For Quick Alerts
ALLOW NOTIFICATIONS  
For Daily Alerts

ಜಪಾನ್ ನಿಂದ 'ಜೂಟ್' ಹೇಳುವ ಹಂತದಲ್ಲಿ ವಾಲ್ ಮಾರ್ಟ್ ನಿಂದ 'ಸೈಯು' ಷೇರು ಮಾರಾಟ

|

ವಾಲ್ ಮಾರ್ಟ್ ಕಂಪೆನಿಯು ಜಪಾನೀಸ್ ಸೂಪರ್ ಮಾರ್ಕೆಟ್ ಜಾಲ "ಸೈಯು"ನಲ್ಲಿನ ಪ್ರಮುಖ ಷೇರಿನ ಪಾಲನ್ನು ಹೂಡಿಕೆ ಸಂಸ್ಥೆ ಕೆಕೆಆರ್ ಹಾಗೂ ಇ ಕಾಮರ್ಸ್ ಕಂಪೆನಿ ರಕುಟೆನ್ ಗೆ ನೂರು ಕೋಟಿ ಅಮೆರಿಕನ್ ಡಾಲರ್ ಗೂ ಹೆಚ್ಚಿನ ಮೊತ್ತಕ್ಕೆ ಮಾರಾಟ ಮಾಡುತ್ತಿದೆ. ಹಲವು ವರ್ಷಗಳ ನಂತರವೂ ಹಣ ಮಾಡಲು ಪಡುತ್ತಿರುವ ಹೆಣಗಾಟ ಹಾಗೂ ತೀವ್ರ ಸ್ಪರ್ಧೆಯ ಕಾರಣಕ್ಕೆ ಈ ನಿರ್ಧಾರ ಮಾಡಲಾಗಿದೆ.

 

ಈ ವ್ಯವಹಾರದಲ್ಲಿ ಸೈಯು ಅನ್ನು 17,250 ಕೋಟಿ ಯೆನ್ (165 ಕೋಟಿ ಅಮೆರಿಕನ್ ಡಾಲರ್) ಗೆ ಮೌಲ್ಯಮಾಪನ ಮಾಡಲಾಗಿದೆ. ಜಪಾನ್ ನಿಂದ ವಾಲ್ ಮಾರ್ಟ್ ನಿರ್ಗಮಿಸಲಿದೆ ಎಂಬ ಸುದ್ದಿ ಹಿನ್ನೆಲೆಯಲ್ಲಿ ಮೌಲ್ಯಮಾಪನ ನಡೆದಿದೆ. ಕೆಲ ವರ್ಷಗಳ ಹಿಂದೆ ಕೇಳಿದ್ದಕ್ಕಿಂತ 300ರಿಂದ 500 ಬಿಲಿಯನ್ ಯೆನ್ ಕಡಿಮೆ ಎಂದು ವರದಿ ಆಗಿದೆ.

 

ಆರ್ಥಿಕ ಕುಸಿತದಿಂದ ಹೊರಬಂದ ಜಪಾನ್; 5.0 ಪರ್ಸೆಂಟ್ ಬೆಳವಣಿಗೆಆರ್ಥಿಕ ಕುಸಿತದಿಂದ ಹೊರಬಂದ ಜಪಾನ್; 5.0 ಪರ್ಸೆಂಟ್ ಬೆಳವಣಿಗೆ

ಕೆಕೆಆರ್ ನಿಂದ ಸೈಯುನಲ್ಲಿ 65 ಪರ್ಸೆಂಟ್ ಖರೀದಿ ಮಾಡಲಾಗುವುದು. ಇನ್ನು ರಕುಟೆನ್ 20 ಪರ್ಸೆಂಟ್ ಪಾಲು ಖರೀದಿಸಲಿದೆ. ಇನ್ನು ಬಾಕಿ 15 ಪರ್ಸೆಂಟ್ ಷೇರಿನ ಪಾಲನ್ನು ವಾಲ್ ಮಾರ್ಟ್ ತನ್ನ ಬಳಿಯೇ ಇರಿಸಿಕೊಳ್ಳಲಿದೆ ಎಂದು ಕಂಪೆನಿಯು ಜಂಟಿ ಹೇಳಿಕೆಯಲ್ಲಿ ಸೋಮವಾರ ತಿಳಿಸಿದೆ.

ಜಪಾನ್ ನಿಂದ 'ಜೂಟ್' ಹೇಳುವ ಹಂತದಲ್ಲಿ ವಾಲ್ ಮಾರ್ಟ್

ವಿಶ್ವದ ಅತಿ ದೊಡ್ಡ ರೀಟೇಲರ್ ವಾಲ್ ಮಾರ್ಟ್ ಜಪಾನಿ ಮಾರುಕಟ್ಟೆಯನ್ನು ಪ್ರವೇಶಿಸಿದ್ದು, 2002ರಲ್ಲಿ. ಸೈಯುನಲ್ಲಿ 6 ಪರ್ಸೆಂಟ್ ಪಾಲು ಖರೀದಿಸುವ ಮೂಲಕ ಪ್ರವೇಶ ಮಾಡಿತು. 2008ರಲ್ಲಿ ಪೂರ್ಣ ಪ್ರಮಾಣದಲ್ಲಿ ವಹಿಸಿಕೊಳ್ಳುವ ಮುನ್ನ ನಿಧಾನಕ್ಕೆ ಷೇರಿನ ಪ್ರಮಾಣ ಹೆಚ್ಚಿಸಿಕೊಂಡು ಹೋಯಿತು.

ಆದರೆ, ಜಪಾನ್ ನಲ್ಲಿ ವಾಲ್ ಮಾರ್ಟ್ ಬಹಳ ಒದಾಡುತ್ತಿದೆ. ಟೆಸ್ಕೋ ಪಿಎಲ್ ಸಿ ಹಾಘೂ ಕೆರೆಫೋರ್ ಎಸ್ ಎನಂತೆ ವಾಲ್ ಮಾರ್ಟ್ ಕೂಡ ದೊಡ್ಡ ನಿರೀಕ್ಷೆ ಇರಿಸಿಕೊಂಡು ಜಪಾನ್ ಪ್ರವೇಶಿಸಿತು. ಆದರೆ ಕಠಿಣ ಸ್ಪರ್ಧೆಯನ್ನು ಎದುರಿಸುವುದಕ್ಕೆ ಆಗಲಿಲ್ಲ.

English summary

Walmart Nearly Exiting Japan By Selling Majority Stake In Seiyu

World's biggest retailer Walmart near exiting Japan by selling majority stake in Seiyu.
Story first published: Monday, November 16, 2020, 16:43 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X