For Quick Alerts
ALLOW NOTIFICATIONS  
For Daily Alerts

ಯು.ಎಸ್.ನಲ್ಲಿ ಫೆಬ್ರವರಿಯಲ್ಲೇ ಅಧಿಕೃತವಾಗಿ ಆರ್ಥಿಕ ಕುಸಿತ

|

ಯು.ಎಸ್. ಆರ್ಥಿಕತೆ ಫೆಬ್ರವರಿಯಲ್ಲಿ ಅಧಿಕೃತವಾಗಿ ಆರ್ಥಿಕ ಕುಸಿತದ ಹಂತ ಪ್ರವೇಶಿಸಿದೆ ಎಂದು ನ್ಯಾಷನಲ್ ಬ್ಯುರೋ ಆಫ್ ಎಕನಾಮಿಕ್ ರೀಸರ್ಚ್ (NBER) ಹೇಳಿದೆ. ಅಂದ ಹಾಗೆ ಎನ್ ಬಿಇಆರ್ ಎಂಬುದು ಅಮೆರಿಕದ ವಾಣಿಜ್ಯ ಚಟುವಟಿಕೆಗಳ ಏರಿಳಿತಗಳನ್ನು ನಿರ್ವಹಿಸುವ ಸಮಿತಿ. ಆ ಸಮಿತಿ ದಾಖಲಿಸಿರುವ ಪ್ರಕಾರ ಯು.ಎಸ್. ಆರ್ಥಿಕತೆಯು 2020ರ ಫೆಬ್ರವರಿಯಲ್ಲಿ ಉತ್ತುಂಗವನ್ನು ತಲುಪಿದೆ.

2009ರ ಜೂನ್ ನಲ್ಲಿ ಆರಂಭವಾದ ವಿಸ್ತರಣೆಯು ಕೊನೆಯಾಗಿದೆ. ಆರ್ಥಿಕ ಕುಸಿತ ಆರಂಭವಾಗಿದೆ. 2008ರ ಆರ್ಥಿಕ ಬಿಕ್ಕಟ್ಟಿನ ನಂತರ 128 ತಿಂಗಳು ವಿಸ್ತರಣೆ ದಾಖಲಿಸುತ್ತಾ ಬಂದಿತ್ತು. 1854ರ ನಂತರ ವಾಣಿಜ್ಯ ಚಟುವಟಿಕೆಗಳು ಇಷ್ಟು ದೀರ್ಘ ಕಾಲದ ವಿಸ್ತರಣೆಯನ್ನು ದಾಖಲಿಸಿದೆ.

ಆರ್ಥಿಕ ಕುಸಿತದತ್ತ ಅಮೆರಿಕ; ಅಧ್ಯಕ್ಷ ಟ್ರಂಪ್ ಆತಂಕಆರ್ಥಿಕ ಕುಸಿತದತ್ತ ಅಮೆರಿಕ; ಅಧ್ಯಕ್ಷ ಟ್ರಂಪ್ ಆತಂಕ

ಎರಡು ಸತತ ತ್ರೈ ಮಾಸಿಕಗಳಾಲ್ಲಿ ಜಿಡಿಪಿ ಕುಗ್ಗಿದರೆ ಅದನ್ನು ತಜ್ಞರು ಆರ್ಥಿಕ ಕುಸಿತ ಎನ್ನುತ್ತಾರೆ. ಯಾವಾಗ ಆರ್ಥಿಕ ಕುಸಿತ ಆರಂಭವಾಗುತ್ತದೆ ಹಾಗೂ ಕೊನೆಯಾಗುತ್ತದೆ ಎಂಬುದನ್ನು ಎನ್ ಬಿಇಆರ್ ಅಧಿಕೃತವಾಗಿ ನಿರ್ಧಾರ ಮಾಡುತ್ತದೆ. ಯು.ಎಸ್. ಆರ್ಥಿಕತೆ ವಾರ್ಷಿಕ ದರವು ಈ ವರ್ಷದ ಮೊದಲ ತ್ರೈ ಮಾಸಿಕದಲ್ಲಿ 5 ಪರ್ಸೆಂಟ್ ದರದಲ್ಲಿ ಕುಗ್ಗಿದೆ. ಈ ಹಿಂದಿನ ತ್ರೈ ಮಾಸಿಕದಕ್ಕು 2.1 ಪರ್ಸೆಂಟ್ ದರದಲ್ಲಿ ಪ್ರಗತಿ ದಾಖಲಿಸಿತ್ತು.

ಯು.ಎಸ್.ನಲ್ಲಿ ಫೆಬ್ರವರಿಯಲ್ಲೇ ಅಧಿಕೃತವಾಗಿ ಆರ್ಥಿಕ ಕುಸಿತ

ಕಳೆದ ಫೆಬ್ರವರಿಯಲ್ಲಿ ಯು.ಎಸ್. ಆರ್ಥಿಕತೆ ಮೇಲೆ ಕೊರೊನಾ ಪ್ರಭಾವ ಆರಂಭವಾಯಿತು. ಮಾರ್ಚ್ ಮಧ್ಯದ ಹೊತ್ತಿಗೆ ಕೊರೊನಾ ವ್ಯಾಪಿಸಿತ್ತು. ಹನ್ನೊಂದು ವಾರದಲ್ಲಿ 4.2 ಕೋಟಿ ಮಂದಿ ನಿರುದ್ಯೋಗ ಸವಲತ್ತುಗಳಿಗೆ ಅರ್ಜಿ ಹಾಕಿಕೊಂಡಿದ್ದಾರೆ. ಮುಂದಿನ ಒಂದು ದಶಕದಲ್ಲಿ ಯು.ಎಸ್. ಆರ್ಥಿಕತೆ 7.9 ಲಕ್ಷ ಕೋಟಿ ಡಾಲರ್ ಕುಗ್ಗಲಿದೆ ಎಂದು ಕಾಂಗ್ರೆಸ್ ಬಜೆಟ್ ಕಚೇರಿ ಅಂದಾಜು ಮಾಡಿದೆ.

English summary

U.S. Economy Officially In To Recession On February

According to NBER, U.S. economy officially in to recession on February, 2020.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X