For Quick Alerts
ALLOW NOTIFICATIONS  
For Daily Alerts

ಸೌದಿ ಅರೇಬಿಯಾವನ್ನು ಹಿಂದಿಕ್ಕಿದ ಅಮೆರಿಕಾ: ಭಾರತದ 2ನೇ ಅತಿದೊಡ್ಡ ತೈಲ ಪೂರೈಕೆದಾರ

|

ವಿಶ್ವದಲ್ಲೇ ಅತಿ ಹೆಚ್ಚು ತೈಲ ಆಮದು ಮಾಡಿಕೊಳ್ಳುವ ಪ್ರಮುಖ ರಾಷ್ಟ್ರಗಳಲ್ಲಿ ಒಂದಾದ ಭಾರತಕ್ಕೆ, ಅತಿ ಹೆಚ್ಚು ತೈಲ ಸರಬರಾಜು ಮಾಡುವ ರಾಷ್ಟ್ರಗಳ ಪಟ್ಟಿಯಲ್ಲಿ ಅಮೆರಿಕಾ ಸೌದಿ ಅರೇಬಿಯಾವನ್ನು ಹಿಂದಿಕ್ಕಿದೆ.

 

ಒಪೆಕ್ + ಸಂಘಟನೆಗಳ ಪೂರೈಕೆ ಕಡಿತವನ್ನು ಸರಿದೂಗಿಸಲು ಯುಎಸ್‌ ಕಚ್ಚಾ ತೈಲದ ಉತ್ಪಾದನೆಯನ್ನು ದಾಖಲೆ ಮಟ್ಟಕ್ಕೆ ಹೆಚ್ಚಿಸಿದ್ದರಿಂದ, ಕಳೆದ ತಿಂಗಳು ಭಾರತದ ಎರಡನೇ ಅತಿದೊಡ್ಡ ತೈಲ ಪೂರೈಕೆದಾರರಾಗಿ ಅಮೆರಿಕಾವು ಸೌದಿ ಅರೇಬಿಯಾವನ್ನು ಹಿಂದಿಕ್ಕಿದೆ ಎಂದು ವ್ಯಾಪಾರ ಮೂಲಗಳ ಮಾಹಿತಿಯು ತೋರಿಸಿದೆ.

ಸೌದಿ ಅರೇಬಿಯಾವನ್ನು ಹಿಂದಿಕ್ಕಿದ ಅಮೆರಿಕಾ: ಅತಿದೊಡ್ಡ ತೈಲ ಪೂರೈಕೆ

ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ಅನುಭವಿಸಿದ ನಷ್ಟವನ್ನು ಸರಿದೂಗಿಸಿ ಬೇಡಿಕೆಯಲ್ಲಿ ಹೆಚ್ಚು ಗಣನೀಯ ಚೇತರಿಕೆಗಾಗಿ ಕಾಯುತ್ತಿರುವುದರಿಂದ ಒಪೆಕ್ ಮತ್ತು ಒಪೆಕ್‌+ ರಾಷ್ಟ್ರಗಳು ಸರಬರಾಜು ಹೆಚ್ಚಿಸದಿರಲು ಈ ಹಿಂದೆ ತೀರ್ಮಾನಿಸಿವೆ. ಅಂದರೆ ತೈಲೋತ್ಪನ್ನಗಳ ಬೇಡಿಕೆಯಲ್ಲಿ ಇನ್ನಷ್ಟು ಗಟ್ಟಿಯಾದ ಸುಧಾರಣೆ ಕಂಡುಬರುವವರೆಗೂ ಉತ್ಪಾದನೆಯನ್ನು ಹೆಚ್ಚಿಸುವುದು ಬೇಡ ಎಂದು ನಿರ್ಧರಿಸಿವೆ.

ಹೀಗಾಗಿ ಅಮೆರಿಕಾವು ಉತ್ಪಾದನೆಯನ್ನು ಹೆಚ್ಚಿಸಿದ್ದು, ಅಮೆರಿಕದ ಭಾರತದ ಆಮದು ಹಿಂದಿನ ತಿಂಗಳಿನಿಂದ ಫೆಬ್ರವರಿಯಲ್ಲಿ ಶೇಕಡಾ 48ರಷ್ಟು ಏರಿಕೆಯಾಗಿ ದಿನಕ್ಕೆ 5,45,300 ಬ್ಯಾರೆಲ್‌ಗಳಿಗೆ (ಬಿಪಿಡಿ) ದಾಖಲಾಗಿದ್ದು, ಕಳೆದ ತಿಂಗಳು ಭಾರತದ ಒಟ್ಟಾರೆ ಆಮದಿನ ಶೇಕಡಾ 14 ರಷ್ಟಿದೆ ಎಂದು ರಾಯಿಟರ್ಸ್ ಅಂಕಿ ಅಂಶಗಳು ತೋರಿಸಿವೆ.

ಇದಕ್ಕೆ ವ್ಯತಿರಿಕ್ತವಾಗಿ, ಸೌದಿ ಅರೇಬಿಯಾದಿಂದ ಫೆಬ್ರವರಿ ಆಮದು ಹಿಂದಿನ ತಿಂಗಳಿನಿಂದ ಶೇಕಡಾ 42 ರಷ್ಟು ಇಳಿದು, ಒಂದು ದಶಕದ ಕನಿಷ್ಠ 4,45,200 ಬಿಪಿಡಿಗೆ ಇಳಿದಿದೆ ಎಂದು ಅಂಕಿ-ಅಂಶಗಳು ತೋರಿಸಿದೆ. ಸತತವಾಗಿ ಭಾರತದ ಅಗ್ರ ಎರಡು ಪೂರೈಕೆದಾರರಲ್ಲಿ ಒಬ್ಬರಾಗಿರುವ ಸೌದಿ ಅರೇಬಿಯಾ, ಜನವರಿ 2006 ರ ನಂತರ ಮೊದಲ ಬಾರಿಗೆ 4 ನೇ ಸ್ಥಾನಕ್ಕೆ ಕುಸಿದಿದೆ.

English summary

US Overtakes Saudi Arabia: India's 2nd Biggest Oil Supplier

The United States overtook Saudi Arabia as India's second biggest oil supplier last month
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X