For Quick Alerts
ALLOW NOTIFICATIONS  
For Daily Alerts

ಓಪನ್‌ಸಿಗ್ನಲ್‌ನ ಪ್ರಕಾರ ಭಾರತದ ಅತ್ಯಂತ ವೇಗದ 4ಜಿ ಸಂಸ್ಥೆ ಯಾವುದು?

|

ನವದೆಹಲಿ, ಆಗಸ್ಟ್ 10: ಕಳೆದ ಒಂದು ವರ್ಷದಿಂದ ಸತತವಾಗಿ ವಿಐ ಅತ್ಯುತ್ತಮ ಸೇವಾದಾರ ಜಾಲ ಎಂದು ಜಾಗತಿಕ ಮತ್ತು ಭಾರತೀಯ ಮೂರನೇ ಪಾರ್ಟಿ (ಥರ್ಡ್ ಪಾರ್ಟಿ) ಸಂಸ್ಥೆಗಳಿಂದ ರೇಟಿಂಗ್ ಪಡೆಯುತ್ತಿದೆ. ಉತ್ತಮ ಗುಣಮಟ್ಟದ ಜಾಲ ಅನುಭವದ ಮೂಲಕ ಗ್ರಾಹಕರ ಅನುಭವ ಸುಧಾರಿಸಲು ಕಂಪನಿ ನಿರಂತರವಾಗಿ ಒತ್ತು ನೀಡುತ್ತಿದೆ. ಗ್ರಾಹಕರ ಮೊಬೈಲ್ ಅನುಭವವನ್ನು ವಿಶ್ಲೇಷಿಸುವ ಸ್ವತಂತ್ರ ಜಾಗತಿಕ ಮಾನಕವಾದ ಓಪನ್‌ಸಿಗ್ನಲ್‌ನ 'ಭಾರತ ಮೊಬೈಲ್ ಜಾಲ ಅನುಭವ ವರದಿ -ಏಪ್ರಿಲ್ 2022' ಪ್ರಕಾರ, ವಿಐ ಈಗ ಭಾರತದಲ್ಲಿ ಅತ್ಯಂತ ವೇಗದ 4ಜಿ ತಂತ್ರಜ್ಞಾನ ಜಾಲವಾಗಿ ಹೊರಹೊಮ್ಮಿದೆ.

 

ವಿಐ ತನ್ನ ಅಖಿಲ ಭಾರತ (ಪಾನ್ ಇಂಡಿಯಾ) ಮಾರುಕಟ್ಟೆಯಲ್ಲಿ ಅತ್ಯಂತ ವೇಗದ 4ಜಿ ಡೌನ್‌ಲೋಡ್ ಮತ್ತು ಅಪ್‌ಲೋಡ್ ವೇಗಗಳನ್ನು ಒದಗಿಸಿದ್ದು ಬಳಕೆದಾರರಿಗೆ ಕೆಲಸ, ಅಧ್ಯಯನ, ಸಾಮಾಜೀಕರಣ, ಮನೋರಂಜನೆ, ಇ ಕಾಮರ್ಸ್ ಮತ್ತು ಇತರ ಡಿಜಿಟಲ್ ಸೇವೆಗಳನ್ನು ಹೊಂದಲು ನೆರವಾಗುತ್ತಿದೆ.

ಜಿಯೋ 5ಜಿ ಲಭ್ಯತೆ, ವೇಗ, ಸಿಮ್, ಅಗತ್ಯ ಮಾಹಿತಿ ವಿವರ

ಭಾರತದ ಮೊಬೈಲ್ ಫೋನ್ ಬಳಕೆದಾರರು 2021 ಡಿಸೆಂಬರ್ 1ರಿಂದ 2022 ಫೆಬ್ರವರಿ 28ರ ನಡುವಿನ 90 ದಿನಗಳ ಅವಧಿಯಲ್ಲಿ ಪಡೆದ 4ಜಿ ತಂತ್ರಜ್ಞಾನ ಜಾಲದ ಅನುಭವವನ್ನು ಓಪನ್‌ಸಿಗ್ನಲ್ ಮೌಲ್ಯಮಾಪನ ಮಾಡಿದೆ. ವರದಿಯು 22 ಟೆಲಿಕಾಂ ವೃತ್ತಗಳಲ್ಲಿನ ದತ್ತಾಂಶ (ಡೇಟಾ) ವೇಗ ಮತ್ತು ಅನುಭವವನ್ನು ವಿಶ್ಲೇಷಿಸಿದೆ.

ಭಾರತದ ಅತ್ಯಂತ ವೇಗದ 4ಜಿ ಸಂಸ್ಥೆ ಹೆಸರಿಸಿದ ಓಪನ್‌ಸಿಗ್ನಲ್‌

'ವಿಐ ಎಲ್ಲ ವೇಗಗಳ ಪ್ರಶಸ್ತಿಗಳನ್ನು ಗೆದ್ದಿದೆ. ವಿಐ ಡೌನ್‌ಲೋಡ್ ವೇಗ ಅನುಭವ ಮತ್ತು ಅಪ್‌ಲೋಡ್ ವೇಗ ಅನುಭವ ಪ್ರಶಸ್ತಿಗಳನ್ನು ಗೆದ್ದಿದೆ. ವಿಐ ಜಾಲದ ನಮ್ಮ ಬಳಕೆದಾರರು ಸರಾಸರಿಯಾಗಿ ಅತ್ಯಂತ ವೇಗದ 13.6 ಎಂಬಿಪಿಎಸ್ ಡೌನ್‌ಲೋಡ್ ವೇಗ ಹಾಗೂ ಅತ್ಯಂತ ವೇಗದ 4.9 ಎಂಬಿಪಿಎಸ್ ಅಪ್‌ಲೋಡ್ ವೇಗದ ಅನುಭವ ಹೋದಿದ್ದಾರೆ' ಎಂದು ಓಪನ್‌ಸಿಗ್ನಲ್‌ನ ತಾಂತ್ರಿಕ ವಿಶ್ಲೇಷಣೆಕಾರ ಹಾರ್ದಿಕ್ ಖತ್ರಿ ಹೇಳಿದ್ದಾರೆ.

ಡೌನ್‌ಲೋಡ್ ಮತ್ತು ಅಪ್‌ಲೋಡ್ ವೇಗದ ಕ್ಷೇತ್ರಗಳಲ್ಲಿ ವಿಐ ಸತತವಾಗಿ ಮುಂಚೂಣಿ ಸ್ಥಾನ
ಉಳಿಸಿಕೊಂಡಿದೆ. ವರದಿಯ ಮುಖ್ಯಾಂಶಗಳು ಹೀಗಿವೆ:
1. ಒಟ್ಟಾರೆ ಅನುಭವ: ಡೌನ್‌ಲೋಡ್ ವೇಗ ಅನುಭವ ಮತ್ತು ಅಪ್‌ಲೋಡ್ ವೇಗ ಅನುಭವ -ವೇಗದ ಈ ಎರಡೂ ವಲಯದಲ್ಲಿ ವಿಐ ಮುಂಚೂಣಿಯಲ್ಲಿದೆ.
2. ವಿಐ 10 ಮಾರುಕಟ್ಟೆಗಳಲ್ಲಿ ಡೌನ್‌ಲೋಡ್ ವೇಗದಲ್ಲಿ ನಂ. 1 ಸ್ಥಾನ ಗಳಿಸಿದೆ -ಗುಜರಾತ್, ಮಧ್ಯ ಪ್ರದೇಶ, ಮಹಾರಾಷ್ಟ್ರ, ಮುಂಬೈ, ಉತ್ತರ ಪ್ರದೇಶ (ಪೂರ್ವ ಮತ್ತು ಪಶ್ಚಿಮ), ಕೋಲ್ಕತಾ, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಈಶಾನ್ಯ ಭಾರತ.

 

3. ವಿಐ 14 ಮಾರುಕಟ್ಟೆಗಳಲ್ಲಿ ಅಪ್‌ಲೋಡ್ ವೇಗದಲ್ಲಿಯೂ ಅತ್ಯುನ್ನತ ಸ್ಥಾನ ಪಡೆದಿದೆ -ಗುಜರಾತ್, ಮುಂಬೈ, ಉತ್ತರ ಪ್ರದೇಶ (ಪೂರ್ವ ಮತ್ತು ಪಶ್ಚಿಮ), ರ‍್ಯಾಣ, ಪಂಜಾಬ್, ಕರ್ನಾಟಕ, ತಮಿಳು ನಾಡು, ಕೋಲ್ಕತಾ, ಪಶ್ಚಿಮ ಬಂಗಾಳ, ಒಡಿಶಾ, ಅಸ್ಸಾಂ, ಈಶಾನ್ಯ ಭಾರತ ಹಾಗೂ ಜಮ್ಮು ಮತ್ತು ಕಾಶ್ಮೀರ.

ಇನ್ನು ವಿಐ ಗಿಗಾನೆಟ್ ಅನ್ನು 5ಜಿ ದಾಖಲೆ ಸಮಯದಲ್ಲಿ ಮುಗಿಸಲಾದ ಅತಿ ದೊಡ್ಡ ಜಾಲ ವಿಲೀನ ಕಾರ್ಯದ ಫಲವಾಗಿದೆ. ಇದು ಜಗತ್ತಿನಲ್ಲೇ ಈ ರೀತಿಯ ಪ್ರಪ್ರಥಮ ಸ್ಪೆಕ್ಟ್ರಂ ರೀಫ್ರೇಮಿಂಗ್ ಪ್ರಕ್ರಿಯೆಯಾಗಿದೆ. 5ಜಿ ಬೆಲೆ ಬಗ್ಗೆ ಇನ್ನೂ ಯಾವುದೇ ಟೆಲಿಕಾಂ ಸಂಸ್ಥೆಗಳು ನಿಖರ ಮಾಹಿತಿ ನೀಡಿಲ್ಲ. ಪ್ರೀಮಿಯಂ ದರವನ್ನು ಹೊಂದುವ ನಿರೀಕ್ಷೆಯಿದೆ.

ಇತ್ತೀಚೆಗೆ ನಡೆದ 5ಜಿ ತರಂಗಗುಚ್ಛ ಹರಾಜಿನಲ್ಲಿ ರಿಲಯನ್ಸ್ ಜಿಯೋ, ಭಾರ್ತಿ ಏರ್ ಟೆಲ್, ವೋಡಾಫೋನ್- ಐಡಿಯಾ(ವಿ) ಅಲ್ಲದೆ ಅದಾನಿ ಸಮೂಹದ ಟೆಲಿಕಾಂ ಸಂಸ್ಥೆ ಅಂತಿಮವಾಗಿ ತಮ್ಮ ಆಯ್ಕೆಯ ಸ್ಪೆಕ್ಟ್ರಮ್ ಪಡೆದುಕೊಂಡಿವೆ.

ಹೆಚ್ಚಿನ ಸಂಖ್ಯೆಯ ಜನರು ಹಳ್ಳಿಗಳಲ್ಲಿ ವಾಸಿಸುವ ಭಾರತದಂತಹ ದೇಶದಲ್ಲಿ, 700 MHz ಬ್ಯಾಂಡ್‌ನ ವಿಶಾಲ ವ್ಯಾಪ್ತಿಯು ಗ್ರಾಮೀಣ ಭಾರತವನ್ನು ಸಂಪರ್ಕಿಸಲು ಸಹಾಯ ಮಾಡುತ್ತದೆ. ಅಂದರೆ, 5G ನಗರಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ಅದರ ಪ್ರಯೋಜನ ಹಳ್ಳಿಗಳಿಗೂ ತಲುಪುವುದು ಖಚಿತ. ದೂರದ ಗ್ರಾಮೀಣ/ದಟ್ಟಣೆಯ ಪ್ರದೇಶಗಳಲ್ಲಿ ಸಂಪರ್ಕವನ್ನು ಒದಗಿಸಲು 700 MHz ಬ್ಯಾಂಡ್ ಸಹಾಯ ಮಾಡುತ್ತದೆ ಎಂದು ಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

Read more at: https://kannada.goodreturns.in/classroom/jio-5g-launch-date-in-india-5g-speed-sim-and-other-details-014121.html?story=2

English summary

Vi is the Fastest 4G Network in India, as per Opensignal

Vi has consistently been rated as the best network provider by various global and Indian third party agencies over the past one year. The company continues to lay emphasis on improving customer experience through superior network performance.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X