For Quick Alerts
ALLOW NOTIFICATIONS  
For Daily Alerts

ವಿಶ್ವದಲ್ಲಿ ಅತಿ ಹೆಚ್ಚು ಸಂಪತ್ತು ಹೊಂದಿರುವ ಟಾಪ್ 10 ರಾಷ್ಟ್ರಗಳು: ಭಾರತಕ್ಕೆ ಎಷ್ಟನೇ ಸ್ಥಾನ?

|

ವಿಶ್ವದಲ್ಲಿ ಅತ್ಯಂತ ಹೆಚ್ಚು ಸಂಪತ್ತನ್ನು ಹೊಂದಿರುವ ರಾಷ್ಟ್ರಗಳು ಯಾವುವು ಎಂದು ಕ್ರೆಡಿಟ್ ಸ್ಯೂಸ್ ವರದಿ ಮಾಡಿದೆ. 2019ರ ಜಾಗತಿಕ ಸಂಪತ್ತು ವರದಿಯು ವಿಶ್ವದ ಒಟ್ಟು ಹಣ 360.6 ಟ್ರಿಲಿಯನ್ ಅಮೆರಿಕನ್ ಡಾಲರ್ ಎಂದು ಹೇಳಿದೆ.

ವಿಶ್ವದಲ್ಲಿ ಒಟ್ಟು ನಿವ್ವಳ ಮೌಲ್ಯದ ಸುಮಾರು 30 ಪರ್ಸೆಂಟ್ ಸಂಪತ್ತನ್ನು ಅಮೆರಿಕಾ ಹೊಂದಿದ್ದು, ಟಾಪ್ 10 ಶ್ರೀಮಂತ ರಾಷ್ಟ್ರಗಳ ಪಟ್ಟಿ ಇಲ್ಲಿದೆ.

10ನೇ ಸ್ಥಾನದಲ್ಲಿ ಸ್ವಿಟ್ಜರ್ಲೆಂಡ್

10ನೇ ಸ್ಥಾನದಲ್ಲಿ ಸ್ವಿಟ್ಜರ್ಲೆಂಡ್

ವಿಶ್ವದಲ್ಲಿ ಅತಿ ಹೆಚ್ಚು ಸಂಪತ್ತನ್ನು ಹೊಂದಿರುವ ರಾಷ್ಟ್ರಗಳಲ್ಲಿ ಸ್ವಿಟ್ಜರ್ಲೆಂಡ್ 10ನೇ ಸ್ಥಾನವನ್ನು ಹೊಂದಿದೆ. ಸ್ವಿಸ್‌ನ ಒಟ್ಟು ಸಂಪತ್ತು 3.9 ಟ್ರಿಲಿಯನ್ ಅಮೆರಿಕನ್ ಡಾಲರ್‌ನಷ್ಟಿದೆ. 1 ಟ್ರಿಲಿಯನ್ ಅಮೆರಿಕನ್ ಡಾಲರ್‌ಗೆ ಭಾರತದ ರುಪಾಯಿಗಳಲ್ಲಿ ಸುಮಾರು 71.74 ಲಕ್ಷ ಕೋಟಿ

9ನೇ ಸ್ಥಾನದಲ್ಲಿ ಆಸ್ಟ್ರೇಲಿಯಾ

9ನೇ ಸ್ಥಾನದಲ್ಲಿ ಆಸ್ಟ್ರೇಲಿಯಾ

ಕಾಂಗರೂ ನಾಡು ಆಸ್ಟ್ರೇಲಿಯಾ ಕೂಡ ಸಂಪದ್ಭರಿತ ರಾಷ್ಟ್ರವಾಗಿದೆ. ಕ್ರೆಡಿಟ್ ಸ್ಯೂಸ್ ವರದಿ ಪ್ರಕಾರ ಆಸ್ಟ್ರೇಲಿಯಾ ಸಂಪತ್ತು 7.2 ಟ್ರಿಲಿಯನ್ ಅಮೆರಿಕನ್ ಡಾಲರ್‌ನಷ್ಟಿದೆ.

ದಕ್ಷಿಣ ಕೊರಿಯಾಗೆ 8ನೇ ಸ್ಥಾನ

ದಕ್ಷಿಣ ಕೊರಿಯಾಗೆ 8ನೇ ಸ್ಥಾನ

ಪೂರ್ವ ಏಷ್ಯಾ ರಾಷ್ಟ್ರವಾದ ದಕ್ಷಿಣ ಕೊರಿಯಾವು ವಿಶ್ವದ ಅತ್ಯಂತ ಹೆಚ್ಚು ಮಿಲಿಟರೀಕೃತ ಗಡಿಗಳನ್ನು ಉತ್ತರ ಕೊರಿಯಾದೊಂದಿಗೆ ಹಂಚಿಕೊಂಡಿರುವ ರಾಷ್ಟ್ರವಾಗಿದೆ. ದಕ್ಷಿಣ ಕೊರಿಯಾದ ಸಂಪತ್ತು 7.3 ಟ್ರಿಲಿಯನ್ ಅಮೆರಿಕನ್ ಡಾಲರ್‌ನಷ್ಟಿದೆ.

7ನೇ ಸ್ಥಾನದಲ್ಲಿ ಕೆನಡಾ

7ನೇ ಸ್ಥಾನದಲ್ಲಿ ಕೆನಡಾ

ಉತ್ತರ ಅಮೆರಿಕಾದ ಒಂದು ರಾಷ್ಟ್ರವಾಗಿರುವ ಕೆನಡಾ ದೇಶವು ಅತ್ಯಂತ ಹೆಚ್ಚು ಸಂಪತ್ತನ್ನು ಹೊಂದಿರುವ ರಾಷ್ಟ್ರಗಳಲ್ಲಿ ಒಂದಾಗಿದೆ. ವಿಸ್ತೀರ್ಣದಲ್ಲಿ ವಿಶ್ವದ 2ನೇ ಅತಿದೊಡ್ಡ ರಾಷ್ಟ್ರವಾಗಿರುವ ಕೆನಡಾ ದೇಶದ ಸಂಪತ್ತು 8.6 ಟ್ರಿಲಿಯನ್ ಅಮೆರಿಕನ್ ಡಾಲರ್‌ನಷ್ಟಿದೆ.

 6ನೇ ಸ್ಥಾನದಲ್ಲಿ ಭಾರತ

6ನೇ ಸ್ಥಾನದಲ್ಲಿ ಭಾರತ

ವಿಶ್ವದ ಬೃಹತ್ ಆರ್ಥಿಕತೆಗಳ ಸಾಲಿನಲ್ಲಿ ನಿಲ್ಲುವ ಭಾರತವು ವಿಶ್ವದಲ್ಲಿ ಅತಿ ಹೆಚ್ಚು ಸಂಪತ್ತನ್ನು ಹೊಂದಿರುವ ಟಾಪ್ 10 ರಾಷ್ಟ್ರಗಳಲ್ಲಿ 6ನೇ ಸ್ಥಾನ ಪಡೆದಿದೆ. ಭಾರತದ ಸಂಪತ್ತು 12.6 ಟ್ರಿಲಿಯನ್ ಅಮೆರಿಕನ್ ಡಾಲರ್‌ನಷ್ಟಿದೆ.

ಇಂಗ್ಲೆಂಡ್‌ಗೆ 5ನೇ ಸ್ಥಾನ

ಇಂಗ್ಲೆಂಡ್‌ಗೆ 5ನೇ ಸ್ಥಾನ

ಸೂರ್ಯ ಮುಳುಗದ ನಾಡು ಎಂದೇ ಖ್ಯಾತಿಯ ಇಂಗ್ಲೆಂಡ್‌ ವಿಶ್ವದ ಟಾಪ್ 5 ಸಂಪದ್ಭರಿತ ರಾಷ್ಟ್ರವಾಗಿದ್ದು, ಅದರ ಸಂಪತ್ತು 14.6 ಟ್ರಿಲಿಯನ್ ಅಮೆರಿಕನ್ ಡಾಲರ್‌ನಷ್ಟಿದೆ.

4ನೇ ಸ್ಥಾನದಲ್ಲಿ ಜರ್ಮನಿ

4ನೇ ಸ್ಥಾನದಲ್ಲಿ ಜರ್ಮನಿ

ಸಂಪತ್ತಿನ ಗಳಿಕೆಯಲ್ಲಿ ಇಂಗ್ಲೆಂಡನ್ನು ಹಿಂದಿಕ್ಕಿರುವ ಜರ್ಮನಿಯು ನಾಲ್ಕನೇ ಸ್ಥಾನವನ್ನು ಹೊಂದಿದ್ದು, ಇದರ ಸಂಪತ್ತು 14.7 ಟ್ರಿಲಿಯನ್ ಅಮೆರಿಕನ್ ಡಾಲರ್‌.

ಜಪಾನ್‌ಗೆ ಮೂರನೇ ಸ್ಥಾನ

ಜಪಾನ್‌ಗೆ ಮೂರನೇ ಸ್ಥಾನ

ಸಂಪತ್ತಿನ ಒಟ್ಟು ಮೌಲ್ಯದಲ್ಲಿ ಮೂರನೇ ಸ್ಥಾನದಲ್ಲಿರುವ ಜಪಾನ್‌ನ ಸಂಪತ್ತು 25 ಟ್ರಿಲಿಯನ್ ಅಮೆರಿಕನ್ ಡಾಲರ್

ಚೀನಾಗೆ ಎರಡನೇ ಸ್ಥಾನ

ಚೀನಾಗೆ ಎರಡನೇ ಸ್ಥಾನ

ಜಗತ್ತಿನ 2ನೇ ಅತಿದೊಡ್ಡ ಆರ್ಥಿಕತೆಯಾಗಿರುವ ಚೀನಾ ದೇಶವು ಸದ್ಯ ಕೊರೊನಾವೈರಸ್‌ನಿಂದ ಸಂಕಷ್ಟದಲ್ಲಿ ಸಿಲುಕಿದೆ. ವಿಶ್ವದಲ್ಲಿ ಬಹುತೇಕ ರಾಷ್ಟ್ರಗಳೊಂದಿಗೆ ವ್ಯಾಪಾರದ ಕೇಂದ್ರವಾಗಿರುವ ಚೀನಾವು ಅತಿ ಹೆಚ್ಚು ಸಂಪತ್ತಿನಲ್ಲಿ 2ನೇ ಸ್ಥಾನ ಪಡೆದಿದ್ದು, 63.8 ಟ್ರಿಲಿಯನ್ ಅಮೆರಿಕನ್ ಡಾಲರ್ ಸಂಪತ್ತನ್ನು ಹೊಂದಿದೆ.

ಮೊದಲ ಸ್ಥಾನದಲ್ಲಿ ಅಮೆರಿಕಾ

ಮೊದಲ ಸ್ಥಾನದಲ್ಲಿ ಅಮೆರಿಕಾ

ವಿಶ್ವದ ದೊಡ್ಡಣ್ಣ ಅಮೆರಿಕಾ ದೇಶವು ವಿಶ್ವದಲ್ಲೇ ಅತಿ ಹೆಚ್ಚು ಸಂಪತ್ತನ್ನು ಹೊಂದಿದೆ. ವಿಶ್ವದ ಒಟ್ಟಾರೆ ಸಂಪತ್ತಿನಲ್ಲಿ 30 ಪರ್ಸೆಂಟ್ ಸಂಪತ್ತನ್ನು ಅಮೆರಿಕಾ ಹೊಂದಿದ್ದು, 106 ಟ್ರಿಲಿಯನ್ ಅಮೆರಿಕನ್ ಡಾಲರ್ ಸಂಪತ್ತನ್ನು ಹೊಂದಿದೆ.

English summary

Top 10 Most Wealth Countries In The World

In this article showed world top 10 most wealth countries
Story first published: Tuesday, February 25, 2020, 22:26 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X