For Quick Alerts
ALLOW NOTIFICATIONS  
For Daily Alerts

ಟಾಟಾ ಕಂಪೆನಿ 'ಸೂಪರ್ ಆಪ್'ನಲ್ಲಿ ವಾಲ್ ಮಾರ್ಟ್ 20 ಬಿಲಿಯನ್ ಹೂಡಿಕೆ ಮಾತುಕತೆ

|

ಭಾರತದ ಟಾಟಾ ಕಂಪೆನಿ ಕಾಣದ ಸ್ಥಳವೇ ಇಲ್ಲ. ಉಪ್ಪಿನಿಂದ ಆರಂಭವಾಗಿ ಸಾಫ್ಟ್ ವೇರ್ ರಫ್ಟಿನ ತನಕ ಬಿಜಿನೆಸ್ ಗಳ 'ದಾದಾ' ಆಗಿರುವ ಟಾಟಾ ಸಮೂಹದ "ಸೂಪರ್ ಆಪ್"ನಲ್ಲಿ 2500 ಕೋಟಿ ಅಮೆರಿಕನ್ ಡಾಲರ್ ತನಕ ಹೂಡಿಕೆ ಮಾಡಲು ವಾಲ್ ಮಾರ್ಟ್ ಕಂಪೆನಿ ಮಾತುಕತೆ ನಡೆಸಿದೆ ಎಂದು ಈ ಬೆಳವಣಿಗೆ ಬಗ್ಗೆ ಮಾಹಿತಿ ಇರುವವರು ತಿಳಿಸಿದ್ದಾರೆ.

 

8 ಲಕ್ಷ ಕೋಟಿ ಮೌಲ್ಯದ ಟಾಟಾ ಸಮೂಹದಿಂದ ಆಲ್-ಇನ್-ಒನ್ ಆಪ್ ಅಭಿವೃದ್ಧಿ8 ಲಕ್ಷ ಕೋಟಿ ಮೌಲ್ಯದ ಟಾಟಾ ಸಮೂಹದಿಂದ ಆಲ್-ಇನ್-ಒನ್ ಆಪ್ ಅಭಿವೃದ್ಧಿ

ಈ ಎರಡು ಕಂಪೆನಿಗಳ ನಡುವೆ ಮಾತುಕತೆ ನಡೆದಿದ್ದು, ಟಾಟಾ ಹಾಗೂ ವಾಲ್ ಮಾರ್ಟ್ ಜಂಟಿಯಾಗಿ ಈ ಸೂಪರ್ ಆಪ್ ಆರಂಭಿಸುವ ಸಾಧ್ಯತೆ ಇದೆ. ಟಾಟಾ ಇ ಕಾಮರ್ಸ್ ವ್ಯವಹಾರ ಹಾಗೂ ವಾಲ್ ಮಾರ್ಟ್ ನ ಇ ಕಾಮರ್ಸ್ ಘಟಕವಾದ ಫ್ಲಿಪ್ ಕಾರ್ಟ್ ಒಟ್ಟಾಗುವ ಸೂಚನೆ ಕಂಡುಬರುತ್ತಿದೆ.

2000ದಿಂದ 2500 ಕೋಟಿ ಯುಎಸ್ ಡಾಲರ್ ಹೂಡಿಕೆ

2000ದಿಂದ 2500 ಕೋಟಿ ಯುಎಸ್ ಡಾಲರ್ ಹೂಡಿಕೆ

ಡಿಜಿಟಲ್ ಪ್ಲಾಟ್ ಫಾರ್ಮ್ ನಲ್ಲಿನ ಪಾಲು ಮಾರಾಟಕ್ಕೆ ಸಂಬಂಧಿಸಿದಂತೆ ಸೂಕ್ತ ಹೂಡಿಕೆದಾರರ ಜತೆಗೆ ಟಾಟಾ ಸಮೂಹ ಚರ್ಚೆ ನಡೆಸಿದೆ ಎಂದು ಬ್ಲೂಮ್ ಬರ್ಗ್ ನ್ಯೂಸ್ ವರದಿ ಮಾಡಿದೆ. ಸದ್ಯಕ್ಕೆ ಟಾಟಾ ಸಮೂಹದಿಂದ ಸೂಪರ್ ಆಪ್ ಆರಂಭಿಸುವ ಬಗ್ಗೆ ಪ್ರಸ್ತಾವ ಮಾಡಲಾಗಿದೆ. ಅದರ ಮೂಲಕ ಸಮೂಹದ ಎಲ್ಲ ಗ್ರಾಹಕ ಉತ್ಪನ್ನಗಳ ಮಾರಾಟ ಮಾಡಬೇಕು ಎಂಬುದು ಉದ್ದೇಶವಾಗಿದೆ. ಈ ಆಪ್ ನಲ್ಲಿ ವಾಲ್ ಮಾರ್ಟ್ ಹೂಡಿಕೆ 2000ದಿಂದ 2500 ಕೋಟಿ ಯುಎಸ್ ಡಾಲರ್ ಆಗಬಹುದು ಎನ್ನಲಾಗಿದೆ.

ಟಾಟಾ ಸನ್ಸ್ ಅಡಿಯಲ್ಲಿ ಈ ಸೂಪರ್ ಆಪ್

ಟಾಟಾ ಸನ್ಸ್ ಅಡಿಯಲ್ಲಿ ಈ ಸೂಪರ್ ಆಪ್

ಟಾಟಾ ಸನ್ಸ್ ಅಡಿಯಲ್ಲಿ ಈ ಸೂಪರ್ ಆಪ್ಲಿಕೇಷನ್ ಬರಲಿದೆ ಎಂದು ಮಿಂಟ್ ವರದಿ ಮಾಡಿದೆ. ಈ ವರ್ಷದ ಡಿಸೆಂಬರ್ ಅಥವಾ ಮುಂದಿನ ವರ್ಷದ ಜನವರಿಯಲ್ಲಿ ಭಾರತದಲ್ಲಿ ಸೂಪರ್ ಅಪ್ಲಿಕೇಷನ್ ಶುರುವಾಗಬಹುದು. ಈ ಮೂಲಕ ಟಾಟಾ ಗ್ರಾಹಕ ವ್ಯವಹಾರ ಸಂಪೂರ್ಣವಾಗಿ ಒಂದು ಚಾನೆಲ್ ಅಡಿಯಲ್ಲಿ ಬರುತ್ತದೆ.

ವಾಲ್ ಮಾರ್ಟ್ ನಿಂದ ಫ್ಲಿಪ್ ಕಾರ್ಟ್ ನಲ್ಲಿ 1600 ಕೋಟಿ ಯುಎಸ್ ಡಿ
 

ವಾಲ್ ಮಾರ್ಟ್ ನಿಂದ ಫ್ಲಿಪ್ ಕಾರ್ಟ್ ನಲ್ಲಿ 1600 ಕೋಟಿ ಯುಎಸ್ ಡಿ

ಟಾಟಾ ಗ್ರಾಹಕ ಉತ್ಪನ್ನಗಳು ಅಂದರೆ, ವಾಚ್- ಜ್ಯುವೆಲ್ಲರಿ ಬ್ರ್ಯಾಂಡ್ ಟೈಟಾನ್, ಫ್ಯಾಷನ್ ರೀಟೇಲ್ ಜಾಲ ಟ್ರೆಂಟ್ ಒಳಗೊಳ್ಳುತ್ತವೆ. ಒಂದು ವೇಳೆ ಟಾಟಾ ಸಮೂಹದ ಜತೆಗೆ ವಾಲ್ ಮಾರ್ಟ್ ಈ ವ್ಯವಹಾರ ಮಾಡಿದಲ್ಲಿ ಫ್ಲಿಪ್ ಕಾರ್ಟ್ ಗಿಂತ ಹೆಚ್ಚಿನ ಮೊತ್ತವನ್ನು ಹೂಡಿದಂತಾಗುತ್ತದೆ. ಯುಎಸ್ ಮೂಲಕದ ಕಂಪೆನಿ ವಾಲ್ ಮಾರ್ಟ್ ನಿಂದ ಫ್ಲಿಪ್ ಕಾರ್ಟ್ ನಲ್ಲಿ 66% ಪಾಲಿಗೆ 1600 ಕೋಟಿ ಅಮೆರಿಕನ್ ಡಾಲರ್ ಹೂಡಲಾಗಿದೆ.

ಗೋಲ್ಡ್ ಮ್ಯಾನ್ ಸ್ಯಾಚ್ಸ್ ಬ್ಯಾಂಕರ್ ಆಗಿ ನೇಮಕ

ಗೋಲ್ಡ್ ಮ್ಯಾನ್ ಸ್ಯಾಚ್ಸ್ ಬ್ಯಾಂಕರ್ ಆಗಿ ನೇಮಕ

ಈಗಿನ ಪ್ರಸ್ತಾವಿತ ವ್ಯವಹಾರಕ್ಕೆ ವಾಲ್ ಮಾರ್ಟ್ ನಿಂದ ಗೋಲ್ಡ್ ಮ್ಯಾನ್ ಸ್ಯಾಚ್ಸ್ ಅನ್ನು ಬ್ಯಾಂಕರ್ ಆಗಿ ನೇಮಿಸಲಾಗಿದೆ ಎಂದು ಮಿಂಟ್ ತಿಳಿಸಿದೆ. ಆದರೆ ಈ ವ್ಯವಹಾರದ ಬಗ್ಗೆ ವಾಲ್ ಮಾರ್ಟ್ ಮತ್ತು ಗೋಲ್ಡ್ ಮ್ಯಾನ್ ಸ್ಯಾಚ್ಸ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

English summary

Walmart Inc Discussion With Tata Group To Invest 20 To 25 Billion USD In Super App

According to sources Walmart Inc discussion with Tata Group to invest 20 to 25 billion USD in super app of Tata group.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X