For Quick Alerts
ALLOW NOTIFICATIONS  
For Daily Alerts

ಟಿಕ್ ಟಾಕ್ ಗೆ ಸಡ್ಡು ಹೊಡೆಯುತ್ತಿರುವ 'ಚಿಂಗಾರಿ' ರೂಪಿಸಿದ್ದು ಈ ಯುವಕ

|

ಕೇಂದ್ರ ಸರ್ಕಾರವು ಟಿಕ್ ಟಾಕ್ ಸೇರಿದಂತೆ ಚೀನಾದ 59 ಅಪ್ಲಿಕೇಷನ್ ಗಳನ್ನು ನಿಷೇಧ ಮಾಡಿದ 24 ಗಂಟೆಯೊಳಗೆ ಅದಕ್ಕೆ ಪರ್ಯಾಯವಾಗಿರುವ ಭಾರತೀಯ ಆಪ್ 'ಚಿಂಗಾರಿ'ಗೆ ಅದ್ಭುತ ಬೇಡಿಕೆ ಬಂದಿದೆ. 25 ಲಕ್ಷ ಡೌನ್ ಲೋಡ್ ದಾಟಿದೆ. ಈಗ ಚಿಂಗಾರಿ ಅಪ್ಲಿಕೇಷನ್ ಬಗ್ಗೆ ಗೊತ್ತಿರುವವರು ಸಿಗುತ್ತಾರೆ. ಆದರೆ ಅದರ ಸ್ಥಾಪಕರ ಬಗ್ಗೆ ಎಷ್ಟು ಜನರಿಗೆ ಗೊತ್ತು?

ಆಪಲ್ ಅಪ್ಲಿಕೇಷನ್ ಸ್ಟೋರ್, ಗೂಗಲ್ ಪ್ಲೇ ಸ್ಟೋರ್ ನಿಂದ ಟಿಕ್ ಟಾಕ್ ಔಟ್ಆಪಲ್ ಅಪ್ಲಿಕೇಷನ್ ಸ್ಟೋರ್, ಗೂಗಲ್ ಪ್ಲೇ ಸ್ಟೋರ್ ನಿಂದ ಟಿಕ್ ಟಾಕ್ ಔಟ್

ಈ ಅಪ್ಲಿಕೇಷನ್ ಸಹ ಸಂಸ್ಥಾಪಕ ಹಾಗೂ ಅಭಿವೃದ್ಧಿ ಪಡಿಸಿದವರು ಬಿಸ್ವಾತ್ಮ ನಾಯಕ್. ಒಡಿಶಾದ ಕಟಕ್ ಜಿಲ್ಲೆಯಲ್ಲಿನ ಅದಾಸ್ ಪುರ್ ನಿವಾಸಿ. ಈ ಕಂಪೆನಿಯ ಸಿಇಒ ಕೂಡ ಆಗಿದ್ದಾರೆ ನಾಯಕ್. ಬಿಸ್ವಾತ್ಮ ನಾಯಕ್ ಮೆಟ್ರಿಕ್ಯುಲೇಷನ್ ಪೂರ್ಣಗೊಳಿಸಿರುವುದು ಪ್ರಾಚಿ ಅಕಾಡೆಮಿಯಲ್ಲಿ. ಆ ನಂತರ ಹನ್ನೆರಡನೇ ತರಗತಿ ಪೂರ್ತಿ ಮಾಡಿರುವುದು ರಾಯಲ್ ಕಾಲೇಜ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿಯಲ್ಲಿ.

ಚಿಂಗಾರಿ ರೂಪುಗೊಂಡಿದ್ದು ಬೆಂಗಳೂರಿನಲ್ಲಿ

ಚಿಂಗಾರಿ ರೂಪುಗೊಂಡಿದ್ದು ಬೆಂಗಳೂರಿನಲ್ಲಿ

ಅದಾದ ಮೇಲೆ ಭುವನೇಶ್ವರ್ ನ ಎಸ್ ಒಎ ವಿಶ್ವವಿದ್ಯಾಲಯದ ಐಟಿಇಆರ್ ಸೇರ್ಪಡೆಯಾಗಿ, ಅಲ್ಲಿಂದ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಮೂಲಗಳು ಹೇಳುವ ಪ್ರಕಾರ, ಈ ಅಪ್ಲಿಕೇಷಷನ್ ರೂಪಿಸಿದ್ದು ನಾಯಕ್ ಮತ್ತು ಅವರ ಕಾಲೇಜು ಪ್ರೋಗ್ರಾಮರ್ ಸಿದ್ಧಾರ್ಥ್ ಗೌತಮ್. ಅದು ರೂಪುಗೊಂಡಿದ್ದು ಬೆಂಗಳೂರಿನಲ್ಲಿ, 2019ನೇ ಇಸವಿಯಲ್ಲಿ.

ಪ್ರತಿ ಗಂಟೆಗೆ ಒಂದು ಲಕ್ಷ ಡೌನ್ ಲೋಡ್

ಪ್ರತಿ ಗಂಟೆಗೆ ಒಂದು ಲಕ್ಷ ಡೌನ್ ಲೋಡ್

ಸರ್ಕಾರವು ಚೀನಾ ಅಪ್ಲಿಕೇಷನ್ ಗೆ ನಿಷೇಧ ಹೇರಿದ ಮೇಲೆ ಚಿಂಗಾರಿ ಪ್ರತಿ ಗಂಟೆಗೆ ಒಂದು ಲಕ್ಷ ಡೌನ್ ಲೋಡ್ ಮತ್ತು ಒಂದು ಗಂಟೆಗೆ ಇಪ್ಪತ್ತು ಲಕ್ಷಕ್ಕೂ ಹೆಚ್ಚು ವೀಕ್ಷಣೆ ಆಗುತ್ತಿದೆ. ಈಗಾಗಲೇ ಮೂವತ್ತು ಲಕ್ಷಕ್ಕೂ ಹೆಚ್ಚು ಬಾರಿ ಡೌನ್ ಲೋಡ್ ಆಗಿದೆ. ಈ ಚಿಂಗಾರಿ ಅಪ್ಲಿಕೇಷನ್ ಗೆ ಬಳಕೆದಾರರು ವಿಡಿಯೋ ಅಪ್ ಲೋಡ್ ಮತ್ತು ಅಲ್ಲಿಂದ ಡೌನ್ ಲೋಡ್ ಮಾಡಬಹುದು. ಸ್ನೇಹಿತರ ಜತೆ ಹರಟೆ ಹೊಡೆಯಬಹುದು. ಹೀಗೆ ಹಲವು ಪೀಚರ್ ಇವೆ.

ಪ್ರತಿ ವೀಕ್ಷಣೆಗೆ ಇಂತಿಷ್ಟು ಪಾಯಿಂಟ್

ಪ್ರತಿ ವೀಕ್ಷಣೆಗೆ ಇಂತಿಷ್ಟು ಪಾಯಿಂಟ್

ಚಿಂಗಾರಿ ಹಾಗೂ ಟಿಕ್ ಟಾಕ್ ಮಧ್ಯೆ ವ್ಯತ್ಯಾಸ ಇದೆ. ವಿಡಿಯೋ ಎಷ್ಟು ವೈರಲ್ ಆಗುತ್ತದೋ ಅದರ ಆಧಾರದಲ್ಲಿ ಟಿಕ್ ಟಾಕ್ ನಿಂದ ಕ್ರಿಯೇಟರ್ ಗೆ ಹಣ ದೊರೆಯುತ್ತದೆ. ಆದರೆ ಚಿಂಗಾರಿ ಆಪ್ ನಲ್ಲಿ ಅಪ್ ಲೋಡ್ ಮಾಡಿದ ಪ್ರತಿ ವಿಡಿಯೋಗೆ (ಪ್ರತಿ ವೀಕ್ಷಣೆಗೆ) ಇಂತಿಷ್ಟು ಪಾಯಿಂಟ್ ಸಿಗುತ್ತದೆ. ಅದರ ಆಧಾರದ ಮೇಲೆ ಹಣ ರಿಡೀಮ್ ಮಾಡಬಹುದು.

ಭಾರತದ ಬಳಕೆದಾರರ ದೃಷ್ಟಿಯಲ್ಲಿ ರೂಪುಗೊಂಡಿತು

ಭಾರತದ ಬಳಕೆದಾರರ ದೃಷ್ಟಿಯಲ್ಲಿ ರೂಪುಗೊಂಡಿತು

ಚಿಂಗಾರಿ ಅಪ್ಲಿಕೇಷನ್ ಮೇಲೆ ಯಾವುದೇ ವಿದೇಶಿ ಪ್ರಭಾವ ಇಲ್ಲ. ಭಾರತದ ಬಳಕೆದಾರರ ಅಗತ್ಯವನ್ನು ಗಮನದಲ್ಲಿಟ್ಟುಕೊಂಡೇ ರೂಪಿಸಲಾಗಿದೆ ಎಂದು ನಾಯಕ್ ಹೇಳುತ್ತಾರೆ. ಟಿಕ್ ಟಾಕ್ ನಿಷೇಧ ಆದ ಮೇಲೆ ದೇಶಿ ಹಾಗೂ ವಿದೇಶಿ ಹೂಡಿಕೆದಾರರು ಚಿಂಗಾರಿ ಮೇಲೆ ಹೂಡಿಕೆ ಮಾಡಲು ಆಸಕ್ತರಾಗಿದ್ದಾರೆ. ಟಿಕ್ ಟಾಕ್ ಎಂದೂ ಬಳಸದ ಉದ್ಯಮಿ ಆನಂದ್ ಮಹೀಂದ್ರಾ, ಚೀಂಗಾರಿ ಡೌನ್ ಲೌಡ್ ಮಾಡಿದ್ದಾರೆ. "ನಿಮಗೆ ಹೆಚ್ಚು ಶಕ್ತಿ ಬರಲಿ" ಎಂದಿದ್ದಾರೆ.

English summary

TikTok Competitor Of Indian App Chingari Designer Biswatma Nayak Success Story

Chingari, Indian app competitor to TikTok now become famous. Here is the success story of Chingari designer and CEO Biswatma Nayak.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X