For Quick Alerts
ALLOW NOTIFICATIONS  
For Daily Alerts

ವಿಶ್ವದ ಟಾಪ್ ಟೆನ್ ಯೂನಿವರ್ಸಿಟಿಗಳಲ್ಲಿ ಯುನೈಟೆಡ್ ಸ್ಟೇಟ್ಸ್ ನಲ್ಲೇ 8

|

ವಿಶ್ವ ಮಟ್ಟದ ವಿಶ್ವವಿದ್ಯಾಲಯಗಳ ಶ್ರೇಯಾಂಕಗಳ ಟಾಪ್ ಟೆನ್ ಪಟ್ಟಿಯೊಂದು ಬಿಡುಗಡೆ ಆಗಿದೆ. 2021ನೇ ಸಾಲಿನ ಶ್ರೇಯಾಂಕದ ಪಟ್ಟಿ ಇದು. ಟೈಮ್ಸ್ ಉನ್ನತ ಶಿಕ್ಷಣ ವಿಶ್ವ ಮಟ್ಟದ ವಿಶ್ವವಿದ್ಯಾನಿಲಯದ ಮಾಹಿತಿ ಇದು. ಇದಕ್ಕಾಗಿ 93 ದೇಶಗಳ 15 ಸಾವಿರ ವಿ.ವಿ.ಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ.

ಅವುಗಳ ಶ್ರೇಯಾಂಕವನ್ನು ನಿರ್ಧರಿಸುವ ಸಲುವಾಗಿ ಹದಿಮೂರು ಮಾನದಂಡಗಳನ್ನು ಇಟ್ಟುಕೊಳ್ಳಲಾಗಿತ್ತು. ಉಪನ್ಯಾಸ, ಸಂಶೋಧನೆ, ಅಂತರರಾಷ್ಟ್ರೀಯ ಮಟ್ಟದಲ್ಲಿನ ದೃಷ್ಟಿಕೋನ ಹಾಗೂ ಜ್ಞಾನ ವರ್ಗಾವಣೆ ಇತ್ಯಾದಿಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಭಾರತದ 63 ವಿಶ್ವವಿದ್ಯಾಲಯಗಳನ್ನು ಅರ್ಹ ಎಂದು ಪರಿಗಣಿಸಲಾಗಿತ್ತು.

ಯಾವುದೇ ದೇಶ ಅಥವಾ ಪ್ರಾದೇಶಿಕ ಭಾಗದಿಂದ ಇಷ್ಟು ದೊಡ್ಡ ಪ್ರಮಾಣದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಗಣನೆಗೆ ತೆಗೆದುಕೊಂಡಿಲ್ಲ. ಭಾರತದ ವಿಶ್ವ ವಿದ್ಯಾಲಯಗಳ ಪೈಕಿ ಬೆಂಗಳೂರಿನ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಸೈನ್ಸ್ ಗೆ ಹೆಚ್ಚಿನ ಅಂಕ ಬಂದಿದೆ. ಅಂದ ಹಾಗೆ ವಿಶ್ವದ ಟಾಪ್ ಟೆನ್ ಯೂನಿವರ್ಸಿಟಿಯಲ್ಲಿ ಆಕ್ಸ್ ಫರ್ಡ್ ಸತತ ಐದನೇ ವರ್ಷ ಮೊದಲನೇ ಸ್ಥಾನದಲ್ಲಿ ಮುಂದುವರಿದಿದೆ.

ವಿಶ್ವದ ಟಾಪ್ ಟೆನ್ ಯೂನಿವರ್ಸಿಟಿಗಳಲ್ಲಿ ಯುನೈಟೆಡ್ ಸ್ಟೇಟ್ಸ್ ನಲ್ಲೇ 8

ವಿಶ್ವದ ಟಾಪ್ ಟೆನ್ ಯೂನಿವರ್ಸಿಟಿಗಳು ಯಾವುವು ಎಂಬ ವಿವರ ಇಲ್ಲಿದೆ:
* ಆಕ್ಸ್ ಫರ್ಡ್ ಯೂನಿವರ್ಸಿಟಿ- ಯುನೈಟೆಡ್ ಕಿಂಗ್ ಡಮ್

* ಸ್ಟ್ಯಾನ್ ಫೋರ್ಡ್ ಯೂನಿವರ್ಸಿಟಿ- ಯುನೈಟೆಡ್ ಸ್ಟೇಟ್ಸ್

* ಹಾರ್ವರ್ಡ್ ಯೂನಿವರ್ಸಿಟಿ- ಯುನೈಟೆಡ್ ಸ್ಟೇಟ್ಸ್

* ಕ್ಯಾಲಿಫೋರ್ನಿಯಾ ಯೂನಿವರ್ಸಿಟಿ ಆಫ್ ಟೆಕ್ನಾಲಜಿ: ಯುನೈಟೆಡ್ ಸ್ಟೇಟ್ಸ್

* ಮಸಾಚ್ಯುಸೆಟ್ಸ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ: ಯುನೈಟೆಡ್ ಸ್ಟೇಟ್ಸ್

* ಕೇಂಬ್ರಿಜ್ ಯೂನಿವರ್ಸಿಟಿ: ಯುನೈಟೆಡ್ ಕಿಂಗ್ ಡಮ್

* ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾ, ಬರ್ಕ್ಲೆ: ಯುನೈಟೆಡ್ ಸ್ಟೇಟ್ಸ್

* ಯೇಲ್ ಯೂನಿವರ್ಸಿಟಿ: ಯುನೈಟೆಡ್ ಸ್ಟೇಟ್ಸ್

* ಪ್ರಿನ್ಸ್ ಟನ್ ಯೂನಿವರ್ಸಿಟಿ: ಯುನೈಟೆಡ್ ಸ್ಟೇಟ್ಸ್

* ಯೂನಿವರ್ಸಿಟಿ ಆಫ್ ಶಿಕಾಗೋ: ಯುನೈಟೆಡ್ ಸ್ಟೇಟ್ಸ್

English summary

Times Higher Education World University Ranking 2021: World's Top 10 Universities

Here is the list of World's top 10 universities as per Times Higher Education World University Ranking 2021. Oxford university continued in number 1 position.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X