For Quick Alerts
ALLOW NOTIFICATIONS  
For Daily Alerts

2027ರ ವೇಳೆಗೆ, ಭಾರತದಲ್ಲೇ ಉತ್ಪಾದಿಸಿದ 10 ಬಿಲಿಯನ್ ಡಾಲರ್ ಮೌಲ್ಯದ ಉತ್ಪನ್ನಗಳ ರಫ್ತಿಗೆ ವಾಲ್‌ಮಾರ್ಟ್ ಸಂಕಲ್ಪ

|

ಉತ್ಪಾದನಾ ಕ್ಷೇತ್ರದಲ್ಲಿ ಭಾರತ ಜಾಗತಿಕ ಹಬ್ ಆಗಿ ಮುಂದುವರಿಯುವ ಪಣತೊಟ್ಟಿರುವ ವಾಲ್‌ಮಾರ್ಟ್, 2027 ರ ವೇಳೆಗೆ ಪ್ರತಿ ವರ್ಷ ಭಾರತದಲ್ಲೇ ಉತ್ಪಾದಿಸಿದ 10 ಬಿಲಿಯನ್ ಡಾಲರ್‍ನಷ್ಟು ಉತ್ಪನ್ನಗಳನ್ನು ರಫ್ತು ಮಾಡುವ ಸಂಕಲ್ಪದೊಂದಿಗೆ ತನ್ನ ಒಟ್ಟಾರೆ ರಫ್ತು ಪ್ರಮಾಣವನ್ನು ಮೂರು ಪಟ್ಟು ಹೆಚ್ಚಿಸಿಕೊಳ್ಳುವುದಾಗಿ ಘೋಷಣೆ ಮಾಡಿದೆ.

 

ಪ್ರಸ್ತುತ ವಾಲ್‍ಮಾರ್ಟ್‍ನ ಹೊಸ ರಫ್ತು ಬದ್ಧತೆಯಿಂದಾಗಿ ಭಾರತದಲ್ಲಿನ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳು (ಎಂಎಸ್‍ಎಂಇಗಳು) ಗಣನೀಯ ಪ್ರಮಾಣದಲ್ಲಿ ಉನ್ನತಿ ಪಡೆಯಲಿವೆ ಎಂಬ ನಿರೀಕ್ಷೆಗಳು ಇವೆ. ಇದರ ಜೊತೆಗೆ ಫ್ಲಿಪ್‍ಕಾರ್ಟ್ ಸಮರ್ಥ್ ಮತ್ತು ವಾಲ್‍ಮಾರ್ಟ್ ವೃದ್ಧಿ ಪೂರೈಕೆದಾರರ ಬೆಳವಣಿಗೆ ಕಾರ್ಯಕ್ರಮಗಳ ಮೂಲಕ ಪ್ರಗತಿ ಸಾಧಿಸುವ ಗುರಿ ಹೊಂದಲಾಗಿದೆ.

 

ಆಹಾರ, ಔಷಧಿ, ಗ್ರಾಹಕ ಬಳಕೆ ಉತ್ಪನ್ನಗಳು, ಆರೋಗ್ಯ ಮತ್ತು ಕ್ಷೇಮ ಹಾಗೂ ಸಾಮಾನ್ಯ ವ್ಯಾಪಾರಗಳು ಸೇರಿದಂತೆ ಇನ್ನಿತರೆ ವ್ಯವಹಾರಗಳ ನೂರಾರು ಹೊಸ ಪೂರೈಕೆದಾರರಿಗೆ ಬೆಳವಣಿಗೆ ಹೊಂದಲು ವಾಲ್‍ಮಾರ್ಟ್‍ನ ಈ ವಿಸ್ತರಣೆ ಕಾರ್ಯಕ್ರಮ ನೆರವಾಗಲಿದೆ. ಇದಷ್ಟೇ ಅಲ್ಲದೇ, ಜವಳಿ, ಹೋಂವೇರ್ ಮತ್ತು ಇತರೆ ಪ್ರಮುಖ ಭಾರತೀಯ ರಫ್ತು ವಿಭಾಗಗಳಿಗೂ ನೆರವು ಸಿಗಲಿದೆ.

ಮೇಡ್ ಇನ್ ಇಂಡಿಯಾ ಉತ್ಪನ್ನಗಳ ರಫ್ತಿಗೆ ವಾಲ್‌ಮಾರ್ಟ್ ಹೆಚ್ಚಿನ ಆದ್ಯತೆ

ವಾಲ್‍ಮಾರ್ಟ್ ಇಂಕ್‍ನ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡೌಗ್ ಮ್ಯಾಕ್‍ಮಿಲನ್ ಅವರು ಮಾತನಾಡಿ, ಅಂತಾರಾಷ್ಟ್ರೀಯ ರೀಟೇಲರ್ ಆಗಿರುವ ನಮ್ಮ ಸಂಸ್ಥೆಯು ವಿಶ್ವದಾದ್ಯಂತ ಗ್ರಾಹಕರು ಮತ್ತು ಸಮುದಾಯಗಳಿಗೆ ಮೌಲ್ಯವನ್ನು ತಂದುಕೊಡುತ್ತದೆ. ಜಾಗತಿಕ ಮಟ್ಟದಲ್ಲಿ ರೀಟೇಲ್ ಕ್ಷೇತ್ರದ ಯಶಸ್ಸಿಗೆ ಸ್ಥಳೀಯ ಉದ್ಯಮಿಗಳು ಮತ್ತು ತಯಾರಕರು ಪ್ರಮುಖ ಪಾತ್ರ ವಹಿಸುತ್ತಾರೆ ಎಂಬುದನ್ನು ವಾಲ್‍ಮಾರ್ಟ್ ಅರ್ಥ ಮಾಡಿಕೊಂಡಿದೆ. ಮುಂಬರುವ ವರ್ಷಗಳಲ್ಲಿ ನಮ್ಮ ವಾರ್ಷಿಕ ಭಾರತ ರಫ್ತುಗಳನ್ನು ಗಣನೀಯ ಪ್ರಮಾಣದಲ್ಲಿ ವೇಗಗೊಳಿಸಲಿದ್ದೇವೆ. ಈ ಮೂಲಕ ನಾವು ಮೇಕ್ ಇನ್ ಇಂಡಿಯಾ ಉಪಕ್ರಮವನ್ನು ಬೆಂಬಲಿಸುತ್ತಿದ್ದೇವೆ ಮತ್ತು ಹೆಚ್ಚಿನ ಸ್ಥಳೀಯ ವ್ಯವಹಾರಗಳು ಅಂತಾರಾಷ್ಟ್ರೀಯ ಗ್ರಾಹಕರನ್ನು ತಲುಪಲು ಸಹಾಯ ಮಾಡುತ್ತಿದ್ದೇವೆ. '' ಎಂದು ಅವರು ಹೇಳಿದರು.

ಭಾರತದ ತನ್ನ ರಫ್ತು ಉತ್ಪನ್ನಗಳ ಪ್ರಮಾಣವನ್ನು ಹೆಚ್ಚು ಮಾಡುವ ಮತ್ತು ಈಗಾಗಲೇ ಅಸ್ತಿತ್ವದಲ್ಲಿರುವ ರಫ್ತುದಾರರನ್ನು ಉತ್ತೇಜಿಸುವ ಮೂಲಕ ಹಾಗೂ ದೇಶದ ರಫ್ತು ಸಿದ್ಧವಾದ ವ್ಯವಹಾರಗಳನ್ನು ವಿಸ್ತರಿಸುವುದರೊಂದಿಗೆ ವಾಲ್‍ಮಾರ್ಟ್ ಭಾರತದಲ್ಲಿ ತನ್ನ ಪೂರೈಕೆ ಸರಪಳಿಯ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸುವತ್ತ ಗಮನಹರಿಸಿದೆ.

English summary

Walmart commits to exporting $10 billion of India-made goods each year by 2027

Walmart is planning to export 10 billion us dollar worth of india made goods by 2027
Story first published: Thursday, December 10, 2020, 18:06 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X