For Quick Alerts
ALLOW NOTIFICATIONS  
For Daily Alerts

ಕಚ್ಚಾ ತೈಲ ಬೆಲೆ 'ಸೊನ್ನೆ'ಗಿಂತ ಕೆಳಗೆ; ಮಾರುವವರೇ ಖರೀದಿದಾರರಿಗೆ ಹಣ ನೀಡಬೇಕು!

|

ಕೆಲವು ಘಟನೆಗಳು ಐತಿಹಾಸಿಕ ಅನ್ನಿಸಿಕೊಳ್ಳುತ್ತವೆ. ಅದು ಒಳ್ಳೆಯ ಕಾರಣಕ್ಕೂ ಇರಬಹುದು ಅಥವಾ ಕೆಟ್ಟ ಕಾರಣಕ್ಕೂ ಆಗಬಹುದು. ಸೋಮವಾರದಂದು (ಏಪ್ರಿಲ್ 20, 2020) ತೈಲ ಮಾರುಕಟ್ಟೆಯಲ್ಲಿ ಆಗಿದ್ದು ಅಂಥದ್ದೇ ಐತಿಹಾಸಿಕ ಘಟನೆ. ಅದ್ಯಾವ ಪರಿಯಲ್ಲಿ ಬೆಲೆ ಬಿತ್ತು ಅಂದರೆ, ವ್ಯಾಪಾರಿಗಳು ತಮ್ಮ ಬಳಿ ಇರುವ ತೈಲವನ್ನು ತೆಗೆದುಕೊಂಡು ಹೋಗುವ ಖರೀದಿದಾರರಿಗೆ ಹಣ ನೀಡುವಂತಾಯಿತು.

ಯು.ಎಸ್. ಮುಖ್ಯವಾದ ಬೆಂಚ್ ಮಾರ್ಕ್ ಬ್ಯಾರಲ್ ಗೆ 50 ಡಾಲರ್ ಗೂ ಹೆಚ್ಚು ಕುಸಿಯಿತು. ದರವು ಶೂನ್ಯಕ್ಕಿಂತ ಕೆಳಗೆ - $ 37.63ಕ್ಕೆ ಇಳಿಯಿತು. ಇದೇ ಮೊದಲ ಬಾರಿಗೆ ತೈಲ ಬೆಲೆಯು ನೆಗೆಟಿವ್ ಕಂಡುಬಂತು. ತೈಲ ಮಾರುಕಟ್ಟೆಯ ಕಂಪನದ ಪರಿಣಾಮ ಇದು. ಅದರ ಮೂಲ ಇರುವುದು ಕೊರೊನಾ ವೈರಾಣು ಜಾಗತಿಕ ಆರ್ಥಿಕತೆ ಮೇಲೆ ಬೀರಿರುವ ಪರಿಣಾಮದಲ್ಲಿ.

ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ 0 ಡಾಲರ್‌ಗೆ ಕುಸಿದ ಕಚ್ಚಾ ತೈಲ ದರಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ 0 ಡಾಲರ್‌ಗೆ ಕುಸಿದ ಕಚ್ಚಾ ತೈಲ ದರ

ತೈಲದ ಬೇಡಿಕೆ ಪಾತಾಳಕ್ಕೆ ಇಳಿದಿದೆ. ಸೌದಿ ಅರೇಬಿಯಾ, ರಷ್ಯಾ ಮತ್ತಿತರ ದೇಶಗಳು ಉತ್ಪಾದನೆ ಕಡಿಮೆ ಮಾಡಲು ಒಪ್ಪಿಕೊಂಡ ಮೇಲೂ ಉತ್ಪಾದನೆ ಆಗುತ್ತಿರುವ ಕಡಿಮೆ ತೈಲವನ್ನು ಖರೀದಿಸಿ, ಸಂಗ್ರಹಿಸಲು ಸಹ ಸ್ಥಳವಿಲ್ಲದಂತಾಗಿದೆ. ಒಂದು ದಿನಕ್ಕೆ 10 ಕೋಟಿ ಬ್ಯಾರೆಲ್ ಗೂ ಹೆಚ್ಚು ತೈಲ ಉತ್ಪಾದನೆ ಮಾಡಲಾಗುತ್ತದೆ. ಈ ವರ್ಷದ ಆರಂಭದಲ್ಲಿ ಒಂದು ಬ್ಯಾರೆಲ್ ಗೆ $ 60ಗೂ ಸ್ವಲ್ಪ ಹೆಚ್ಚು ಬೆಲೆ ಇತ್ತು. ಆದರೆ ಶುಕ್ರವಾರದ ಹೊತ್ತಿಗೆ $ 20ಗೆ ಬಂದಿತ್ತು.

ಮಾರಾಟಗಾರರೇ ಖರೀದಿದಾರರಿಗೆ ಹಣ ನೀಡಬೇಕು

ಮಾರಾಟಗಾರರೇ ಖರೀದಿದಾರರಿಗೆ ಹಣ ನೀಡಬೇಕು

ತಮಾಷೆ ವಿಷಯ ಏನು ಗೊತ್ತಾ? ಸೋಮವಾರದ ದಿನ ಅಮೆರಿಕದಲ್ಲಿ ನೆಗೆಟಿವ್ ಬೆಲೆ ಅಂತ ಬಂದಿದೆ. ಹಾಗೆಂದರೆ, ಮಾರಾಟಗಾರರು ತಮ್ಮ ಬಳಿ ಇರುವ ಒಂದು ಬ್ಯಾರೆಲ್ ತೈಲವನ್ನು ಮಾರಾಟ ಮಾಡುವುದಕ್ಕೆ ಖರೀದಿದಾರರಿಗೆ $ 37.63 ನೀಡಬೇಕಾಗುತ್ತದೆ. ಮೇ ತಿಂಗಳ ಫ್ಯೂಚರ್ ಕಾಂಟ್ರ್ಯಾಕ್ಟ್ಸ್ ಖರೀದಿ ಮಾಡುವುದಕ್ಕೆ ಮಂಗಳವಾರ ಕೊನೆ ದಿನ. ಆದರೆ ತೈಲ ಖರೀದಿಗೆ ಯಾರೂ ತಯಾರಿ ಇಲ್ಲ. ಅದನ್ನು ಸಂಗ್ರಹಿಸಲು ಸ್ಥಳವಿಲ್ಲ. ಜೂನ್ ತಿಂಗಳದು $ 22ರಂತೆ ವಹಿವಾಟು ನಡೆಸುತ್ತಿದೆ. ಈ ದಿನ 16% ಇಳಿಕೆಯಲ್ಲಿದೆ. ರಿಫೈನರಿಗಳಿಗೆ ತೈಲವನ್ನು ಗ್ಯಾಸೋಲಿನ್, ಡೀಸೆಲ್ ಮತ್ತಿತರ ಉತ್ಪನ್ನಗಳಾಗಿ ಬದಲಿಸಲು ಆಗುತ್ತಿಲ್ಲ. ಏಕೆಂದರೆ ಜನರ ಸಂಚಾರ ವಿರಳವಾಗಿದೆ ಹಾಗೂ ವಿಮಾನ ಯಾನ, ಅಂತರರಾಷ್ಟ್ರೀಯ ವ್ಯಾಪಾರ- ವ್ಯವಹಾರ ತೀಕ್ಷ್ಣಗತಿಯಲ್ಲಿ ಕುಸಿದಿದೆ. ಈಗ ತೈಲ ವ್ಯಾಪಾರಕ್ಕಿಂತ ಅವುಗಳನ್ನು ಸಂಗ್ರಹಿಸುವ ಸ್ಥಳವನ್ನು ಬಾಡಿಗೆಗೆ ನೀಡುವುದೇ ಲಾಭದಾಯಕ ಎನ್ನುವಂತಾಗಿದೆ.

ಮನೆಯಲ್ಲಿ ನಲ್ಲಿ ನಿಲ್ಲಿಸಿದಂತೆ ತೈಲ ಉತ್ಪಾದನೆ ನಿಲ್ಲಿಸಲು ಆಗಲ್ಲ

ಮನೆಯಲ್ಲಿ ನಲ್ಲಿ ನಿಲ್ಲಿಸಿದಂತೆ ತೈಲ ಉತ್ಪಾದನೆ ನಿಲ್ಲಿಸಲು ಆಗಲ್ಲ

ವಿಶ್ವದಲ್ಲಿ 6.8 ಬಿಲಿಯನ್ ಬ್ಯಾರೆಲ್ ತೈಲವನ್ನು ಸಂಗ್ರಹ ಮಾಡಬಹುದು. ಅದರಲ್ಲಿ ಶೇಕಡಾ 60ರಷ್ಟು ತುಂಬಿದೆ ಎನ್ನುತ್ತಾರೆ ತಜ್ಞರು. ಇನ್ನು ಯು.ಎಸ್.ನ ಒಕ್ಲಹೋಮ ತುಂಬ ಪ್ರಮುಖವಾದ ಸಂಗ್ರಹ ಕೇಂದ್ರ. ಅಲ್ಲಿ ಫ್ಯೂಚರ್ ಮಾರ್ಕೆಟ್ ನ ವ್ಯವಹಾರಗಳ ಡೆಲಿವರಿ ಆಗುತ್ತದೆ. ಅಲ್ಲಿ 80 ಮಿಲಿಯನ್ ಬ್ಯಾರೆಲ್ ತೈಲ ಸಂಗ್ರಹಿಸಬಹುದು. ಈಗ 21 ಮಿಲಿಯನ್ ಬ್ಯಾರೆಲ್ ಸಂಗ್ರಹಿಸುವಷ್ಟು ಮಾತ್ರ ಸಾಮರ್ಥ್ಯ ಉಳಿದಿದೆ. ಇನ್ನು ಕೆರಿಬಿಯನ್, ದಕ್ಷಿಣ ಆಫ್ರಿಕಾ, ಅಂಗೋಲಾ, ಬ್ರೆಜಿಲ್, ನೈಜಿರಿಯಾದಲ್ಲೂ ಇನ್ನು ಕೆಲ ದಿನಗಳಲ್ಲಿ ಸಂಗ್ರಹಿಸುವ ಸಾಮರ್ಥ್ಯ ಇರುವುದಿಲ್ಲ. ಆದರೆ ಈ ತೈಲ ವಲಯದ ಸಮಯ ಬಗೆಹರಿಸುವುದು ಸಲೀಸಾಗಿಲ್ಲ. ತೈಲ ಉತ್ಪಾದನೆಗೆ ಬಳಸುವ ಮೂಲಸೌಕರ್ಯ ಬಹಳ ಸಂಕೀರ್ಣವಾದದ್ದು. ಮನೆಯಲ್ಲಿ ನಲ್ಲಿ ನಿಲ್ಲಿಸಿದಂತೆ ಆಗಲ್ಲ. ಇನ್ನು ಸೌದಿ ಅರೇಬಿಯಾ, ರಷ್ಯಾದಂಥ ದೇಶಗಳ ಆರ್ಥಿಕತೆ ಅವಲಂಬಿಸಿರುವುದೇ ತೈಲದ ಮೇಲೆ.

ಮಾನವ ಸಂಪನ್ಮೂಲ, ಸಲಕರಣೆ ವಿಪರೀತ ದುಬಾರಿ

ಮಾನವ ಸಂಪನ್ಮೂಲ, ಸಲಕರಣೆ ವಿಪರೀತ ದುಬಾರಿ

ತೈಲ ಬಾವಿಗಳ ಕಾರ್ಯ ಚಟುವಟಿಕೆ ತಾತ್ಕಾಲಿಕವಾಗಿ ನಿಲ್ಲಿಸಿ ಮತ್ತು ಬೇಡಿಕೆ ಬಂದ ನಂತರ ಪುನರಾರಂಭ ಮಾಡುವುದಕ್ಕೆ ವಿಪರೀತ ದುಬಾರಿ ಎನಿಸುವಷ್ಟು ಮಾನವ ಸಂಪನ್ಮೂಲ ಹಾಗೂ ಸಲಕರಣೆ ಬೇಕಾಗುತ್ತದೆ. ಇನ್ನು ಅದಕ್ಕೂ ಮುನ್ನ ದೊರೆಯುತ್ತಿದ್ದಷ್ಟೇ ತೈಲ ಸಿಗುವ ಖಾತ್ರಿ ಇರುವುದಿಲ್ಲ. ಕೆಲವು ಕಂಪೆನಿಗಳು ತೈಲವನ್ನು ತೆಗೆಯುತ್ತಲೇ ಇರುತ್ತವೆ; ಅದು ಹಣ ನಷ್ಟವಾದರೂ ಸಹ. ಏಕೆಂದರೆ ಪಡೆದ ಸಾಲದ ಮೇಲಿನ ಕಟ್ಟಲು ಹಾಗೂ ತಮ್ಮ ಕಾರ್ಯ ಚಟುವಟಿಕೆ ಚಾಲ್ತಿಯಲ್ಲಿ ಇಡಲು ಹೀಗೆ ಮಾಡುತ್ತವೆ. ಯಾವಾಗ ವ್ಯಾಪಾರಿಗಳು ತೈಲ ಮಾರುತ್ತಾರೋ ಭವಿಷ್ಯದ ಇಂಥ ಸಮಯದಲ್ಲಿ ಡೆಲಿವರಿ ನೀಡುವ ಖಾತ್ರಿ ಕೊಡುತ್ತಾರೆ. ಸಾಮಾನ್ಯವಾಗಿ ಮುಂದಿನ ತಿಂಗಳು ಹಾಗೂ ಅದರ ಮುಂದಿನ ತಿಂಗಳ ಮಧ್ಯದ ತೈಲ ದರದಲ್ಲಿ ಹೆಚ್ಚಿನ ವ್ಯತ್ಯಾಸ ಇರುವುದಿಲ್ಲ. ಆದರೆ ಸೋಮವಾರ ಆಗಿದ್ದೇನು ಅಂದರೆ, ಮೇ ತಿಂಗಳು ಮತ್ತು ಜೂನ್ ತಿಂಗಳ ತೈಲ ಬೆಲೆಯು ಹತ್ತಿರ ಕೂಡ ಇರಲಿಲ್ಲ. ಅಮೆರಿಕದ ಹೊರಗಿನ ಬ್ರೆಂಟ್ ಕಚ್ಚಾ ತೈಲ ಹಾಗೂ ಮತ್ತಿತರ ತೈಲ ಬೆಲೆ ಸೂಚ್ಯಂಕಗಳ ಮೇ ಕಾಂಟ್ರ್ಯಾಕ್ಟ್ ಈಗಾಗಲೇ ಮುಗಿದಿದೆ. ಅದು 5 ಪರ್ಸೆಂಟ್ ಕುಸಿದಿದ್ದು, ಬ್ಯಾರೆಲ್ ಗೆ 27 ಡಾಲರ್ ಗೂ ಸ್ವಲ್ಪ ಕಡಿಮೆ ಇದೆ.

80% ಕಂಪೆನಿಗಳು ದಿವಾಳಿಯಾಗುತ್ತವೆ

80% ಕಂಪೆನಿಗಳು ದಿವಾಳಿಯಾಗುತ್ತವೆ

ಯು.ಎಸ್.ನಲ್ಲಿ ಈಗಾಗಲೇ ತೈಲ ಉತ್ಪಾದನೆ ಕಡಿಮೆ ಮಾಡಲಾಗಿದೆ. ಆದರೆ ಅದು ಸಾಕಾಗುತ್ತಿಲ್ಲ. ಹಲವು ತೈಲ ಕಂಪೆನಿಗಳು ಈಗಾಗಲೇ ಭಾರೀ ನಷ್ಟವನ್ನು ಅನುಭವಿಸಿವೆ. ಮುಂದಿನ ತಿಂಗಳುಗಳಲ್ಲಿ ಇವುಗಳು ದಿವಾಳಿ ಘೋಷಿಸುವುದರಿಂದ ರಕ್ಷಣೆ ಕೇಳುವ ಸಾಧ್ಯತೆ ಇದೆ. ಇನ್ನು ತೈಲ ಕಂಪೆನಿಗಳಿಗೆ ಸಲಕರಣೆ, ಸಿಬ್ಬಂದಿಯನ್ನು ಒದಗಿಸುವ ಹ್ಯಾಲಿಬರ್ಟನ್ ಸೋಮವಾರದಂದು $ 1 ಬಿಲಿಯನ್ ನಷ್ಟ ಮೊದಲ ತ್ರೈಮಾಸಿಕದಲ್ಲಿ ಆಗಿದೆ ಎಂದು ತಿಳಿಸಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಈ ಕಂಪೆನಿಗೆ $ 152 ಮಿಲಿಯನ್ ಆದಾಯ ಬಂದಿತ್ತು. ಸರಿ ಈ ಪರಿಸ್ಥಿತಿ ಯಾವಾಗ ಸುಧಾರಿಸಬಹುದು ಎಂದು ಕೇಳಿದರೆ, 2021ರ ಮೇ ತಿಂಗಳ ತೈಲ ಕಾಂಟ್ರ್ಯಾಕ್ಟ್ ಡೆಲಿವರಿ ಯು.ಎಸ್. ನಲ್ಲಿ ಬ್ಯಾರೆಲ್ ಗೆ $ 35ಕ್ಕಿಂತ ಸ್ವಲ್ಪ ಹೆಚ್ಚಿಗೆ ವ್ಯವಹಾರ ಆಗುತ್ತಿದೆ. ಇದರಿಂದಲೇ ಗೊತ್ತಾಗುತ್ತದೆ ಎಷ್ಟು ಸಮಯ ಬೇಕಾಗಬಹುದು ಎನ್ನುತ್ತಾರೆ ತಜ್ಞರು. ಒಂದು ವೇಳೆ ತೈಲದ ದರ ಬ್ಯಾರೆಲ್ ಗೆ 20 ಡಾಲರ್ ನಂತೆಯೇ ಕೆಲ ಸಮಯ ಇದ್ದರೆ, ಸ್ವತಂತ್ರವಾಗಿರುವ ನೂರಾರು ಕಂಪೆನಿಗಳಲ್ಲಿ 80% ದಿವಾಳಿಯಾಗುತ್ತವೆ ಮತ್ತು 2,50,000 ಲಕ್ಷ ಮಂದಿ ಕೆಲಸ ಕಳೆದುಕೊಳ್ಳಲಿದ್ದಾರೆ ಎಂಬ ಲೆಕ್ಕವೂ ಬರುತ್ತದೆ. ಕನಿಷ್ಠ $ 30 ಬೆಲೆ ಬಂದರೆ, ಹೇಗೋ ಕೆಲವು ಕಂಪೆನಿಗಳು ಉಳಿದುಕೊಳ್ಳುತ್ತದೆ. ತೈಲ ವಲಯ ಉಳಿದುಕೊಳ್ಳುತ್ತವೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.

English summary

U.S. Crude Oil Price Below 0 Turn Negative; What Does It Mean?

US crude future price turn negative. Here is an explainer about current situation.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X