For Quick Alerts
ALLOW NOTIFICATIONS  
For Daily Alerts

ಯೆಸ್ ಬ್ಯಾಂಕ್‌ ಪಾಲು ಖರೀದಿಸುವ ಯೋಜನೆಗೆ ಸಚಿವ ಸಂಪುಟ ಅಸ್ತು

|

ಆರ್ಥಿಕ ಸಂಕಷ್ಟದಲ್ಲಿರುವ ಯೆಸ್‌ ಬ್ಯಾಂಕ್‌ ಪುನರ್‌ರಚನಾ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅಸ್ತು ಅದಿದೆ. ಯೆಸ್ ಬ್ಯಾಂಕ್‌ನ 49 ಪರ್ಸೆಂಟ್‌ ಪಾಲನ್ನು ಎಸ್‌ಬಿಐ ಖರೀದಿಸಿ ಬ್ಯಾಂಕ್‌ಗೆ ಪುನಶ್ಚೇತನ ನೀಡುವ ಯೋಜನೆಗೆ ಶುಕ್ರವಾರ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

 

ಎಸ್‌ಬಿಐ ಜೊತೆಗೆ ಐಸಿಐಸಿಐ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್ ಸೇರಿದಂತೆ ಖ್ಯಾತ ಷೇರು ಹೂಡಿಕೆದಾರರು ಯೆಸ್ ಬ್ಯಾಂಕ್ ಮೇಲೆ ಹೂಡಿಕೆ ಮಾಡಲಿದ್ದಾರೆ.

7,250 ಕೋಟಿ ರುಪಾಯಿ ಹೂಡಿಕೆ ಮಾಡಲಿರುವ ಎಸ್‌ಬಿಐ

7,250 ಕೋಟಿ ರುಪಾಯಿ ಹೂಡಿಕೆ ಮಾಡಲಿರುವ ಎಸ್‌ಬಿಐ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಯೆಸ್‌ ಬ್ಯಾಂಕ್‌ನ 49 ಪರ್ಸೆಂಟ್ ಷೇರುಗಳನ್ನು ಖರೀದಿಸಲಿದೆ. ಸುಮಾರು 7,250 ಕೋಟಿ ರುಪಾಯಿ ಹೂಡಿಕೆ ಮಾಡುವುದಾಗಿ ಗುರುವಾರ ಎಸ್‌ಬಿಐ ಹೇಳಿದೆ.

ಪ್ರತಿ ಷೇರಿನ ಬೆಲೆ 10 ರುಪಾಯಿಯಂತೆ ಯೆಸ್ ಬ್ಯಾಂಕಿನ 725 ಕೋಟಿ ಷೇರುಗಳನ್ನು ಖರೀದಿಸಲು ಕೇಂದ್ರ ಮಂಡಳಿಯ ಕಾರ್ಯಕಾರಿ ಸಮಿತಿ(ಇಸಿಸಿಬಿ) ಅನುಮೋದನೆ ನೀಡಿತ್ತು.

 

ಎಸ್‌ಬಿಐ ಮೂರು ವರ್ಷದವರೆಗೆ ಷೇರುಗಳನ್ನು ಮಾರುವಂತಿಲ್ಲ

ಎಸ್‌ಬಿಐ ಮೂರು ವರ್ಷದವರೆಗೆ ಷೇರುಗಳನ್ನು ಮಾರುವಂತಿಲ್ಲ

ಯೆಸ್ ಬ್ಯಾಂಕ್ ಪುನಶ್ಚೇತನ ಯೋಜನೆ ಪ್ರಕಾರ ಪುನರ್ ರಚನೆಯಾಗಲಿರುವ ಬ್ಯಾಂಕ್ ನಲ್ಲಿ 10 ರುಪಾಯಿಗಿಂತಲೂ ಕಡಿಮೆ ಇರದಂತೆ 49 ಪರ್ಸೆಂಟ್‌ರಷ್ಟು ಷೇರು ಪಾಲುದಾರಿಕೆಯನ್ನು ಹೂಡಿಕೆ ಬ್ಯಾಂಕ್ ಹೊಂದಿರಬೇಕಾಗುತ್ತದೆ ಎಂದು ಕೇಂದ್ರ ಬ್ಯಾಂಕ್ ಹೇಳಿತ್ತು. ಯೆಸ್‌ ಬ್ಯಾಂಕ್‌ನಲ್ಲಿ ಹೂಡಿಕೆ ಮಾಡಲಿರುವ ಎಸ್‌ಬಿಐ, ತನ್ನ ಷೇರುಗಳನ್ನು ಮೂರು ವರ್ಷದವರೆಗೆ 26 ಪರ್ಸೆಂಟ್ ಕೆಳಗೆ ತಗ್ಗಿಸುವಂತಿಲ್ಲ.

ಐಸಿಐಸಿಐ ಬ್ಯಾಂಕ್‌ನಿಂದ 1,000 ಕೋಟಿ ಹೂಡಿಕೆ
 

ಐಸಿಐಸಿಐ ಬ್ಯಾಂಕ್‌ನಿಂದ 1,000 ಕೋಟಿ ಹೂಡಿಕೆ

ಸಂಕಷ್ಟದಲ್ಲಿರುವ ಯೆಸ್‌ ಬ್ಯಾಂಕ್‌ನಲ್ಲಿ 1,000 ಕೋಟಿ ರೂ. ಹೂಡಿಕೆ ಮಾಡುವುದಾಗಿ ಐಸಿಐಸಿಐ ಬ್ಯಾಂಕ್‌ ಶುಕ್ರವಾರ ಹೇಳಿದೆ. ಯೆಸ್‌ ಬ್ಯಾಂಕ್‌ನ ಪುನಶ್ಚೇತನ ಯೋಜನೆಯ ಭಾಗವಾಗಿ ಐಸಿಐಸಿಐ ಈ ಹೂಡಿಕೆ ಮಾಡಲಿದೆ. ಯೆಸ್‌ ಬ್ಯಾಂಕ್‌ನ 100 ಕೋಟಿ ಷೇರುಗಳನ್ನು( 5ಪರ್ಸೆಂಟ್‌ರಷ್ಟು ಷೇರುಗಳು) ಐಸಿಐಸಿಐ ಖರೀದಿ ಮಾಡಲಿದೆ.

ಒಟ್ಟಾರೆ ಯೆಸ್‌ ಬ್ಯಾಂಕ್‌ನಲ್ಲಿ 11,750 ಕೋಟಿ ಹೂಡಿಕೆ

ಒಟ್ಟಾರೆ ಯೆಸ್‌ ಬ್ಯಾಂಕ್‌ನಲ್ಲಿ 11,750 ಕೋಟಿ ಹೂಡಿಕೆ

ಈಗಾಗಲೇ ಯೆಸ್‌ ಬ್ಯಾಂಕ್‌ನಲ್ಲಿ ಹೂಡಿಕೆ ಮಾಡುವುದಾಗಿ ಎಸ್‌ಬಿಐ, ಐಸಿಐಸಿಐ ಬ್ಯಾಂಕ್‌ಗಳು ಹೇಳಿವೆ. ಇದರ ಜೊತೆಗೆ 6 ಜನ ಹೂಡಿಕೆದಾರರೂ ಸೇರಿ ಯೆಸ್‌ ಬ್ಯಾಂಕ್‌ನಲ್ಲಿ 11,750 ಕೋಟಿ ರೂ. ಹೂಡಿಕೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.

ಯೆಸ್‌ ಬ್ಯಾಂಕ್‌ನ 6 ಪರ್ಸೆಂಟ್‌ರಷ್ಟು(1,000 ಕೋಟಿ ರೂ.ಗೂ ಹೆಚ್ಚು) ಷೇರನ್ನು ಎಚ್‌ಡಿಎಫ್‌ಸಿ ಖರೀದಿಸಲಿದೆ. ಏಕ್ಸಿಸ್‌ ಬ್ಯಾಂಕ್‌, ಕೋಟಕ್‌ ಮಹೀಂದ್ರಾ ಬ್ಯಾಂಕ್‌, ರಾಧಾಕೃಷ್ಣ ದಮಾನಿ, ರಾಕೇಶ್‌ ಜುಂಜುನ್‌ವಾಲಾ, ಅಜೀಂ ಪ್ರೇಮ್‌ಜಿ ಟ್ರಸ್ಟ್‌ಗಳು ತಲಾ 5 ಪರ್ಸೆಂಟ್‌ರಷ್ಟು ಷೇರುಗಳನ್ನು (ತಲಾ 500 ಕೋಟಿ ರುಪಾಯಿ) ಖರೀದಿ ಮಾಡಲಿವೆ.

 

English summary

Union Cabinet Approved Yes Bank Reconstruction Plan

The Union Cabinet today approved a plan for the reconstruction of Yes Bank
Story first published: Friday, March 13, 2020, 21:11 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X