For Quick Alerts
ALLOW NOTIFICATIONS  
For Daily Alerts

ಕೋವಿಶೀಲ್ಡ್‌ ಕಚ್ಚಾ ವಸ್ತುಗಳನ್ನು 'ತಕ್ಷಣವೇ' ಭಾರತಕ್ಕೆ ಕಳುಹಿಸಲು ಅಮೆರಿಕಾ ಒಪ್ಪಿಗೆ

|

ಭಾರತದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾವು (ಎಸ್‌ಐಐ) ಬೇಡಿಕೆಯಿಟ್ಟಿದ್ದ ಕೋವಿಶೀಲ್ಡ್‌ ಕಚ್ಚಾ ವಸ್ತುಗಳನ್ನು ತಕ್ಷಣವೇ ಭಾರತಕ್ಕೆ ಕಳುಹಿಸಲು ಅಮೆರಿಕಾ ಮುಂದಾಗಿದೆ.

 

ಕೊರೊನಾವೈರಸ್ ಲಸಿಕೆ ಕೋವಿಶೀಲ್ಡ್ ಉತ್ಪಾದನೆಯನ್ನು ಹೆಚ್ಚಿಸಲು ಅಗತ್ಯವಾದ ಕಚ್ಚಾ ವಸ್ತುಗಳನ್ನು ತಕ್ಷಣವೇ ಒದಗಿಸುವುದಾಗಿ ಅಮೆರಿಕಾ ತಿಳಿಸಿದೆ. ಲಸಿಕೆಯ ಕಚ್ಚಾ ವಸ್ತುಗಳ ಜೊತೆಗೆ ಇತರೆ ವೈದ್ಯಕೀಯ ಉಪಕರಣಗಳ ಸರಬರಾಜನ್ನು ತುರ್ತು ಆಧಾರದ ಮೇಲೆ ಭಾರತಕ್ಕೆ ಕಳುಹಿಸಲಾಗುವುದು ಎಂದು ಅಮೆರಿಕಾ ಸರ್ಕಾರದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೋವಿಶೀಲ್ಡ್‌ ಕಚ್ಚಾ ವಸ್ತುಗಳು 'ತಕ್ಷಣವೇ' ಭಾರತಕ್ಕೆ ಬರಲಿದೆ!

ಭಾರತದಲ್ಲಿ ದಾಖಲೆಯ ಪ್ರಮಾಣದಲ್ಲಿ ಕೋವಿಡ್-19 ಪಾಸಿಟಿವ್ ಪ್ರಕರಣಗಳು ಏರಿಕೆಯಾಗುತ್ತಿದ್ದು, ಇದೀಗ ಭಾರತದ ವಿನಂತಿಯನ್ನು ಅಮೆರಿಕಾ ಪರಿಗಣಿಸಿದೆ. ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಅಜಿತ್ ದೋವಲ್ ಮತ್ತು ಅವರ ಅಮೆರಿಕಾ ಪರ ಪಾರ್ಟ್ ಜೇಕ್ ಸುಲ್ಲಿವಾನ್ ನಡುವಿನ ದೂರವಾಣಿ ಸಂಭಾಷಣೆಯ ಬಳಿಕ ಅಮೆರಿಕಾ ದೃಢಪಡಿಸಿದೆ.

ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ(ಎಸ್‌ಐಐ) ಸಿಇಎ ಆದರ್ ಪೂನವಾಲ್ಲ ಇತ್ತೀಚೆಗೆ ಅಮೆರಿಕಾ ಅಧ್ಯಕ್ಷ ಜೋ ಬಿಡೆನ್ ಅವರಿಗೆ ಹಲವಾರು ಟ್ವೀಟ್ ಮಾಡಿದ್ದರು. ಕೋವಿಡ್‌-19 ಲಸಿಕೆಗಳನ್ನು ಉತ್ಪಾದಿಸಲು ಕಚ್ಚಾ ವಸ್ತುಗಳನ್ನು ರಫ್ತು ಮಾಡಲು ಅನುಮತಿ ನೀಡುವಂತೆ ಒತ್ತಾಯಿಸಿದ್ದರು.

ಅಮೆರಿಕಾದಲ್ಲಿ ಲಸಿಕೆಗಳು, ಪಿಪಿಇ ಮತ್ತು ಕೋವಿಡ್-19 ಪರೀಕ್ಷೆಗಳನ್ನು ತಯಾರಿಸಲು ಬೇಕಾದ ಸಾಮಗ್ರಿಗಳ ರಫ್ತು ತಗ್ಗಿಸಲು ಹಾಗೂ ಅಮೆರಿಕಾಕ್ಕೆ ಪೂರೈಕೆಯನ್ನು ಹೆಚ್ಚಿಸಲು ಫೆಬ್ರವರಿ 5ರಂದು ಬಿಡೆನ್ ಸರ್ಕಾರ ರಕ್ಷಣಾ ಉತ್ಪಾದನಾ ಕಾಯ್ದೆಯನ್ನು ಜಾರಿಗೊಳಿಸಿದ್ದರು.

English summary

US To Send India Covishield Raw Material, Medical Supplies Immediately

USA has said it will "immediately" provide the raw material required to ramp up production of the Covishield coronavirus vaccine by SII
Story first published: Monday, April 26, 2021, 9:43 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X