ಇದೇ ಮೊದಲ ಬಾರಿ ಇಂಥದ್ದೊಂದು ಪ್ರಯತ್ನ ನಡೆದಿರುವುದು ಸುದ್ದಿಯಾಗಿದೆ. ಶಾರ್ಜಾದಲ್ಲಿರುವ ಭಾರತೀಯ ಉದ್ಯಮಿ ಡಾ. ಸೋಹನ್ ರಾಯ್ ಏರೀಸ್ ಸಮೂಹ ಕಂಪೆನಿಗಳ ಸಿಬ್ಬಂದಿಯ ಪತ್ನಿಗೆ ನಿಯಮಿತವಾಗಿ ವೇತನ ನೀಡುವುದಕ್ಕೆ ಮುಂದಾಗಿದ್ದಾರೆ. ಕೋವಿಡ್ - 19 ಸಂದರ್ಭದಲ್ಲಿ ಸಿಬ್ಬಂದಿ ಮತ್ತು ಅವರ ಕುಟುಂಬ ನೀಡಿದ ಬೆಂಬಲವನ್ನು ಗಣನೆಗೆ ತೆಗೆದುಕೊಂಡು, ಅವರಿಗೆ ಈಗ ಪ್ರತಿಫಲ ನೀಡಲು ನಿರ್ಧರಿಸಿದ್ದಾರೆ.
ಸದ್ಯಕ್ಕೆ ಕಂಪೆನಿಯಿಂದ ಉದ್ಯೋಗಿಗಳ ಸಿಬ್ಬಂದಿಯ ಪತ್ನಿ ಬಗ್ಗೆ ಮಾಹಿತಿ ಕಲೆಹಾಕಲು ಆರಂಭಿಸಲಾಗಿದೆ. ಉದ್ಯೋಗಿ ಎಷ್ಟು ವರ್ಷ ಕಂಪೆನಿಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ ಎಂಬುದನ್ನು ಗಣನೆಗೆ ತೆಗೆದುಕೊಂಡು, ಆ ಉದ್ಯೋಗಿಯ ಪತ್ನಿಗೆ ಎಷ್ಟು ವೇತನ ನೀಡುವುದು ಎಂದು ತೀರ್ಮಾನ ಮಾಡಲಾಗುತ್ತದೆ. ಶೀಘ್ರದಲ್ಲಿ ಅಧಿಕೃತವಾಗಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ.
ರಾಯ್ ಮೂಲತಃ ಕೇರಳದವರು. ಏರೀಸ್ ಗ್ರೂಪ್ ಆಫ್ ಕಂಪೆನಿಗಳ ಸಿಇಒ ಮತ್ತು ಅಧ್ಯಕ್ಷ ಅವರು. ಅಂದ ಹಾಗೆ ಕೋವಿಡ್ 19 ಬಿಕ್ಕಟ್ಟಿನ ಸಂದರ್ಭದಲ್ಲೂ ಕಂಪೆನಿಯಿಂದ ತೆಗೆದಿರಲಿಲ್ಲ ಅಥವಾ ವೇತನವನ್ನೂ ಕಡಿತ ಮಾಡಿರಲಿಲ್ಲ.

ಇನ್ನು ರಾಯ್ ಅವರಿಗೆ ಈ ರೀತಿ ನೌಕರರ ಪತ್ನಿಗೆ ವೇತನ ನೀಡುವ ಆಲೋಚನೆ ಬಂದಿದ್ದು ಹೇಗೆ ಅಂದರೆ, 2012ನೇ ಇಸವಿಯಲ್ಲಿ ಭಾರತದಲ್ಲಿ ಮಕ್ಕಳ ಮತ್ತು ಮಹಿಳಾ ಅಭಿವೃದ್ಧಿ ಖಾತೆಯ ಸಚಿವರಾಗಿದ್ದ ಕೃಷ್ಣ ತಿರಾತ್ ಅವರ ಆಲೋಚನೆಯಿಂದ ಪ್ರಭಾವಿತರಾಗಿದ್ದಾರೆ.
ಅಷ್ಟೇ ಅಲ್ಲ, ಕಳೆದ ತಿಂಗಳು ಸುಪ್ರೀಂ ಕೋರ್ಟ್ ನಿಂದ ಬಂದಿರುವ ತೀರ್ಪಿನಿಂದ ಕೂಡ ರಾಯ್ ತೀರ್ಮಾನ ಪ್ರಭಾವಿತ ಆಗಿದೆ. ಅಂದ ಹಾಗೆ ಸದ್ಯಕ್ಕೆ ಏರೀಸ್ ಗ್ರೂಪ್ ನಿಂದ ಉದ್ಯೋಗಿಗಳ ಪೋಷಕರಿಗೆ ಪಿಂಚಣಿ ನೀಡಲಾಗುತ್ತಿದೆ. ಆದರೆ ಆ ಸಿಬ್ಬಂದಿ ಮೂರು ವರ್ಷ ಕಾರ್ಯ ನಿರ್ವಹಿಸಿರಬೇಕು. ಇನ್ನು ಉದ್ಯೋಗಿಗಳ ಮಕ್ಕಳು ವಿದ್ಯಾರ್ಥಿಗಳಾಗಿದ್ದಲ್ಲಿ ಅವರಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ.
More From GoodReturns

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ನಿರ್ಧಾರ: ನಿಮ್ಮ ಎಸ್ಐಪಿ ಮತ್ತು ಇಎಂಐ ಬದಲಾಯಿಸಬೇಕೇ?

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಚಿನ್ನದ ಬೆಲೆ ಇಳಿಕೆ: ಖರೀದಿಗೆ ಇದೇ ಸುವರ್ಣಾವಕಾಶವೇ?



Click it and Unblock the Notifications