ಡಿಟಿಎಚ್ ವಲಯದಲ್ಲಿ ಶೇಕಡಾ 100ರಷ್ಟು ವಿದೇಶ ನೇರ ಬಂಡವಾಳಕ್ಕೆ ಸಂಪುಟ ಒಪ್ಪಿಗೆ

ಡೈರೆಕ್ಟ್ ಟು ಹೋಮ್ (ಡಿಟಿಎಚ್) ಸೇವೆಯಲ್ಲಿ ಮಾರ್ಗದರ್ಶಿ ಸೂತ್ರಗಳ ಪರಿಷ್ಕರಣೆಗೆ ಕೇಂದ್ರ ಸಂಪುಟವು ಬುಧವಾರ ಒಪ್ಪಿಗೆ ಸೂಚಿಸಿದೆ. ಅದರ ಅಡಿಯಲ್ಲಿ ಪರವಾನಗಿಯನ್ನು 20 ವರ್ಷಗಳ ಅವಧಿಗೆ ನೀಡಲಾಗುವುದು ಮತ್ತು ಡಿಟಿಎಚ್ ವಲಯದಲ್ಲಿ ವಿದೇಶ ನೇರ ಬಂಡವಾಳವನ್ನು ಶೇಕಡಾ 100ರಷ್ಟಕ್ಕೆ ಅವಕಾಶ ನೀಡಲಾಗುವುದು ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.

ವಾಣಿಜ್ಯ ಸಚಿವಾಲಯವು ಡಿಟಿಎಚ್ ವಲಯದಲ್ಲಿ ಶೇಕಡಾ 100ರಷ್ಟು ವಿದೇಶ ನೇರ ಬಂಡವಾಳದ (ಎಫ್ ಡಿಐ) ಬಗ್ಗೆ ಮಾತನಾಡಿದ್ದರೂ ಮಾಹಿತಿ ಮತ್ತು ಪ್ರಸಾರ ಸಚಿವಾಲಯದಿಂದ ಮಾರ್ಗದರ್ಶಿ ಸೂತ್ರಗಳನ್ನು ಬದಲಾವಣೆ ಮಾಡಬೇಕಿದೆ.

ಮಾಧ್ಯಮಗಳ ಜತೆ ಈ ಬಗ್ಗೆ ವಿವರ ನೀಡಿದ ಕೇಂದ್ರ ಸಚಿವರಾದ ಪ್ರಕಾಶ್ ಜಾವಡೇಕರ್, ಈ ತನಕ ಡಿಟಿಎಚ್ ವಲಯದಲ್ಲಿ ಶೇಕಡಾ 49ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ಇತ್ತು. ಅದಕ್ಕೆ ಈಗ ಬದಲಾವಣೆ ತಂದು, ಶೇಕಡಾ ನೂರರಷ್ಟು ಬಂಡವಾಳ ಹೂಡಿಕೆಗೆ ಅನುಮತಿಯನ್ನು ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

DTH ವಲಯದಲ್ಲಿ ಶೇ 100ರಷ್ಟು ವಿದೇಶ ನೇರ ಬಂಡವಾಳಕ್ಕೆ ಸಂಪುಟ ಒಪ್ಪಿಗೆ

ಈ ಸಂಬಂಧವಾಗಿ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾವನ್ನು ಸಂಪರ್ಕಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+