For Quick Alerts
ALLOW NOTIFICATIONS  
For Daily Alerts

2020 ರಿಂದ 2021 ಫೆಬ್ರವರಿವರೆಗೆ ಅತಿ ಹೆಚ್ಚು ಮಾರಾಟವಾದ ಎಸ್‌ಯುವಿ

|

ಭಾರತದಲ್ಲಿ ಕಳೆದ ಕೆಲವು ವರ್ಷಗಳಿಂದ ಎಸ್‌ಯುವಿಗೆ ಎಲ್ಲಿಲ್ಲದ ಬೇಡಿಕೆಯಿದೆ. ಹೀಗಾಗಿ ಪ್ರಮುಖ ಕಾರು ತಯಾರಕಾ ಸಂಸ್ಥೆಗಳು ಅನೇಕ ಹೊಸ ಮಾದರಿಯ ಎಸ್‌ಯುವಿಗಳನ್ನು ಪರಿಚಯಿಸುತ್ತಿವೆ.

ಕೋವಿಡ್-19 ಲಾಕ್‌ಡೌನ್ ನಡುವೆ ಎಸ್‌ಯುವಿಗಳ ಮಾರಾಟವು ಉತ್ತಮವಾಗಿದೆ. ಇದರ ನಡುವೆ ಪ್ರಮುಖ ಕಾರು ತಯಾರಕರ ನಡುವೆ ಸ್ಪರ್ಧೆ ಕೂಡ ಜೋರಾಗಿದೆ. ಕಳೆದ ಒಂದು ವರ್ಷದಲ್ಲಿ ಅಂದರೆ ಏಪ್ರಿಲ್ 2020 ರಿಂದ ಫೆಬ್ರವರಿ 2021 ರವರೆಗೆ ಯಾವ ಎಸ್‌ಯುವಿಗಳು ಹೆಚ್ಚು ಮಾರಾಟವಾಗಿವೆ ಎಂಬ ಬಗ್ಗೆ ಈ ಕೆಳಗೆ ನಿಮಗೆ ಮಾಹಿತಿ ನೀಡಿದ್ದೇವೆ.

ಹ್ಯುಂಡೈ ಕ್ರೆಟಾ ಅತಿ ಹೆಚ್ಚು ಮಾರಾಟ

ಹ್ಯುಂಡೈ ಕ್ರೆಟಾ ಅತಿ ಹೆಚ್ಚು ಮಾರಾಟ

ಹ್ಯುಂಡೈ ಕ್ರೆಟಾ ಕಳೆದು ಒಂದು ವರ್ಷದಲ್ಲಿ ಅತಿ ಹೆಚ್ಚು ಮಾರಾಟವಾಗಿವೆ. ಹ್ಯುಂಡೈ ಮಾರ್ಚ್ 2020 ರಲ್ಲಿ ಕ್ರೆಟಾವನ್ನು ಪ್ರಾರಂಭಿಸಿತು ಮತ್ತು ಈ ಅವಧಿಯಲ್ಲಿ 1.21 ಯುನಿಟ್‌ಗಳನ್ನು ಮಾರಾಟ ಮಾಡಿತು, ಈ ಕಾರಣದಿಂದಾಗಿ ಅದು ಮೊದಲ ಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿ ಲಕ್ಷಾಂತರ ಗಡಿ ದಾಟಿದ ಏಕೈಕ ಮಾದರಿ ಇದಾಗಿದ್ದು, ಹೀಗಾಗಿಯೇ ನಂಬರ್ 1 ಸ್ಥಾನದಲ್ಲಿದೆ.

ಮಾರುತಿ ಬ್ರೀಜಾ

ಮಾರುತಿ ಬ್ರೀಜಾ

ಮಾರುತಿ ಬ್ರೀಜಾ ಫೇಸ್ ಲಿಫ್ಟ್ ಅನ್ನು 2020ರ ಫೆಬ್ರವರಿಯಲ್ಲಿ ಭಾರತದಲ್ಲಿ ಪರಿಚಯಿಸಲಾಗಿದ್ದು, ಈ ಅವಧಿಯಲ್ಲಿ 83,000 ಯುನಿಟ್ ಮಾರಾಟವಾಗಿದೆ. ಕಂಪನಿಯ ಈ ಎಸ್‌ಯುವಿಗೆ ಮೊದಲಿನಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಮತ್ತು ಈ ಕಾರಣದಿಂದಾಗಿ ಅದು ತನ್ನ ವಿಭಾಗದಲ್ಲಿಯೂ ಪ್ರಥಮ ಸ್ಥಾನದಲ್ಲಿದ್ದು, ಒಟ್ಟಾರೆ ಎಸ್‌ಯುವಿ ಮಾರಾಟದಲ್ಲಿ ದ್ವಿತೀಯ ಸ್ಥಾನ ಪಡೆದಿದೆ.

ಹ್ಯುಂಡೈ ವೆನ್ಯೂ

ಹ್ಯುಂಡೈ ವೆನ್ಯೂ

ಹ್ಯುಂಡೈ ಕ್ರೆಟಾ ಬಳಿಕ, ಹ್ಯುಂಡೈ ವೆನ್ಯೂ ಏಪ್ರಿಲ್ ಮತ್ತು ಫೆಬ್ರವರಿ ನಡುವೆ 82,250 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಒಂದು ವರ್ಷದ ನಂತರವೂ ಈ ಎಸ್ಯುವಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ನಾಲ್ಕನೇ ಸ್ಥಾನದಲ್ಲಿ ಮಾರುತಿ ಎರ್ಟಿಗಾವಿದ್ದು ಈ ಅವಧಿಯಲ್ಲಿ 79,268 ಯುನಿಟ್ ಮಾರಾಟವಾಗಿದೆ.

ಕಿಯಾ ಸೆಲ್ಟೋಸ್, ಕಿಯಾ ಸಾನೆಟ್

ಕಿಯಾ ಸೆಲ್ಟೋಸ್, ಕಿಯಾ ಸಾನೆಟ್

ಕಿಯಾ ಮೋಟಾರ್ಸ್ ಒಟ್ಟು 1.34 ಲಕ್ಷ ಯುನಿಟ್ ಮಾರಾಟ ಮಾಡಿದೆ, ಅದರಲ್ಲಿ ಸೆಲ್ಟೋಸ್ 78,616 ಯುನಿಟ್ ಮಾರಾಟವನ್ನು ಹೊಂದಿದೆ. ಇದರ ನಂತರ ಸಾನೆಟ್ ಏಪ್ರಿಲ್ ಮತ್ತು ಫೆಬ್ರವರಿ ನಡುವೆ 55,219 ಯುನಿಟ್‌ಗಳನ್ನು ಮಾರಾಟ ಮಾಡಿದೆ.

ಇದರ ನಂತರದಲ್ಲಿ ಮಹೀಂದ್ರಾ ಬೊಲೆರೊ, ಟಾಟಾ ನೆಕ್ಸನ್, ರೆನಾಲ್ಟ್‌ ಟ್ರಬೈರ್, ಮಹೀಂದ್ರಾ ಎಕ್ಸ್‌ಯುವಿ300 ಅತಿ ಹೆಚ್ಚು ಮಾರಾಟವಾದ ಕಾರುಗಳಾಗಿವೆ.

 

English summary

Top 10 Selling Utility Vehicles From April 2020 To February 2021

Utility vehicles combined have the largest market share and here are the top 10 most bought UVs in the period of April 2020 to February 2021. Take a look
Story first published: Saturday, March 20, 2021, 19:48 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X