For Quick Alerts
ALLOW NOTIFICATIONS  
For Daily Alerts

ಜಿ7 ಶೃಂಗಸಭೆಗೆ ಭಾರತವನ್ನು ಸೇರಿಸಬೇಕು: ಡೊನಾಲ್ಡ್‌ ಟ್ರಂಪ್

|

ಶ್ವೇತಭವನದಲ್ಲಿ ಮುಂದಿನ ತಿಂಗಳು ನಡೆಸಲು ಉದ್ದೇಶಿಸಿದ್ದ ಜಿ7 ಶೃಂಗಸಭೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೆಪ್ಟೆಂಬರ್‌ಗೆ ಮುಂದೂಡಿದ್ದಾರೆ.ಜೊತೆಗೆ ಜಿ7 ಶೃಂಗ ರಾಷ್ಟ್ರಗಳೊಂದಿಗೆ ಇಂದು ವಿಶ್ವದ ಆರ್ಥಿಕತೆಯಲ್ಲಿ ಗುರುತಿಸಿಕೊಂಡಿರುವ ಭಾರತ ಮತ್ತು ಇತರ ಕೆಲವು ದೇಶಗಳನ್ನು ಸೇರಿಸುವಂತೆ ಅವರು ಕೋರಿದ್ದಾರೆ.

 

ಈ ಬಗ್ಗೆ ಶನಿವಾರ ಸುದ್ದಿಗಾರರಿಗೆ ಮಾಹಿತಿ ನೀಡಿದ ಟ್ರಂಪ್, ಜಿ7 ಶೃಂಗಸಭೆಯನ್ನು ಸೆಪ್ಟೆಂಬರ್ ವರೆಗೆ ಮುಂದೂಡಲಾಗುವುದು, ನಂತರ ನಡೆಸುವ ಶೃಂಗಸಭೆಗೆ ಭಾರತ ಸೇರಿದಂತೆ ರಷ್ಯಾ, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾಗಳನ್ನು ಸಹ ಆಹ್ವಾನಿಸಲು ಯೋಚಿಸುತ್ತಿರುವುದಾಗಿ ಹೇಳಿದ್ದಾರೆ. ಜಿ7 ಅನ್ನು ಜಿ10 ಅಥವಾ ಜಿ11 ಎಂದು ಕರೆಯಬಹುದು ಎಂದಿದ್ದಾರೆ.

 
ಜಿ7 ಶೃಂಗಸಭೆಗೆ ಭಾರತವನ್ನು ಸೇರಿಸಬೇಕು: ಡೊನಾಲ್ಡ್‌ ಟ್ರಂಪ್

"ನಾನು ಅದನ್ನು ಮುಂದೂಡುತ್ತಿದ್ದೇನೆ ಏಕೆಂದರೆ ಜಿ 7 ಸದ್ಯ ಜಗತ್ತಿನಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಸರಿಯಾಗಿ ಪ್ರತಿನಿಧಿಸುತ್ತದೆ ಎಂದು ನನಗೆ ಅನಿಸುವುದಿಲ್ಲ" ಎಂದು ಟ್ರಂಪ್ ಏರ್ ಫೋರ್ಸ್ ಒನ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಇದು ಬಹಳ ಹಳತಾದ ದೇಶಗಳ ಗುಂಪಾಗಿದೆ'' ಎಂದು ಟ್ರಂಪ್ ತಿಳಿಸಿದ್ದಾರೆ.

ವಿಶ್ವದ ಅತ್ಯಂತ ಸುಧಾರಿತ ಮತ್ತು ಆರ್ಥಿಕವಾಗಿ ಪ್ರಬಲವಾಗಿರುವ ದೇಶಗಳಾದ ಅಮೆರಿಕ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಇಂಗ್ಲೆಂಡ್ ಮತ್ತು ಕೆನಡಾ ದೇಶಗಳನ್ನು ಒಟ್ಟು ಸೇರಿಸಿ ಜಿ7 ಶೃಂಗರಾಷ್ಟ್ರಗಳನ್ನಾಗಿ ರಚಿಸಲಾಗಿತ್ತು. ಈ ದೇಶಗಳ ಮುಖ್ಯಸ್ಥರು ವರ್ಷಕ್ಕೊಂದು ಬಾರಿ ಸಭೆ ಸೇರಿ ಅಂತರಾಷ್ಟ್ರೀಯ ಆರ್ಥಿಕತೆ ಮತ್ತು ವಿತ್ತೀಯ ವಿಷಯಗಳ ಬಗ್ಗೆ ಚರ್ಚೆ ನಡೆಸಿ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳುತ್ತವೆ.

ಈ ವರ್ಷದ ಜಿ7 ಶೃಂಗಸಭೆಯ ಆತಿಥ್ಯ ಅಮೆರಿಕ ವಹಿಸಲಿದೆ. ಸಾಮಾನ್ಯವಾಗಿ ಈ ಶೃಂಗಸಭೆಗೆ ಅಧ್ಯಕ್ಷರು ಪ್ರತಿವರ್ಷ ಒಂದು ಅಥವಾ ಎರಡು ರಾಷ್ಟ್ರಗಳ ಮುಖ್ಯಸ್ಥರನ್ನು ವಿಶೇಷ ಆಹ್ವಾನಿತರಾಗಿ ಆಹ್ವಾನಿಸುತ್ತಾರೆ. ಕಳೆದ ವರ್ಷ ಫ್ರಾನ್ಸ್ ನಲ್ಲಿ ನಡೆದ ಶೃಂಗಸಭೆಗೆ ಪ್ರಧಾನಿ ಮೋದಿಯವರಿಗೆ ವಿಶೇಷ ಆಹ್ವಾನ ನೀಡಲಾಗಿತ್ತು.

English summary

Trump Plans To Invite India To G7 Meet

President Donald Trump on Saturday called for expanding the G-7, which he described as a “very outdated group”, to include India, Australia, South Korea and Russia
Story first published: Sunday, May 31, 2020, 9:55 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X