For Quick Alerts
ALLOW NOTIFICATIONS  
For Daily Alerts

ಯುಎಇನಲ್ಲಿ ಮುಖಕ್ಕೆ ಮಾಸ್ಕ್‌ ಹಾಕದಿದ್ರೆ 60,000 ರುಪಾಯಿ ದಂಡ

|

ಕೊರೊನಾವೈರಸ್ ದೈನಂದಿನ ಪ್ರಕರಣಗಳ ಹೆಚ್ಚಳವನ್ನು ವರದಿ ಮಾಡಿದ ನಂತರ ಯುನೈಟೆಡ್ ಅರಬ್ ಎಮಿರೇಟ್ಸ್ ಲಾಕ್‌ಡೌನ್ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಿದ್ದು, ಈ ವಾರದಿಂದ ಎರಡು ಗಂಟೆಗಳ ಹೆಚ್ಚಿನ ಕಾಲ ಕರ್ಫ್ಯೂ ವಿಸ್ತರಿಸಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 

ಪ್ರಸ್ತುತ ರಾಷ್ಟ್ರವ್ಯಾಪಿ ಕರ್ಫ್ಯೂ ರಾತ್ರಿ 10 ರಿಂದ ಪ್ರಾರಂಭಗೊಂಡು ಬೆಳಗ್ಗೆ 6 ಗಂಟೆಯವರೆಗೆ ಇತ್ತು. ಆದರೆ ಇದನ್ನು 2 ಗಂಟೆ ವಿಸ್ತರಿಸಲಾಗಿದ್ದು, ರಾತ್ರಿ 8 ಗಂಟೆಗೆ ಪ್ರಾರಂಭವಾಗುತ್ತದೆ. ಮಾಲ್‌ಗಳು ಬೆಳಿಗ್ಗೆ 9 ರಿಂದ ಸಂಜೆ 7 ರವರೆಗೆ ಕಾರ್ಯನಿರ್ವಹಿಸಬಹುದು ಎಂದು ಹೇಳಲಾಗಿದೆ. ಈದ್ ಸಮಯದಲ್ಲಿ ವ್ಯಾಪಾರಿಗಳೊಂದಿಗೆ ಗರಿಷ್ಠ ಎರಡು ಗಂಟೆಗಳ ಕಾಲ ಇರಲು ಅವಕಾಶವಿದೆ.

ಯುಎಇನಲ್ಲಿ ಮುಖಕ್ಕೆ ಮಾಸ್ಕ್‌ ಹಾಕದಿದ್ರೆ 60,000 ರುಪಾಯಿ ದಂಡ

ಕ್ಯಾರೆಂಟೈನ್ ಆದೇಶಗಳನ್ನು ಪಾಲಿಸದಿದ್ದರೆ 50,000 ದಿರ್ಹಾಮ್ ($ 13,000) ದಂಡ ಮತ್ತು ಫೇಸ್ ಮಾಸ್ಕ್ ಧರಿಸದಿದ್ದಕ್ಕಾಗಿ 3,000 ದಿರ್ಹಾಮ್(ಭಾರತದ ರುಪಾಯಿಗಳಲ್ಲಿ 61,814) ದಂಡ ವಿಧಿಸಲಾಗುವುದು ಎಂದು ನವೀಕೃತ ಪಟ್ಟಿಯನ್ನು ಇನ್ನೊಬ್ಬ ಅಧಿಕಾರಿ ವಿವರಿಸಿದ್ದಾರೆ.

ಪುನರಾವರ್ತಿತ ಅಪರಾಧಿಗಳಿಗೆ ಪಬ್ಲಿಕ್ ಪ್ರಾಸಿಕ್ಯೂಟರ್ ಆರು ತಿಂಗಳವರೆಗೆ ಜೈಲು ಶಿಕ್ಷೆ ಅಥವಾ ಒಂದು ಲಕ್ಷಕ್ಕಿಂತ ಹೆಚ್ಚು ದಂಡ ಎಂದು ಅಧಿಕಾರಿ ಹೇಳಿದ್ದಾರೆ.

ಯುಎಇ ಸೋಮವಾರ 832 ಸೋಂಕುಗಳು ಮತ್ತು ನಾಲ್ಕು ಸಾವುಗಳನ್ನು ವರದಿ ಮಾಡಿದೆ. ಒಟ್ಟಾರೆ 224 ಸಾವುಗಳೊಂದಿಗೆ ಸೋಂಕಿನ ಪ್ರಮಾಣ 24,190 ಕ್ಕೆ ತಲುಪಿದೆ.

English summary

UAE: Fine For Not Wearing Masks Rs 60000

The United Arab Emirates will extend a nightly curfew by two hours from this week and 3,000 dirhams for not wearing a face mask
Story first published: Tuesday, May 19, 2020, 19:50 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X