For Quick Alerts
ALLOW NOTIFICATIONS  
For Daily Alerts

ವಿಶ್ವದ ದೊಡ್ಡಣ್ಣ ಕೊರೊನಾಯಿಂದ ಕಂಗಾಲು:ಇಟಲಿಯನ್ನೂ ಮೀರಿಸಿದ ಅಮೆರಿಕಾ

|

ಕೊರೊನಾವೈರಸ್‌ನಿಂದ ವಿಶ್ವವೇ ತಲ್ಲಣಗೊಂಡಿದೆ. ದಿನೇ ದಿನೇ ಸಾವಿರಾರು ಸಂಖ್ಯೆಯಲ್ಲಿ ಸೋಂಕು ಪೀಡಿತರ ಸಂಖ್ಯೆ ಹೆಚ್ಚುತ್ತಿದ್ದು, ವಿಶ್ವದ ದೊಡ್ಡಣ್ಣ ಅಮೆರಿಕಾ ರಾಷ್ಟ್ರವೂ ಅಲುಗಾಡಿ ಹೋಗಿದೆ.

ಜಾಗತಿಕವಾಗಿ ಅತಿ ಹೆಚ್ಚು ಕೊರೊನಾವೈರಸ್ ಸೋಂಕು ದೃಢಪಟ್ಟ ರಾಷ್ಟ್ರಗಳಲ್ಲಿ ಇಲ್ಲಿಯವರೆಗೂ ಇಟಲಿಯು ಮೊದಲ ಸ್ಥಾನದಲ್ಲಿತ್ತು. ಆದರೆ ಈಗ ಅಮೆರಿಕಾ ಇಟಲಿಯನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದೆ. ಡೆಡ್ಲಿ ಕೋವಿಡ್ ವೈರಸ್ ನಿಂದಾಗಿ ಅಮೆರಿಕಾದ ಜನಜೀವನದ ಮೇಲೆ ಅಪಾರ ಹೊಡೆತ ಬಿದ್ದಿರುವುದಾಗಿ ಯುಎಸ್ಎ ಟುಡೇ ವರದಿ ಮಾಡಿದೆ.

ವಿಶ್ವದ ದೊಡ್ಡಣ್ಣ ಕೊರೊನಾಯಿಂದ ಕಂಗಾಲು:ಇಟಲಿಯನ್ನೂ ಮೀರಿಸಿದ ಅಮೆರಿಕಾ

ಅಮೆರಿಕಾದ ಜಾನ್ಸ್ ಹಾಪ್ ಕಿನ್ಸ್ ಯೂನಿರ್ವಸಿಟಿ ಡ್ಯಾಶ್ ಬೋರ್ಡ್ ಅಂಕಿ ಅಂಶದ ಪ್ರಕಾರ, ಗುರುವಾರ ರಾತ್ರಿ 6 ಗಂಟೆವರೆಗೆ ಅಮೆರಿಕದಲ್ಲಿ ಕೋವಿಡ್ 19 ದೃಢಪಟ್ಟವರ ಸಂಖ್ಯೆ 82,404 ಮಂದಿ! ಇಟಲಿಯಲ್ಲಿ 80,589 ಜನರು ಸೋಂಕು ಪೀಡಿತರಾಗಿದ್ದು, ಚೀನಾದಲ್ಲಿ 81,782 ಮಂದಿಗೆ ಕೋವಿಡ್ 19 ತಗುಲಿತ್ತು. ಅಲ್ಲದೇ ಅಮೆರಿಕದಲ್ಲಿ ಕೊರೊನಾವೈರಸ್ ಗೆ ಸಾವನ್ನಪ್ಪಿದ್ದವರ ಸಂಖ್ಯೆ 1,100.

ಅಮೆರಿಕದಲ್ಲಿ ಸಾವಿರಾರು ಮಂದಿ ಪರೀಕ್ಷೆಗೊಳಗಾಗುತ್ತಿದ್ದಾರೆ. ಆದರೆ ಅಷ್ಟೇ ಕ್ಷಿಪ್ರವಾಗಿ ಕೋವಿಡ್ 19 ಸೋಂಕು ದೃಢಪಡಿಸುತ್ತಿದ್ದಾರೆ. ಇದರಿಂದಾಗಿ ಅಮೆರಿಕ ಕಂಗಾಲಾಗಿ ಹೋಗಿದೆ ಎಂದು ವರದಿ ವಿವರಿಸಿದೆ. ಲಾಕ್‌ಡೌನ್‌ನಿಂದಾಗಿ ಅಮೆರಿಕದ ಆರ್ಥಿಕ ಸ್ಥಿತಿ ಕುಸಿಯತೊಡಗಿದೆ.

ಅಮೆರಿಕದಲ್ಲಿನ ರೆಸ್ಟೋರೆಂಟ್ಸ್, ಶಾಪ್, ಸಿನಿಮಾ ಥಿಯೇಟರ್ಸ್ಸ್, ಮಾಲ್‌ಗಳು ಸೇರಿದಂತೆ ಬಹುತೇಕ ಎಲ್ಲವೂ ಅಮೆರಿಕದಲ್ಲಿ ಸ್ತಬ್ಧವಾಗಿದೆ. ಅಲ್ಲದೇ ಹಲವಾರು ಮಂದಿಯನ್ನು ದೊಡ್ಡ, ದೊಡ್ಡ ಕಂಪನಿಗಳು ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡತೊಡಗಿದೆ ಎಂದು ವರದಿ ವಿವರಿಸಿದೆ.

ಶುಕ್ರವಾರ (ಮಾರ್ಚ್ 27) ಭಾರತದ ಸಮಯ ಬೆಳಗ್ಗೆ 9.45ಕ್ಕೆ ಅಮೆರಿಕಾದಲ್ಲಿ ಕೊರೊನಾ ಸೋಂಕು ಪೀಡಿತರ ಸಂಖ್ಯೆ 82,426 ಹಾಗೂ ಸಾವನ್ನಪ್ಪಿದರ ಸಂಖ್ಯೆ 1,300 ತಲುಪಿದೆ.

English summary

US Tops World In Coronavirus Cases

The United States on Thursday took the grim title of the country with the most coronavirus infections in the world and crossed Itali
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X