For Quick Alerts
ALLOW NOTIFICATIONS  
For Daily Alerts

ಲಾಕ್‌ಡೌನ್‌ನಲ್ಲಿ ವೇತನ: ಉದ್ಯೋಗಿ, ಉದ್ಯೋಗದಾತರಿಗೆ ಸಂಬಂಧಿಸಿದ್ದು ಎಂದ ಕೇಂದ್ರ

|

ನವದೆಹಲಿ, ಮೇ 4: ಲಾಕ್‌ಡೌನ್ ಅವಧಿಯಲ್ಲಿ ಕಾರ್ಮಿಕರಿಗೆ ವೇತನ ಪಾವತಿಸುವ ವಿಚಾರ ಉದ್ಯೋಗದಾತರು ಮತ್ತು ನೌಕರರ ನಡುವಿನ ವಿಷಯವಾಗಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

 

ನಾವು ಈ ವಿಷಯದಲ್ಲಿ ಮಧ್ಯಪ್ರವೇಶಿಸಲು ಬಯಸುವುದಿಲ್ಲ ಎಂದು ಗುರುವಾರ ಕೇಂದ್ರ ಸರ್ಕಾರ ಹೇಳಿದೆ. ಲಾಕ್‌ಡೌನ್ ಸಮಯದಲ್ಲಿ ಉದ್ಯೋಗಿಗಳಿಗೆ ಪೂರ್ಣ ವೇತನ ಪಾವತಿಸಲು ಕಂಪೆನಿಗಳಿಗೆ ಕೇಂದ್ರ ಸರ್ಕಾರದ ಕಾರ್ಮಿಕ ಸಚಿವಾಲಯ ಈ ಹಿಂದೆ ನಿರ್ದೇಶನ ನೀಡಿರುವ ಕೆಲ ದಿನಗಳ ನಂತರ ಈ ವ್ಯತಿರಿಕ್ತ ಹೇಳಿಕೆ ಬಂದಿದೆ.

 

ಕಾರ್ಮಿಕ ಕಾನೂನುಗಳು ದುರ್ಬಲಗೊಳ್ಳುತ್ತಿರುವುದು ಆಘಾತವನ್ನುಂಟುಮಾಡಿದೆ: ಅಜೀಮ್ ಪ್ರೇಮ್‌ಜಿಕಾರ್ಮಿಕ ಕಾನೂನುಗಳು ದುರ್ಬಲಗೊಳ್ಳುತ್ತಿರುವುದು ಆಘಾತವನ್ನುಂಟುಮಾಡಿದೆ: ಅಜೀಮ್ ಪ್ರೇಮ್‌ಜಿ

ಆರ್ಥಿಕತೆಯು ಪುನರಾರಂಭಗೊಳ್ಳಬೇಕೆಂದು ನಾವು ಬಯಸುತ್ತೇವೆ. ಈ ಹಿಂದೆ ಕಾರ್ಮಿಕರು ಮನೆಗಳಿಗೆ ತೆರಳದಿರಲಿ. ಮಾನವೀಯತೆಯ ಆಧಾರದ ಮೇಲೆ ಉದ್ಯೋಗದಾತರು ನಡೆದುಕೊಳ್ಳಬೇಕು ಎಂದು ಪೂರ್ಣ ವೇತನ ನೀಡುವಂತೆ ಹೇಳಲಾಗಿತ್ತು. ಆದರೆ, ಕೆಲ ಉದ್ಯೋಗದಾತರು ನಷ್ಟದ ಸುಳಿಯಲ್ಲಿ ಸಿಲುಕಿರುವುದರಿಂದ ಲಾಕ್‌ಡೌನ್ ಅವಧಿಯಲ್ಲಿ ಎಷ್ಟು ವೇತನವನ್ನು ಪಾವತಿಸಬಹುದೆಂದು ಉದ್ಯೋಗದಾತರು ತಮ್ಮ ನೌಕರರೊಂದಿಗೆ ಮಾತುಕತೆ ನಡೆಸಬೇಕು ಎಂದು ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ನ್ಯಾಯಾಲಯಕ್ಕೆ ಮನವರಿಕೆ ಮಾಡಿ ಕೊಟ್ಟಿದ್ದಾರೆ.

ಲಾಕ್‌ಡೌನ್‌ನಲ್ಲಿ ವೇತನ: ಕೇಂದ್ರ ಸರ್ಕಾರದ ಮಹತ್ವದ ತೀರ್ಮಾನ

ಲಾಕ್ ಡೌನ್ ಅವಧಿಯಲ್ಲಿ ಸಣ್ಣ ಕೈಗಾರಿಕೆಗಳು ಕಾರ್ಮಿಕರಿಗೆ ಶೇಕಡಾ 100 ರಷ್ಟು ವೇತನವನ್ನು ನೀಡಬೇಕೆಂದು ಮಾರ್ಚ್ 29 ರ ಅಧಿಸೂಚನೆಯಲ್ಲಿ ಸುಪ್ರೀಂಕೋರ್ಟ್ ಸೂಚಿಸಿತ್ತು.

English summary

Wages Matter Is Between Employer And Employee: Union Government Tells SC

lockdown Wages: This Matter Is Between Employer And Employee Union Government Tells Supreme Court On Thursday.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X