For Quick Alerts
ALLOW NOTIFICATIONS  
For Daily Alerts

ಸಣ್ಣ ಡೀಸೆಲ್ ಕಾರುಗಳ ಉತ್ಪಾದನೆಯನ್ನೇ ನಿಲ್ಲಿಸಲಿದೆ ಟೊಯೋಟಾ

|

ಭಾರತದ ಮಾರುಕಟ್ಟೆಯಲ್ಲಿ ಕಿರ್ಲೋಸ್ಕರ್ ಗ್ರೂಪ್ ಜತೆ ಸೇರಿ ವಾಹನ ಉತ್ಪಾದನೆಯಲ್ಲಿ ತೊಡಗಿರುವ ಜಪಾನ್ ನ ವಾಹನ ತಯಾರಿಕೆ ಸಂಸ್ಥೆ ಟೊಯೋಟಾವು ದೇಶದಲ್ಲಿ ಸಣ್ಣ ಪ್ರಮಾಣದ ಡೀಸೆಲ್ ವಾಹನಗಳ ಉತ್ಪಾದನೆ ನಿಲ್ಲಿಸಲು ತೀರ್ಮಾನಿಸಿದೆ. ದೇಶದಲ್ಲಿ BSVIಗೆ ಬದಲಾವಣೆ ಆದ ನಂತರ ಟೊಯೋಟಾದಿಂದ ಸಣ್ಣ ಪ್ರಮಾಣದ ಕಾರುಗಳ ಉತ್ಪಾದನೆ ನಿಲ್ಲಿಸಲು ನಿರ್ಧರಿಸಲಾಗಿದೆ.

ಆದರೆ, ಟೊಯೋಟಾದಿಂದ ದೊಡ್ಡ ಕಾರುಗಳಲ್ಲಿ ಡೀಸೆಲ್ ಎಂಜಿನ್ ಮಾದರಿಯನ್ನು ಮುಂದುವರಿಸಲಾಗುತ್ತದೆ. ಇನ್ನೋವಾ, ಫಾರ್ಚೂನರ್ ನಂಥ ವಾಹನಗಳಲ್ಲಿ ಡೀಸೆಲ್ ಎಂಜಿನ್ ಬಳಕೆಯು ಮುಂದುವರಿಯಲಿದೆ. 1.3 ಲೀಟರ್ ಡೀಸೆಲ್ ಎಂಜಿನ್ ನ ಇಟಿಯೋಸ್, ಇಟಿಯೋಸ್ ಕ್ರಾಸ್, ಲಿವಾ ಮತ್ತು ಕರೊಲಾ ಆಲ್ಟಿಸ್ ಉತ್ಪಾದನೆಯನ್ನು ನಿಲ್ಲಿಸಲಾಗುತ್ತದೆ.

"ಇಟಿಯೋಸ್ ಸರಣಿಯು ಇನ್ನೇನು ಕೊನೆಯಾಗುತ್ತಾ ಬರುತ್ತಿದೆ. ಟೊಯೋಟಾದಿಂದ ಕರೊಲಾ ಆಲ್ಟಿಸ್ ಡೀಸೆಲ್ ಮಾದರಿಯನ್ನು ಸಹ ನಿಲ್ಲಿಸಲಾಗುತ್ತದೆ. ಏಕೆಂದರೆ BSVI ಜಾರಿಗೆ ಬಂದ ನಂತರ ಡೀಸೆಲ್ ಎಂಜಿನ್ ಗಳ ವೆಚ್ಚ ಹೆಚ್ಚಾಗಲಿದೆ. ಇದರಿಂದ ಗ್ರಾಹಕರಿಗೆ ಹೊರೆಯಾಗಲಿದೆ" ಎಂದು ಕಂಪೆನಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆಲ್ಟಿಸ್ ಕಾರುಗಳ ಮಾರಾಟದಲ್ಲಿ ಕುಸಿತ
 

ಆಲ್ಟಿಸ್ ಕಾರುಗಳ ಮಾರಾಟದಲ್ಲಿ ಕುಸಿತ

"ಜಾಗತಿಕ ಮಟ್ಟದಲ್ಲಿ ಆಲ್ಟಿಸ್ ನಲ್ಲಿ ಹೈಬ್ರಿಡ್ ತಂತ್ರಜ್ಞಾನ ಬಳಕೆಗೆ ಟೊಯೋಟಾ ಮುಂದಾಗಿದೆ. ಜತೆಗೆ ಭಾರತೀಯ ಮಾರುಕಟ್ಟೆಯಲ್ಲಿ ಆಲ್ಟಿಸ್ ಕಾರು ಮಾರಾಟವು ಈಗಾಗಲೇ ತಿಂಗಳಿಗೆ ಐನೂರು- ಆರುನೂರಕ್ಕೆ ಕುಸಿದಿದೆ. ಆದ್ದರಿಂದ ಇಷ್ಟು ಕಡಿಮೆ ಸಂಖ್ಯೆಯಲ್ಲಿ ಕಾರು ಉತ್ಪಾದನೆ ಮಾಡುವುದು ಆರ್ಥಿಕವಾಗಿ ಲಾಭದಾಯಕ ಅಲ್ಲ" ಎಂದು ಮತ್ತೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ.

ಬಹುತೇಕ ಡೀಸೆಲ್ ಕಾರುಗಳೇ ಮಾರಾಟ

ಬಹುತೇಕ ಡೀಸೆಲ್ ಕಾರುಗಳೇ ಮಾರಾಟ

ಟೊಯೋಟಾ ಕಿರ್ಲೋಸ್ಕರ್ ನ ಡೆಪ್ಯೂಟಿ ಮ್ಯಾನೇಜಿಂಗ್ ಡೈರೆಕ್ಟರ್ ಎನ್. ರಾಜಾ ಮಾತನಾಡಿ, ಡೀಸೆಲ್ ವಾಹನಗಳಿಗೆ ಈಗಲೂ ಬೇಡಿಕೆ ಇದೆ. ಭವಿಷ್ಯದ ತಂತ್ರಜ್ಞಾನ ಅಳವಡಿಸಿಕೊಳ್ಳುವ ತನಕ ಉತ್ಪಾದನೆ ಮಾಡುತ್ತೇವೆ ಎಂದಿದ್ದಾರೆ. ಕಂಪೆನಿಯ ವಾಹನಗಳ ಒಟ್ಟು ಮಾರಾಟದಲ್ಲಿ ಶೇಕಡಾ ಎಂಬತ್ತೈದರಷ್ಟು ಡೀಸೆಲ್ ವಾಹನಗಳಿವೆ. ಈ ವರ್ಷದ ಜನವರಿಯಿಂದ ಸೆಪ್ಟೆಂಬರ್ ಮಧ್ಯೆ ಹತ್ತಿರ ಹತ್ತಿರ ಒಂದು ಲಕ್ಷ ಕಾರುಗಳು ಮಾರಾಟ ಆಗಿವೆ. ಅದರಲ್ಲಿ ಶೇಕಡಾ ಅರವತ್ತಕ್ಕಿಂತ ಹೆಚ್ಚು ಯುಟಿಲಿಟಿ ವಾಹನಗಳಾದ ಇನ್ನೋವಾ, ಫಾರ್ಚೂನರ್ ಮಾರಾಟ ಆಗಿವೆ. ಆದ್ದರಿಂದ ಡೀಸೆಲ್ ಎಂಜಿನ್ ವಾಹನಗಳ ಮಾರಾಟ ಮುಂದುವರಿಯಲಿದೆ.

ಮಾರುತಿ ಸುಝುಕಿ, ರೆನಾಲ್ಟ್ ನಿಂದಲೂ ಉತ್ಪಾದನೆ ಸ್ಥಗಿತ

ಮಾರುತಿ ಸುಝುಕಿ, ರೆನಾಲ್ಟ್ ನಿಂದಲೂ ಉತ್ಪಾದನೆ ಸ್ಥಗಿತ

BSVI ಎಂಜಿನ್ ಗಳ ಉತ್ಪಾದನೆ ಆರಂಭವಾದ ಮೇಲೆ ಹದಿನೈದು ಲಕ್ಷ ರುಪಾಯಿ ಮೇಲ್ಪಟ್ಟ ಡೀಸೆಲ್ ಎಂಜಿನ್ ವಾಹನಗಳ ಉತ್ಪಾದನೆ ಮಾಡಿದರೆ ಅದರಲ್ಲಿ ಅರ್ಥ ಇದೆ. ಇಲ್ಲದಿದ್ದರೆ ಏನೂ ಲಾಭ ಇಲ್ಲ ಎಂದು ಎಂ. ಜಿ. ಮೋಟಾರ್ಸ್ ಹೇಳಿದೆ. ಇದೇ ವೇಳೆ ಮಾರುತಿ ಸುಝುಕಿ, ರೆನಾಲ್ಟ್ ಕೂಡ BSVI ಜಾರಿ ನಂತರ ಸಣ್ಣ ಡೀಸೆಲ್ ಕಾರುಗಳ ಉತ್ಪಾದನೆ ನಿಲ್ಲಿಸಲು ತೀರ್ಮಾನಿಸಿವೆ.

ಇಪ್ಪತ್ತು ಪರ್ಸೆಂಟ್ ಬೆಲೆ ಹೆಚ್ಚಳವಾಗಲಿದೆ
 

ಇಪ್ಪತ್ತು ಪರ್ಸೆಂಟ್ ಬೆಲೆ ಹೆಚ್ಚಳವಾಗಲಿದೆ

BSVI ಡೀಸೆಲ್ ಎಂಜಿನ್ ವಾಹನಗಳ ಬೆಲೆಯು ಹದಿನೈದರಿಂದ ಇಪ್ಪತ್ತು ಪರ್ಸೆಂಟ್ ಹೆಚ್ಚಾಗಬಹುದು ಎನ್ನಲಾಗುತ್ತಿದೆ. ತಯಾರಿಕೆ ವೆಚ್ಚವೇ ಹೆಚ್ಚಾಗುವುದರಿಂದ ಮಾರಾಟದ ಬೆಲೆಯನ್ನೂ ಅನಿವಾರ್ಯವಾಗಿ ಏರಿಸಬೇಕಾಗುತ್ತದೆ ಎಂದು ಕಾರು ಉತ್ಪಾದನೆ ಕಂಪೆನಿಗಳು ಅಭಿಪ್ರಾಯ ಪಡುತ್ತವೆ.

English summary

Toyota Will Stop Small Segment Diesel Car Manufacturing After BSVI Implementation

Japan car maker company Toyota will stop manufacturing small segment diesel cars in Indian market after BSVI implementation.
Story first published: Tuesday, November 19, 2019, 12:28 [IST]
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more