For Quick Alerts
ALLOW NOTIFICATIONS  
For Daily Alerts

ಆಗಸ್ಟ್‌ನಲ್ಲಿ UPI ವಹಿವಾಟು 3.55 ಲಕ್ಷ ಕೋಟಿ ರೂಪಾಯಿ: ಡಿಜಿಟಲ್ ವಹಿವಾಟಿಗೆ ಮತ್ತಷ್ಟು ವೇಗ

|

ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ ಆಗಸ್ಟ್‌ ತಿಂಗಳಿನಲ್ಲಿ 3 ಲಕ್ಷ ಕೋಟಿ ರೂಪಾಯಿಗೂ ಅಧಿಕ ವಹಿವಾಟು ದಾಖಲಾಗಿದೆ.

 

ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (UPI) ಸತತ ಎರಡನೇ ತಿಂಗಳಲ್ಲಿ 3 ಶತಕೋಟಿಗೂ ಹೆಚ್ಚು ವಹಿವಾಟುಗಳನ್ನು ದಾಖಲಿಸುವ ಮೂಲಕ ಕೊರೊನಾವೈರಸ್ ಸಮಯದಲ್ಲಿ ಗ್ರಾಹಕರ ಡಿಜಿಟಲ್ ಪಾವತಿಗಳ ಹೆಚ್ಚಳವನ್ನು ಸೂಚಿಸುತ್ತದೆ.

 

ಆಗಸ್ಟ್‌ನಲ್ಲಿ, ಯುಪಿಐ 3.55 ಬಿಲಿಯನ್ ವಹಿವಾಟುಗಳನ್ನು ದಾಖಲಾಗಿದ್ದು, ಇದು ಪಾವತಿಯ ವೇದಿಕೆಯು ಪ್ರಾರಂಭವಾದಾಗಿನಿಂದ ದಾಖಲಾದ ವಹಿವಾಟುಗಳ ಪ್ರಮಾಣದಲ್ಲಿ ಸಾರ್ವಕಾಲಿಕ ಗರಿಷ್ಠವಾಗಿದೆ.

ಇನ್ನು ಮೌಲ್ಯದ ದೃಷ್ಟಿಯಿಂದ, ಯುಪಿಐ ಆಗಸ್ಟ್‌ನಲ್ಲಿ 6.39 ಲಕ್ಷ ಕೋಟಿ ಮೌಲ್ಯದ ವಹಿವಾಟುಗಳನ್ನು ಕಂಡಿದೆ, ಇದು ಮತ್ತೊಮ್ಮೆ ದಾಖಲೆಯ ಗರಿಷ್ಠವಾಗಿದೆ. ಒಂದು ತಿಂಗಳ ಆಧಾರದ ಮೇಲೆ, ಯುಪಿಐನ ವಹಿವಾಟಿನ ಪ್ರಮಾಣವು ಆಗಸ್ಟ್‌ನಲ್ಲಿ ಶೇಕಡಾ 9.5ರಷ್ಟು ಹೆಚ್ಚಾಗಿದೆ ಮತ್ತು ವಹಿವಾಟಿನ ಮೌಲ್ಯವು ಶೇಕಡಾ 5.4ರಷ್ಟು ಹೆಚ್ಚಾಗಿದೆ.

ಆಗಸ್ಟ್‌ನಲ್ಲಿ UPI ವಹಿವಾಟು 3.55 ಲಕ್ಷ ಕೋಟಿ ರೂಪಾಯಿ

ಜೂನ್‌ನಲ್ಲಿ 2.8 ಬಿಲಿಯನ್ ವಹಿವಾಟುಗಳನ್ನು ಪ್ರಕ್ರಿಯೆಗಿಂತ ಜುಲೈನಲ್ಲಿ ಶೇಕಡಾ 15.7ರಷ್ಟು ಹೆಚ್ಚಾಗಿ 3.24 ಬಿಲಿಯನ್ ವಹಿವಾಟುಗಳನ್ನು ತಲುಪಿತು. ಮೌಲ್ಯದ ಪ್ರಕಾರ, ಜುಲೈನಲ್ಲಿ, ಪ್ಲಾಟ್‌ಫಾರ್ಮ್ 6.06 ಟ್ರಿಲಿಯನ್ ಮೌಲ್ಯದ ವಹಿವಾಟುಗಳನ್ನು ಪ್ರಕ್ರಿಯೆಗೊಳಿಸಿತು, ಇದು ಜೂನ್‌ನಿಂದ ಶೇಕಡಾ 10.76 ರಷ್ಟು ಹೆಚ್ಚಾಗಿದೆ.

ಒಟ್ಟಾರೆ ಯುಪಿಐ ವ್ಯವಸ್ಥೆಯಲ್ಲಿ ಫೋನ್‌ಪೇ, ಗೂಗಲ್ ಪೇ ಮತ್ತು ಪೇಟಿಎಂ ಶೇಕಡಾ 90ಕ್ಕಿಂತ ಹೆಚ್ಚು ಮಾರುಕಟ್ಟೆ ಪಾಲನ್ನು ನಿಯಂತ್ರಿಸುತ್ತವೆ.

2016 ರಲ್ಲಿ ಆರಂಭವಾದ UPI 2019 ರ ಅಕ್ಟೋಬರ್‌ನಲ್ಲಿ ಮೊದಲ ಬಾರಿಗೆ 1 ಬಿಲಿಯನ್ ವಹಿವಾಟುಗಳನ್ನು ದಾಟಿದೆ. ಮುಂದಿನ ಬಿಲಿಯನ್ ವಹಿವಾಟುಗಳು ಕೇವಲ ಒಂದು ವರ್ಷದಲ್ಲಿ ಬಂದಿರೋದು ಆಶ್ಚರ್ಯಕ್ಕೆ ಎಡೆಮಾಡಿದೆ.

ಅಕ್ಟೋಬರ್ 2020 ರಲ್ಲಿ, UPI ಮೊದಲ ಬಾರಿಗೆ 2 ಬಿಲಿಯನ್‌ಗಿಂತ ಹೆಚ್ಚಿನ ವಹಿವಾಟುಗಳನ್ನು ಪ್ರಕ್ರಿಯೆಗೊಳಿಸಿತು. ಇದಲ್ಲದೆ, ತಿಂಗಳಿಗೆ 2 ಬಿಲಿಯನ್ ವಹಿವಾಟುಗಳಿಂದ 3 ಬಿಲಿಯನ್ ವಹಿವಾಟುಗಳಿಗೆ ಪ್ರಯಾಣವು ಕೇವಲ 10 ತಿಂಗಳ ಅವಧಿಯಲ್ಲಿ ತಲುಪಿತು. ಇದು ಗ್ರಾಹಕರಲ್ಲಿ ಡಿಜಿಟಲ್ ಪಾವತಿಗಳ ವೇದಿಕೆಯಾಗಿ ಯುಪಿಐನ ನಂಬಲಾಗದ ಜನಪ್ರಿಯತೆಯನ್ನು ಸೂಚಿಸುತ್ತದೆ.

ಕೋವಿಡ್ -19 ಸಾಂಕ್ರಾಮಿಕದ ಎರಡನೇ ತರಂಗದಿಂದಾಗಿ ಪಾವತಿಗಳ ವೇದಿಕೆಯು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಆರ್ಥಿಕ ಚಟುವಟಿಕೆಯಲ್ಲಿನ ಕುಸಿತದೊಂದಿಗೆ ಒಂದು ಸಣ್ಣ ಕುಸಿತವನ್ನು ಕಂಡಿದೆ. ಆದರೆ ಆರ್ಥಿಕತೆಯು ಮತ್ತೆ ಪುನರಾಂಭಗೊಂಡ ತಕ್ಷಣ ಚೇತರಿಸಿಕೊಂಡಿದೆ.

ಯುಪಿಐ ಎಫ್‌ವೈ 21 ರಲ್ಲಿ (ಆರ್‌ಟಿಜಿಎಸ್ ಹೊರತುಪಡಿಸಿ) ಒಟ್ಟಾರೆ ಚಿಲ್ಲರೆ ಪಾವತಿಗಳ ಶೇಕಡಾ 10 ರಷ್ಟನ್ನು ತುಂಬಿದೆ, ಇದು ಎಫ್‌ವೈ 17 ಮತ್ತು ಎಫ್‌ವೈ 21 ರ ನಡುವೆ ಶೇಕಡಾ 400 ಸಂಯುಕ್ತ ವಾರ್ಷಿಕ ಬೆಳವಣಿಗೆ ದರ (ಸಿಎಜಿಆರ್) ದಲ್ಲಿ ಬೆಳೆಯುತ್ತಿದೆ. ಕೆಲವು ವರ್ಷಗಳ ಹಿಂದಿನವರೆಗೂ, ಒಟ್ಟಾರೆ ಚಿಲ್ಲರೆ ಪಾವತಿಗಳಲ್ಲಿ UPI ಪಾಲು ಕೇವಲ ಶೇಕಡಾ 2 ರಷ್ಟಿತ್ತು.

Read more about: payment digital india money ಹಣ
English summary

UPI Transactions in August 2021: UPI registers 3.55 billion transactions in August month

The NPCI flagship payment platform Unified Payments Interface (UPI) logged more than 3 billion transactions for the second consecutive month in a row in August,
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X