For Quick Alerts
ALLOW NOTIFICATIONS  
For Daily Alerts

ಕೇಂದ್ರ ಬಜೆಟ್ 2020ರ ಪ್ರಮುಖ ದಿನಾಂಕ, ಸಮಯ ಮತ್ತು ನಿರೀಕ್ಷೆಗಳು

|

ಆದಾಯ ತೆರಿಗೆ ಪ್ರಮಾಣದಲ್ಲಿ ಕಡಿತ, ಆರ್ಥಿಕತೆಗೆ ಉತ್ತೇಜನ ಸೇರಿದಂತೆ ವಿವಿಧ ವಲಯದಲ್ಲಿ ಭಾರೀ ನಿರೀಕ್ಷೆ ಇಟ್ಟುಕೊಂಡಿರುವ ಕೇಂದ್ರ ಬಜೆಟ್ 2020 ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1ರಂದು ಮಂಡಿಸಲಿದ್ದಾರೆ. ಈ ಬಾರಿಯ ಬಜೆಟ್ ಬಗ್ಗೆ ಭಾರೀ ನಿರೀಕ್ಷೆ ಇಟ್ಟುಕೊಂಡು ಈಗಾಗಲೇ ಭಾರತೀಯ ಷೇರು ಮಾರುಕಟ್ಟೆ ವಿಪರೀತ ಏರಿಕೆ ಕಂಡಿದೆ.

ಅಂದ ಹಾಗೆ ಈ ಬಾರಿಯ ಬಜೆಟ್ ಅಧಿವೇಶನ ಜನವರಿ 31ನೇ ತಾರೀಕು, ಬೆಳಗ್ಗೆ 11 ಗಂಟೆಗೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ಭಾಷಣದೊಂದಿಗೆ ಆರಂಭವಾಗುತ್ತದೆ. ಲೋಕಸಭೆ ಹಾಗೂ ರಾಜ್ಯಸಭೆಯನ್ನು ಉದ್ದೇಶಿಸಿ ಅವರು ಮಾತನಾಡಲಿದ್ದಾರೆ. ಅದೇ ದಿನ ರಾಜ್ಯಸಭೆಯಲ್ಲಿ ಮುಖ್ಯ ಆರ್ಥಿಕ ಸಲಹೆಗಾರ ಕೆ.ವಿ. ಸುಬ್ರಮಣಿಯನ್ ಆರ್ಥಿಕ ಸಮೀಕ್ಷೆ ವರದಿಯನ್ನು ಮಂಡಿಸುವ ಸಾಧ್ಯತೆ ಇದೆ.

ಕೇಂದ್ರ ಬಜೆಟ್ ಜತೆಗೆ ರೈಲ್ವೆ ಬಜೆಟ್ ಸೇರಿಸಿದೆ

ಕೇಂದ್ರ ಬಜೆಟ್ ಜತೆಗೆ ರೈಲ್ವೆ ಬಜೆಟ್ ಸೇರಿಸಿದೆ

ಫೆಬ್ರವರಿ 1ನೇ ತಾರೀಕಿನಂದು ಕೇಂದ್ರ ಬಜೆಟ್- 2020 ಮಂಡನೆ ಆಗಲಿದೆ. ಲೋಕಸಭೆ ಕ್ಯಾಲೆಂಡರ್ ಪ್ರಕಾರ, ಫೆಬ್ರವರಿ 1ನೇ ತಾರೀಕು ಬೆಳಗ್ಗೆ 11ಕ್ಕೆ ಕೇಂದ್ರ ಬಜೆಟ್ ಮಂಡನೆ ಆಗಲಿದೆ. 2017ರಿಂದ ಈಚೆಗೆ ನರೇಂದ್ರ ಮೋದಿ ಸರ್ಕಾರವು ಕೇಂದ್ರ ಬಜೆಟ್ ಜತೆಗೆ ರೈಲ್ವೆ ಬಜೆಟ್ ಆನ್ನು ಸೇರಿಸಿದೆ. ಒಂದು ತಿಂಗಳು ಮುಂಚಿತವಾಗಿಯೇ ಬಜೆಟ್ ಮಂಡಿಸಲಾಗುತ್ತಿದೆ. ಈ ಮುಂಚೆ ಕೇಂದ್ರ ಬಜೆಟ್ ಅನ್ನು ಫೆಬ್ರವರಿ ತಿಂಗಳ ಕೊನೆಯಲ್ಲಿ ಮಂಡಿಸಲಾಗುತ್ತಿತ್ತು. ಈ ವರ್ಷದ ಫೆಬ್ರವರಿ 1 ಶನಿವಾರ ಬಂದಿದೆ. ಸಾಮಾನ್ಯವಾಗಿ ಆ ದಿನ ಸಂಸತ್ ಕಾರ್ಯ ನಿರ್ವಹಿಸುವುದಿಲ್ಲ. ಆದರೆ ಈ ಬಾರಿ ಬಜೆಟ್ ಇರುವುದರಿಂದ ಕೆಲಸ ಮಾಡಲಿದೆ. ಇನ್ನು ಆ ದಿನ (ಶನಿವಾರ- ಭಾನುವಾರ ರಜಾ ದಿನ) ಷೇರು ಮಾರುಕಟ್ಟೆ ಕೂಡ ಸಾಮಾನ್ಯವಾಗಿ ಕಾರ್ಯ ನಿರ್ವಹಿಸುವುದಿಲ್ಲ. ಆದರೆ ಈ ಬಾರಿ ಶನಿವಾರದಂದು ಬಿಎಸ್ ಇ- ಎನ್ ಎಸ್ ಇ ಕಾರ್ಯ ನಿರ್ವಹಿಸಲಿದ್ದು, ಬಜೆಟ್ ಗೆ ಹೂಡಿಕೆದಾರರ ಪ್ರತಿಕ್ರಿಯೆ ತಿಳಿಯಲು ಸೋಮವಾರದ ತನಕ ಕಾಯಬೇಕಿಲ್ಲ.

ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯ ಆಗಬಹುದು

ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯ ಆಗಬಹುದು

ಆದರೆ, ಫೆಬ್ರವರಿ 1ನೇ ತಾರೀಕು ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯ ಆಗಬಹುದು. ಒಕ್ಕೂಟಗಳು ಎರಡು ದಿನದ ಬ್ಯಾಂಕ್ ಮುಷ್ಕರ ನಡೆಸಲು ಉದ್ದೇಶಿಸಿವೆ. ವೇತನ ವಿಚಾರವಾಗಿ ಜನವರಿ 31ರಿಂದ ಎರಡು ದಿನಗಳ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಲಾಗಿದೆ. ಸಾಮಾನ್ಯವಾಗಿ ಬ್ಯಾಂಕ್ ಗಳು ಪ್ರತಿ ತಿಂಗಳ ಒಂದು, ಮೂರು ಮತ್ತು ಐದನೇ ಶನಿವಾರದಂದು ಕಾರ್ಯ ನಿರ್ವಹಿಸುತ್ತವೆ. ಕುಸಿದು ಹೋಗಿರುವ ಭಾರತದ ಆರ್ಥಿಕತೆಯನ್ನು ಎದ್ದು ನಿಲ್ಲಿಸುವುದು ಮೋದಿ ಸರ್ಕಾರದ ಮುಂದೆ ಇರುವ ದೊಡ್ಡ ಸವಾಲು. ಸಾಂಖ್ಯಿಕ ಸಚಿವಾಲಯದ ಅಂದಾಜಿನ ಪ್ರಕಾರ, ಈ ಆರ್ಥಿಕ ವರ್ಷದಲ್ಲಿ 5 ಪರ್ಸೆಂಟ್ ಬೆಳವಣಿಗೆ ದರ ದಾಖಲಿಸಬಹುದು. 2012-13ರಿಂದ ಈಚೆಗೆ ಇದು ಅತ್ಯಂತ ಮಂದಗತಿಯ ಬೆಳವಣಿಗೆಯ ದರ. ಚಿಲ್ಲರೆ ಹಣದುಬ್ಬರ ದರವು ಕಳೆದ ಡಿಸೆಂಬರ್ ನಲ್ಲಿ ಐದೂವರೆ ವರ್ಷದಲ್ಲೇ ಗರಿಷ್ಠ ಮಟ್ಟವಾದ 7.35 ಪರ್ಸೆಂಟ್ ತಲುಪಿದೆ.

ಮಧ್ಯಮ ವರ್ಗದವರಿಗೂ ಸಂತಸದ ಸುದ್ದಿ ನೀಡಬಹುದು

ಮಧ್ಯಮ ವರ್ಗದವರಿಗೂ ಸಂತಸದ ಸುದ್ದಿ ನೀಡಬಹುದು

ಕಾರ್ಪೊರೇಟ್ ತೆರಿಗೆ ದರವನ್ನು ಮೂವತ್ತೈದರಿಂದ ಇಪ್ಪತ್ತೈದು ಪರ್ಸೆಂಟ್ ಗೆ ಇಳಿಸಿದ ಮೇಲೆ ಆದಾಯ ತೆರಿಗೆ ಪ್ರಮಾಣದಲ್ಲಿ ಇಳಿಕೆ ಮಾಡುವ ಮೂಲಕ ಮಧ್ಯಮ ವರ್ಗದವರಿಗೂ ಸಂತಸದ ಸುದ್ದಿ ನೀಡಬಹುದು ಎಂಬ ನಿರೀಕ್ಷೆ ಇದೆ. ಇನ್ನು ಲಾಂಗ್ ಟರ್ಮ್ ಕ್ಯಾಪಿಟಲ್ ಗೇಯ್ನ್ಸ್ (ಎಲ್ ಟಿಸಿಜಿ) ತೆರಿಗೆ ಮತ್ತು ಡಿವಿಡೆಂಡ್ ಡಿಸ್ಟ್ರಿಬ್ಯೂಷನ್ ಟ್ಯಾಕ್ಸ್ (ಡಿಡಿಟಿ) ಮೇಲೆ ವಿನಾಯಿತಿ ಕೊಡಬಹುದು ಎಂಬ ನಿರೀಕ್ಷೆ ಇದೆ.

ಬಜೆಟ್ ಅಧಿವೇಶನವು ಎರಡು ಭಾಗದಲ್ಲಿ ನಡೆಯಲಿದೆ

ಬಜೆಟ್ ಅಧಿವೇಶನವು ಎರಡು ಭಾಗದಲ್ಲಿ ನಡೆಯಲಿದೆ

ಈ ವರ್ಷ ಬಜೆಟ್ ಅಧಿವೇಶನವು ಎರಡು ಭಾಗದಲ್ಲಿ ನಡೆಯಲಿದೆ. ಜನವರಿ 31ರಿಂದ ಫೆಬ್ರವರಿ 11 ಮತ್ತು ಮಾರ್ಚ್ 2ನೇ ತಾರೀಕಿನಿಂದ ಏಪ್ರಿಲ್ 3ನೇ ತಾರೀಕಿನ ತನಕ ನಡೆಯಲಿದೆ. ಆ ಮಧ್ಯೆ 19 ದಿನದ ಸಮಯದಲ್ಲಿ ವಿವಿಧ ಇಲಾಖೆಗಳು ಮತ್ತು ಸಚಿವಾಲಯಗಳು ತಮ್ಮ ವರದಿಗಳನ್ನು ಸಿದ್ಧಪಡಿಸಿ, ಸ್ಥಾಯಿ ಸಮಿತಿಗೆ ಬೇಡಿಕೆಗಳನ್ನು ಸಲ್ಲಿಸಲಿವೆ.

English summary

Union Budget 2020: Important Date, Timings And Expectations

Union budget 2020 will be presented on February 1st. Here is the details of union budget.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X