For Quick Alerts
ALLOW NOTIFICATIONS  
For Daily Alerts

ಕೊರೊನಾವೈರಸ್: ಅಮೆರಿಕಾದಲ್ಲಿ 1 ಲಕ್ಷ ಗಡಿದಾಟಿದ ಸೋಂಕಿತರ ಸಂಖ್ಯೆ

|

ಕೊರೊನಾವೈರಸ್‌ಗೆ ವಿಶ್ವವೇ ತಲ್ಲಣಗೊಂಡಿದ್ದು ವಿಶ್ವದ ದೊಡ್ಡಣ್ಣ ಅಮೆರಿಕಾ ಅಕ್ಷರಶಃ ನಲುಗಿ ಹೋಗಿದೆ. ಬಹುತೇಕ ಎಲ್ಲಾ ರಾಷ್ಟ್ರಗಳು ಕೊರೊನಾ ಸೋಂಕಿನಿಂದ ಬಳಲುತ್ತಿದ್ದು ಅಮೆರಿಕಾದಲ್ಲಿ ಸೋಂಕಿತರ ಸಂಖ್ಯೆಯು 1 ಲಕ್ಷ ಗಡಿ ದಾಟಿದೆ. ಈ ಮೂಲಕ ಅತಿ ಹೆಚ್ಚು ಸೋಂಕಿತರನ್ನು ಒಳಗೊಂಡಿರುವ ಟಾಪ್ 1 ರಾಷ್ಟ್ರವಾಗಿದೆ.

 

ವಿಶ್ವದ ದೊಡ್ಡಣ್ಣ ಕೊರೊನಾಯಿಂದ ಕಂಗಾಲು:ಇಟಲಿಯನ್ನೂ ಮೀರಿಸಿದ ಅಮೆರಿಕಾ

ವಿಶ್ವದ ಬಹುದೊಡ್ಡ ಆರ್ಥಿಕತೆಯನ್ನು ಹೊಂದಿರುವ ಅಮೆರಿಕಾ ಕೂಡ ಸಂಪೂರ್ಣ ಲಾಕ್‌ಡೌನ್‌ನಿಂದ ಸ್ಥಬ್ದಗೊಂಡಿದೆ. ಅಮೆರಿಕಾದಲ್ಲಿನ ರೆಸ್ಟೋರೆಂಟ್ಸ್, ಶಾಪ್, ಸಿನಿಮಾ ಥಿಯೇಟರ್ಸ್, ಮಾಲ್‌ಗಳು ಸೇರಿದಂತೆ ಬಹುತೇಕ ಎಲ್ಲವೂ ಬಂದ್ ಆಗಿವೆ. ಅಲ್ಲದೇ ದೊಡ್ಡ, ದೊಡ್ಡ ಕಂಪನಿಗಳು ಹಲವಾರು ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡತೊಡಗಿದೆ ಎಂದು ವರದಿಯಾಗಿದೆ.

ಕೊರೊನಾವೈರಸ್: ಅಮೆರಿಕಾದಲ್ಲಿ 1 ಲಕ್ಷ ಗಡಿದಾಟಿದ ಸೋಂಕಿತರ ಸಂಖ್ಯೆ

ಅಮೆರಿಕಾದಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆಯು ದ್ವಿಗುಣಗೊಳ್ಳುತ್ತಿದ್ದು, ಅಮೆರಿಕಾದ ಜಾನ್ಸ್ ಹಾಪ್ ಕಿನ್ಸ್ ಯೂನಿರ್ವಸಿಟಿ ಡ್ಯಾಶ್ ಬೋರ್ಡ್ ಅಂಕಿ ಅಂಶದ ಪ್ರಕಾರ ಮಾರ್ಚ್ 28ರಂದು ಭಾರತೀಯ ಕಾಲಮಾನ 8.46ರ ಸುಮಾರಿಗೆ ಸೋಂಕಿತರ ಒಟ್ಟು ಸಂಖ್ಯೆಯು 1 ಲಕ್ಷದ 4 ಸಾವಿರದ 205 ಆಗಿದೆ. ಸೋಂಕಿನಿಂದ ಸಾವನ್ನಪ್ಪಿದರವ ಸಂಖ್ಯೆಯು 1,701 ಆಗಿದ್ದು, 2,525 ಜನರು ಗುಣಮುಖರಾಗಿದ್ದಾರೆ.

ಕೊರೊನಾ ಪರಿಣಾಮ: ಅಮೆರಿಕಾದ ಪ್ರತಿ ಪ್ರಜೆಗೆ 90,000 ರುಪಾಯಿ ಪರಿಹಾರ

ಅಮೆರಿಕಾ ನಂತರದ ಸ್ಥಾನದಲ್ಲಿ ಇಟಲಿಯಿದ್ದು ಸೋಂಕಿತರ ಸಂಖ್ಯೆಯು 86,498 ಆಗಿದೆ. ಆದರೆ ಬರೋಬ್ಬರಿ 9,134 ಜನರು ಸಾವನ್ನಪ್ಪಿದ್ದಾರೆ. ಇಟಲಿಯ ನಂತರದ ಸ್ಥಾನದಲ್ಲಿ ಸ್ಪೇನ್‌ ಇದ್ದು ಸೋಂಕಿತರ ಸಂಖ್ಯೆಯು 65,719, ಸಾವನ್ನಪ್ಪಿದವರ ಸಂಖ್ಯೆ 5,138ಕ್ಕೆ ತಲುಪಿದೆ.

ಭಾರತದಲ್ಲಿ ಈವರೆಗೂ ಸೋಂಕಿತರ ಸಂಖ್ಯೆಯು 887ಕ್ಕೆ ತಲುಪಿದೆ. ಇದರಲ್ಲಿ 20 ಜನರು ಸಾವನ್ನಪ್ಪಿದ್ದು, 73 ಜನರು ಗುಣಮುಖರಾಗಿದ್ದಾರೆ.

English summary

US Crossed 1 Lakh Coronavirus Cases

United states of america crossed 1 lakh coronavirus cases. It is the first country to reach 1 lakh cases, leading top of the world
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X