For Quick Alerts
ALLOW NOTIFICATIONS  
For Daily Alerts

ಸೌದಿ ಅರೇಬಿಯಾ, ರಷ್ಯಾ ಸಮರದ ನಡುವೆ ತೈಲ ಬೆಲೆ ಏರಿಕೆ

|

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಳಿಯತ್ತಲೇ ಸಾಗುತ್ತಿದ್ದ ಕಚ್ಛಾ ತೈಲ ದರವು ಆಶ್ಚರ್ಯಕರ ರೀತಿಯಲ್ಲಿ ಏರಿಕೆ ಕಂಡಿದೆ. ತೈಲ ಉತ್ಪಾದನೆ ತಗ್ಗಿಸುವ ಕುರಿತು ಸೌದಿ ಅರೇಬಿಯಾ ಮತ್ತು ರಷ್ಯಾ ನಡುವಿನ ತೈಲ ಸಮರವು ಸದ್ಯದಲ್ಲೇ ಕೊನೆಗೊಳ್ಳುವ ನಿರೀಕ್ಷೆ ಕಾಣುತ್ತಿದೆ.

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಬಳಿಕ ತೈಲ ಬೆಲೆಯು ಹಠಾತ್ತನೆ 25 ಪರ್ಸೆಂಟ್ ಏರಿಕೆಗೊಂಡಿತು. ರಷ್ಯಾ-ಸೌದಿ ನಡುವೆ ತೈಲ ಸಮರ ಕೊನೆಗೊಳ್ಳುವುದನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಟ್ವೀಟ್ ಮಾಡಿದ್ದರು. ಇದಾದ ಬಳಿಕ ಬ್ರೆಂಟ್ ನಾರ್ತ್ ಸೀ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 36.29 ಡಾಲರ್‌ನಂತೆ ಏರಿಕೆ ಕಂಡಿತು. ಆದರೆ ಏಷ್ಯಾ ಮಾರುಕಟ್ಟೆಯಲ್ಲಿ ಶುಕ್ರವಾರ ತೈಲ ದರವು ಇಳಿಕೆಗೊಂಡಿತು.

ಸೌದಿ ಅರೇಬಿಯಾ, ರಷ್ಯಾ ಸಮರದ ನಡುವೆ ತೈಲ ಬೆಲೆ ಏರಿಕೆ

ತೈಲ ಬೆಲೆಯನ್ನು ಸ್ಥಿರತೆ ತರಲು ಒಪೆಕ್ ಮತ್ತು ಇತರೆ ತೈಲ ಉತ್ಪಾದನಾ ದೇಶಗಳ ತುರ್ತು ಸಭೆ ಆಯೋಜಿಸಲು ಸೌದಿ ಅರೇಬಿಯಾ ಕರೆ ನೀಡಿದೆ. ಸೌದಿ ಅರೇಬಿಯಾದ ನಿಲುವಿನಲ್ಲಿ ಬದಲಾವಣೆಗೆ ಆಗಿರುವುದು ಉತ್ತಮ ಬೆಳವಣಿಗೆಯಾಗಿದೆ.

ಒಂದು ವೇಳೆ ಸೌದಿ ಅರೇಬಿಯಾ ಹಾಗೂ ರಷ್ಯಾ ನಡುವಿನ ತೈಲ ಸಮರ ಕೊನೆಗೊಂಡು ಪೂರೈಕೆಯಲ್ಲಿ ತಗ್ಗಿಸಿದರೆ ಕಚ್ಛಾ ತೈಲ ದರವು ಭಾರೀ ಏರಿಕೆ ಕಾಣುತ್ತದೆ ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ.

English summary

Trump Tweet Sends Oil Prices Up 30 Percent

Oil prices spiked on Thursday morning after U.S. President Donald Trump said that he spoke with the Saudi Crown Prince
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X