For Quick Alerts
ALLOW NOTIFICATIONS  
For Daily Alerts

ವಿದೇಶಿಗರಿಗೆ ಪ್ರವೇಶ ನಿರ್ಬಂಧ ತೆರವುಗೊಳಿಸಿದ ಯುಎಇ

|

ವಿದೇಶಿಗರಿಗೆ ಇರುವ ಪ್ರವೇಶ ನಿರ್ಬಂಧವನ್ನು ಯುನೈಟೆಡ್ ಅರಬ್ ಎಮಿರೇಟ್ಸ್ ನಿಂದ ಬುಧವಾರ ತೆರವುಗೊಳಿಸಿದೆ. ಕೊರೊನಾ ನಿಯಂತ್ರಿಸುವ ಸಲುವಾಗಿ ಯುಎಇ ನಿವಾಸಿಗಳಲ್ಲದವರಿಗೆ ಮಾರ್ಚ್ ನಲ್ಲಿ ಪ್ರವೇಶ ಅಮಾನತು ಮಾಡಲಾಗಿತ್ತು. ವಿದೇಶಗಳಲ್ಲಿ ಸಿಲುಕಿಕೊಂಡ ಯುಎಇ ನಿವಾಸಿಗಳಿಗಾಗಿ ಆ ನಂತರ ವಿಶೇಷ ವಿನಾಯಿತಿ ಅಥವಾ ಆನ್ ಲೈನ್ ನೋಂದಣಿ ವ್ಯವಸ್ಥೆ ಮೂಲಕ ವಾಪಸ್ ಬರಲು ಅನುವು ಮಾಡಿಕೊಡಲಾಯಿತು.

ರಾಷ್ಟ್ರೀಯ ತುರ್ತು ಸ್ಥಿತಿ ಮತ್ತು ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಬುಧವಾರ ಈ ಬಗ್ಗೆ ಮಾಹಿತಿ ನೀಡಿ, ಇನ್ನು ಮುಂದೆ ನೋಂದಣಿ ಅಗತ್ಯ ಇಲ್ಲ ಎಂದು ಹೇಳಲಾಗಿದೆ. ಆದರೂ ಯಾರು ಯುಎಇಗೆ ವಾಪಸ್ ಬರುತ್ತಾರೋ ಅಂತಹವರು ಪಾಸ್ ಪೋರ್ಟ್ ಸಂಖ್ಯೆ ಹಾಗೂ ಇತರ ಮಾಹಿತಿಗಳನ್ನು ಸರ್ಕಾರಿ ವೆಬ್ ಸೈಟ್ ನಲ್ಲಿ ಪ್ರಯಾಣಕ್ಕೂ ಮುನ್ನ ಸಲ್ಲಿಸಬೇಕು ಎಂದು ಟ್ವೀಟ್ ಮಾಡಲಾಗಿದೆ.

ಯುಎಇನಲ್ಲಿ ಮುಖಕ್ಕೆ ಮಾಸ್ಕ್‌ ಹಾಕದಿದ್ರೆ 60,000 ರುಪಾಯಿ ದಂಡಯುಎಇನಲ್ಲಿ ಮುಖಕ್ಕೆ ಮಾಸ್ಕ್‌ ಹಾಕದಿದ್ರೆ 60,000 ರುಪಾಯಿ ದಂಡ

ಆದರೆ, ಈ ನಿಯಮ ದುಬೈಗೆ ಅನ್ವಯಿಸುತ್ತದೆಯೇ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ. ಏಕೆಂದರೆ ಉಳಿದೆಡೆ ಫೆಡರಲ್ ನೋಂದಣಿ ಬಳಸಿದರೆ, ದುಬೈಗೆ ಸ್ವಂತ ಪ್ರವೇಶದ ಪರವಾನಗಿ ಹೊಂದಿದೆ. ಈಗ ದೇಶದ ಹೊರಗೆ ಇದ್ದು, ಹಿಂತಿರುಗಲು ಕಷ್ಟಪಡುತ್ತಿರುವವರು ಹಲವು ಅರ್ಜಿಗಳು ತಿರಸ್ಕೃತವಾಗಿವೆ ಎಂದು ದೂರಿದ್ದಾರೆ.

ವಿದೇಶಿಗರಿಗೆ ಪ್ರವೇಶ ನಿರ್ಬಂಧ ತೆರವುಗೊಳಿಸಿದ ಯುಎಇ

ವಾಣಿಜ್ಯ ಕೇಂದ್ರ ದುಬೈ ಜುಲೈನಲ್ಲೇ ವಿದೇಶಿಗರಿಗಾಗಿ ಮುಕ್ತವಾಗಿದೆ. ಇನ್ನು ಅಬುಧಾಬಿ ಸಂಚಾರಕ್ಕೆ ನಿರ್ಬಂಧ ಹಾಕಿದ್ದು, ಕೊರೊನಾ ಪರೀಕ್ಷೆ ನೆಗೆಟಿವ್ ಸರ್ಟಿಫಿಕೇಟ್ ಇರಬೇಕು. ಅದೇ ರೀತಿ ಯುಎಇಗೆ ತೆರಳಲು ಅಲ್ಲಿಗೆ ಹೋಗುವ ಮುನ್ನ ಕೊರೊನಾ ನೆಗೆಟಿವ್ ಪರೀಕ್ಷೆ ಸರ್ಟಿಫಿಕೇಟ್ ಇರಬೇಕು. ಯುಎಇಯಲ್ಲಿ 62,966 ಸೋಂಕಿತ ಪ್ರಕರಣಗಳು ಇದ್ದು, 358 ಮಂದಿ ಸಾವನ್ನಪ್ಪಿದ್ದಾರೆ.

English summary

United Arab Emirates Lifts Entry Permit Restrictions On Foreign Residents

UAE on Wednesday lifted entry restrictions for foreign residents, who are seek approval before returning to the Gulf state.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X