For Quick Alerts
ALLOW NOTIFICATIONS  
For Daily Alerts

ವೊಡಾಫೋನ್ ಇಂಡಿಯಾ- ಐಡಿಯಾ ಸೆಲ್ಯುಲಾರ್ ಒಟ್ಟಾಗಿ 'Vi' ಬ್ರ್ಯಾಂಡ್ ಅನಾವರಣ

|

ವೊಡಾಫೋನ್ ಇಂಡಿಯಾ ಹಾಗೂ ಐಡಿಯಾ ಸೆಲ್ಯುಲಾರ್ ಒಟ್ಟು ಸೇರಿ ಹೊಸದಾಗಿ ಕೆಲಸ ಶುರು ಮಾಡಲು ಸಮಯ ಇದು. ಎರಡು ಸಂಸ್ಥೆಗಳ ಜೋಡಣೆ ಆಗಿದ್ದು, ಒಟ್ಟಾಗಿ Vi ಎಂದು ಮತ್ತೆ ಬ್ರ್ಯಾಂಡಿಂಗ್ ಆರಂಭಿಸಲಾಗುವುದು ಎಂದು ವೊಡಾಫೋನ್ ಗ್ರೂಪ್ ಸಿಇಒ ನಿಕ್ ರೀಡ್ ಹೇಳಿದ್ದಾರೆ.

 

ಎರಡೂ ಸಂಸ್ಥೆಗಳ ವ್ಯವಹಾರ ಜೋಡಣೆ ಕಾರ್ಯ ಸಂಪೂರ್ಣವಾಗಿದೆ. ಈಗ ಹೊಸದಾಗಿ ಆರಂಭ ಮಾಡುವುದಕ್ಕೆ ಸಮಯ ಇದು. ಆದ್ದರಿಂದ Vi ಆರಂಭವಕ್ಕೆ ಸೂಕ್ತವಾದ ಸಂದರ್ಭ ಇದು. ಒಂದೇ ಕಂಪೆನಿಯು ವೊಡಾಫೋನ್ ಇಂಡಿಯಾ ಹಾಗೂ ಐಡಿಯಾದ ಸಾಮರ್ಥ್ಯವನ್ನು ಒದಗಿಸುತ್ತದೆ ಎಂದು ಸೋಮವಾರ Vi ಆರಂಭದ ವೇಳೆ ಅವರು ಹೇಳಿದರು.

ಎಜಿಆರ್ ಬಾಕಿ ಪಾವತಿಗೆ ಟೆಲಿಕಾಂ ಕಂಪೆನಿಗಳಿಗೆ ಹತ್ತು ವರ್ಷದ ಕಾಲಾವಕಾಶ

2G, 3G ಹಾಗೂ 4G ನೆಟ್ ವರ್ಕ್ ಜೋಡಣೆ ಮಾಡಲಾಗಿದೆ. ಈಗ ಒಟ್ಟಾಗಿರುವ ಬ್ರ್ಯಾಂಡ್ ಮೂಲಕ ಉತ್ಕೃಷ್ಟ ನೆಟ್ ವರ್ಕ್ ಅನುಭವ, ಉತ್ತಮ ಗ್ರಾಹಕ ಸೇವೆ ಹಾಗೂ ಪ್ರಮುಖ ಉತ್ಪನ್ನ ಮತ್ತು ಸೇವೆಯನ್ನು ಭಾರತದ ನಾಗರಿಕರು ಹಾಗೂ ವ್ಯವಹಾರಕ್ಕೆ ಒದಗಿಸಲಾಗುವುದು ಎಂದು ಅವರು ತಿಳಿಸಿದರು.

ವೊಡಾಫೋನ್ ಇಂಡಿಯಾ- ಐಡಿಯಾ ಸೆಲ್ಯುಲಾರ್ 'Vi' ಬ್ರ್ಯಾಂಡ್ ಅನಾವರಣ

2016ರಲ್ಲಿ ಟೆಲಿಕಾಂ ವಲಯಕ್ಕೆ ರಿಲಯನ್ಸ್ ಜಿಯೋ ಪ್ರವೇಶಿಸಿದ ಮೇಲೆ ವೊಡಾಫೋನ್ ಇಂಡಿಯಾ ಹಾಗೂ ಐಡಿಯಾ ನಷ್ಟ ಅನುಭವಿಸುತ್ತಿವೆ. ಇವೆರಡೂ ಕಂಪೆನಿಗಳು 2018ರಲ್ಲಿ ವಿಲೀನ ಆದವು. ಎರಡೂ ಕಂಪೆನಿಗಳು ಇದೀಗ ಸಂಪೂರ್ಣ ಒಟ್ಟಾಗಿದ್ದು, ಒಂದು ಬ್ರ್ಯಾಂಡ್ Vi ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತವೆ.

English summary

Vodafone Idea Is Now VI : The Telecom Company Monday Announced Its New Brand Identity

VI- This is the new brand launched by integrated Vodafone India and Idea Cellular on Monday.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X