For Quick Alerts
ALLOW NOTIFICATIONS  
For Daily Alerts

ವಿಜಯ್ ಮಲ್ಯ ಹಸ್ತಾಂತರ ಮೇಲ್ಮನವಿ ಅರ್ಜಿ ವಜಾ ಮಾಡಿದ ಯುಕೆ ಕೋರ್ಟ್

|

ದೇಶದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಭಾರತಕ್ಕೆ ಹಸ್ತಾಂತರದ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಏಪ್ರಿಲ್ 20ರಂದು ಯು.ಕೆ. ಕೋರ್ಟ್ ರದ್ದು ಮಾಡಿದೆ. ಭಾರತಕ್ಕೆ ಹಸ್ತಾಂತರ ಮಾಡುವಂತೆ 2018ರಲ್ಲಿ ಬಂದಿದ್ದ ತೀರ್ಮಾನದ ವಿರುದ್ಧ ವಿಜಯ್ ಮಲ್ಯ ಮೇಲ್ಮನವಿ ಸಲ್ಲಿಸಿದ್ದರು.

 

ಕಿಂಗ್ ಫಿಷರ್ ಏರ್ ಲೈನ್ಸ್ ಗಾಗಿ ಭಾರತದಲ್ಲಿನ ಹಲವು ಬ್ಯಾಂಕ್ ಗಳಿಂದ 9000 ಕೋಟಿ ರುಪಾಯಿ ಸಾಲ ಮಾಡಿದ್ದು, ಅದರ ಜತೆಗೆ ಹಣಕಾಸು ವಂಚನೆ ಆರೋಪ ಇದೆ. ಆದ್ದರಿಂದ ವಿಜಯ್ ಮಲ್ಯ ಭಾರತಕ್ಕೆ ಬರಬೇಕು. 64 ವರ್ಷದ ವಿಜಯ್ ಮಲ್ಯ ಅವರನ್ನು ವಾಪಸ್ ಕರೆತರಲು ಭಾರತ ಸರ್ಕಾರ ಪ್ರಯತ್ನಿಸುತ್ತಿದೆ.

"ಹಣ ವಾಪಸ್ ಕೊಡ್ತೀನಿ, ಪ್ಲೀಸ್ ತೆಗೆದುಕೊಳ್ಳಿ"

ಯಾವುದೇ ತಪ್ಪು ಮಾಡಿಲ್ಲ. ನಾನು ಹಣ ವಾಪಸ್ ಮಾಡಲು ಸಿದ್ಧನಿದ್ದೇನೆ ಎಂದು ವಿಜಯ್ ಮಲ್ಯ ಈಚೆಗೆ ಹೇಳಿದ್ದಾರೆ. ಮಾರ್ಚ್ 31ರಂದು ಟ್ವೀಟ್ ಮಾಡಿದ್ದ ಮಲ್ಯ, ನಾನು ಶೇಕಡಾ ನೂರರಷ್ಟು ಹಣ ವಾಪಸ್ ಮಾಡಲು ಸಿದ್ಧನಿದ್ದೇನೆ. ಆದರೆ ಬ್ಯಾಂಕ್ ಹಣ ಪಡೆಯಲು ಸಿದ್ಧವಿಲ್ಲ ಹಾಗೂ ಇ.ಡಿ. ಆಸ್ತಿಯನ್ನು ಜಪ್ತಿ ಮಾಡಿಕೊಂಡಿರುವುದು ಬಿಡಲು ಸಿದ್ಧವಿಲ್ಲ. ಈ ಸಲವಾದರೂ ಕೇಂದ್ರ ಹಣಕಾಸು ಸಚಿವೆ ಬಿಕ್ಕಟ್ಟಿನ ವೇಳೆ ಕೇಳಿಸಿಕೊಳ್ಳಬಹುದು ಎಂದಿದ್ದರು.

ವಿಜಯ್ ಮಲ್ಯ ಹಸ್ತಾಂತರ ಮೇಲ್ಮನವಿ ಅರ್ಜಿ ವಜಾ ಮಾಡಿದ ಯುಕೆ ಕೋರ್ಟ್

ಭಾರತಕ್ಕೆ ಹಸ್ತಾಂತರ ಮಾಡಬೇಕು ಎಂಬ ಮನವಿಯನ್ನು ಪುರಸ್ಕರಿಸಿ, ಲಂಡನ್ ನಲ್ಲಿ 2017ರಲ್ಲಿ ಲಂಡನ್ ನಲ್ಲಿ ಮಲ್ಯರನ್ನು ಬಂಧಿಸಲಾಗಿತ್ತು. ಆದರೆ ಕೆಲ ಹೊತ್ತಿಗೆ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಜಾರಿ ನಿರ್ದೇಶನಾಲಯ ಅಫಿಡವಿಟ್ ಸಲ್ಲಿಸಿದ ಮೇಲೆ ಅದೇ ವರ್ಷ ಅಕ್ಟೋಬರ್ ನಲ್ಲಿ ಮತ್ತೊಮ್ಮೆ ಮಲ್ಯರನ್ನು ಬಂಧಿಸಲಾಗಿತ್ತು.

2018ರ ಡಿಸೆಂಬರ್ ನಲ್ಲಿ ವಿಜಯ್ ಮಲ್ಯ ಹಸ್ತಾಂತರಕ್ಕೆ ಯು.ಕೆ. ಕೋರ್ಟ್ ಆದೇಶ ನೀಡಿತ್ತು. ಆ ನಂತರ ಭಾರತದಲ್ಲಿನ ಪಿಎಂಎಲ್ ಎ ಕೋರ್ಟ್ ನಿಂದ ವಿಜಯ್ ಮಲ್ಯರನ್ನು ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಘೋಷಿಸಲಾಯಿತು.

English summary

Vijay Mallya Extradition Plea Dismissed By U.K. Court

Liquor baron Vijay Mallya extradition plea dismissed by U.K. court on April 20th. Here is the details.
Story first published: Monday, April 20, 2020, 19:04 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X