For Quick Alerts
ALLOW NOTIFICATIONS  
For Daily Alerts

ಬಜೆಟ್ 2021: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಜನವರಿ 30ರಂದು ಸರ್ವ ಪಕ್ಷಗಳ ಸಭೆ

|

ಪ್ರಧಾನಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಜನವರಿ 30ರಂದು ಸರ್ವ ಪಕ್ಷಗಳ ಸಭೆ ನಡೆಯಲಿದೆ. ಸಂಸತ್ ನಲ್ಲಿ ಮಂಡಿಸುವ ಬಜೆಟ್ 2021 ಸೆಷನ್ ನ ಶಾಸಕಾಂಗ ಕಾರ್ಯಸೂಚಿಯನ್ನು ಸರ್ಕಾರವು ಅಂದು ಮುಂದಿಡಲಿದೆ ಎಂದು ಬುಧವಾರದಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.

ಅವರು ಮಾತನಾಡಿ, ಈ ಸಭೆಯು ವರ್ಚುವಲ್ ಆಗಿ ನಡೆಯಲಿದೆ. ಎಲ್ಲ ಪಕ್ಷಗಳ ನಾಯಕರಿಗೆ ಈ ಸಭೆಯ ಆಹ್ವಾನವನ್ನು ನೀಡಲಾಗುತ್ತದೆ ಎಂದಿದ್ದಾರೆ.

ಸಂಸತ್ ಅಧಿವೇಶನಕ್ಕೂ ಮುನ್ನ ಸರ್ವ ಪಕ್ಷಗಳ ಸಭೆ ನಡೆಯುವುದು ಸಂಪ್ರದಾಯ. ಸಂಸತ್ ಕಾರ್ಯ ಕಲಾಪಗಳು ಸಲೀಸಾಗಿ ನಡೆಯಲಿ ಎಂಬ ಕಾರಣಕ್ಕೆ ಇದನ್ನು ಮಾಡಲಾಗುತ್ತದೆ. ಆದರೆ ಈ ಬಾರಿ ಜನವರಿ 29ರಂದೇ ಅಧಿವೇಶನ ಆರಂಭ ಆಗಲಿದ್ದು, ಅದರ ಮರು ದಿನ ಸಭೆ ನಡೆಯಲಿದೆ.

ಬಜೆಟ್ ಎಷ್ಟು ಥರ, ಈ ಬಾರಿ ಕೇಂದ್ರ ಬಜೆಟ್ ಹೇಗಿರುತ್ತದೆ ಗೊತ್ತಾ?ಬಜೆಟ್ ಎಷ್ಟು ಥರ, ಈ ಬಾರಿ ಕೇಂದ್ರ ಬಜೆಟ್ ಹೇಗಿರುತ್ತದೆ ಗೊತ್ತಾ?

"ಸರ್ವ ಪಕ್ಷಗಳ ಸಭೆ ಜನವರಿ 30ರಂದು ನಡೆಯಲಿದೆ. ಅಲ್ಲಿ ಸರ್ಕಾರದಿಂದ ಸಂಸತ್ ಅಧಿವೇಶನದ ಶಾಸಕಾಂಗ ವಿಚಾರಗಳನ್ನು ಮುಂದಿಡಲಾಗುತ್ತದೆ ಮತ್ತು ವಿಪಕ್ಷಗಳಿಂದ ಸಲಹೆಯನ್ನು ಕೇಳಿಸಿಕೊಳ್ಳಲಾಗುತ್ತದೆ," ಎಂದು ಪಿಟಿಐ ಸುದ್ದಿ ಸಂಸ್ಥೆಗೆ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.

ಬಜೆಟ್ 2021: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಜ. 30 ಸರ್ವ ಪಕ್ಷ ಸಭೆ

ಜನವರಿ 29ರಿಂದ ಸಂಸತ್ ಅಧಿವೇಶನ ಶುರುವಾಗಲಿದ್ದು, ಎರಡು ಭಾಗದಲ್ಲಿ ನಡೆಯಲಿದೆ. ಮೊದಲ ಭಾಗ ಫೆಬ್ರವರಿ 15ಕ್ಕೆ ಕೊನೆಯಾಗುತ್ತದೆ. ಎರಡನೇ ಭಾಗ ಮಾರ್ಚ್ 8ರಿಂದ ಏಪ್ರಿಲ್ 8ರ ತನಕ ನಡೆಯಲಿದೆ. ಎರಡು ಪಾಳಿಯಲ್ಲಿ ಸಂಸತ್ ಇದ್ದು, ರಾಜ್ಯಸಭೆ ಬೆಳಗ್ಗೆ, ಲೋಕಸಭೆ ಸಂಜೆ ಇರಲಿದೆ.

ಕೊರೊನಾ ಮಧ್ಯೆ ಬಜೆಟ್ ಅಧಿವೇಶನ ನಡೆಸುವ ವಿಚಾರವಾಗಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮಂಗಳವಾರದಂದು ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಚರ್ಚಿಸಿದ್ದಾರೆ.

English summary

Union Budget 2021: All Party Meeting On January 30th, Chaired By PM Narendra Modi

Budget 2021 session start from January 29, 2021. All party meeting will be held virtually on January 30th and chaired by PM Narendra Modi.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X