For Quick Alerts
ALLOW NOTIFICATIONS  
For Daily Alerts

ಜಿಯೋ ಪಾಲಿನ ಮೇಲೆ ಕಣ್ಣಿಟ್ಟಿವೆ ಅಮೆರಿಕಾ, ಸೌದಿ ಅರೇಬಿಯಾ ಸಂಸ್ಥೆಗಳು!

|

ರಿಲಯನ್ಸ್ ಜಿಯೋ ಸದ್ಯ ವಿದೇಶಿ ಕಂಪನಿಗಳ ಹಾಟ್‌ ಫೇವರಿಟ್ ಹೂಡಿಕೆಯ ಸಂಸ್ಥೆಯಾಗಿದೆ. ಬೃಹತ್ ಡಿಜಿಟಲ್‌ ವ್ಯವಸ್ಥೆಯನ್ನು ಸೃಷ್ಟಿಸಲು ಹೊರಟಿರುವ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಕನಸಿಗೆ ಈಗಾಗಲೇ ಬೃಹತ್ ಕಂಪನಿಗಳೇ ಕೈ ಜೋಡಿಸಿವೆ. ಇದರ ಜೊತೆಗೆ ಮತ್ತೆರಡು ಬೃಹತ್ ಕಂಪನಿಗಳು ಹೇಗಾದರೂ ಮಾಡಿ ರಿಲಯನ್ಸ್ ಜಿಯೋ ಪಾಲನ್ನು ಖರೀದಿಸಬೇಕೆಂದು ಕಣ್ಣಿಟ್ಟಿವೆ.

ಫೇಸ್‌ಬುಕ್, ಸಿಲ್ವರ್ ಲೇಕ್, ವಿಸ್ಟಾ ಈಕ್ವಿಟಿ ಪಾರ್ಟ್‌ನರ್ಸ್ ಹೂಡಿಕೆ

ಫೇಸ್‌ಬುಕ್, ಸಿಲ್ವರ್ ಲೇಕ್, ವಿಸ್ಟಾ ಈಕ್ವಿಟಿ ಪಾರ್ಟ್‌ನರ್ಸ್ ಹೂಡಿಕೆ

ಹೌದು, ಈಗಾಗಲೇ ರಿಲಯನ್ಸ್ ಜಿಯೋ ಭವಿಷ್ಯದ ಯೋಜನೆಗಳನ್ನು ಅರಿತು ಸಾಮಾಜಿಕ ಜಾಲತಾಣ ದಿಗ್ಗಜ ಫೇಸ್‌ಬುಕ್, ಹಣಕಾಸು ಮತ್ತು ತಂತ್ರಜ್ಞಾನದ ವಿಷಯದಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಸಿಲ್ವರ್ ಲೇಕ್ ಕಂಪನಿ, ಹಾಗೂ ಇತ್ತೀಚೆಗಷ್ಟೇ ಖಾಸಗಿ ಇಕ್ವಿಟಿ ಸಂಸ್ಥೆಯಾದ ವಿಸ್ಟಾ ಈಕ್ವಿಟಿ ಪಾರ್ಟ್‌ನರ್ಸ್‌ ಜಿಯೋದಲ್ಲಿ ಹಣ ಹೂಡಿಕೆಗೆ ಮುಂದಾಗಿವೆ.

ಫೇಸ್‌ಬುಕ್ ಜಿಯೋ ಪ್ಲಾಟ್‌ಫಾರ್ಮ್‌ಗಳಲ್ಲಿ 9.99% ಪಾಲನ್ನು ಪಡೆಯಲು 5.7 ಬಿಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿ ತಿಳಿಸಿದೆ. ಇದಾದ ನಂತರ ಮೇ 4 ರಂದು ಯುಎಸ್ ಖಾಸಗಿ ಈಕ್ವಿಟಿ ಸಂಸ್ಥೆ ಸಿಲ್ವರ್ ಲೇಕ್ ಜಿಯೋ ಪ್ಲಾಟ್‌ಫಾರ್ಮ್‌ಗಳಲ್ಲಿ, 1.15% ಪಾಲನ್ನು ಪಡೆಯಲು 5,655.75 ಕೋಟಿ ಹೂಡಿಕೆ ಮಾಡುವುದಾಗಿ ಹೇಳಿದೆ. ಇನ್ನು ವಿಸ್ಟಾ ಈಕ್ವಿಟಿ ಪಾರ್ಟ್‌ನರ್ಸ್‌ ಜಿಯೋದಲ್ಲಿ 11,367 ಕೋಟಿ ರುಪಾಯಿ ಹೂಡಿಕೆ ಮಾಡಲು ಯೋಜಿಸಿದ್ದು, 2.32 ಪರ್ಸೆಂಟ್ ಪಾಲನ್ನು ಪಡೆಯಲು ಮುಂದಾಗಿದೆ.

 

ಅಮೆರಿಕಾ, ಸೌದಿ ಅರೇಬಿಯಾ ಸಂಸ್ಥೆಗಳು ಜಿಯೋ ಪಾಲನ್ನು ಖರೀದಿಸಲು ಪ್ಲಾನ್

ಅಮೆರಿಕಾ, ಸೌದಿ ಅರೇಬಿಯಾ ಸಂಸ್ಥೆಗಳು ಜಿಯೋ ಪಾಲನ್ನು ಖರೀದಿಸಲು ಪ್ಲಾನ್

ಬ್ಲೂಮ್‌ಬರ್ಗ್ ನ್ಯೂಸ್ ಪ್ರಕಾರ, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ 65 ಬಿಲಿಯನ್ ಡಿಜಿಟಲ್ ಯುನಿಟ್ ಜಿಯೋ ಪ್ಲಾಟ್‌ಫಾರ್ಮ್‌ಗಳ ಪಾಲನ್ನು ಖರೀದಿಸಲು ಅಮರಿಕಾ ಮತ್ತು ಸೌದಿ ಅರೇಬಿಯಾ ಸಂಸ್ಥೆಗಳು ಕಾಯುತ್ತಿವೆ. ಅಮೆರಿಕಾ ಖಾಸಗಿ ಇಕ್ವಿಟಿ ಸಂಸ್ಥೆ ಜನರಲ್ ಅಟ್ಲಾಂಟಿಕ್ ಜಿಯೋ ಕಂಪನಿಯಲ್ಲಿ ಸುಮಾರು 850 ದಶಲಕ್ಷದಿಂದ 950 ದಶಲಕ್ಷ ಡಾಲರ್‌ನಷ್ಟು ಹಣ ಹೂಡಿಕೆ ಮಾಡಲು ಯೋಚಿಸುತ್ತಿದೆ ಎಂದು ಬ್ಲೂಮ್‌ಬರ್ಗ್ ವರದಿಯೊಂದು ತಿಳಿಸಿದೆ.

ಸದ್ಯದಲ್ಲೇ ಆಗಬಹುದು ಬಹುಕೋಟಿಯ ಒಪ್ಪಂದ

ಸದ್ಯದಲ್ಲೇ ಆಗಬಹುದು ಬಹುಕೋಟಿಯ ಒಪ್ಪಂದ

ಈ ಎರಡು ಕಂಪನಿಗಳು ಜಿಯೋದಲ್ಲಿ ಹಣ ಹೂಡಿಕೆ ಕುರಿತು ಯಾವುದೇ ಒಪ್ಪಂದವನ್ನು ಅಂತಿಮಗೊಳಿಸದಿದ್ದರೂ ಮತ್ತು ಯೋಜನೆಗಳು ಬದಲಾಗಬಹುದಾದರೂ ಈ ತಿಂಗಳಿನಿಂದಲೇ ಒಪ್ಪಂದವನ್ನು ಪೂರ್ಣಗೊಳಿಸಬಹುದು ಎಂದು ಅದು ಹೇಳಿದೆ.

ಸೌದಿ ಅರೇಬಿಯಾದ ಸಾರ್ವಜನಿಕ ಹೂಡಿಕೆ ನಿಧಿ (ಪಿಐಎಫ್) ಸಹ ಜಿಯೋದಲ್ಲಿ ಅಲ್ಪ ಪಾಲನ್ನು ಖರೀದಿಸಲು ಯೋಚಿಸುತ್ತಿದೆ ಎಂದು ಬ್ಲೂಮ್‌ಬರ್ಗ್ ಪ್ರತ್ಯೇಕ ವರದಿಯಲ್ಲಿ ತಿಳಿಸಿದೆ. ಆದರೆ ಈ ವರದಿಯ ಬಗ್ಗೆ ಜನರಲ್ ಅಟ್ಲಾಂಟಿಕ್ ಪ್ರತಿಕ್ರಿಯಿಸಲು ನಿರಾಕರಿಸಿದರೆ, ಜಿಯೋ ಮತ್ತು ಪಿಐಎಫ್ ರಾಯಿಟರ್ಸ್ ಪ್ರತಿಕ್ರಿಯೆಗೆ ಪ್ರತಿಕ್ರಿಯಿಸಲಿಲ್ಲ.

 

ಜಿಯೋ ಜೊತೆಗೆ ಕೈ ಜೋಡಿಸಿದರೆ ಏನು ಲಾಭ?

ಜಿಯೋ ಜೊತೆಗೆ ಕೈ ಜೋಡಿಸಿದರೆ ಏನು ಲಾಭ?

ಜಿಯೋ ಕಂಪನಿಯಲ್ಲಿ ಹೂಡಿಕೆ ಮಾಡುವುದರಿಂದ ಜಿಯೋದ ಸುಮಾರು 38.8 ಕೋಟಿ ಗ್ರಾಹಕರ ಬೃಹತ್ ಪಡೆಯ ಲಾಭ ದೊರೆಯಲಿದೆ. ಇಷ್ಟಲ್ಲದೆ ಭಾರತದಲ್ಲಿರುವ ಸುಮಾರು 6 ಕೋಟಿಗೂ ಅಧಿಕ ಸಣ್ಣ ಉದ್ಯಮಗಳಿಗೆ, ರಿಟೇಲ್ ವ್ಯಾಪಾರಿಗಳಿಗೆ ಡಿಜಿಟಲ್ ಅವಕಾಶಗಳನ್ನು ಸೃಷ್ಟಿಸಲು ಜಿಯೋ-ಫೇಸ್‌ಬುಕ್ ನಡುವಿನ ಒಪ್ಪಂದ ಸಹಾಯಕಾರಿಯಾಗಲಿದೆ. ಈ ಮೂಲಕ ಇತರೆ ಕಂಪನಿಗಳು ಭಾರತದಲ್ಲಿ ತಮ್ಮ ವ್ಯವಹಾರ ಬೆಳೆಸಲು ಅನುಕೂಲವಾಗುವುದು.

ಮುಕೇಶ್ ಅಂಬಾನಿ ಒಂದರ ಹಿಂದೆ ಮತ್ತೊಂದು ಒಪ್ಪಂದ ಮಾಡಿಕೊಳ್ಳಲು ಕಾರಣ ಏನು?

ಮುಕೇಶ್ ಅಂಬಾನಿ ಒಂದರ ಹಿಂದೆ ಮತ್ತೊಂದು ಒಪ್ಪಂದ ಮಾಡಿಕೊಳ್ಳಲು ಕಾರಣ ಏನು?

ರಿಲಯನ್ಸ್ ಜಿಯೋ ಹೀಗೆ ಒಂದರ ಹಿಂದೆ ಮತ್ತೊಂದು ಒಪ್ಪಂದ ಮಾಡಿಕೊಳ್ಳಲು ಪ್ರಮುಖ ಕಾರಣ ತನ್ನ ಒಟ್ಟಾರೆ ನಿವ್ವಳ ಸಾಲವನ್ನು ತಗ್ಗಿಸುವುದು ಒಂದಾಗಿದೆ. ಫೇಸ್‌ಬುಕ್ ಜೊತೆಗೆ ಕೈ ಜೋಡಿಸಿದ ರಿಲಯನ್ಸ್ ಇಂಡಸ್ಟ್ರೀಸ್ (ಆರ್‌ಐಎಲ್) ಮಾರ್ಚ್ 2021ರ ವೇಳೆಗೆ ಶೂನ್ಯ ನಿವ್ವಳ ಸಾಲ ಕಂಪನಿಯಾಗುತ್ತದೆ ಎಂದು ಕ್ರೆಡಿಟ್ ನ್ಯೂಸ್ ವರದಿ ಇತ್ತೀಚೆಗಷ್ಟೇ ತಿಳಿಸಿದೆ. ಅಂದರೆ ಒಪ್ಪಂದದ ನಗದು ಹರಿವು ಆರ್ಐಎಲ್ ಒಟ್ಟಾರೆ ನಿವ್ವಳ ಸಾಲವನ್ನು ತಗ್ಗಿಸಲು ಸಹಾಯ ಮಾಡುತ್ತದೆ.

English summary

US And Saudi Firms Eye Stakes In Reliance Jio

Two more firms are eyeing a share of Reliance Industries Ltd according to Bloomberg News
Story first published: Saturday, May 9, 2020, 13:44 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X