For Quick Alerts
ALLOW NOTIFICATIONS  
For Daily Alerts

ಷೇರುಪೇಟೆಯ 'ಬಿಗ್ ಬುಲ್' ಉದ್ಯಮಿ ರಾಕೇಶ್(62) ನಿಧನ

|

ಮುಂಬೈ, ಆಗಸ್ಟ್ 14: ಷೇರುಪೇಟೆಯ ಹಿರಿಯ ಹೂಡಿಕೆದಾರ, ಭಾರತದ 'ವಾರೆನ್ ಬಫೆಟ್', ಷೇರುಪೇಟೆಯ 'ಬಿಗ್ ಬುಲ್' ಖ್ಯಾತಿಯ ರಾಕೇಶ್ ಜುಂಜುನ್ ವಾಲಾ ಇನ್ನಿಲ್ಲ. ಕೆಲಕಾಲದಿಂದ ಅನಾರೋಗ್ಯಪೀಡಿತರಾಗಿದ್ದ ರಾಕೇಶ್ ಇಂದು ಬೆಳಗ್ಗೆ ಮುಂಬೈನಲ್ಲಿ ನಿಧನರಾದರು. ಅವರಿಗೆ 62 ವರ್ಷ ವಯಸ್ಸಾಗಿತ್ತು. ಇತ್ತೀಚೆಗೆ ಹೊಸ ಬಜೆಟ್ ವಿಮಾನಯಾನ ಸಂಸ್ಥೆ ಆಕಾಶ ಏರ್ ಸ್ಥಾಪನೆ ಮಾಡಿದ್ದರು. ಆಗಸ್ಟ್ ತಿಂಗಳ ಆರಂಭದಲ್ಲೇ ವಿಮಾನಯಾನ ಕಂಡಿದ್ದ ಆಕಾಶ ಏರ್ ಬಗ್ಗೆ ರಾಕೇಶ್ ದೊಡ್ಡ ಮಟ್ಟದ ಕನಸು ಕಂಡಿದ್ದರು.

ಆಕಾಶ ಏರ್ ಮೊದಲ ವಿಮಾನ ಆರ್ಥಿಕ ರಾಜಧಾನಿ ಮುಂಬೈನಿಂದ ಅಹಮದಾಬಾದ್ ನಗರಕ್ಕೆ ಮೊದಲ ವಿಮಾನದೊಂದಿಗೆ ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಜುಂಜುನ್‌ವಾಲಾ ಅವರ ಆಲೋಚನೆ, ಹೂದಿಕೆಗೆ ಮಾಜಿ ಜೆಟ್ ಏರ್‌ವೇಸ್ ಸಿಇಒ ದುಬೆ ಮತ್ತು ಇಂಡಿಗೋ ಮಾಜಿ ಮುಖ್ಯಸ್ಥ ಆದಿತ್ಯ ಘೋಷ್ ಕೂಡಾ ಸಾಥ್ ನೀಡಿ ಆಕಾಶ ಏರ್ ಚಾಲನೆಗೆ ಕಾರಣರಾದರು.

ಜುಲೈ 5, 1960 ರಂದು ಜನಿಸಿದ ರಾಕೇಶ್ ಅವರ ತಂದೆ ಆದಾಯ ತೆರಿಗೆ ಆಯುಕ್ತರಾಗಿದ್ದರು. ರಾಕೇಶ್ ಪದವಿ ಹಾಗೂ ಸಿಎ ಮಾಡಿದ್ದಲ್ಲದೆ, ಕಾಲೇಜು ದಿನಗಳಲ್ಲೇ ಷೇರುಪೇಟೆ ಎಬಿಸಿಡಿ ಚೆನ್ನಾಗಿ ಅರಿತು ಹೂಡಿಕೆಯ ಹೊಸ ವಿಧಾನ ತೋರಿಸಿಕೊಟ್ಟವರು.

ಷೇರುಪೇಟೆಯ 'ಬಿಗ್ ಬುಲ್' ಉದ್ಯಮಿ ರಾಕೇಶ್(62) ನಿಧನ

5,000 ರು ಆರಂಭಿಕ ಬಂಡವಾಳದೊಂದಿಗೆ ಷೇರು ಮಾರುಕಟ್ಟೆಯಲ್ಲಿ ಪ್ರಯಾಣ ಆರಂಭಿಸಿ, ಬಿಗ್ ಬುಲ್ ಎನಿಸಿಕೊಂಡರು. ಇತ್ತೀಚಿನ ಫೋರ್ಬ್ ಶ್ರೀಮಂತರ ಪಟ್ಟಿ ಪ್ರಕಾರ $5.8 ಬಿಲಿಯನ್ ಮೌಲ್ಯದ ಆಸ್ತಿಯನ್ನು ಜುಂಜುನ್ ವಾಲ ಹೊಂದಿದ್ದರು.

ಖಾಸಗಿ ಒಡೆತನದ ಸ್ಟಾಕ್ ಟ್ರೇಡಿಂಗ್ ಸಂಸ್ಥೆ ರೇರ್(Rare) ಎಂಟರ್‌ಪ್ರೈಸಸ್ ಹೆಸರನ್ನು ಅವರ ಹೆಸರು ಹಾಗೂ ಪತ್ನಿ ರೇಖಾ ಅವರ ಮೊದಲ ಎರಡು ಮೊದಲಕ್ಷರಗಳಿಂದ ಪಡೆದು ರಚಿಸಿದ್ದು ವಿಶೇಷ. ಟೈಟಾನ್, ಸ್ಟಾರ್ ಹೆಲ್ತ್, ಟಾಟಾ ಮೋಟಾರ್ಸ್ ಮತ್ತು ಮೆಟ್ರೋ ಬ್ರಾಂಡ್‌ಗಳು ಅವರ ಕೆಲವು ದೊಡ್ಡ ಹಿಡುವಳಿಗಳನ್ನು ಹೊಂದಿದ್ದರು.

ರಾಕೇಶ್ ಜುಂಜುನ್ ವಾಲಾರ 14 ಅಂತಸ್ತಿನ ಐಷಾರಾಮಿ ಬಂಗಲೆ ಹೇಗಿರಲಿದೆ?ರಾಕೇಶ್ ಜುಂಜುನ್ ವಾಲಾರ 14 ಅಂತಸ್ತಿನ ಐಷಾರಾಮಿ ಬಂಗಲೆ ಹೇಗಿರಲಿದೆ?


ಇದಲ್ಲದೆ, ಜುಂಜುನ್‌ವಾಲಾ ಆಪ್ಟೆಕ್ ಲಿಮಿಟೆಡ್ ಮತ್ತು ಹಂಗಾಮಾ ಡಿಜಿಟಲ್ ಮೀಡಿಯಾ ಎಂಟರ್‌ಟೈನ್‌ಮೆಂಟ್ ಪ್ರೈವೇಟ್‌ನ ಅಧ್ಯಕ್ಷರಾಗಿದ್ದರು. ಲಿಮಿಟೆಡ್ ಮತ್ತು ಪ್ರೈಮ್ ಫೋಕಸ್ ಲಿಮಿಟೆಡ್, ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್, ಬಿಲ್ಕೇರ್ ಲಿಮಿಟೆಡ್, ಪ್ರಜ್ ಇಂಡಸ್ಟ್ರೀಸ್ ಲಿಮಿಟೆಡ್, ಪ್ರೊವೋಗ್ ಇಂಡಿಯಾ ಲಿಮಿಟೆಡ್, ಕಾನ್ಕಾರ್ಡ್ ಬಯೋಟೆಕ್ ಲಿಮಿಟೆಡ್, ಇನ್ನೋವಸಿಂತ್ ಟೆಕ್ನಾಲಜೀಸ್ ಲಿಮಿಟೆಡ್, ಮಿಡ್ ಡೇ ಮಲ್ಟಿಮೀಡಿಯಾ ಲಿಮಿಟೆಡ್, ನಾಗಾರ್ಜುನಮಿಟ್ ಕಂಪನಿ ಲಿಮಿಟೆಡ್, ನಾಗಾರ್ಜುನಮಿಟ್ ಕಂಪನಿಯಲ್ಲಿ ಹೂಡಿಕೆ ಮಾಡಿದ್ದರು.

ಐಷಾರಾಮಿ ಬಂಗಲೆ
ಮೊದಲಿಗೆ ಎರಡು ಅಂತಸ್ತಿನ ಅಪಾರ್ಟ್ಮೆಂಟ್ ನಲ್ಲಿ ನೆಲೆಸಿದ್ದ ರಾಕೇಶ್ ದಂಪತಿ ನಂತರ ಸುಮಾರು 14 ಫ್ಲ್ಯಾಟ್‌ಗಳಿದ್ದಅಪಾರ್ಟ್ಮೆಂಟ್ ಖರೀದಿಸಿದ್ದರು. ಈ ಫ್ಲ್ಯಾಟ್‌ಗಳನ್ನು ರಾಕೇಶ್‌ ಜುಂಜುನ್‌ವಾಲಾ ಹಾಗೂ ಅವರ ಪತ್ನಿ ರೇಖಾ ಜುಂಜುನ್‌ವಾಲಾ ಸುಮಾರು 371 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿದ್ದರು. 2022ರಲ್ಲಿ 14 ಅಂತಸ್ತಿನ ಐಷಾರಾಮಿ ಬಂಗಲೆ ನಿರ್ಮಿಸಿದ್ದರು.

English summary

Veteran stock market investor Rakesh Jhunjhunwala passed away

Veteran stock market investor Rakesh Jhunjhunwala passed away in Mumbai. He was 62.
Story first published: Sunday, August 14, 2022, 9:59 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X