For Quick Alerts
ALLOW NOTIFICATIONS  
For Daily Alerts

ವಿಸ್ತಾರಾಗೆ 10 ಲಕ್ಷ ರೂ. ದಂಡ ವಿಧಿಸಿದ ಡಿಜಿಸಿಎ, ಕಾರಣವೇನು?

|

ವಿಮಾನಯಾನ ನಿಯಂತ್ರಕ ಡಿಜಿಸಿಎ ವಿಸ್ತಾರಾ ಏರ್‌ಲೈನ್ಸ್‌ಗೆ 10 ಲಕ್ಷ ರೂಪಾಯಿ ದಂಡ ವಿಧಿಸಿದೆ. ಕೆಲವೊಂದು ನಿಯಮಗಳನ್ನು ಪಾಲನೆ ಮಾಡದ ಆರೋಪದ ಮೇಲೆ ವಿಮಾನಯಾನ ನಿಯಂತ್ರಕ ಡಿಜಿಸಿಎ ವಿಸ್ತಾರಾ ಏರ್‌ಲೈನ್ಸ್‌ಗೆ ದಂಡವನ್ನು ವಿಧಿಸಿದೆ.

ವಿಮಾನಯಾನ ಸಂಸ್ಥೆಯು ಟೇಕ್‌ಆಫ್ ಮತ್ತು ಲ್ಯಾಂಡಿಂಗ್ ಕ್ಲಿಯರೆನ್ಸ್ ಅನ್ನು ಉಲ್ಲಂಘಿಸಿರುವುದರಿಂದ ದಂಡವನ್ನು ವಿಧಿಸಲಾಗಿದೆ ಎಂದು ಡಿಜಿಸಿಎ ಮಾಹಿತಿ ನೀಡಿದೆ. ವಿಸ್ತಾರಾ ಏರ್‌ಲೈನ್ಸ್ ಇಂದೋರ್‌ನಲ್ಲಿ ನಿಯಮ ಉಲ್ಲಂಘನೆ ಮಾಡಿದೆ ಎಂದು ತಿಳಿದು ಬಂದಿದೆ.

ಗೋ ಏರ್‌ ಇಂಡಿಯಾ ಐಪಿಒ: 3,600 ಕೋಟಿ ಸಂಗ್ರಹಕ್ಕೆ ಯೋಜನೆಗೋ ಏರ್‌ ಇಂಡಿಯಾ ಐಪಿಒ: 3,600 ಕೋಟಿ ಸಂಗ್ರಹಕ್ಕೆ ಯೋಜನೆ

ಮೇ 7 ರಂದು ರಾಂಚಿ ವಿಮಾನ ನಿಲ್ದಾಣದಲ್ಲಿ ವಿಶೇಷ ಚೇತನ ಮಗುವಿಗೆ ಬೋರ್ಡಿಂಗ್ ನಿರಾಕರಿಸಿದ್ದಕ್ಕಾಗಿ ಇಂಡಿಗೋ ಏರ್‌ಲೈನ್‌ಗೆ ಡಿಜಿಸಿಎ ಇತ್ತೀಚೆಗೆ ರೂ 5 ಲಕ್ಷ ದಂಡ ವಿಧಿಸಿದೆ. ಇದಾದ ಬಳಿಕ ಈಗ ವಿಸ್ತಾರಾ ಏರ್‌ಲೈನ್ಸ್‌ಗೆ ಡಿಜಿಸಿಎ ದಂಡ ವಿಧಿಸಿದೆ.

ವಿಸ್ತಾರಾಗೆ 10 ಲಕ್ಷ ರೂ. ದಂಡ ವಿಧಿಸಿದ ಡಿಜಿಸಿಎ, ಕಾರಣವೇನು?

ಇಂಡಿಗೋ ಮೇ 9 ರಂದು ಬಾಲಕನಿಗೆ ರಾಂಚಿ-ಹೈದರಾಬಾದ್ ವಿಮಾನವನ್ನು ಹತ್ತಲು ಅನುಮತಿ ನಿರಾಕರಿಸಲಾಗಿದೆ ಎಂದು ಹೇಳಿತ್ತು. ಹುಡುಗನಿಗೆ ಹತ್ತುವುದನ್ನು ನಿಷೇಧಿಸಿದ್ದರಿಂದ, ಅವನ ಜೊತೆಯಲ್ಲಿದ್ದ ಆತನ ಪೋಷಕರು ಕೂಡಾ ವಿಮಾನವನ್ನು ಹತ್ತದಿರಲು ನಿರ್ಧಾರ ಮಾಡಿದ್ದರು.

ಘಟನೆ ಕುರಿತು ತನಿಖೆ ನಡೆಸಲು ಡಿಜಿಸಿಎ ಮೇ 9ರಂದು ಮೂವರು ಸದಸ್ಯರ ತಂಡವನ್ನು ರಚಿಸಿತ್ತು. ಆ ಬಳಿಕ ದಂಡವನ್ನು ವಿಧಿಸಿತ್ತು. ಈಗ ವಿಸ್ತಾರಾ ಏರ್‌ಲೈನ್ಸ್ ವಿಮಾನಯಾನ ಸಂಸ್ಥೆಯು ಟೇಕ್‌ಆಫ್ ಮತ್ತು ಲ್ಯಾಂಡಿಂಗ್ ಕ್ಲಿಯರೆನ್ಸ್ ಅನ್ನು ಉಲ್ಲಂಘಿಸಿರುವುದರಿಂದ ದಂಡವನ್ನು ವಿಧಿಸಲಾಗಿದೆ.

English summary

Vistara Airline Fined Rs 10 Lakh by DGCA, Here's Reason

Vistara Airline Fined Rs 10 Lakh by DGCA, Here's Reason, To know Read on.
Story first published: Thursday, June 2, 2022, 13:36 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X