For Quick Alerts
ALLOW NOTIFICATIONS  
For Daily Alerts

ವಿ ಹೀರೊ ಅನ್‍ಲಿಮಿಟೆಡ್ ಯೋಜನೆಗಾಗಿ ಹೊಸ ಅಭಿಯಾನ

|

ಅಗ್ರಗಣ್ಯ ದೂರಸಂಪರ್ಕ ಸೇವಾ ಸಂಸ್ಥೆಯಾದ ವಿ ತನ್ನ 'ವಿ ಹೀರೊ ಅನ್‍ಲಿಮಿಟೆಡ್ ಪ್ಲಾನ್'ಗಾಗಿ ವಿಶೇಷ ಪ್ರಚಾರ ಅಭಿಯಾನವನ್ನು ಅನಾವರಣಗೊಳಿಸಿದೆ. ಈ ಅಭಿಯಾನದಲ್ಲಿ ಜನಪ್ರಿಯ ನಟ ವಿನಯ್ ಪಾಠಕ್ ನಾಯಕನಾಗಿ ನಟಿಸಿದ್ದು, ಗ್ರಾಹಕರು ಎದುರಿಸುವ ಡಾಟಾ ಕೋಟಾ ಮುಕ್ತಾಯವಾಗುವ ನಿರಂತರ ಸಮಸ್ಯೆಗೆ ವಿ ಹೀರೊ ಅನ್‍ಲಿಮಿಟೆಡ್ ಪ್ಲಾನ್‍ಗಳನ್ನು ಪರಿಹಾರವಾಗಿ ನೀಡುತ್ತಾರೆ.

 

ವಿ ಹೀರೊ ಅನ್‍ಲಿಮಿಟೆಡ್ ಯೋಜನೆಯ ಮೂರು ಪ್ರಮುಖ ವಿಶೇಷತೆಗಳನ್ನು ಅಂದರೆ ವಾರಾಂತ್ಯ ಡಾಟಾ ಮುಂದುವರಿಸುವಿಕೆ, ಮಧ್ಯರಾತ್ರಿ 12ರಿಂದ ಮುಂಜಾನೆ 6ರವರೆಗೆ ಉಚಿತ ಡಾಟಾ ಮತ್ತು ದುಪ್ಪಟ್ಟು ಡಾಟಾ ಹೀಗೆ ಒಂದೇ ಛತ್ರಿಯಡಿ ಎಲ್ಲ ಸೌಲಭ್ಯಗಳು ಲಭ್ಯವಿರುವುದನ್ನು ಈ ಪ್ರಚಾರ ಅಭಿಯಾನ ಬಿಂಬಿಸುತ್ತದೆ. ಹೀಗೆ ಗ್ರಾಹಕರಿಗೆ ಚಿಂತೆ ಮುಕ್ತವಾದ ಮೊಬೈಲ್ ಇಂಟರ್‍ನೆಟ್ ಅನುಭವವನ್ನು ಖಾತರಿಪಡಿಸುತ್ತದೆ.

ಕೋವಿಡ್-19 ಸಾಂಕ್ರಾಮಿಕ, ಮನೆಯಿಂದಲೇ ಉದ್ಯೋಗ ನಿರ್ವಹಿಸುವುದು, ಮನೆಯಿಂದಲೇ ಕಲಿಕೆ, ಮನೆಯಿಂದಲೇ ಮನೊರಂಜನೆಯಂಥ ಅಂಶಗಳಿಂದಾಗಿ ಇಂಟರ್‍ನೆಟ್ ಬಳಕೆ ಗಣನೀಯವಾಗಿ ಹೆಚ್ಚಿದೆ. ವಿ ಒದಗಿಸುವ ವಿಭಿನ್ನ ಕೊಡುಗೆಗಳು ಗ್ರಾಹಕರ ಪ್ಯಾಕ್‍ಗಳಲ್ಲಿ ಡಾಟಾ ಎಂದೂ ಮುಗಿಯದಂತೆ ಮಾಡುತ್ತವೆ. ವಿಶಿಷ್ಟ ಗ್ರಾಹಕ ಪ್ರಸ್ತಾವದ ಸ್ಥಾನವನ್ನು ಹೊಂದಿರುವ ವಿ ಹೀರೊ ಅನ್‍ಲಿಮಿಟೆಡ್ ಪ್ರಚಾರ ಅಭಿಯಾನ ವಿ 4ಜಿ ಗಿಗಾನೆಟ್‍ನ ಅಪರಿಮಿತ ಸಾಧ್ಯತೆಗಳನ್ನು ಮನೆಗಳಿಗೆ ಒಯ್ಯಲು ಚಾಲನೆ ನೀಡುವಂತೆ ಕೋರಲಿದೆ. ಈ ಮೂಲಕ ಗ್ರಾಹಕರು ಡಿಜಿಟಲ್ ಪರಿಸರದಲ್ಲಿ ಬೆಳೆಯಲು ಅನುವು ಮಾಡಿಕೊಡಲಿದೆ.

ವಿ ಹೀರೊ ಅನ್‍ಲಿಮಿಟೆಡ್ ಯೋಜನೆಗಾಗಿ ಹೊಸ ಅಭಿಯಾನ

ಈ ಅಭಿಯಾನದ ಬಗ್ಗೆ ಮಾತನಾಡಿದ ವಿ ಮುಖ್ಯ ಮಾರುಕಟ್ಟೆ ಅಧಿಕಾರಿ ಅವನೀಶ್ ಖೋಸ್ಲಾ, "ಮೊಬೈಲ್ ಡಾಟಾ ನಮಗೆಲ್ಲರಿಗೂ ಮೂಲಭೂತ ಅಗತ್ಯತೆಯಾಗಿ ಪರಿಣಮಿಸಿದೆ. ಅದರಲ್ಳೂ ಪ್ರಸ್ತುತ ಸನ್ನಿವೇಶದಲ್ಲಿ ಇದು ಹೆಚ್ಚು ಅನಿವಾರ್ಯವಾಗಿಬಿಟ್ಟಿದೆ. ನಮ್ಮ ವಿ ಹೀರೊ ಅನ್‍ಲಿಮಿಟೆಡ್‍ಗಾಗಿ ನಡೆಯುವ ಪ್ರಚಾರ ಅಭಿಯಾನದ ಮೂಲಕ, ಬಹುತೇಕ ಗ್ರಾಹಕರು ಎದುರಿಸುವ ಸಮಸ್ಯೆಯಾದ ಡಾಟಾ ಕೋಟಾ ಮುಗಿಯುವ ಸಮಸ್ಯೆಯ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದೇವೆ. ಜತೆಗೆ ನಮ್ಮ ಹೊಚ್ಚ ಹೊಸ ಕೊಡುಗೆಗಳು ಇದಕ್ಕೆ ಪರಿಹಾರ ಒದಗಿಸುವ ಮೂಲಕ ಹೇಗೆ ನಿಮ್ಮ ಚಿಂತೆಯನ್ನು ದೂರ ಮಾಡಬಲ್ಲವು ಎನ್ನುವುದನ್ನು ಬಿಂಬಿಸುತ್ತದೆ. ಅನಿಯಮಿತ ರಾತ್ರಿ ಅವಧಿಯ ಡಾಟಾ, ವಾರಾಂತ್ಯದ ಡಾಟಾ ಮುಂದುವರಿಕೆ ಮತ್ತು ದುಪ್ಪಟ್ಟು ಡಾಟಾದಂಥ ವಿಶೇಷತೆಗಳೊಂದಿಗೆ ಇದು ಹೀರೊ ಉತ್ಪನ್ನವಾಗಿದೆ ಎನ್ನುವುದು ನಮ್ಮ ಬಲವಾದ ನಂಬಿಕೆ. ಇದು ಪ್ರಿಪೆಯ್ಡ್ ವಲಯದ 4ಜಿ ಬಳಕೆದಾರರಿಗೆ ಪರಿಪೂರ್ಣ ಆಯ್ಕೆಯಾಗಲಿದೆ ಎಂಬ ನಿರೀಕ್ಷೆ ನಮ್ಮದು. ಈ ಮೂಲಕ ನಿಯತವಾದ ಸಂಪರ್ಕವನ್ನು ಸದಾ ಖಾತರಿಪಡಿಸುತ್ತಿದ್ದೇವೆ" ಎಂದು ಹೇಳಿದರು.

 

ಡಾಟಾ ಮುಗಿದು ಸಂಪರ್ಕ ಕಡಿತಗೊಂಡು ಹತಾಶ ಸ್ಥಿತಿಗೆ ತಲುಪಿದ ಯುವಕನಿಗೆ ವಿನಯ್ ಪಾಠಕ್ ವಿ ಹೀರೊ ಅನ್‍ಲಿಮಿಟೆಡ್- ಸಿರ್ಫ್ ನಾಮ್ ಕಾ ನಹೀನ್, ಕಾಮ್ ಕಾ ಅನ್‍ಲಿಮಿಟೆಡ್ ಶಿಫಾರಸ್ಸು ಮಾಡುವುದನ್ನು ಬಿಂಬಿಸಿದೆ. ನಿರಂತರವಾಗಿ ಮುಂದುವರಿಯುವ ಸಂಪರ್ಕಕ್ಕಾಗಿ ಮತ್ತು ಮೊಬೈಲ್ ಇಂಟರ್‍ನೆಟ್ ಅನುಭವಕ್ಕಾಗಿ ಇರುವ ಸ್ಮಾರ್ಟ್ ಆಯ್ಕೆ ಇದು ಎಂದು ಪಾಠಕ್ ಶಿಫಾರಸ್ಸು ಮಾಡುತ್ತಿದ್ದಾರೆ. ಈ ಮೂಲಕ ವಿ ತನ್ನ ಅಪರಿಮಿತ ಪ್ಲಾನ್ ಗ್ರಾಹಕರಿಗೆ ಹೆಚ್ಚಿನ ಮೌಲ್ಯವನ್ನು ಒದಗಿಸಲು ಉದ್ದೇಶಿಸಿದೆ. ಈ ವಿಶಿಷ್ಟ ಪ್ರಸ್ತಾವವು, ಹೊಸ ಬಳಕೆದಾರರನ್ನು ವಿ ಜಾಲಕ್ಕೆ ಆಕರ್ಷಿಸುವ ಮೂಲಕ ಅನಿಯಮಿತ ಮತ್ತು 4ಜಿ ಗ್ರಾಹಕರ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸುವ ಗುರಿಯನ್ನು ಹೊಂದಿದೆ.

ವಿ ಹೀರೊ ಅನ್‍ಲಿಮಿಟೆಡ್ ಪ್ರಯೋಜನವನ್ನು ಗ್ರಾಹಕರು ರೂ. 249 ಅಥವಾ ಅಧಿಕ ಮೊತ್ತದ ರೀಚಾರ್ಜ್‍ನೊಂದಿಗೆ ಪಡೆಯಬಹುದಾಗಿದೆ.

* ವಾರಾಂತ್ಯದ ಡಾಟಾ ಮುಂದುವರಿಕೆ: ಈ ವಿಶೇಷ ಸೌಲಭ್ಯವು ವಾರದ ದಿನಗಳಲ್ಲಿ ಗ್ರಾಹಕರು ಬಳಸದೇ ಉಳಿಸಿಕೊಂಡ ಡಾಟಾವನ್ನು ಕ್ರೋಢೀಕರಿಸಿಕೊಳ್ಳಲು ಅವಕಾಶ ನೀಡುತ್ತದೆ. ಇದನ್ನು ವಾರಾಂತ್ಯದಲ್ಲಿ ಬಳಸಿಕೊಳ್ಳಲು ಅವಕಾಶ ಕಲ್ಪಿಸಿಕೊಡಲಾಗಿದೆ.

* ರಾತ್ರಿಯ ವೇಳೆ ಉಚಿತ ಡಾಟಾ- ಮಧ್ಯರಾತ್ರಿ 12 ರಿಂದ ಮುಂಜಾನೆ 6 ರವರೆಗೆ: ಪ್ರಿಪೆಯ್ಡ್ ಗ್ರಾಹಕರು ಅಪರಿಮಿತ ಹೈಸ್ಪೀಡ್ ಡಾಟಾ ಸಂಪರ್ಕವನ್ನು ರಾತ್ರಿಯ ವೇಳೆ ಯಾವುದೇ ನಿರ್ಬಂಧಗಳಿಲ್ಲದೇ ಹೊಂದಬಹುದಾಗಿದೆ. ಮಧ್ಯರಾತ್ರಿ 12 ರಿಂದ ಮುಂಜಾನೆ 6 ರವರೆಗೆ ಬಳಸುವ ಈ ಹೈಸ್ಪೀಡ್ ಡಾಟಾ ಸಂಪೂರ್ಣ ಉಚಿತವಾಗಿರುತ್ತದೆ.

* ದುಪ್ಪಟ್ಟು ಡಾಟಾ: ಈ ಹೆಸರಿಗೆ ತಕ್ಕಂತೆ ನಿಜವಾಗಿಯೂ, ಈ ಯೋಜನೆಯು ಪ್ರತಿದಿನ 2 + 2= 4ಜಿಬಿ ಡಾಟಾವನ್ನು 28 ದಿನ, 56 ದಿನಗಳು ಮತ್ತು 86 ದಿನಗಳಿಗೆ ಒದಗಿಸುತ್ತದೆ. ಈ ಯೋಜನೆಗಳು ಪ್ರತಿದಿನ 100 ಉಚಿತ ಎಸ್‍ಎಂಎಸ್ ಸೌಲಭ್ಯವನ್ನು ಕೂಡಾ ನೀಡುತ್ತದೆ.

ರೂ. 249 ಮತ್ತು ಅದಕ್ಕಿಂತ ಮೇಲ್ಪಟ್ಟ ಎಲ್ಲ ರೀಚಾರ್ಜ್‍ಗಳು ವಾರಾಂತ್ಯ ಡಾಟಾ ಮುಂದುವರಿಕೆ ಸೇವೆಯನ್ನು ಒದಗಿಸುತ್ತವೆ ಮತ್ತು ರಾತ್ರಿ ಅವಧಿಯ ಉಚಿತ ಡಾಟಾ ಸೌಕರ್ಯವನ್ನು ಕಲ್ಪಿಸುತ್ತವೆ. ರೂ. 299, ರೂ. 499 ಮತ್ತು ರೂ. 699 ಮೌಲ್ಯದ ಎಲ್ಲ ರೀಚಾರ್ಜ್‍ಗಳ ಮೇಲೆ ಗ್ರಾಹಕರು ದುಪ್ಪಟ್ಟು ಡಾಟಾ ಸೌಲಭ್ಯವನ್ನು ಪಡೆಯಲು ಅರ್ಹರಾಗಿರುತ್ತಾರೆ. ಇದರ ಜತೆಗೆ ವಾರಾಂತ್ಯಕ್ಕೆ ಡಾಟಾ ಮುಂದುವರಿಸುವುದು ಮತ್ತು ರಾತ್ರಿ ವೇಳೆ ಉಚಿತ ಡಾಟಾ ಸೇವೆಯ ಸೌಲಭ್ಯವನ್ನು ಕೂಡಾ ಗ್ರಾಹಕರು ಪಡೆದುಕೊಳ್ಳಬಹುದಾಗಿದೆ.

English summary

Vodafone Idea : 'Vi Hero Unlimited' Plan- New Campaign

Leading telecom services provider, Vi, has unveiled a new campaign focusing on Vi Hero Unlimited plans.
Story first published: Sunday, July 25, 2021, 10:43 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X