For Quick Alerts
ALLOW NOTIFICATIONS  
For Daily Alerts

2030ರಿಂದ ಯು.ಕೆ.ನಲ್ಲಿ ಪೆಟ್ರೋಲ್- ಡೀಸೆಲ್ ಕಾರು ಮಾರಾಟ ನಿಷೇಧ ಸಾಧ್ಯತೆ

|

ಈ ಹಿಂದೆ ನಿರ್ಧಾರ ಮಾಡಿದ್ದಕ್ಕಿಂತ ಐದು ವರ್ಷ ಮುಂಚಿತವಾಗಿ, 2030ರಿಂದ ಹೊಸದಾದ ಪೆಟ್ರೋಲ್- ಡೀಸೆಲ್ ಕಾರು ಮಾರಾಟ ನಿಷೇಧದ ಬಗ್ಗೆ ಮುಂದಿನ ವಾರ ಘೋಷಣೆ ಮಾಡಲು ಯು.ಕೆ. ಪ್ರಧಾನಿ ಬೋರಿಸ್ ಜಾನ್ಸನ್ ಯೋಜನೆ ಮಾಡಿದ್ದಾರೆ ಎಂದು ಶನಿವಾರ ಫೈನಾನ್ಷಿಯಲ್ ಟೈಮ್ಸ್ ನಿಂದ ವರದಿ ಆಗಿದೆ.

 

ಬ್ರಿಟನ್ ಮೂಲತಃ ಪೆಟ್ರೋಲ್- ಡೀಸೆಲ್ ಕಾರನ್ನು 2040ರಿಂದ ನಿಷೇಧಿಸಲು ಯೋಜನೆ ರೂಪಿಸಿತ್ತು. ಹಸಿರುಮನೆ ಅನಿಲ ಹೊರಸೂಸುವಿಕೆ ಪರಿಣಾಮ ಕಡಿಮೆ ಮಾಡುವ ನಿಟ್ಟಿನಲ್ಲಿ ಕಳೆದ ಫೆಬ್ರವರಿಯಲ್ಲಿ ಆ ಅವಧಿಯನ್ನು ಬೋರಿಸ್ ಜಾನ್ಸನ್ 2035ಕ್ಕೆ ತಂದರು.

 

ವಿಶ್ವದ ಅತ್ಯಂತ ಶ್ರೀಮಂತ ಉಕ್ಕಿನ ಉದ್ಯಮಿಯ ಸೋದರ ಈಗ ದಿವಾಳಿವಿಶ್ವದ ಅತ್ಯಂತ ಶ್ರೀಮಂತ ಉಕ್ಕಿನ ಉದ್ಯಮಿಯ ಸೋದರ ಈಗ ದಿವಾಳಿ

ಇದೀಗ ಫೈನಾನ್ಷಿಯಲ್ಲ್ ಟೈಮ್ಸ್ ವರದಿ ಪ್ರಕಾರ, ಬೋರಿಸ್ ಜಾನ್ಸನ್ ಅವರು ಪೆಟ್ರೋಲ್- ಡೀಸೆಲ್ ಕಾರು ನಿಷೇಧವನ್ನು 2030ಕ್ಕೆ ತರುವ ಉದ್ದೇಶ ಹೊಂದಿದ್ದಾರೆ. ಮುಂದಿನ ವಾರ ಪರಿಸರ ನೀತಿಯ ಬಗ್ಗೆ ಭಾಷಣ ಮಾಡಲಿರುವ ಅವರು, ಅಲ್ಲಿ ಘೋಷಣೆ ಮಾಡುವ ಸಾಧ್ಯತೆ ಇದೆ.

2030ರಿಂದ UKನಲ್ಲಿ ಪೆಟ್ರೋಲ್- ಡೀಸೆಲ್ ಕಾರು ಮಾರಾಟ ನಿಷೇಧ ಸಾಧ್ಯತೆ

ಇಂಥದ್ದೇ ಯೋಜನೆ ಬಗ್ಗೆ ಶನಿವಾರ ಬಿಬಿಸಿ ವರದಿ ಮಾಡಿತ್ತು. ಆದರೆ ಯಾವುದೇ ಮೂಲಗಳ ಪ್ರಸ್ತಾವ ಮಾಡಿರಲಿಲ್ಲ. ಡೌನಿಂಗ್ ಸ್ಟ್ರೀಟ್ ವಕ್ತಾರೆ ಈ ವರದಿಗಳ ಬಗ್ಗೆಯಾಗಲೀ ಅಥವಾ ಜಾನ್ಸನ್ ರ ಮುಂದಿನ ಭಾಷಣದಲ್ಲಿ ಒಳಗೊಳ್ಳುವ ವಿಷಯಗಳ ಬಗ್ಗೆಯಾಗಲೀ ಅಭಿಪ್ರಾಯ ನೀಡಲು ನಿರಾಕರಿಸಿದ್ದಾರೆ.

ಕೆಲವು ಹೈಬ್ರಿಡ್ ಕಾರುಗಳಿಗೆ ಇದು ಅನ್ವಯ ಆಗಲ್ಲ. ಅವು ಎಲೆಕ್ಟ್ರಿಕ್ ಹಾಗೂ ಫಾಸಿಲ್ ಪ್ರಪಲ್ಷನ್ ಎರಡನ್ನೂ ಬಳಸುತ್ತವೆ. ಅವುಗಳನ್ನು 2035ರ ತನಕ ಮಾರಾಟ ಮಾಡಬಹುದು. ಪೆಟ್ರೋಲ್- ಡೀಸೆಲ್ ಕಾರು ಮಾರಾಟವನ್ನು ಕೊನೆ ಮಾಡುವುದರಿಂದ ಯುನೈಟೆಡ್ ಕಿಂಗ್ ಡಮ್ ನ ವಾಹನ ಮಾರುಕಟ್ಟೆಯಲ್ಲಿ ದೊಡ್ಡ ಬದಲಾವಣೆಗೆ ಕಾರಣ ಆಗಲಿದೆ.

ವಾಹನ ಕ್ಷೇತ್ರಗಳ ದತ್ತಾಂಶದ ಪ್ರಕಾರ, ಈ ವರ್ಷ ಮಾರಾಟ ಆಗಿರುವ ಹೊಸ ಕಾರುಗಳ ಪೈಕಿ ಶೇಕಡಾ 73.6ರಷ್ಟು ಡೀಸೆಲ್ ನಿಂದ ಓಡುವಂಥವು ಹಾಗೂ 5.5 ಪರ್ಸೆಂಟ್ ಶುದ್ಧ ಎಲೆಕ್ಟ್ರಿಕ್ ವಾಹನಗಳು. ಅವು ದುಬಾರಿ. ವಿವಿಧ ಬಗೆಯ ಹೈಬ್ರಿಡ್ ಕಾರುಗಳು ಬಾಕಿ ಪ್ರಮಾಣದ ಮಾರಾಟ ಆಗುತ್ತಿವೆ.

English summary

UK To Ban New Diesel, Petrol Car Sale From 2030, Report

According to report, UK to ban new petrol, diesel car sale from 2030. UK PM Boris Johnson to announce next week.
Story first published: Sunday, November 15, 2020, 9:48 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X