For Quick Alerts
ALLOW NOTIFICATIONS  
For Daily Alerts

ಕರ್ನಾಟಕದಲ್ಲಿ ನಿರುದ್ಯೋಗ ಪ್ರಮಾಣ 29.8% ಏರಿಕೆ : ಸಿಎಮ್‌ಐಇ ಸಮೀಕ್ಷೆ

|

ದೇಶಾದ್ಯಂತ ಲಾಕ್‌ಡೌನ್ ಸಾಕಷ್ಟು ನಷ್ಟವನ್ನುಂಟು ಮಾಡುತ್ತಿದ್ದು, ಇತರೇ ರಾಜ್ಯಗಳಂತೆ ಕರ್ನಾಟಕದಲ್ಲಿಯೂ ನಿರುದ್ಯೋಗ ಪ್ರಮಾಣ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ನಿರುದ್ಯೋಗ ದರವು 26.3 ಪರ್ಸೆಂಟ್‌ನಷ್ಟು ಅಂಕಗಳು ಹೆಚ್ಚಾಗಿ 2020ರ ಏಪ್ರಿಲ್‌ನಲ್ಲಿ 29.8 ಪರ್ಸೆಂಟ್ ಏರಿಕೆಯಾಗಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಮ್‌ಐಇ) ನಡೆಸಿದ ಸಮೀಕ್ಷೆಯೊಂದು ತಿಳಿಸಿದೆ.

ನಿರುದ್ಯೋಗ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡಿದ್ದು ದೀರ್ಘಾವಧಿಯಲ್ಲಿ, ನಿರುದ್ಯೋಗವು 2019 ರ ಏಪ್ರಿಲ್‌ನಲ್ಲಿ 0.5 ಪರ್ಸೆಂಟ್ ರಿಂದ ಅದರ ಪ್ರಸ್ತುತ ದರಕ್ಕೆ ಸಾಗಿದೆ.

ಕರ್ನಾಟಕದಲ್ಲಿ ನಿರುದ್ಯೋಗ ಪ್ರಮಾಣ 29.8% ಏರಿಕೆ : ಸಿಎಮ್‌ಐಇ ಸಮೀಕ್ಷೆ

ಇನ್ನು ಆಶ್ಚರ್ಯಕರ ವಿಚಾರ ಎಂದರೆ ಕರ್ನಾಟಕದಲ್ಲಿ ನಿರುದ್ಯೋಗವು ರಾಷ್ಟ್ರೀಯ ದರ 23.5 ಪರ್ಸೆಂಟ್‌ಗಿಂತಲೂ ಹೆಚ್ಚಾಗಿದೆ. ರಾಷ್ಟ್ರವ್ಯಾಪಿ, ನಿರುದ್ಯೋಗವು ತಮಿಳುನಾಡು, ಜಾರ್ಖಂಡ್ ಮತ್ತು ಬಿಹಾರದಲ್ಲಿ ಕ್ರಮವಾಗಿ 49.8%, 47.1% ಮತ್ತು 46.6% ರಷ್ಟಿದೆ. ಇನ್ನು ಪಂಜಾಬ್, ಛತ್ತೀಸ್‌ಗಢ ಮತ್ತು ತೆಲಂಗಾಣದಲ್ಲಿ ಕ್ರಮವಾಗಿ 2.9%, 3.4% ಮತ್ತು 6.2% ರಷ್ಟಿದೆ.

ಭಾರತದಲ್ಲಿ, ವಿಶೇಷವಾಗಿ ಅನೌಪಚಾರಿಕ ವಲಯದಲ್ಲಿ ಉದ್ಯೋಗಗಳನ್ನು ಪತ್ತೆಹಚ್ಚಲು ಆಗಾಗ್ಗೆ ನವೀಕರಿಸಲಾದ ಕೆಲವು ಸರ್ಕಾರಿ ಮಾಪನಗಳಿವೆ. ಇದರ ಪರಿಣಾಮವಾಗಿ, CMIE ನಿರುದ್ಯೋಗ ಸಮೀಕ್ಷೆಯಂತಹ ಹೆಚ್ಚಿನ ಆವರ್ತನ ಸೂಚಕಗಳನ್ನು ಕಾರ್ಮಿಕ ಮಾರುಕಟ್ಟೆಯ ಮೌಲ್ಯಮಾಪನ ಮಾಡಲು ಪ್ರಾಕ್ಸಿಯಾಗಿ ಬಳಸಲಾಗುತ್ತದೆ. ಸಮೀಕ್ಷೆಯು ತಿಂಗಳಿಗೆ 43,600 ಮನೆಗಳ ಮಾದರಿ ಗಾತ್ರವನ್ನು ಹೊಂದಿದೆ, ಅದು ಭೌಗೋಳಿಕವಾಗಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮವಾಗಿ ವಿತರಿಸಲ್ಪಟ್ಟಿದೆ.

English summary

Unemployment In Karnataka Increased To 29.8 Percent In April

Unemployment in Karnataka greater than than national unemployment rate of 23.5% and It increased to 29.8 percent in april says CMIE Survey
Story first published: Friday, May 1, 2020, 14:04 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X