For Quick Alerts
ALLOW NOTIFICATIONS  
For Daily Alerts

ಉಸೈನ್ ಬೋಲ್ಟ್ ಹೂಡಿಕೆ ಮಾಡಿದ ಖಾತೆಯಿಂದ ಲಕ್ಷಾಂತರ ಡಾಲರ್ ಮಂಗಮಾಯ!

|

ವಿಶ್ವದ ಅತೀ ವೇಗದ ಓಟಗಾರ ಎಂಬ ಖ್ಯಾತಿಯನ್ನು ಪಡೆದುಕೊಂಡಿರುವ ಉಸೈನ್ ಬೋಲ್ಟ್ ಹೂಡಿಕೆ ಮಾಡಿರುವ ಖಾತೆಯಿಂದ ಲಕ್ಷಾಂತರ ಡಾಲರ್‌ಗಳು ಮಂಗಮಾಯವಾಗಿದೆ ಎಂದು ವರದಿಯಾಗಿದೆ. ಈ ಬಗ್ಗೆ ಈಗಾಗಲೇ ಜಮೈಕಾ ಸರ್ಕಾರವು ತನಿಖೆ ನಡೆಸುತ್ತಿದೆ. ಈ ಬಗ್ಗೆ ಉಸೈನ್‌ ಬೋಲ್ಟ್‌ನ ಮ್ಯಾನೇಜರ್‌ ನುಗೆಟ್ ವಾಕರ್ ಜಮೈಕಾದ ಪತ್ರಿಕೆಯೊಂದಕ್ಕೆ ಮಾಹಿತಿ ನೀಡಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

ಉಸೈನ್ ಬೋಲ್ಟ್ ಹೂಡಿಕೆ ಮಾಡಿದ ಖಾತೆಯಿಂದ ಭಾರೀ ಮೊತ್ತದಲ್ಲಿ ಹಣ ವಂಚನೆಗೆ ಒಳಗಾಗಿರುವ ಸೂಚನೆ ಕಂಡು ಬಂದಿದೆ. ಈ ಬಗ್ಗೆ ಈಗಾಗಲೇ ಜಮೈಕಾ ಹಣಕಾಸು ತನಿಖಾ ಸಂಸ್ಥೆ ಹಾಗೂ ಹಣಕಾಸು ಸೇವಾ ಆಯೋಗವು ತನಿಖೆಯನ್ನು ನಡೆಸುತ್ತಿದೆ ಎಂದು ಉಸೈನ್‌ ಬೋಲ್ಟ್‌ನ ಮ್ಯಾನೇಜರ್‌ ನುಗೆಟ್ ವಾಕರ್ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ.

ನೀವು ಎಸ್‌ಬಿಐ ಗ್ರಾಹಕರೇ? ಮೊಬೈಲ್‌ನಲ್ಲಿ ಈ ಮೆಸೇಜ್ ಬಂದರೆ ಜೋಪಾನನೀವು ಎಸ್‌ಬಿಐ ಗ್ರಾಹಕರೇ? ಮೊಬೈಲ್‌ನಲ್ಲಿ ಈ ಮೆಸೇಜ್ ಬಂದರೆ ಜೋಪಾನ

ಸ್ಟಾಕ್ಸ್ ಆಂಡ್ ಸೆಕ್ಯೂರಿಟೀಸ್ ಲಿಮಿಟೆಡ್‌ನ (ಎಸ್‌ಎಸ್‌ಎಲ್‌) ಹೂಡಿಕೆ ಖಾತೆಯಿಂದ ಉಸೈನ್ ಬೋಲ್ಟ್‌ನ ಮೊತ್ತವು ನಾಪತ್ತೆಯಾಗಿದೆ. ಈ ಸಂಬಂಧ ಈಗಾಗಲೇ ಈ ಹೂಡಿಕೆ ಸಂಸ್ಥೆ ಎಸ್‌ಎಸ್‌ಎಲ್‌ ಪೊಲೀಸರನ್ನು ಭೇಟಿಯಾಗಿ ಮಾಹಿತಿ ನೀಡಿದೆ ಎಂದು ಜಮೈಕಾದ ಪತ್ರಿಕೆ ವರದಿ ಮಾಡಿದೆ.

 ಉಸೈನ್ ಬೋಲ್ಟ್ ಹೂಡಿಕೆ ಖಾತೆಯಿಂದ ಲಕ್ಷಾಂತರ ಡಾಲರ್ ಮಂಗಮಾಯ!

10 ವರ್ಷಗಳಿಂದ ಆ ಖಾತೆಯಲ್ಲೇ ಹೂಡಿಕೆ ಮಾಡಿದ್ದ ಉಸೈನ್ ಬೋಲ್ಟ್

ಜನವರಿ 11ರ ಬುಧವಾರದಂದು ಉಸೈನ್ ಬೋಲ್ಟ್‌ಗೆ ತನ್ನ ಎಸ್‌ಎಸ್‌ಎಲ್ ಹೂಡಿಕೆ ಖಾತೆಯಿಂದ ಹಣವು ಕಡಿಮೆಯಾಗುತ್ತಿರುವುದು ಕಂಡು ಬಂದಿದೆ. "ಹಣ ಹೇಗೆ ಮಿಸ್ ಆಗಿದೆ ಎಂದು ತಿಳಿಯಲು ನಾವು ಎಲ್ಲ ಕ್ರಮಗಳನ್ನು ಕೈಗೊಂಡಿದ್ದೇವೆ. ಕೊನೆಗೆ ನಾವು ಈ ಬಗ್ಗೆ ಪೊಲೀಸರಿಗೆ ವರದಿ ಮಾಡಿದ್ದೇವೆ. ಎಸ್‌ಎಸ್‌ಎಲ್‌ನಲ್ಲಿ ಸುಮಾರು 10 ವರ್ಷದಿಂದ ಉಸೈನ್ ಬೋಲ್ಟ್ ಹೂಡಿಕೆ ಮಾಡುತ್ತಿದ್ದಾರೆ. ಈಗ ಈ ಹಣ ನಾಪತ್ತೆಯಾದ ಪ್ರಕರಣದ ತನಿಖೆಗಾಗಿ ಉಸೈನ್‌ ಬೋಲ್ಟ್‌ರ ಎಲ್ಲ ವಹಿವಾಟುಗಳ ಬಗ್ಗೆಯೂ ಸಂಪೂರ್ಣ ತನಿಖೆ ನಡೆಸಲಾಗುತ್ತದೆ," ಎಂದು ತಿಳಿಸಿದ್ದಾರೆ. ಆದರೆ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಲು ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ.

ಬ್ಯಾಂಕ್ ಗ್ರಾಹಕರೇ ಎಚ್ಚರ: ಡ್ರಿನಿಕ್ ವೈರಸ್‌ ಟಾರ್ಗೆಟ್ ನೀವಾಗಿರಬಹುದು!ಬ್ಯಾಂಕ್ ಗ್ರಾಹಕರೇ ಎಚ್ಚರ: ಡ್ರಿನಿಕ್ ವೈರಸ್‌ ಟಾರ್ಗೆಟ್ ನೀವಾಗಿರಬಹುದು!

ಜಮೈಕಾದ ದಿನಪತ್ರಿಕೆಯ ಪ್ರಕಾರ ಸ್ಟಾಕ್ಸ್ ಆಂಡ್ ಸೆಕ್ಯೂರಿಟೀಸ್ ಲಿಮಿಟೆಡ್‌ನ (ಎಸ್‌ಎಸ್‌ಎಲ್‌) ಹೂಡಿಕೆ ಖಾತೆಯಿಂದ ಉಸೈನ್ ಬೋಲ್ಟ್‌ರ ಹಣ ಕಾಣೆಯಾಗಿರುವುದರಲ್ಲಿ ಎಸ್‌ಎಸ್‌ಎಲ್‌ನ ಉದ್ಯೋಗಿಗಳ ಕೈವಾಡ ಇರುವ ಸಾಧ್ಯತೆಯಿದೆ. ಈ ಉದ್ಯೋಗಿಯ, ಆತನ ಆಪ್ತರ ಹಣಕಾಸು ವ್ಯವಹಾರಗಳ ಬಗ್ಗೆಯೂ ತನಿಖೆಯನ್ನು ನಡೆಸಲಾಗುತ್ತಿದೆ.

ಬೋಲ್ಟ್ ಎಂಟು ಬಾರಿ ಒಲಿಂಪಿಕ್ ಚಾಂಪಿಯನ್ ಆಗಿದ್ದಾರೆ. 100 ಮೀಟರ್, 200 ಮೀಟರ್, 4x100 ಮೀಟರ್‌ ರಿಲೇಯಲ್ಲಿ ಉಸೈನ್ ಬೋಲ್ಟ್ ವಿಶ್ವ ದಾಖಲೆಯನ್ನು ಮಾಡಿದ್ದಾರೆ. 2009ರ ಬೆರ್ಲಿನ್ ವರ್ಲ್ಡ್ ಅಥ್ಲೇಟ್ ಚಾಂಪಿಯನ್‌ಶಿಪ್‌ನಲ್ಲಿ ಉಸೈನ್ ಬೋಲ್ಟ್ ಬರೀ 9.58 ಸೆಕೆಂಡಿನಲ್ಲಿ 100 ಮೀಟರ್‌ ಓಡಿ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಈ ಮೈದಾನದಲ್ಲೇ ಉಸೈನ್ ಬೋಲ್ಟ್ ಗಂಟೆಗೆ ಸುಮಾರು 37.58 ಕಿಲೋಮೀಟರ್ ಓಡಿದ್ದಾರೆ.

English summary

Usain bolt Reportedly missing million dollars from investment accounts, Probe launched

Usain Bolt, world's FASTEST man, Reportedly loses million of dollars from investment account. jamaica launches probe.
Story first published: Saturday, January 14, 2023, 9:40 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X