For Quick Alerts
ALLOW NOTIFICATIONS  
For Daily Alerts

ಮದುವೆ ನೋಡು ಬ್ಯುಸಿನೆಸ್ ಮಾಡು; ಭಾರತದಲ್ಲಿ ವೆಡಿಂಗ್ ಸೀಸನ್ ಮೆರುಗು

|

ಮದುವೆ ಮಾಡಿ ನೋಡು, ಮನೆ ಕಟ್ಟಿ ನೋಡು ಎಂಬ ನಾಣ್ನುಡಿ ಕೇಳಿರುತ್ತೇವೆ. ಅವೆರಡೂ ಯಾರದ್ದೇ ಜೀವನದಲ್ಲಿ ಎದುರಾಗಬಹುದಾದ ಬಹುಮುಖ್ಯ ಘಟ್ಟಗಳು ಮತ್ತು ಸವಾಲುಗಳು. ಭಾರೀ ಹಣ ವ್ಯಯ ಮಾಡಿಸುತ್ತವೆ. ಮದುವೆ ಯಾರದ್ದೇ ಜೀವನದಲ್ಲಿ ಸಾಮಾನ್ಯವಾಗಿ ಒಮ್ಮೆ ಬಂದು ಹೋಗುವ ಮಹಾ ಸಡಗರದ ಕ್ಷಣ. ಹೀಗಾಗಿ, ಧಾಂ ಧೂಂ ಎಂದು ಮದುವೆ ಮಾಡಿಸುವುದೇ ಎಲ್ಲರ ಗುರಿ. ಭಾರತದಲ್ಲಿ ಒಂದಾಜು ಪ್ರಕಾರ ವಿವಾಹವು ಬರೋಬ್ಬರಿ 3.68 ಲಕ್ಷ ಕೋಟಿ ರೂಪಾಯಿಯ ಉದ್ಯಮವಾಗಿ ಬೆಳೆದಿದೆ.

ಹಬ್ಬದ ಸೀಸನ್ ಬಳಿಕ ಇದೀಗ ವೆಡ್ಡಿಂಗ್ ಸೀಸನ್ ಆರಂಭವಾಗಿದ್ದು ಈ ಉದ್ಯಮ ಗರಿಗೆದರಿ ಕೂತಿದೆ. ನವೆಂಬರ್ 4ರಂದು ಆರಂಭವಾಗಿರುವ ವಿವಾಹದ ಋತು ಡಿಸೆಂಬರ್ 14ರವರೆಗೂ ಇರಲಿದೆ. ಈ ಸಂದರ್ಭದಲ್ಲಿ ದೇಶಾದ್ಯಂತ 32 ಲಕ್ಷ ಮದುವೆ ಕಾರ್ಯಕ್ರಮಗಳು ನಡೆಯಲಿವೆ. ಇದರಿಂದ 3.75 ಲಕ್ಷ ಕೋಟಿ ರೂಪಾಯಿ ವ್ಯಾಪಾರ ಸೃಷ್ಟಿಯಾಗಲಿದೆ ಎಂದು ಭಾರತೀಯ ವರ್ತಕರ ಮಹಾ ಒಕ್ಕೂಟ (ಸಿಎಐಟಿ) ನಿರೀಕ್ಷಿಸಿದೆ.

ಸ್ಮಾರ್ಟ್‌ಟಿವಿಯಲ್ಲಿ ಪ್ರಾಬಲ್ಯದ ದುರ್ಬಳಕೆ ತನಿಖೆ, ಗೂಗಲ್ ಮೇಲೆ ಮತ್ತೆ ದಂಡ?ಸ್ಮಾರ್ಟ್‌ಟಿವಿಯಲ್ಲಿ ಪ್ರಾಬಲ್ಯದ ದುರ್ಬಳಕೆ ತನಿಖೆ, ಗೂಗಲ್ ಮೇಲೆ ಮತ್ತೆ ದಂಡ?

2020ರಲ್ಲಿ ಕೋವಿಡ್ ವಕ್ಕರಿಸಿದ ಬಳಿಕ ಮುರುಟಿಹೋಗಿದ್ದ ಆರ್ಥಿಕತೆಯ ಜೊತೆ ಕಳೆಗುಂದಿದ್ದ ವಿವಾಹ ಉದ್ಯಮ ಹೊಸ ಉತ್ಸಾಹ ಪಡೆದಿದೆ. ಲಾಕ್ ಡೌನ್ ಇತ್ಯಾದಿ ಕಾರಣದಿಂದ ವಿವಾಹವಾಗಲೀ ಅಥವಾ ರಿಸಪ್ಚನ್ ಕಾರ್ಯಕ್ರಮಗಳನ್ನಾಗಲೀ ಮುಂದೂಡಿದ್ದ ಬಹಳ ಜನರು ಈ ವರ್ಷ ಅದನ್ನು ನೆರವೇರಿಸುತ್ತಿದ್ದಾರೆ. ಇದರಿಂದ ವಿವಾಹ ಉದ್ಯಮ ತೀವ್ರ ಮಟ್ಟದಲ್ಲಿ ಬೆಳೆಯುವ ನಿರೀಕ್ಷೆ ಇದೆ. ಉದ್ಯಮ ಪರಿಣಿತರ ಪ್ರಕಾರ ಈ ವರ್ಷ ವೆಡಿಂಗ್ ಇಂಡಸ್ಟ್ರಿ ಕನಿಷ್ಠ 200 ಪ್ರತಿಶತವಾದರೂ ಬೆಳೆಯಬಹುದು ಎಂದು ಅಂದಾಜು ಮಾಡಲಾಗಿದೆ.

ವೆಡಿಂಗ್ ಹಾಲ್ ಫುಲ್

ವೆಡಿಂಗ್ ಹಾಲ್ ಫುಲ್

ಪ್ರತಿಷ್ಠಿತ ವೆಡಿಂಗ್ ಹಾಲ್‌ಗಳೆಲ್ಲವೂ ಈ ಸೀಸನ್‌ಗೆ ಬುಕ್ ಆಗಿ ಹೋಗಿವೆ. ಮೇಲ್ಮಧ್ಯಮ ವರ್ಗದ ಜನರು ಮದುವೆ ಕಾರ್ಯಕ್ರಮಗಳನ್ನು ವಿಶೇಷ ಸ್ಥಳದಲ್ಲಿ ನಡೆಸುವ ಪ್ರವೃತ್ತಿ ಹೆಚ್ಚಿದೆ. ಹೆಚ್ಚು ವರಮಾನದ ವ್ಯಕ್ತಿಗಳು ಸಾಮಾನ್ಯವಾಗಿ ರಿಸಾರ್ಟ್ ಇತ್ಯಾದಿ ಸ್ಥಳದಲ್ಲಿ ಮದುವೆ ಆಗಲು ಬಯಸುತ್ತಾರೆ ಎಂದು ಹೋಟೆಲ್ ಉದ್ಯಮಿಗಳು ಹೇಳುತ್ತಾರೆ.

ಈ ಸೀಸನ್‌ನಲ್ಲಿ ರಾಜಧಾನಿ ದೆಹಲಿಯಲ್ಲಿ 3.5 ಲಕ್ಷ ಮದುವೆ ಕಾರ್ಯಕ್ರಮಗಳು ನಡೆಯುವ ನಿರೀಕ್ಷೆ ಇದೆ. ಇದರಿಂದ ರಾಜಧಾನಿ ನಗರಿಯೊಂದರಲ್ಲೇ 75 ಸಾವಿರ ಕೋಟಿ ರೂ ವ್ಯಾಪಾರವಾಗಬಹುದು.

ಮುಂಬೈ, ಬೆಂಗಳೂರಲ್ಲಿ ಅತಿಹೆಚ್ಚು

ಮುಂಬೈ, ಬೆಂಗಳೂರಲ್ಲಿ ಅತಿಹೆಚ್ಚು

ಭಾರತದಲ್ಲಿ ವಿವಾಹ ಉದ್ಯಮ ಈಗಲೂ ಬಹುತೇಕ ಭಾಗ ಅಸಂಘಟಿತವಾಗಿದೆ. ಈಗೀಗ ಸಂಘಟಿತ ರೂಪ ಪಡೆಯುತ್ತಿದೆ. ಭಾರತದಲ್ಲಿ ಕಳೆದ ವರ್ಷ ಇದೇ ಮದುವೆ ಸೀಸನ್‌ನಲ್ಲಿ 25 ಲಕ್ಷ ಮದುವೆ ಕಾರ್ಯಕ್ರಮಗಳು ನಡೆದಿವೆ. 3 ಲಕ್ಷ ಕೋಟಿ ರೂಪಾಯಿಯಷ್ಟು ವೆಚ್ಚ ಮಾಡಲಾಗಿತ್ತು. ದೆಹಲಿಗಿಂತಲೂ ಮುಂಬೈ, ಬೆಂಗಳೂರು ಮತ್ತು ಹೈದರಾಬಾದ್ ನಗರಗಳಲ್ಲಿ ಅತಿ ಹೆಚ್ಚು ಮದುವೆ ಕಾರ್ಯಕ್ರಮಗಳು ನಡೆದಿದ್ದವು. ಕಳೆದ 2-3 ವರ್ಷಗಳಿಂದಲೂ ಈ ಮೂರು ನಗರಗಳೇ ವಿವಾಹ ವಿಚಾರದಲ್ಲಿ ಮುಂದಿವೆ.

ಸಿಎಐಟಿ ಪ್ರಕಾರ ಈ ಸೀಸನ್‌ನಲ್ಲಿ ಭಾರತದಲ್ಲಿ ಒಟ್ಟು 32 ಲಕ್ಷ ಮದುವೆಗಳು ನಡೆಯುವ ಸಾಧ್ಯತೆ ಇದೆ. ಈ ಬಾರಿಯೂ ಮುಂಬೈ, ಬೆಂಗಳೂರಿನಲ್ಲೇ ಅತಿ ಹೆಚ್ಚು ಮದುವೆ ಕಾರ್ಯಕ್ರಮಗಳು ನಡೆಯಬಹುದು.

ಮುಂದಿನ ವೆಡಿಂಗ್ ಸಿಸನ್
 

ಮುಂದಿನ ವೆಡಿಂಗ್ ಸಿಸನ್

ಈ ಮದುವೆ ಸೀಸನ್ ಡಿಸೆಂಬರ್ 14ರವರೆಗೂ ಇರುತ್ತದೆ. ಒಂದು ತಿಂಗಳ ಬಳಿಕ ಭಾರೀ ದೊಡ್ಡ ವೆಡಿಂಗ್ ಸೀಸನ್ ಶುರುವಾಗುತ್ತದೆ. ಜನವರಿ 14ರಿಂದ ಇರುವ ಮುಂದಿನ ವಿವಾಹ ಸೀಸನ್ ಜುಲೈವರೆಗೂ ಇರುತ್ತದೆ.

ಈಗ ಮಧ್ಯಮ ವರ್ಗದವರಲ್ಲಿ ಬಹಳ ಮಂದಿ ವಿವಾಹ ಕಾರ್ಯಕ್ರಮಗಳನ್ನು ಗುತ್ತಿಗೆಗೆ ವಹಿಸಿಕೊಡುವುದು ಹೆಚ್ಚಾಗಿದೆ. ಕಾರ್ಯಕ್ರಮ ಆಯೋಜನೆಯಿಂದ ಹಿಡಿದು ಅತಿಥಿ ಸತ್ಕಾರದವರೆಗೂ ಸೇವೆ ಒದಗಿಸುವ ಕಂಪನಿಗಳಿವೆ. ವರ ಮತ್ತು ವಧುವಿಗೆ ಕೇವಲ ತಾಳಿ ಕಟ್ಟುವುದಷ್ಟೇ ಕೆಲಸ. ಅಷ್ಟರಮಟ್ಟಿಗೆ ವಿವಾಹ ಕಾರ್ಯಕ್ರಮ ವೃತ್ತಿರೂಪ ಪಡೆದುಕೊಂಡಿದೆ. ಪುಷ್ಪೋದ್ಯಮ, ಹೋಟೆಲ್, ರೆಸಾರ್ಟ್ ಇತ್ಯಾದಿ ಅನೇಕ ಉದ್ಯಮಗಳು ಮದುವೆಯಿಂದ ಪುಷ್ಟಿ ಪಡೆಯುತ್ತವೆ.

English summary

Estimated 32 lakh weddings in India till Dec 14 with a trade of Rs 3.75 Lakh Crores; Know More

Wedding season that started from November 4th, continues till December 14th. In this period approximately 3.75 lakh crore rupee business is expected to generate through 32 lakh weddings.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X