For Quick Alerts
ALLOW NOTIFICATIONS  
For Daily Alerts

ವೊಡಾಫೋನ್ ಐಡಿಯಾ ಷೇರಿನ ಮೌಲ್ಯ 25 ಪರ್ಸೆಂಟ್ ಏರಿಕೆ

|

ಸರ್ಚಿಂಗ್ ದೈತ್ಯ ಗೂಗಲ್, ಬ್ರಿಟಿಷ್ ಟೆಲಿಕಾಂ ಗ್ರೂಪ್ ವೊಡಾಫೋನ್ ಐಡಿಯಾ ವ್ಯವಹಾರದಲ್ಲಿ ಅಲ್ಪ ಪಾಲನ್ನು ತೆಗೆದುಕೊಳ್ಳಲು ಯೋಜಿಸುತ್ತಿದೆ ಎಂದು ವರದಿಯಾದ ಬಳಿಕ ಇಂದು (ಮೇ 29) ವೊಡಾಫೋನ್ ಐಡಿಯಾ ಷೇರಿನ ಮೌಲ್ಯ 25 ಪರ್ಸೆಂಟ್‌ವರೆಗೂ ಏರಿಕೆಯಾಗಿದೆ.

ವೊಡಾಫೋನ್ ಐಡಿಯಾ ಪಾಲಿನ ಮೇಲೆ ಗೂಗಲ್ ಕಣ್ಣುವೊಡಾಫೋನ್ ಐಡಿಯಾ ಪಾಲಿನ ಮೇಲೆ ಗೂಗಲ್ ಕಣ್ಣು

ಗುರುವಾರ ಮಾರುಕಟ್ಟೆ ಕೊನೆಗೊಂಡಾಗ ವೊಡಾಫೋನ್‌ ಐಡಿಯಾ ಷೇರಿನ ಮೌಲ್ಯ 5.82 ರುಪಾಯಿಗಳಷ್ಟಿತ್ತು. ಆದರೆ ಗೂಗಲ್ ವೊಡಾಫೋನ್ ಐಡಿಯಾ ಮೇಲೆ ಹೂಡಿಕೆ ಮಾಡಲಿದೆ ಎಂದು ಸುದ್ದಿ ಹರಿದಾಡಿದರ ಪರಿಣಾಮ ಶುಕ್ರವಾರ 7.80 ರುಪಾಯಿವರೆಗೂ ಏರಿಕೆ ದಾಖಲಿಸಿದೆ.

ವೊಡಾಫೋನ್ ಐಡಿಯಾ ಷೇರಿನ ಮೌಲ್ಯ 25 ಪರ್ಸೆಂಟ್ ಏರಿಕೆ

ಇತ್ತೀಚೆಗೆ ಫೇಸ್​ಬುಕ್,​ ರಿಲಯನ್ಸ್​ ಜಿಯೋ ಕಂಪನಿಯ ಶೇ.9.99 ಷೇರನ್ನು 5.7 ಬಿಲಿಯನ್​ ಡಾಲರ್​ (43,574 ಕೋಟಿ ರೂ.) ನೀಡಿ ಖರೀದಿ ಮಾಡಿತ್ತು. ಗೂಗಲ್​ ವೊಡಾಫೋನ್​ ಐಡಿಯಾ ಟೆಲಿಕಾಂ ಕಂಪನಿಯ 5 ಪರ್ಸೆಂಟ್‌ರಷ್ಟು ಷೇರನ್ನು ಖರೀದಿ ಮಾಡಲು ನಿರ್ಧರಿಸಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ. ಈ ಹಿನ್ನೆಲೆಯಲ್ಲಿ ಷೇರುಪೇಟೆಯಲ್ಲಿ ವೊಡಾಪೋನ್-ಐಡಿಯಾ ಷೇರು ಖರೀದಿಗೆ ಹೂಡಿಕೆದಾರರು ಮುಗಿಬಿದ್ದಿದ್ದಾರೆ.

English summary

Vodafone Idea Surges 25 Percent

Vodafone idea surges 25 Percent On reports of google eyeing a stake
Story first published: Friday, May 29, 2020, 12:45 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X