For Quick Alerts
ALLOW NOTIFICATIONS  
For Daily Alerts

ಭಾರತದ ಟೆಕ್ಕಿಗಳನ್ನು ತನ್ನಲ್ಲೇ ಉಳಿಸಿಕೊಳ್ಳಲು ಮುಂದಾದ ಅಮೆರಿಕಾದ ಕಂಪನಿಗಳು

|

ಅಮೆರಿಕಾದ ತಂತ್ರಜ್ಞಾನ ಉದ್ಯಮಗಳು ತನ್ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರತಿಭಾವಂತ ಟೆಕ್ಕಿಗಳನ್ನು ತನ್ನಲ್ಲೇ ಉಳಿಸಿಕೊಳ್ಳಲು ಗ್ರೀನ್ ಕಾರ್ಡ್ ನೀಡಲು ಮುಂದಾಗಿದೆ. ಭಾರತ ಸೇರಿದಂತೆ ಇತರ ಪ್ರದೇಶಗಳಿಂದ ವಲಸೆ ಬಂದಿರುವ ಪ್ರತಿಭಾವಂತರನ್ನು ತನ್ನಲ್ಲಿಯೇ ಇರಿಸಿಕೊಳ್ಳಲು ಅಮೆರಿಕಾದ ಟಾಪ್ 10ನಲ್ಲಿ 8 ಕಂಪನಿಗಳು ಮುಂದಾಗಿವೆ.

 

ಕೆಲಸದ ವೀಸಾ ವಿಸ್ತರಣೆಯು ಅನಿರೀಕ್ಷಿತವಾಗಿರುವುದರಿಂದ ಅಮೆರಿಕಾದ ಟಾಪ್ 10 ಕಂಪನಿಗಳಲ್ಲಿ 8 ಕಂಪನಿಗಳು ಗ್ರೀನ್ ಕಾರ್ಡ್ ಅಥವಾ ಶಾಶ್ವತ ನಿವಾಸಿ ಎಂಬುದಕ್ಕೆ ಪುರಾವೆ ನೀಡಲು ಮುಂದಾಗಿವೆ. ಅಮೆರಿಕಾ ಕಾರ್ಮಿಕ ಇಲಾಖೆ ಬಿಡುಗಡೆ ಮಾಡಿರುವ ಅಂಕಿ-ಅಂಶಗಳಲ್ಲಿ ಈ ಮಾಹಿತಿ ಬಹಿರಂಗಗೊಂಡಿದೆ.

 
ಭಾರತದ ಟೆಕ್ಕಿಗಳನ್ನು ತನ್ನಲ್ಲೇ ಉಳಿಸಿಕೊಳ್ಳಲು ಮುಂದಾದ ಅಮೆರಿಕಾ

2019ರ ಆರ್ಥಿಕ ವರ್ಷದಲ್ಲಿ ಅಮೆಜಾನ್ 2ನೇ ಅತಿಹೆಚ್ಚು ಹೆಚ್‌-1 ಬಿ ವೀಸಾಗಳನ್ನು ಪಡೆದಿದ್ದು, 3,242 ಶಾಶ್ವತ ನಿವಾಸಿ ಅರ್ಜಿಗಳನ್ನು ಸಲ್ಲಿಸಿದೆ. ಕಾಗ್ನಿಜೆಂಟ್ ಮತ್ತು ಗೂಗಲ್ ಕ್ರಮವಾಗಿ 2,927 ಮತ್ತು 2,425 ಅರ್ಜಿಗಳನ್ನು ಸಲ್ಲಿಸಿದೆ.

ಟಾಪ್‌ 10 ಕಂಪನಿಗಳಲ್ಲಿ ಇಂಟೆಲ್, ಫೇಸ್‌ಬುಕ್, ಮೈಕ್ರೋಸಾಫ್ಟ್, ಸಿಸ್ಕೋ ಮತ್ತು ಡೆಲಾಯ್ಟ್ ಸೇರಿದಂತೆ ಭಾರತದ ಉದ್ಯಮಗಳಾದ ಟಿಸಿಎಸ್, ಇನ್ಪೋಸಿಸ್ ಕಂಪನಿಗಳು 1000ಕ್ಕೂ ಹೆಚ್ಚು ಅರ್ಜಿಗಳನ್ನು ಹೊಂದಿವೆ.

ಗ್ರೀನ್ ಕಾರ್ಡ್ ಎಂದರೇನು?
ಅಮೆರಿಕಾದ ಶಾಶ್ವತ ನಿವಾಸಿ ಎಂಬುದಕ್ಕೆ ಪುರಾವೆಯಾಗಿದೆ. ಅಮೆರಿಕದ ಪೌರತ್ವ ಪಡೆವ ಮೊದಲೇ ಇರುವ ಒಂದು ವಲಸೆ ಪ್ರಕ್ರಿಯೆಯಾಗಿದೆ. ಗ್ರೀನ್ ಕಾರ್ಡ್ ಪಡೆದ ವ್ಯಕ್ತಿ ಅಮೆರಿಕಾದಲ್ಲಿ ಕಾನೂನು ಬದ್ಧ ಶಾಶ್ವತ ನಿವಾಸಿ(ಎಲ್‌ಪಿಆರ್) ಎಂಬುದನ್ನು ತೋರಿಸುತ್ತದೆ.
ಗ್ರೀನ್‌ ಕಾರ್ಡ್ ಹೊಂದಿರುವವರಿಗೆ ಹಲವು ಲಾಭಗಳಿದ್ದು, ಅಮೆರಿಕಾದಲ್ಲಿ ಶಾಶ್ವತ ಉದ್ಯೋಗ ಹೊಂದಲು ಇದು ನೆರವಾಗುತ್ತದೆ.

ಗ್ರೀನ್ ಕಾರ್ಡ್‌ ಅವಧಿ
ಗ್ರೀನ್ ಕಾರ್ಡ್ ಅವಧಿಯು 10 ವರ್ಷವಾಗಿರುತ್ತದೆ. ಇದರ ಅವಧಿ ಮುಕ್ತಾಯವಾಗುವ ಕೊನೆಯ 6 ತಿಂಗಳ ಒಳಗೆ ಮತ್ತೆ ನವೀಕರಣಕ್ಕೆ ಅರ್ಜಿ ಸಲ್ಲಿಸಬಹುದು.

English summary

Us Tech Companies Providing Green Card To Hold Talent

American tech firms increasingly sponsoring green cards for their employees from India and elswhere to hold their skilled talent
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X