For Quick Alerts
ALLOW NOTIFICATIONS  
For Daily Alerts

ಎರಡು 'ಕಲ್ಲಿನ' ಅದೃಷ್ಟದಿಂದ ಬಂದಿತು 774 ಕೋಟಿ ತಾಂಜೇನಿಯನ್ ಶಿಲ್ಲಿಂಗ್ಸ್

|

ಅದೃಷ್ಟ ಖುಲಾಯಿಸೋದು ಅಂದರೆ ಇದೇನಾ? ಈ ವರದಿಯನ್ನು ಓದಿದ ಮೇಲೆ ನೀವೇ ನಿರ್ಧರಿಸಿ. ಈ ಘಟನೆ ನಡೆದಿರುವುದು ತಾಂಜೇನಿಯಾದಲ್ಲಿ. ಗಣಿ ಮಾಲೀಕರೊಬ್ಬರಿಗೆ ಸಿಕ್ಕಿರುವ ಎರಡು ತಾಂಜನೈಟ್ ಜೆಮ್ ಸ್ಟೋನ್ (ರತ್ನದ ಹರಳುಗಳು)ಗೆ ಅಲ್ಲಿನ ಸರ್ಕಾರ 774 ಕೋಟಿ ತಾಂಜೇನಿಯನ್ ಶಿಲ್ಲಿಂಗ್ಸ್ ಚೆಕ್ ನೀಡಿದೆ.

ಇದು ಈ ವರೆಗೆ ಸಿಕ್ಕಿರುವುದರಲ್ಲೇ ಅತಿ ದೊಡ್ಡ ಜೆಮ್ ಸ್ಟೋನ್ ಅಂತೆ. ಭಾರತದ ರುಪಾಯಿಗಳಲ್ಲಿ ಹೇಳಬೇಕು ಅಂದರೆ ಆತನಿಗೆ ಸಿಕ್ಕಿರುವ ಮೊತ್ತ 25.27 ಕೋಟಿ. ಕಡು ನೇರಳೆ ನೀಲಿಯ ರತ್ನಗಳಿವು. ಒಬ್ಬ ಬಲಿಷ್ಠ ವ್ಯಕ್ತಿಯ ಮಣಿಕಟ್ಟಿನ ಗಾತ್ರದಲ್ಲಿವೆ ಈ ರತ್ನಗಳು. ದೇಶದ ಉತ್ತರ ಭಾಗದಲ್ಲಿ ಇರುವ ತಾಂಜನೈಟ್ ಗಣಿಯಲ್ಲಿ, ಸನಿನ್ಯು ಲೈಜರ್ ಎಂಬುವರಿಗೆ ಸಿಕ್ಕಿದೆ. ಈ ಸ್ಥಳದಲ್ಲಿ ಹಿಂದೆಯೇ ಗೋಡೆಯನ್ನು ಕಟ್ಟಲಾಗಿದ್ದು, ಈ ರತ್ನದ ಕಳ್ಳಸಾಗಣೆ ತಡೆಯುವ ಉದ್ದೇಶಕ್ಕೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಮಕ್ಕಳಿಗಾಗಿ ಶಾಲೆ ಕಟ್ಟಿಸುತ್ತೇನೆ

ಮಕ್ಕಳಿಗಾಗಿ ಶಾಲೆ ಕಟ್ಟಿಸುತ್ತೇನೆ

"ನಾಳೆ ದೊಡ್ಡ ಪಾರ್ಟಿ ಮಾಡ್ತೀನಿ" ಎಂದು ಬಿಬಿಸಿ ಸುದ್ದಿ ಸಂಸ್ಥೆಗೆ ಹೇಳಿದ್ದಾರೆ ಸಿಮಂಜ್ರೋ ಜಿಲ್ಲೆಯ ಮನ್ಯಾರದ ಗಣಿ ಮಾಲೀಕ ಸನಿನ್ಯು ಲೈಜರ್. "ಒಂದು ಶಾಪಿಂಗ್ ಮಾಲ್ ಹಾಗೂ ಶಾಲೆ ಕಟ್ಟಬೇಕು. ಆ ಶಾಲೆ ನನ್ನ ಮನೆ ಹತ್ತಿರವೇ ಇರಬೇಕು. ಏಕೆಂದರೆ ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಲು ಸಾಧ್ಯವಾಗದಷ್ಟು ಬಡತನದ ಸ್ಥಿತಿಯಲ್ಲಿ ಇರುವವರು ಬಹಳ ಮಂದಿ ಇದ್ದಾರೆ" ಎಂದಿದ್ದಾರೆ ಈ ಜಾಕ್ ಪಾಟ್ ಹೊಡೆದ ಅದೃಷ್ಟವಂತ.

ತಾಂಜನೈಟ್ ಎಂಬ ಜೆಮ್ ಸ್ಟೋನ್

ತಾಂಜನೈಟ್ ಎಂಬ ಜೆಮ್ ಸ್ಟೋನ್

ನಾನು ಅಕ್ಷರಸ್ಥನಲ್ಲ. ಆದರೆ ಎಲ್ಲವೂ ವೃತ್ತಿಪರವಾಗಿ ನಡೆಯುವುದನ್ನು ಬಯಸುತ್ತೇವೆ. ಆದ್ದರಿಂದ ನನ್ನ ಮಕ್ಕಳು ವೃತ್ತಿ ಪರವಾಗಿ ಉದ್ಯಮ ನಡೆಸಲಿ ಎಂದು ಬಯಸುತ್ತೇನೆ ಎಂದು ಹೇಳಿದ್ದಾರೆ. ಅಂದ ಹಾಗೆ ಸಿಕ್ಕಿರುವ ಎರಡು ರತ್ನಗಳ ಪೈಕಿ ಒಂದರ ತೂಕ 9.27 ಕೇಜಿ ಇದ್ದರೆ, ಮತ್ತೊಂದು 5.103 ಕೇಜಿ ಇದೆ. ಈ ತಾಂಜನೈಟ್ ಅನ್ನೋ ಜೆಮ್ ಸ್ಟೋನ್ ಸಿಗುವುದು ಪೂರ್ವ ಆಫ್ರಿಕಾದ ಈ ದೇಶದ ಸಣ್ಣ ಪ್ರಮಾಣ ಉತ್ತರ ಭಾಗದಲ್ಲಿ ಮಾತ್ರ.

ಬ್ಯಾಂಕ್ ಆಫ್ ತಾಂಜೇನಿಯಾದಿಂದ ಖರೀದಿ

ಬ್ಯಾಂಕ್ ಆಫ್ ತಾಂಜೇನಿಯಾದಿಂದ ಖರೀದಿ

ಈ ರತ್ನದ ಹರಳನ್ನು ಬ್ಯಾಂಕ್ ಆಫ್ ತಾಂಜೇನಿಯಾ ಖರೀದಿ ಮಾಡಿದೆ. ಲೈಜರ್ ಗೆ ಚೆಕ್ ನೀಡುವುದನ್ನು ಅಲ್ಲಿನ ಟೀವಿಗಳಲ್ಲಿ ಪ್ರಸಾರ ಮಾಡಲಾಗಿದೆ. ಅಧ್ಯಕ್ಷ ಜಾನ್ ಮಗುಫುಲಿ ಟೀವಿಯ ನೇರಪ್ರಸಾರದಲ್ಲೇ ಕರೆ ಮಾಡಿ, ಲೈಜರ್ ಅವರನ್ನು ಅಭಿನಂದಿಸಿದ್ದಾರೆ. "ಇದರಿಂದಲೇ ಗೊತ್ತಾಗುತ್ತದೆ ತಾಂಜೇನಿಯಾ ಶ್ರೀಮಂತ ದೇಶ" ಎಂದು ಅವರು ಹೇಳಿದ್ದಾರೆ.

English summary

This Miner Got 25 Crore Rupees Worth Of Gem Stone In Tanzania

Tanzanite, two gem stone brought 770 crore Tanzanian Shilllings to miner.
Story first published: Thursday, June 25, 2020, 18:40 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X