For Quick Alerts
ALLOW NOTIFICATIONS  
For Daily Alerts

ಏರ್‌ಇಂಡಿಯಾದ ಮೇಲೆ ಯುಎಸ್ 983 ಕೋಟಿ ರೂ ದಂಡ ವಿಧಿಸಿದ್ದೇಕೆ?

|

ಏರ್‌ಇಂಡಿಯಾ ಭಾರತದಲ್ಲೇ ಅತೀ ದೊಡ್ಡ ವಿಮಾನಯಾನ ಸಂಸ್ಥೆಯಾಗಿದೆ. ಆದರೆ ಈ ದೊಡ್ಡ ಸಂಸ್ಥೆಯೇ ಯುಎಸ್‌ನಲ್ಲಿ ದಂಡ ತೆರಬೇಕಾಗಿದೆ. ಹೌದು ಯುನೈಟೆಡ್ ಸ್ಟೇಟ್ಸ್ ಏರ್‌ಇಂಡಿಯಾ ಸಂಸ್ಥೆಯ ಮೇಲೆ ದಂಡವನ್ನು ವಿಧಿಸಿದೆ.

 

ಯುಎಸ್‌ ಟಾಟಾ ಗ್ರೂಪ್ ಒಡೆತನದ ಏರ್‌ಇಂಡಿಯಾ ಸಂಸ್ಥೆಯ ಮೇಲೆ ಸುಮಾರು 121.5 ಮಿಲಿಯನ್ ಡಾಲರ್ ಅಂದರೆ 983 ಕೋಟಿ ರೂಪಾಯಿ ದಂಡವನ್ನು ವಿಧಿಸುವ ನಿರ್ಧಾರವನ್ನು ಮಾಡಿದೆ. ಇತ್ತೀಚೆಗಷ್ಟೆ ಏರ್‌ಇಂಡಿಯಾ ಸಂಸ್ಥೆಗಾಗಿ ಟಾಟಾ ಗ್ರೂಪ್ 15,000 ಕೋಟಿ ರೂಪಾಯಿ ಸಾಲವನ್ನು ಪಡೆಯಲು ಮುಂದಾಗಿರುವ ಬಗ್ಗೆ ಸುದ್ದಿಯಾಗಿದೆ. ಈ ನಡುವೆ ಈಗ ಯುಎಸ್ ಏರ್‌ಇಂಡಿಯಾ ಮೇಲೆ ದಂಡವನ್ನು ವಿಧಿಸಿದೆ.

ಟಾಟಾ ಗ್ರೂಪ್ ಇತ್ತೀಚೆಗಷ್ಟೆ ಏರ್‌ಇಂಡಿಯಾ ಸಂಸ್ಥೆಯನ್ನು ಸುಮಾರು 18,000 ಕೋಟಿ ರೂಪಾಯಿಗೆ ಸರ್ಕಾರದಿಂದ ಖರೀದಿ ಮಾಡಿದೆ. ಯುಎಸ್ ಸರ್ಕಾರದ ಪ್ರಕಾರ ಸುಮಾರು 600 ಮಿಲಿಯನ್ ಡಾಲರ್ ಮರುಪಾವತಿ ಮಾಡಬೇಕಾದ ಆರು ಏರ್‌ಲೈನ್ಸ್‌ಗಳ ಪೈಕಿ ಏರ್‌ಇಂಡಿಯಾ ಒಂದಾಗಿದೆ. ಇಷ್ಟಕ್ಕೂ ಆರ್‌ಇಂಡಿಯಾದ ಮೇಲೆ ಯುಎಸ್ ಸರ್ಕಾರ ಅಷ್ಟೊಂದು ಪ್ರಮಾಣದ ದಂಡವನ್ನು ವಿಧಿಸಿರುವುದೇಕೆ?, ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...

 ಏರ್‌ಇಂಡಿಯಾದ ಮೇಲೆ ಅಷ್ಟು ದಂಡವೇಕೆ?

ಏರ್‌ಇಂಡಿಯಾದ ಮೇಲೆ ಅಷ್ಟು ದಂಡವೇಕೆ?

ಯುಎಸ್ ಸರ್ಕಾರದ ಪ್ರಕಾರ ಏರ್‌ಇಂಡಿಯಾ, ವಿಮಾನ ರದ್ದಾದ ವೇಳೆ ಅಥವಾ ವಿಮಾನ ಬದಲಾವಣೆಯಾದ ವೇಳೆ ಪ್ರಯಾಣಿಕರಿಗೆ ಟಿಕೆಟ್ ಮೊತ್ತ ಮರುಪಾವತಿ ಮಾಡುವುದರಲ್ಲಿ ಏರ್‌ಇಂಡಿಯಾ ವಿಳಂಬ ಮಾಡಿದೆ. ಇದು ಕೋವಿಡ್ ಸಾಂಕ್ರಾಮಿಕದಿಂದಾಗಿ ಆಗಿರಬಹುದು. ಇದಕ್ಕಾಗಿ ಏರ್‌ಇಂಡಿಯಾದ ಮೇಲೆ ಸುಮಾರು 121.5 ಮಿಲಿಯನ್ ಡಾಲರ್ ದಂಡವನ್ನು ವಿಧಿಸಲಾಗಿದೆ.

 ಮರುಪಾವತಿಗೆ ಏರ್‌ಇಂಡಿಯಾ ತೆಗೆದುಕೊಂಡ ಸಮಯ!

ಮರುಪಾವತಿಗೆ ಏರ್‌ಇಂಡಿಯಾ ತೆಗೆದುಕೊಂಡ ಸಮಯ!

ಏರ್‌ಇಂಡಿಯಾ ಸಂಸ್ಥೆಯು refund on request (ಮನವಿ ಮೇರೆಗೆ ಮಾಡಲಾಗುವ ಮರುಪಾವತಿ) ಎಂಬ ವಿಚಾರವನ್ನೇ ಸಂಪೂರ್ಣವಾಗಿ ಕಡೆಗಣಿಸುತ್ತಿದೆ. ಆದರೆ ಕಾನೂನು ಪ್ರಕಾರ ಯಾವುದೇ ವಿಮಾನದ ಹಾರಾಟ ರದ್ದಾದರೆ ಆ ವಿಮಾನಯಾನ ಸಂಸ್ಥೆಯು ಟಿಕೆಟ್ ಮೊತ್ತವನ್ನು ಮರುಪಾವತಿ ಮಾಡಬೇಕಾಗುತ್ತದೆ. ಆದರೆ ಅಧಿಕೃತ ತನಿಖೆಯ ಬಳಿಕ ಏರ್‌ಇಂಡಿಯಾವು ಟಿಕೆಟ್ ಮೊತ್ತ ಮರುಪಾವತಿ ಮಾಡಲು ಸುಮಾರು 100 ದಿನಕ್ಕೂ ಅಧಿಕ ಸಮಯವನ್ನು ತೆಗೆದುಕೊಂಡಿದೆ. ಅದು ಕೂಡಾ ಸುಮಾರು 1,900ಕ್ಕೂ ಅಧಿಕ ಮರುಪಾವತಿ ವಿನಂತಿಯನ್ನು ಪರಿಶೀಲಿಸಿ, ಪ್ರಕ್ರಿಯೆ ಪೂರ್ಣಗೊಳಿಸಲು ಏರ್‌ಇಂಡಿಯಾ 100ಕ್ಕೂ ಅಧಿಕ ದಿನವನ್ನು ತೆಗೆದುಕೊಂಡಿದೆ.

 7 ದಿನದಲ್ಲಿ ಮಾಡಬೇಕಿತ್ತು ಮರುಪಾವತಿ
 

7 ದಿನದಲ್ಲಿ ಮಾಡಬೇಕಿತ್ತು ಮರುಪಾವತಿ

ಏರ್‌ಇಂಡಿಯಾ ಸಂಸ್ಥೆಯ ನಿಯಮ-ನೀತಿ ಪ್ರಕಾರ ಸಾಮಾನ್ಯವಾಗಿ 7 ದಿನಗಳ ಒಳಗೆ ಟಿಕೆಟ್ ಮೊತ್ತ ರಿಫಂಡ್ ಮಾಡಬೇಕಾಗುತ್ತದೆ. ಆದರೆ ಸರಿಯಾದ ಸಮಯಕ್ಕೆ ರಿಫಂಡ್ ಅನ್ನು ಮಾಡಲಾಗುತ್ತಿಲ್ಲ. ಏರ್‌ಇಂಡಿಯಾ ಸಂಸ್ಥೆಯು ಸರಿಯಾದ ಸಮಯಕ್ಕೆ ರಿಫಂಡ್ ಮಾಡದ ಕಾರಣದಿಂದಾಗಿ ಜನರು ಸಾಕಷ್ಟು ತೊಂದರೆಗೆ ಒಳಗಾಗಿದ್ದಾರೆ ಎಂದು ಯುಎಸ್‌ ಸರ್ಕಾರ ಹೇಳಿಕೊಂಡಿದೆ.

 ಯುಎಸ್ ಸರ್ಕಾರದ ಖಡಕ್ ಎಚ್ಚರಿಕೆ

ಯುಎಸ್ ಸರ್ಕಾರದ ಖಡಕ್ ಎಚ್ಚರಿಕೆ

"ವಿಮಾನವು ರದ್ದಾದ ಸಂದರ್ಭದಲ್ಲಿ ರಿಫಂಡ್‌ಗೆ ಮನವಿ ಮಾಡುವ ಪ್ರಯಾಣಿಕರಿಗೆ ಸರಿಯಾದ ಸಮಯಕ್ಕೆ, ನಿಗದಿತ ಟಿಕೆಟ್ ಮೊತ್ತವನ್ನು ರಿಫಂಡ್ ಮಾಡಬೇಕಾಗುತ್ತದೆ. ಒಂದು ವಿಮಾನಯಾನ ಸಂಸ್ಥೆಯು ಈ ಕಾರ್ಯವನ್ನು ಮಾಡದಿದ್ದಾಗ ನಾವು ಆ ಸಂಸ್ಥೆಯ ಮೇಲೆ ಕ್ರಮವನ್ನು ಕೈಗೊಳ್ಳುತ್ತೇವೆ. ಅಮೆರಿಕದ ಜನರಿಗೆ ತಮ್ಮ ಟಿಕೆಟ್ ಮೊತ್ತವನ್ನು ಮರುಪಾವತಿ ಕೂಡಾ ಮಾಡಿಸುತ್ತೇವೆ," ಎಂದು ಯುಎಸ್‌ ಸರ್ಕಾರ ಖಡಕ್ ಆಗಿ ಎಚ್ಚರಿಕೆ ನೀಡಿದೆ.

English summary

US Imposed Rs 983 Crore Fine on Tata Group Owned Air India, Why Here's Reason

United States imposed a whopping fine on Air India, which is one of the biggest Indian airlines. Why Here's Reason. read on.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X