For Quick Alerts
ALLOW NOTIFICATIONS  
For Daily Alerts

ಸೇಲ್‌ಗಿದೆ ಇಡೀ ಊರು; ಬೆಲೆ ಕೇವಲ 2.1 ಕೋಟಿ; ಅದೇನು ದೆವ್ವದ ಗ್ರಾಮವಾ?

|

ಮದುವೆ ಮಾಡಿ ನೋಡು, ಮನೆ ಕಟ್ಟಿ ನೋಡು ಎನ್ನುತ್ತಾರೆ. ಮನೆ ಕಟ್ಟುವುದು ಎಲ್ಲರ ಕನಸು. ಬೆಂಗಳೂರಿನಲ್ಲಿ ಒಂದರ್ಧ ಸೈಟ್ ಮಾಡುವುದೇ ಇಡೀ ಜೀವನದ ಶ್ರಮ ಖರ್ಚಾಗಿ ಹೋಗಿರುತ್ತದೆ. ಒಂದು ಸೈಟು, ಒಂದು ಮನೆ, ಒಂದು ಕಾರು, ಇದು ಮಧ್ಯಮವರ್ಗದ ಕುಟುಂಬದವರ ಕನಸು. ಬೆಂಗಳೂರಿನಲ್ಲಿ ಒಂದು ಸಾಧಾರಣ ಸೈಟು ಮತ್ತು ಮನೆ ಮಾಡಲು ಕನಿಷ್ಠ 50 ಲಕ್ಷವಾದರೂ ಬೇಕು. ಒಂದು ಸಾಧಾರಣ ವಿಲ್ಲಾಗೆ 4 ಕೋಟಿಯಾದರೂ ಬೇಕು. ಅಂಥದ್ದರಲ್ಲಿ 2 ಕೋಟಿ ರೂಪಾಯಿಗೆ ಒಂದು ಇಡೀ ಗ್ರಾಮವೇ ಸಿಕ್ಕರೆ?

ಬೇಡ ಎನ್ನಲು ಸಾಧ್ಯವೇ ಇಲ್ಲದ ಅಪೂರ್ವ ಅವಕಾಶ; ಅದರಲ್ಲೂ ಇದು ಸ್ಪೇನ್ ದೇಶದ ಒಂದು ಹಳ್ಳಿ ಮಾರಾಟಕ್ಕಿರುವುದು. ಅದೂ ಕೇವಲ 2.27 ಲಕ್ಷ ಯೂರೋ (ಸುಮಾರು 2.17 ಕೋಟಿ ರೂಪಾಯಿ) ಹಣಕ್ಕೆ ಇದು ಸಿಗುತ್ತದೆ.

14 ವರ್ಷದ ನಸ್ರಿ ಕೋಟ್ಯಧಿಪತಿ; ಸಣ್ಣ ವಯಸ್ಸಿಗೆ ಶ್ರೀಮಂತನಾಗಿದ್ದೇಗೆ?14 ವರ್ಷದ ನಸ್ರಿ ಕೋಟ್ಯಧಿಪತಿ; ಸಣ್ಣ ವಯಸ್ಸಿಗೆ ಶ್ರೀಮಂತನಾಗಿದ್ದೇಗೆ?

ವಿಶ್ವದ ಅತ್ಯಂತ ಶ್ರೀಮಂತ ನಗರಗಳಲ್ಲಿ ಒಂದಾದ ಮ್ಯಾಡ್ರಿಡ್‌ನಿಂದ ಕೇವಲ 3 ಗಂಟೆ ಡ್ರೈವ್ ದೂರದಲ್ಲಿದೆ ಈ ಊರು. ಪೋರ್ಚುಗಲ್ ಗಡಿಭಾಗದ ಜಮೋರಾ ಪ್ರಾಂತ್ಯ ಸಾಲ್ಟೋ ಡೀ ಕ್ಯಾಸ್ಟ್ರೋ ಎಂಬುದು ಸೇಲ್‌ಗಿರುವ ಊರು. ಇಲ್ಲಿ 44 ಮನೆಗಳು, ಹೋಟೆಲ್, ಚರ್ಚ್, ಶಾಲೆ ಇದೆ. ಸ್ವಿಮಿಂಗ್ ಪೂಲ್ ಕೂಡ ಇದೆ. ಸಿವಿಲ್ ಗಾರ್ಡ್‌ಗಳಿಗೆಂದು ನಿರ್ಮಿಸಲಾಗಿರುವ ಕಟ್ಟಡ ಸಮುಚ್ಚಯವೂ ಇಲ್ಲಿದೆ.

ಸೇಲ್‌ಗಿದೆ ಇಡೀ ಊರು; ಬೆಲೆ ಕೇವಲ 2.1 ಕೋಟಿ; ಅದೇನು ದೆವ್ವದ ಗ್ರಾಮವಾ?

ಮಾರಾಟದ ಹಿಂದಿನ ಕಥೆ

ಸಾಲ್ಟೋ ಡೀ ಕ್ಯಾಸ್ಟ್ರೋ ಊರಲ್ಲಿ ಇಷ್ಟೆಲ್ಲ ಇದ್ದರೂ ಇಲ್ಲಿ ಜನರ ಸುಳಿವಿಲ್ಲ. ಕಳೆದ 30 ವರ್ಷಗಳಿಂದ ಈ ಹಳ್ಳಿ ಬಿಕೋ ಎನ್ನುತ್ತಿದೆ. ಜನರು ವಾಸಿಸುತ್ತಿಲ್ಲ. ಇದಕ್ಕೆ ಏನು ಕಾರಣ? ಯಾವುದೇ ದೆವ್ವದ ಕಾಟ ಇರಬೇಕು ಎಂದು ಯಾರಿಗಾದರೂ ಅನಿಸೀತು. ಆದರೆ ವಾಸ್ತವ ಸಂಗತಿ ಅದಲ್ಲ.

ಇಲ್ಲೊಂದು ಇಂಟ್ರೆಸ್ಟಿಂಗ್ ವಿಷಯ ಇದೆ. ಸ್ಯಾಲ್ಟೋ ಡೀ ಕ್ಯಾಸ್ಟ್ರೋ ಸಮೀಪವೇ ಜಲಾಶಯವೊಂದನ್ನು ನಿರ್ಮಿಸಲಾಗುತ್ತಿರುತ್ತದೆ. ವಿದ್ಯುತ್ ಉತ್ಪಾದನಾ ಕಂಪನಿ ತನ್ನ ಉದ್ಯೋಗಿಗಳ ವಸತಿ ಮತ್ತಿತರ ವ್ಯವಸ್ಥೆ ಮಾಡಿರುತ್ತದೆ. ಐವತ್ತರ ದಶಕದಲ್ಲಿ ಆದ ಬೆಳವಣಿಗೆ ಇದು. ಜಲಾಶಯ ನಿರ್ಮಾಣವಾದ ಬಳಿಕ ಉದ್ಯೋಗಿಗಳೆಲ್ಲರೂ 1980ರಲ್ಲಿ ಊರನ್ನು ತ್ಯಜಿಸಿ ಹೋಗುತ್ತಾರೆ. ಊರಿಗೆ ಊರೇ ಖಾಲಿಯಾಗುತ್ತದೆ.

2000ರ ವರ್ಷದಲ್ಲಿ ಒಬ್ಬ ವ್ಯಕ್ತಿ ಈ ಇಡೀ ಊರನ್ನು ಖರೀದಿಸಿರುತ್ತಾನೆ. ಇಡೀ ಸ್ಥಳವನ್ನು ಒಂದು ಪ್ರವಾಸೀ ಸ್ಥಳವಾಗಿ ರೂಪಿಸುವುದು ಈತನ ಗುರಿಯಾಗಿರುತ್ತದೆ. ಇಲ್ಲಿ ಭವ್ಯವಾದ ಹೋಟೆಲ್ ಕಟ್ಟಬೇಕೆನ್ನುವುದು ಮಾಲೀಕನ ಕನಸಾಗಿರುತ್ತದೆ. ಆದರೆ ಆತನ ದುರದೃಷ್ಟಕ್ಕೆ ಯೂರೋಪ್‌ನಲ್ಲಿ ಬಿಕ್ಕಟ್ಟು ಶುರುವಾಗಿ ಈತನ ಆಸೆ ಆಕಾಂಕ್ಷೆಗಳೆಲ್ಲಾ ಮಣ್ಣುಪಾಲಾಗುತ್ತದೆ.

ಪ್ರಾಪರ್ಟಿ ತಾಣದಲ್ಲಿ ಲಿಸ್ಟ್

ಸಾಲ್ವೋ ಡೀ ಕ್ಯಾಸ್ಟ್ರೋ ಊರನ್ನು ಸ್ಪೇನ್‌ನ ಪ್ರಾಪರ್ಟಿ ರೀಟೇಲ್ ಜಾಲತಾಣ ಐಡಿಯಾಲಿಸ್ಟಾ ಎಂಬಲ್ಲಿ ಲಿಸ್ಟ್ ಮಾಡಲಾಗಿದೆ. "ಈ ಹಳ್ಳಿಯನ್ನು ಮತ್ತೆ ಕಾರ್ಯಸ್ಥಿತಿಗೆ ತರಲು ಮತ್ತು ಲಾಭಕ್ಕೆ ಬರಲು 2 ಮಿಲಿಯನ್ ಯೂರೋ ಹಣ ಸಾಕಾಗಬಹುದು" ಎಂದು ವೆಬ್‌ಸೈಟ್‌ನಲ್ಲಿ ಬರೆಯಲಾಗಿದೆ.

ಈ ರೀಟೇಲ್ ಪೇಜ್‌ ಅನ್ನು 50 ಸಾವಿರ ಜನರು ವೀಕ್ಷಿಸಿದ್ದಾರೆ ಎಂದು ಬಿಬಿಸಿಯ ವರದಿಯಲ್ಲಿ ತಿಳಿಸಲಾಗಿದೆ. ಭಾರತದ ಪ್ರಾಪರ್ಟಿ ವೆಬ್‌ಸೈಟ್‌ನಲ್ಲಿ ಇಂಥದ್ದೇನಾದರೂ ಊರು ಇಷ್ಟು ಕಡಿಮೆ ಬೆಲೆಗೆ ಸೇಲ್‌ಗೆ ಬಂದರೆ ಅದೆಷ್ಟು ಲಕ್ಷ ಜನರು ಮುಗಿಬೀಳುತ್ತಿದ್ದರೋ ಹೇಳಲು ಅಸಾಧ್ಯ.

ಆದರೂ ಸ್ಪೇನ್‌ನ ಈ ಗ್ರಾಮದ ಖರೀದಿಗೆ ಬ್ರಿಟನ್, ಫ್ರಾನ್ಸ್, ಬೆಲ್ಜಿಯಂ, ರಷ್ಯಾದಿಂದ 300ಕ್ಕೂ ಹೆಚ್ಚು ಜನರು ಖರೀದಿಗೆ ಆಸಕ್ತಿ ತೋರಿದ್ದಂತೆ. ಒಬ್ಬ ವ್ಯಕ್ತಿಯಂತೂ ಈ ಊರನ್ನು ಕೊಳ್ಳಲು ಮುಂಗಡ ಕೂಡ ಕೊಟ್ಟಿರುವುದು ತಿಳಿದುಬಂದಿದೆ. ರಾನೀ ರಾಡ್ರಿಗೆಜ್ ಎಂಬ ವ್ಯಕ್ತಿ ಈ ಮಾಹಿತಿ ಕೊಟ್ಟಿದ್ದಾನೆ. ಈ ಊರನ್ನು ಮಾರುತ್ತಿರುವ ವ್ಯಕ್ತಿಯ ಪರವಾಗಿ ರಾಯಲ್ ಇನ್ವೆಸ್ಟ್ ಎಂಬ ಕಂಪನಿ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಿದೆ. ರಾನಿ ರಾಡ್ರಿಗೆಜ್ ಈ ಕಂಪನಿಯ ಒಬ್ಬ ಉದ್ಯೋಗಿ.

English summary

Salto de Castro: This Spanish Village With 44 Homes Is For Sale For Just Over Rs 2 Crore

An entire Spanish village near portugal border is put up for sales for more than Rs 2.1 crore. This village has 44 homes, church, school, swimming pool, civil guard barracks building.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X