For Quick Alerts
ALLOW NOTIFICATIONS  
For Daily Alerts

ಸರ್ಕಾರಕ್ಕೆ 3,354 ಕೋಟಿ ರುಪಾಯಿ ಪಾವತಿಸಿದ ವೊಡಾಫೋನ್-ಐಡಿಯಾ

|

ಈಗಾಗಲೇ ನಷ್ಟದಲ್ಲಿರುವ ದೇಶದ ಅಗ್ರಮಾನ್ಯ ಟೆಲಿಕಾಂ ಸಂಸ್ಥೆಗಳಾದ ವೊಡಾಫೋನ್-ಐಡಿಯಾ ಸರ್ಕಾರಕ್ಕೆ ಹೊಂದಾಣಿಕೆಯ ಒಟ್ಟು ಆದಾಯ (ಎಜಿಆರ್) ಬಾಕಿಯನ್ನು ಪಾವತಿಸಿದೆ.

ಸೋಮವಾರ(ಮಾರ್ಚ್ 16)ರಂದು 3,354 ಕೋಟಿ ರುಪಾಯಿ ಎಜಿಆರ್‌ ಅನ್ನು ಪಾವತಿ ಮಾಡಿದ್ದು, ಇದುವರೆಗೂ ಒಟ್ಟಾರೆ 6,854 ಕೋಟಿ ರುಪಾಯಿಗಳಷ್ಟು ಎಜಿಆರ್‌ ಅನ್ನು ಕಂಪನಿ ಪಾವತಿ ಮಾಡಿದೆ.

ಸರ್ಕಾರಕ್ಕೆ 3,354 ಕೋಟಿ ರುಪಾಯಿ ಪಾವತಿಸಿದ ವೊಡಾಫೋನ್-ಐಡಿಯಾ

ವೊಡಾಫೋನ್-ಐಡಿಯಾ ಒಟ್ಟಾರೆ ಬಡ್ಡಿ ಸಹಿತ 53,000 ಕೋಟಿ ರುಪಾಯಿ ಎಜಿಆರ್ ಪಾವತಿ ಮಾಡಬೇಕಿದೆ. ಟೆಲಿಕಾಂ ಸಂಸ್ಥೆಗಳು ನೀಡಬೇಕಿರುವ ಬಾಕಿ ವಿಚಾರವಾಗಿ ವೊಡಾಫೋನ್-ಐಡಿಯಾ ಸಂಸ್ಥೆ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಈ ಹಿಂದೆ ಸುಪ್ರೀಂಕೋರ್ಟ್ ತಿರಸ್ಕರಿಸಿತ್ತು. ಈ ಹಿನ್ನೆಲೆ ಎರಡು ಕಂತುಗಳ ರೂಪದಲ್ಲಿ ಈ ಹಿಂದೆ 3,500 ಕೋಟಿ ರುಪಾಯಿ ಪಾವತಿ ಮಾಡಿತ್ತು.

4,729 ಕೋಟಿ ರುಪಾಯಿ ಸ್ಪೆಕ್ಟ್ರಂ ಶುಲ್ಕ ಬಾಕಿ ಮತ್ತು 28,309 ಕೋಟಿ ರುಪಾಯಿ ಪರವಾನಗಿ ಶುಲ್ಕ ಒಳಗೊಂಡಂತೆ ಸುಮಾರು 53,038 ಕೋಟಿ ರುಪಾಯಿಗಳನ್ನು ವೊಡಾಫೋನ್ ಐಡಿಯ ಸರ್ಕಾರಕ್ಕೆ ಪಾವತಿಸಬೇಕಿದೆ.

English summary

Vodafone Idea Pays Govt Rs 3354 Crore As AGR Due

Vodafone Idea on Monday paid a further amount of Rs 3,354 crore to the Dot as the balance part of principal amount towards AGR
Story first published: Tuesday, March 17, 2020, 9:05 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X