For Quick Alerts
ALLOW NOTIFICATIONS  
For Daily Alerts

ವಿಐಸಿ ಹಾಗೂ ವಾಟ್ಸಾಪ್ ಮೂಲಕ ವಿ ಬಿಲ್ ಪಾವತಿಸಿ!

|

ಮುಂಬೈ, ಮಾರ್ಚ್ 21: ಡಿಜಿಟಲ್ ಪ್ರಥಮ ಅನುಭವದತ್ತ ದೃಷ್ಟಿಯನ್ನು ಮುಂದುವರಿಸಿರುವ ವಿ ಇದೀಗ ಉದ್ಯಮದಲ್ಲೇ ಮೊದಲು ಎನಿಸಿದ ಮತ್ತೊಂದು ಸೇವೆಯನ್ನು ತನ್ನ ಗ್ರಾಹಕರಿಗೆ ಪರಿಚಯಿಸಿದೆ. ಇದರ ಅನ್ವಯ, ಗ್ರಾಹಕರು ಅನುಕೂಲಕರವಾಗಿ ತಮ್ಮ ರೀಚಾರ್ಜ್‍ಗಳನ್ನು ಮತ್ತು ಬಿಲ್ ಪಾವತಿಯನ್ನು ಎಲ್ಲಿಂದ ಬೇಕಾದರೂ, ಯಾವುದೇ ಸಮಯದಲ್ಲಾದರೂ ಮಾಡಬಹುದಾಗಿದೆ.

ವಿ ಗ್ರಾಹಕರು ಸ್ಥಳದಲ್ಲೇ ಸುಲಲಿತ ಪಾವತಿ ಮತ್ತು ರೀಚಾರ್ಜ್‍ಗಳನ್ನು ಎಐ ಚಾಲಿತ ವರ್ಚುವಲ್ ಏಜೆಂಟ್ ವಿಐಸಿ ಮೂಲಕ ತನ್ನ ಡಿಜಿಟಲ್ ಆಸ್ತಿಯಲ್ಲಿ ಮಾಡಬಹುದಾಗಿದೆ. ಜತೆಗೆ ವಾಟ್ಸಪ್‍ನಲ್ಲೂ ಮಾಡಲು ಅವಕಾಶವಿದೆ.

ವಿ ಪೋಸ್ಟ್ ಪೆಯ್ಡ್ ಮತ್ತು ಪ್ರಿ ಪೇಯ್ಡ್ ಗ್ರಾಹಕರು ಈ ವೈಯಕ್ತಿಕ ಡಿಜಿಟಲ್ ಪಾವತಿ ಸೇವೆ ಸೌಲಭ್ಯ ಪಡೆದುಕೊಳ್ಳಬಹುದಾಗಿದ್ದು, ಇದು ಎಲ್ಲ ಪೇಮೆಂಟ್ ಗೇಟ್‍ವೇ/ ಯುಪಿಐಗಳಲ್ಲೂ ಕಾರ್ಯ ನಿರ್ವಹಿಸುತ್ತದೆ. ವಿ ಪ್ರಿ ಪೇಯ್ಡ್ ಗ್ರಾಹಕರು ಯಾವುದೇ ಪ್ರಿಪೆಯ್ಡ್ ಪ್ಯಾಕ್‍ಗಳ ರೀಚಾರ್ಜ್‍ಗಳನ್ನು ತಕ್ಷಣವೇ ಕೇವಲ ಎರಡು ಕ್ಲಿಕ್ ಮಾಡಿ ವಾಟ್ಸಪ್ ಸೇರಿದಂತೆ ವರ್ಚುವಲ್ ಏಜೆಂಟ್ ವಿಐಸಿ ಮೂಲಕ ಮಾಡಿಕೊಳ್ಳಬಹುದಾಗಿದೆ.

ವಿಐಸಿ ಹಾಗೂ ವಾಟ್ಸಾಪ್ ಮೂಲಕ ವಿ ಬಿಲ್ ಪಾವತಿಸಿ!

ಈ ಉಪಕ್ರಮವು ಗ್ರಾಹಕರ ಜೀವನವನ್ನು ಸರಳ, ವೇಗಗೊಳಿಸುವ ಮತ್ತು ವೈಯಕ್ತಿಕ ವಿಶೇಷತೆ ಬಳಕೆದಾರ ಅನುಭವವನ್ನು ಒದಗಿಸುವ ವಿ ಉದ್ದೇಶಕ್ಕೆ ಅನುಗುಣವಾಗಿದೆ. ಇದರ ಜತೆಗೆ ಡಿಜಿಟಲ್ ಪಾವತಿಯಲ್ಲಿ ಈ ವಿಶೇಷ ಬಳಕೆದಾರ ಅನುಭವವು ಮೊಬೈಲ್ ಆಧರಿತ ಗ್ರಾಹಕರ ನಡವಳಿಕೆ ಮತ್ತು ಸಾಧನಗಳನ್ನು ಆರೋಗ್ಯಕವಾಗಿ ಬಳಕೆ ಮಾಡಿಕೊಳ್ಳುವ ಉದ್ದೇಶಕ್ಕೂ ಅನುಸಾರವಾಗಿದೆ.

ಕಳೆದ ವರ್ಷ ಕ್ರಾಂತಿಕಾರಕ ಎನಿಸಿದ ಎಐ ಚಾಲಿತ ಡಿಜಿಟಲ್ ಗ್ರಾಹಕ ಸೇವೆ ಮತ್ತು ಬೆಂಬಲ ವರ್ಚುವಲ್ ಸಹಾಯ ವ್ಯವಸ್ಥೆಯಾದ ವಿಐಸಿ ಚಾಟ್‍ಬಾಟ್ ಸೇವೆಯನ್ನು ವಾಟ್ಸಪ್‍ನಲ್ಲಿ ಆರಂಭಿಸಿದ ಮೊಟ್ಟಮೊದಲ ಮೊಬೈಲ್ ಸೇವಾ ಕಂಪನಿಯಾಗಿ ವಿ ರೂಪುಗೊಂಡಿತ್ತು.

ವಿಐಸಿ ಸೇವೆಯು ವಿ ಗ್ರಾಹಕರಿಗೆ ಬಿಲ್ ಪಾವತಿ, ರೀಚಾರ್ಜ್, ವಿಎಎಸ್, ಪ್ಲಾನ್ ಸಕ್ರಿಯಗೊಳಿಸುವುದು, ಹೊಸ ಸಂಪರ್ಕ, ಡಾಟಾ ಬಾಕಿ, ಬಿಲ್ ಮನವಿ ಮತ್ತಿತರ ವೈವಿಧ್ಯಮಯ ಸೇವೆಗಳಿಗೆ ಇನ್‍ಸ್ಟಂಟ್ ಸದನೆಯನ್ನು ಪಡೆಯಲು ಅನುವು ಮಾಡಿಕೊಟ್ಟಿತ್ತು. ವಿಐಸಿ ಉಪಕ್ರಮವು ಬಳಸಲು ಸರಳವಾದ, ಸುರಕ್ಷಿತವಾದ ವ್ಯವಸ್ಥೆಯಾಗಿದ್ದು, ಎಐ ಶಕ್ತಿಯ ಲಾಭ ಪಡೆದು ವಿ ಗ್ರಾಹಕರು ಸಂವಾದ ನಡೆಸಲು ಅವಕಾಶ ಕಲ್ಪಿಸಿದೆ.

ವಿ ಬಳಕೆದಾರರು ವಿಐಸಿ ಬಳಸಿಕೊಂಡು ತಮ್ಮ ಪಾವತಿಗಳನ್ನು ಮಾಡಲು ಮತ್ತು ರೀಚಾರ್ಜ್ ಮಾಡಲು ಎಸ್‍ಎಂಎಸ್ ಮೂಲಕ ಲಿಂಕ್ ಪಡೆಯುತ್ತಾರೆ ಅಥವಾ ವಿಐಸಿ ಸಂಖ್ಯೆ 9654297000 ಗೆ ಹಾಯ್ ಕಳುಹಿಸುವ ಮೂಲಕ ಈ ಅನುಭವ ಪಡೆಯಬಹುದಾಗಿದೆ.

English summary

Vi Customers can now pay bills and do recharges on VIC WhatsApp

Vi customers can now enjoy on the spot seamless payments and recharges through its AI powered Virtual Agent VIC on its Digital Assets and also on WhatsApp.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X