For Quick Alerts
ALLOW NOTIFICATIONS  
For Daily Alerts

2022ರಲ್ಲಿ ಶೇಕಡ 121 ಏರಿಕೆಯಾಗಿದೆ ಈ ಹೋಟೆಲ್ ಸ್ಟಾಕ್, ಖರೀದಿಸಬಹುದೇ?

|

ಈ ಹೋಟೆಲ್ ಒಂದರ ಸ್ಟಾಕ್ 2022ರಲ್ಲಿ ಭಾರೀ ಏರಿಕೆಯಾಗಿದೆ. ಆಗಸ್ಟ್ 9ರಂದು ಈ ಹೋಟೆಲ್ ಷೇರು 52 ವಾರಗಳಲ್ಲೇ ಭಾರೀ ಏರಿಕೆಯನ್ನು ದಾಖಲಿಸಿದೆ. ಈ ಹೋಟೆಲ್ ಯಾವುದು, ನೀವು ಕೂಡಾ ಈ ಸ್ಟಾಕ್ ಅನ್ನು ಖರೀದಿ ಮಾಡಬಹುದಾ ಎಂಬ ಬಗ್ಗೆ ಇಲ್ಲಿದೆ ಮುಂದೆ ಓದಿ....

ರೋಯಲ್ ಆರ್ಕಿಡ್ ಹೋಟೆಲ್ ಲಿಮಿಟೆಡ್‌ನ ಷೇರು ಮೌಲ್ಯವು 52 ವಾರಗಳಲ್ಲೇ ಭಾರೀ ಏರಿಕೆಯನ್ನು ಕಂಡಿದೆ. 2022 ಈ ಸ್ಮಾಲ್ ಕ್ಯಾಪ್ ಹೋಟೆಲ್ ಸ್ಟಾಕ್ ಸುಮಾರು ಶೇಕಡ 121ರಷ್ಟು ಏರಿಕೆಯಾಗಿದೆ. ಇದರ ಹೂಡಿಕೆದಾರರಿಗೆ ಭಾರೀ ಅಧಿಕ ರಿಟರ್ನ್ ಅನ್ನು ಈ ಸ್ಟಾಕ್ ನೀಡಿದೆ.

4 ತಿಂಗಳಲ್ಲೇ ಭಾರಿ ಏರಿಕೆ ಕಂಡ ಸೆನ್ಸೆಕ್ಸ್: ಆಟೋ, ಪವರ್ ಸ್ಟಾಕ್ ಬಲ4 ತಿಂಗಳಲ್ಲೇ ಭಾರಿ ಏರಿಕೆ ಕಂಡ ಸೆನ್ಸೆಕ್ಸ್: ಆಟೋ, ಪವರ್ ಸ್ಟಾಕ್ ಬಲ

ಕೊರೊನಾ ಸಾಂಕ್ರಾಮಿಕವು ಎಲ್ಲಾ ವಲಯಗಳ ಮೇಲೆ ಪ್ರಭಾವವನ್ನು ಬೀರಿದೆ. ಮುಖ್ಯವಾಗಿ ಟೂರಿಸಂ ವಲಯದ ಮೇಲೆ ಅಧಿಕ ಪ್ರಭಾವ ಉಂಟು ಮಾಡಿದೆ. ಆದರೆ ಈಗ ಕೊರೊನಾ ಸಾಂಕ್ರಾಮಿಕ ನಿರ್ಬಂಧಗಳು ಸಡಿಲಿಕೆಯಾದ ಬಳಿಕ ಈ ವಲಯವು ಕೊಂಚ ಚೇತರಿಕೆ ಕಾಣುತ್ತಿದೆ. ಈ ನಡುವೆ ಹೋಟೆಲ್ ಸ್ಟಾಕ್‌ಗಳು ಹೂಡಿಕೆದಾರರಿಗೆ ಲಾಭದಾಯಕವಾಗಲಿದೆ. ಹೆಚ್ಚು ರಿಟರ್ನ್ ಅನ್ನು ಕೂಡಾ ಪಡೆಯಲು ಸಾಧ್ಯವಾಗಲಿದೆ. ಈ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...

 ರೋಯಲ್ ಆರ್ಕಿಡ್ ಹೋಟೆಲ್ಸ್: ಎನ್‌ಎಸ್‌ಇಯಲ್ಲಿ ಹೇಗಿದೆ

ರೋಯಲ್ ಆರ್ಕಿಡ್ ಹೋಟೆಲ್ಸ್: ಎನ್‌ಎಸ್‌ಇಯಲ್ಲಿ ಹೇಗಿದೆ

ಎನ್‌ಎಸ್ಇಯಲ್ಲಿ ರೋಯಲ್ ಆರ್ಕಿಡ್ ಹೋಟೆಲ್ಸ್ ಲಿಮಿಟೆಡ್‌ನ ಪ್ರಸ್ತುತ ಮಾರುಕಟ್ಟೆ ಬೆಲೆಯು ಷೇರಿಗೆ ರೂಪಾಯಿ 193.40ರಷ್ಟಿದೆ. ಈವರೆಗೆ ಸುಮಾರು ಶೇಕಡ 9.89ರಷ್ಟು ಹೆಚ್ಚಳವಾಗಿದೆ. ಕಳೆದ ಐದು ದಿನಗಳಲ್ಲಿ ಈ ಹೋಟೆಲ್‌ನ ಷೇರು ದರ ಎನ್‌ಎಸ್‌ಇಯಲ್ಲಿ ಶೇಕಡ 11.02ರಷ್ಟು ಹೆಚ್ಚಳವಾಗಿದೆ. ಕಳೆದ ಒಂದು ತಿಂಗಳಿನಲ್ಲಿ ಇದರ ಷೇರು ಮೌಲ್ಯವು ಶೇಕಡ 31.16ರಷ್ಟು ಏರಿಕೆಯಾಗಿದೆ. ಇನ್ನು ಕಳೆದ ಆರು ತಿಂಗಳಿನಲ್ಲಿ ಈ ಹೋಟೆಲ್ ಷೇರು ದರವು ಶೇಕಡ 100.21ರಷ್ಟು ಹೆಚ್ಚಳವಾಗಿದೆ. ಕಳೆದ ಒಂದು ವರ್ಷದಲ್ಲಿ ಈ ಸ್ಟಾಕ್ ಸುಮಾರು ಶೇಕಡ 141.90ರಷ್ಟು ರಿಟರ್ನ್ ಅನ್ನು ನೀಡಿದೆ. ಇನ್ನು ಈ ಸ್ಟಾಕ್‌ನ ತೀರಾ ಕಡಿಮೆ ದರ ರೂಪಾಯಿ 66.85 ಆಗಿದೆ. ಮಾರುಕಟ್ಟೆ ಮೌಲ್ಯ 528 ರೂಪಾಯಿ, ಪ್ರಸ್ತುತ ಮಾರುಕಟ್ಟೆ ದರ ರೂಪಾಯಿ 193.40 ಆಗಿದೆ.

ಷೇರುಪೇಟೆ ಜಿಗಿತ: ಯಾವೆಲ್ಲಾ ಸ್ಟಾಕ್ ಏರಿಕೆ?ಷೇರುಪೇಟೆ ಜಿಗಿತ: ಯಾವೆಲ್ಲಾ ಸ್ಟಾಕ್ ಏರಿಕೆ?

 ಹೋಟೆಲ್ ಸ್ಟಾಕ್‌ನ ಹಣಕಾಸು ಸ್ಥಿತಿ ಹೇಗಿದೆ?
 

ಹೋಟೆಲ್ ಸ್ಟಾಕ್‌ನ ಹಣಕಾಸು ಸ್ಥಿತಿ ಹೇಗಿದೆ?

ಹಣಕಾಸು ವರ್ಷ 2022ರ Q4ನಲ್ಲಿ ಎನ್‌ಎಸ್‌ಇಯಲ್ಲಿ ಸಂಸ್ಥೆಯ ಒಟ್ಟು ಆದಾಯ 2,656.86 ಲಕ್ಷ ರೂಪಾಯಿ ಆಗಿದೆ. ಇದಕ್ಕೂ ಮುಂಚಿನ ತ್ರೈಮಾಸಿಕದಲ್ಲಿ ಇದರ ಮಾರುಕಟ್ಟೆ ಮೌಲ್ಯವು ಸುಮಾರು 2,928.59 ಲಕ್ಷ ರೂಪಾಯಿ ಆಗಿದೆ. Q4 FY22ರಲ್ಲಿ ಸಂಸ್ಥೆಯ ತೆರಿಗೆಗೂ ಮುನ್ನ ಇರುವ ಲಾಭ ಅಥವಾ ಪಿಬಿಟಿ ರೂಪಾಯಿ 397.33 ಲಕ್ಷ ಆಗಿದೆ. ಇದಕ್ಕೂ ಮುಂಚಿನ ತ್ರೈಮಾಸಿಕ ಅಂದರೆ Q3 FY22ರಲ್ಲಿ 310.43 ಲಕ್ಷ ರೂಪಾಯಿ ಪಿಬಿಟಿ ಆಗಿತ್ತು.

 ಸಂಸ್ಥೆಯ ಬಗ್ಗೆ ಮಾಹಿತಿ

ಸಂಸ್ಥೆಯ ಬಗ್ಗೆ ಮಾಹಿತಿ

ರೋಯಲ್ ಆರ್ಕಿಡ್, ರೆಜೆಂಟಾ ಹೋಟೆಲ್ಸ್ ಬಹಳ ಶೀಘ್ರವಾಗಿ ಬೆಳೆಯುತ್ತಿರುವ ಹಾಸ್ಪಿಟಾಲಿಟಿ ಬ್ರಾಂಡ್ ಆಗಿದೆ. ಭಾರತದಾದ್ಯಂತ ಒಟ್ಟು ಸುಮಾರು 70+ ಬ್ರಾಂಚ್‌ಗಳನ್ನು ನಿರ್ವಹಣೆ ಮಾಡುತ್ತಿದೆ. 2022ರ ವೇಳೆಗೆ ನೂರಕ್ಕೂ ಅಧಿಕ ಕಂಪನಿಯನ್ನು ಹೊಂದುವ ಗುರಿ ಇದೆ. ಇನ್ನು ಇತ್ತೀಚೆಗೆ ಕೋವಿಡ್ ಬಳಿಕ ಹೋಟೆಲ್ ಉದ್ಯಮ ಚೇತರಿಕೆ ಕಂಡಿದ್ದು, ಲಾಭವು ಹೆಚ್ಚಾಗಿದೆ. ಈ ವರ್ಷ 20 ಹೋಟೆಲ್ ಸ್ಥಾಪನೆ ಮಾಡುವ ಗುರಿಯನ್ನು ಸಂಸ್ಥೆ ಹೊಂದಿದೆ.

 ಇಲ್ಲಿ ಗಮನಿಸಿ

ಇಲ್ಲಿ ಗಮನಿಸಿ

ಗ್ರೇನಿಯಂ ಇನ್ಫರ್ಮೇಷನ್ ಟೆಕ್ನಾಲಜೀಸ್ ಲೇಖಕರು ಅಥವಾ ಉದ್ಯೋಗಿಗಳು ವ್ಯಕ್ತಪಡಿಸಿದ ಅಭಿಪ್ರಾಯಗಳು ಮತ್ತು ಹೂಡಿಕೆ ಸಲಹೆಗಳು, ಹೂಡಿಕೆಯು ಸ್ಟಾಕ್, ಚಿನ್ನ, ಕರೆನ್ಸಿ ಅಥವಾ ಇತರ ಸರಕುಗಳನ್ನು ಖರೀದಿಸಲು ಅಥವಾ ಮಾರಾಟ ಮಾಡಲು ಬರೀ ಸಲಹೆಯಾಗಿದೆ. GoodReturns.in ನಲ್ಲಿ ಚರ್ಚಿಸಿದ ಮಾಹಿತಿಯ ಆಧಾರದ ಮೇಲೆ ಹೂಡಿಕೆದಾರರು ಯಾವುದೇ ವ್ಯಾಪಾರ ಮತ್ತು ಹೂಡಿಕೆ ನಿರ್ಧಾರವನ್ನು ತೆಗೆದುಕೊಂಡು ನಷ್ಟವಾದರೆ ಅದಕ್ಕೆ ನಾವು ಜವಾಬ್ದಾರರಲ್ಲ. ಇದು ಮಾಧ್ಯಮಗಳಿಂದ ದೊರೆತ ಮಾಹಿತಿಯಾಗಿದ್ದು, ಎಲ್ಲಾ ಓದುಗರು ಮತ್ತು ಹೂಡಿಕೆದಾರರು ಈ ಲೇಖನಗಳ ಆಧಾರದ ಮೇಲೆ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ಗ್ರೇನಿಯಮ್ ಅಥವಾ ಲೇಖಕರು ಜವಾಬ್ದಾರರಾಗಿರುವುದಿಲ್ಲ. ವೃತ್ತಿಪರ ಸಲಹೆಗಾರರನ್ನು ಸಂಪರ್ಕಿಸಿ ನಿರ್ಧಾರ ಕೈಗೊಳ್ಳಿ.

English summary

This Hotel Chain Stock Up 121% In 2022, Should You Buy?

Royal Orchid Hotels Chain Stock Up 121% In 2022, Should You Buy?, Explained in kannada, Read on.
Story first published: Tuesday, August 9, 2022, 17:48 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X