೆ ಹಾರುತ್ತಾ ಶತ್ರುವಿನ ಗುರಿಪ್ರದೇಶವನ್ನು ಅವಲೋಕಿಸಿ ನಂತರ ಸ್ಫೋಟಕವನ್ನು ಆ ಸ್ಥಳಕ್ಕೆ ಕ್ಷಿಪಣಿ ರೀತಿಯಲ್ಲಿ ದಾಳಿ ಮಾಡುತ್ತದೆ.

 

English summary

Solar Industries Explosive Company's Share Raises From 1k to 4k In 2 Years

Military warhead manufacturer Solar Industries has gained 4 times in the share market since last 2 years. Know what made this company shining all the way recently.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X