For Quick Alerts
ALLOW NOTIFICATIONS  
For Daily Alerts

ಅಮೆರಿಕಗೆ ಸಡ್ಡು ಹೊಡೆದಿರುವ ಇರಾನ್ ಸ್ಥಿತಿ ಹೇಗಿದೆ ಗೊತ್ತಾ?

|

ಇರಾನ್ ಜನರ ಬದುಕು ದುರ್ಭರವಾಗಿದೆ. ಆ ದೇಶದ ಕರೆನ್ಸಿ ರಿಯಾಲ್ ಸೊರಗಿಹೋಗಿದೆ. ಯು.ಎಸ್. ಡಾಲರ್ ವಿರುದ್ಧ ರಿಯಾಲ್ ಮೌಲ್ಯ ಪಾತಾಳ ತಲುಪಿದೆ. ಇದರಿಂದ ದೇಶದಲ್ಲಿ ಎಲ್ಲವೂ ದುಬಾರಿ. ಇನ್ನು ವಿದೇಶಗಳಲ್ಲಿ ವ್ಯಾಸಂಗ ಮಾಡುತ್ತಿರುವವರ ಸ್ಥಿತಿ ದೇವರಿಗೇ ಪ್ರೀತಿ. ಅಮೆರಿಕ ಹೇರಿರುವ ಆರ್ಥಿಕ ದಿಗ್ಬಂಧನದ ಗಾಯದ ಜತೆಗೆ ಕೊರೊನಾದ ಬರೆ ಕೂಡ ಬಿದ್ದಿದೆ.

 

ಇನ್ನು ಯು.ಎಸ್. ಡಾಲರ್ ಗೆ ಅಧಿಕೃತವಾಗಿ ಇರಾನ್ ವಿನಿಮಯ ಮೌಲ್ಯ 42,000 ರಿಯಾಲ್. ಆದರೆ ಸೋಮವಾರದಂದು 2,15,000 ರಿಯಾಲ್ ಗೆ ಡಾಲರ್ ಅನ್ನು ಮಾರ್ಕೆಟ್ ನಲ್ಲಿ ವಹಿವಾಟು ನಡೆಸಲಾಗಿದೆ. ಇತ್ತೀಚಿನ ವಾರಗಳಲ್ಲಿ ಕೋಟಿಗಟ್ಟಲೆ ಡಾಲರ್ ಗಳನ್ನು ಮಾರ್ಕೆಟ್ ಗೆ ಬಿಡುಗಡೆ ಮಾಡಿ, ರಿಯಾಲ್ ಸ್ಥಿರತೆಗೆ ಯತ್ನಿಸಿದರೂ ಏನೂ ಪ್ರಯೋಜನ ಆಗುತ್ತಿಲ್ಲ.

ಅಮೆರಿಕ- ಇರಾನ್ ಉದ್ವಿಗ್ನತೆ ಮುಂದುವರಿದರೆ ಭಾರತದ ರಫ್ತು- ಆಮದಿಗೆ ಪೆಟ್ಟುಅಮೆರಿಕ- ಇರಾನ್ ಉದ್ವಿಗ್ನತೆ ಮುಂದುವರಿದರೆ ಭಾರತದ ರಫ್ತು- ಆಮದಿಗೆ ಪೆಟ್ಟು

ಇರಾನ್ ಚಾಲ್ತಿ ಖಾತೆ ಹಾಗೂ ವಿತ್ತೀಯ ಕೊರತೆ ತುಂಬಿಕೊಳ್ಳಲು ಈ ವರೆಗೆ ಇದ್ದ ವಿದೇಶಿ ವಿನಿಮಯ ಮೊತ್ತದ ಮೀಸಲನ್ನು ಬಳಸಿಕೊಳ್ಳಲಾಗಿದೆ. ಆದರೆ ಹಣದುಬ್ಬರವನ್ನು ಹತೋಟಿಗೆ ತರುವುದಕ್ಕೆ ಅಲ್ಲಿನ ಸರ್ಕಾರದಿಂದ ಸಾಧ್ಯವಾಗುತ್ತಿಲ್ಲ. ಅಂತರರಾಷ್ಟ್ರೀಯ ಮಟ್ಟದ ಆರ್ಥಿಕ ತಜ್ಞರ ಪ್ರಕಾರ, ಯು.ಎಸ್. ಡಾಲರ್ ವಿರುದ್ಧ ರಿಯಾಲ್ ಮೌಲ್ಯ ಇನ್ನಷ್ಟು ಕುಸಿದರೆ ತಡೆದುಕೊಳ್ಳುವ ಶಕ್ತಿ ಇರಾನ್ ಗೆ ಇಲ್ಲ. ಸದ್ಯದ ಆರ್ಥಿಕ ದಿಗ್ಬಂಧನ, ಅಂತರರಾಷ್ಟ್ರೀಯ ಸಮುದಾಯದಿಂದ ದೂರ ಮಾಡಿರುವುದರಿಂದ ಸುಧಾರಿಸುವುದೇ ಕಷ್ಟ.

ಇರಾನ್ ರಿಯಾಲ್ ಮೌಲ್ಯ ಶೇಕಡಾ 70ರಷ್ಟು ಕುಸಿತ

ಇರಾನ್ ರಿಯಾಲ್ ಮೌಲ್ಯ ಶೇಕಡಾ 70ರಷ್ಟು ಕುಸಿತ

2018ನೇ ಇಸವಿಯಲ್ಲಿ ಇರಾನ್ ಜತೆಗಿನ 2015ರ ಅಣು ಒಪ್ಪಂದದಿಂದ ಅಮೆರಿಕವು ಹಿಂದೆ ಸರಿದ ಮೇಲೆ ಆರ್ಥಿಕ ದಿಗ್ಬಂಧನ ಹೇರಲಾಯಿತು. ಆ ನಂತರ ಅಮೆರಿಕ ಡಾಲರ್ ವಿರುದ್ಧ ಇರಾನ್ ರಿಯಾಲ್ ಮೌಲ್ಯ ಶೇಕಡಾ 70ರಷ್ಟು ಕುಸಿದಿದೆ. ಇತರ ವಿದೇಶಿ ವಿನಿಮಯ ಮೌಲ್ಯದ ಸಹಾಯದಿಂದ ಪರಿಸ್ಥಿತಿ ಸುಧಾರಿಸಲು ಇರಾನ್ ಸರ್ಕಾರ ಮಾಡಿದ ಪ್ರಯತ್ನ ಕೂಡ ಏನೂ ಫಲ ನೀಡಿಲ್ಲ. ಅಲ್ಲಿನ ಕೇಂದ್ರ ಬ್ಯಾಂಕ್ ಮಧ್ಯಪ್ರವೇಶಿಸಿದ ಮೇಲೂ ರಿಯಾಲ್ ಕರೆನ್ಸಿ ಇಳಿಜಾರಿನ ಹಾದಿ ಪಯಣ ಮುಂದುವರಿದಿದೆ. ಇನ್ನು ಈಚೆಗೆ ರಿಯಾಲ್ ಕುಸಿದಿದ್ದರೆ ಹಿಂದೆ ಇತರ ಕಾರಣಗಳಿವೆ. ಇರಾನ್ ದೇಶದ ಎರಡು ಸ್ಥಳದಲ್ಲಿ ಅಣ್ವಸ್ತ್ರಗಳನ್ನು ಶೇಖರಿಸಲಾಗಿದೆ ಎಂಬ ಗುಮಾನಿ ಇದ್ದು, ಅಲ್ಲಿ ಪರಿಶೀಲನೆ ಮಾಡಲು ಅನುಮತಿ ನಿರಾಕರಿಸುತ್ತಾ ಬರಲಾಗಿತ್ತು. ಇದೀಗ ವಿಶ್ವಸಂಸ್ಥೆಯ "ನ್ಯೂಕ್ಲಿಯರ್ ವಾಚ್ ಡಾಗ್"ನಿಂದಲೇ ಅನುಮತಿಸಲು ಒತ್ತಡ ಬಂದಿದೆ. ಜತೆಗೆ ಕೊರೊನಾ ವೈರಸ್ ಪ್ರಭಾವವೂ ಇದೆ. ಈ ಕಾರಣಗಳಿಂದ ಸ್ಥಿತಿ ಇನ್ನಷ್ಟು ವಿಷಮವಾಗಿದೆ.

ತೈಲ ಖರೀದಿ ಮಾಡುವವರೇ ಇಲ್ಲದಂತಾಗಿದೆ
 

ತೈಲ ಖರೀದಿ ಮಾಡುವವರೇ ಇಲ್ಲದಂತಾಗಿದೆ

ರಿಯಾಲ್ ಕರೆನ್ಸಿ ಬೆಂಬಲಕ್ಕೆ ಇರಾನ್ ಕೇಂದ್ರ ಬ್ಯಾಂಕ್ ಇನ್ನಷ್ಟು ಕಾಲ ಸಮರ್ಥವಾಗಿದೆ ಎಂಬ ಅಂದಾಜಿತ್ತು. ಆದರೆ ಬಜೆಟ್ ವಿತ್ತೀಯ ಕೊರತೆ ಹಾಗೂ ಹಣಕಾಸಿನ ಸಹಾಯ ಮಾಡುವುದರಲ್ಲೇ ಎಲ್ಲ ಹಣವೂ ಖರ್ಚಾಗುತ್ತಾ ಇದೆ. ಅಮೆರಿಕದ ನಿರ್ಬಂಧದ ನಂತರ ಇರಾನ್ ನಿಂದ ತೈಲ ಖರೀದಿ ಮಾಡುವವರೇ ಇಲ್ಲದಂತಾಗಿದೆ. ಏಪ್ರಿಲ್ 2018ರಲ್ಲಿ ದಿನಕ್ಕೆ 25 ಲಕ್ಷ ಬ್ಯಾರೆಲ್ ಗೂ ಹೆಚ್ಚು ರಫ್ತು ಮಾಡುತ್ತಿದ್ದ ಇರಾನ್ ಈಗ ಒಂದರಿಂದ ಎರಡು ಲಕ್ಷ ಬ್ಯಾರೆಲ್ ತೈಲವನ್ನು ಒಂದು ದಿನಕ್ಕೆ ರಫ್ತು ಮಾಡುತ್ತಿದೆ. ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ ಅಂದಾಜು ಮಾಡಿರುವ ಪ್ರಕಾರವೇ ಹೇಳುವುದಾದರೆ, ಇರಾನ್ ಬಳಿಯ ಮೀಸಲು 20 ಬಿಲಿಯನ್ ಡಾಲರ್ ಈ ವರ್ಷ ಕಡಿಮೆ ಆಗಿ, 85.2 ಬಿಲಿಯನ್ ಡಾಲರ್ ಗೆ ಕುಸಿಯಲಿದೆ. ಮುಂದಿನ ವರ್ಷಕ್ಕೆ ಅದು ಇನ್ನೂ, ಅಂದರೆ 16 ಬಿಲಿಯನ್ ಡಾಲರ್ ಕುಸಿಯಲಿದೆ. ಮಾರ್ಚ್ 2021ರ ಹೊತ್ತಿಗೆ ಸರ್ಕಾರದ ಬಜೆಟ್ ಅಂದಾಜಿನಲ್ಲಿ 10 ಬಿಲಿಯನ್ ಡಾಲರ್ ಕೊರತೆ ಬಂದಿರಲಿದೆ ಎಂದು ಇರಾನ್ ಮಾಧ್ಯಮಗಳು ವಿವಿಧ ತಜ್ಞರ ಅಭಿಪ್ರಾಯಗಳನ್ನು ಸಂಗ್ರಹಿಸಿ, ವರದಿ ಪ್ರಕಟಿಸಿವೆ.

ವಿದೇಶಿ ಕರೆನ್ಸಿ ಖರೀದಿಸಬೇಡಿ ಎಂದ ಸರ್ಕಾರ

ವಿದೇಶಿ ಕರೆನ್ಸಿ ಖರೀದಿಸಬೇಡಿ ಎಂದ ಸರ್ಕಾರ

ಇನ್ನು ಹಣದುಬ್ಬರ ಪ್ರಮಾಣ ಕೂಡ ಹೆಚ್ಚಾಗಲಿದೆಯಂತೆ. ದುರ್ಬಲ ರಿಯಾಲ್ ಕಾರಣಕ್ಕೆ ಜನರಲ್ಲಿ ಖರೀದಿ ಸಾಮರ್ಥ್ಯವೇ ಕಡಿಮೆ ಆಗಲಿದೆಯಂತೆ. ರಿಯಾಲ್ ಬಳಸಿ ವಿದೇಶಿ ಕರೆನ್ಸಿ ಖರೀದಿಸಬೇಡಿ ಎಂದು ಇರಾನಿಯನ್ನರಿಗೆ ಸರ್ಕಾರ ಹೇಳಿದೆ. ಸೆಂಟ್ರಲ್ ಟೆಹರಾನ್ ಎಕ್ಸ್ ಚೇಂಜ್ ಕಚೇರಿಗಳಲ್ಲಿ ಡಾಲರ್ ಮಾರಾಟ ಮಾಡುತ್ತಿಲ್ಲ. ಯಾವಾಗ ರಿಯಾಲ್ ವಿರುದ್ಧ ಡಾಲರ್ ಮೌಲ್ಯ ಹೆಚ್ಚಾಗಲು ಆರಂಭವಾಯಿತೋ ಆಗ ಜನರು ಖರೀದಿಗೆ ಮುಗಿಬಿದ್ದಿದ್ದರಂತೆ. ಆದರೆ ಈಗ ಎಲ್ಲವೂ ತಣ್ಣಗಾಗಿದೆ. ನಿಧಾನಕ್ಕೆ ಇರಾನ್ ನಾಗರಿಕರಿಗೆ ರಿಯಾಲ್ ಕರೆನ್ಸಿಯ ಮೌಲ್ಯ ಕುಸಿತದ ಪರಿಣಾಮ ಅನುಭವಕ್ಕೆ ಬರುತ್ತಿದೆ. ತೆರಿಗೆ ಹೆಚ್ಚುತ್ತಿದೆ, ಸಬ್ಸಿಡಿಗಳು ಕಡಿಮೆಯಾಗುತ್ತಿವೆ, ನಿರ್ಬಂಧದ ಕಾರಣಕ್ಕೆ ವಿದೇಶಿ ಮಾರ್ಕೆಟ್ ಮಿತಿಗೊಂಡಿವೆ. ವ್ಯಾಪಾರ- ವ್ಯವಹಾರಕ್ಕೆ ಅಗತ್ಯ ಇರುವ ಕರೆನ್ಸಿ ಪಡೆಯುವುದೇ ಕಷ್ಟವಾಗಿದೆ. ಆ ಮೂಲಕ ದೊಡ್ಡ ಹೊಡೆತ ಬಿದ್ದಿದೆ.

ಕಚ್ಚಾ ವಸ್ತುಗಳಿಗೆ ಕೊರತೆಯಾಗಿದೆ

ಕಚ್ಚಾ ವಸ್ತುಗಳಿಗೆ ಕೊರತೆಯಾಗಿದೆ

ಕರೆನ್ಸಿಯ ಬಿಕ್ಕಟ್ಟಿನಿಂದ ಕಚ್ಚಾ ವಸ್ತುಗಳಿಗೆ ಕೊರತೆಯಾಗಿದೆ ಎನ್ನುತ್ತಾರೆ ಉದ್ಯಮಿಗಳು. ಬ್ರೆಡ್, ಮಾಂಸ, ಅಕ್ಕಿಯಂಥದ್ದರ ಬೆಲೆ ಕೂಡ ದಿನದಿನಕ್ಕೂ ತುಟ್ಟಿ ಆಗುತ್ತಿದೆ. ಮಾಂಸದ ಬೆಲೆಯೇ ಸಿಕ್ಕಾಪಟ್ಟೆ ದುಬಾರಿ ಆಗಿದೆ. ಒಂದು ಕೇಜಿ ಮಾಂಸಕ್ಕೆ 10 USDಯಂತೆ ಮಾರಲಾಗುತ್ತಿದೆ. ಕಾರ್ಖಾನೆಗಳು ಮುಚ್ಚುವುದು, ಕಾರ್ಮಿಕರ ಹರತಾಳ, ಸಂಬಳ ಪಾವತಿ ಮಾಡಿಲ್ಲ ಇಂಥ ಸುದ್ದಿ ಅಲ್ಲಿನ ಮಾಧ್ಯಮಗಳಲ್ಲಿ ನಿತ್ಯವೂ ಇರುತ್ತದೆ. ಇದರಿಂದ ಸರ್ಕಾರದ ಕಾರ್ಖಾನೆಗಳು ಸಹ ಹೊರತಾಗಿಲ್ಲ. ನಮ್ಮ ಸಂಬಳ ಯಾವುದಕ್ಕೂ ಸಾಲುತ್ತಿಲ್ಲ. ಜೀವನ ನಡೆಸುವುದು ದುಬಾರಿ ಆಗುತ್ತಿದೆ. ದಿನದಿನಕ್ಕೂ ಬಡವರಾಗುತ್ತಿದ್ದೇವೆ ಎಂದು ಅಲ್ಲಿನ ಸರ್ಕಾರಿ ನೌಕರರೊಬ್ಬರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯ ಪ್ರಕಾರ, ಈ ವರ್ಷ ಹಣದುಬ್ಬರ ದರವು 34.2 ಪರ್ಸೆಂಟ್ ತಲುಪಬಹುದು. ಇನ್ನು ಎಲ್ಲ ಪದಾರ್ಥಗಳು ದುಬಾರಿ ಆಗಬಹುದು. ಇರಾನ್ ದೇಶವನ್ನು ಆಳುತ್ತಿರುವವರು ಕಳೆದ ವರ್ಷ ನವೆಂಬರ್ ನಲ್ಲಿ ಆರ್ಥಿಕತೆ ಸುಧಾರಣೆಗೆ ಪ್ರಯತ್ನ ಪಟ್ಟರು. ಆದರೆ ಈಗ ಅಲ್ಲಿ ಇದೆಲ್ಲ ರಾಜಕೀಯ ಸ್ವರೂಪ ಪಡೆದಿದೆ. ಸರ್ಕಾರದ ಪ್ರಮುಖ ಹುದ್ದೆಯಲ್ಲಿ ಇರುವವರನ್ನು ಕೆಳಗಿಳಿಯುವಂತೆ ಜನರು ಒತ್ತಾಯಿಸುತ್ತಿದ್ದಾರೆ.

English summary

US Sanction On Iran: People Suffering From Inflation And Other Crisis

Iran facing hardship of US sanction. Rial currency value bottom out. Inflation lads people unhappy against government.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X