For Quick Alerts
ALLOW NOTIFICATIONS  
For Daily Alerts

ಹಣದುಬ್ಬರವಿಳಿತ ಎಂದರೇನು? ಆರ್ಥಿಕತೆ ಮೇಲಿನ ಪರಿಣಾಮವೇನು?

|

ಹಣದುಬ್ಬರವಿಳಿತ ಎಂಬುದು ಸರಕುಗಳು ಮತ್ತ ಸೇವೆಗಳ ಸಾರ್ವತಿಕ ಬೆಲೆಯಲ್ಲಿನ ತೀವ್ರ ಕುಸಿತವಾಗಿದೆ. ವಾರ್ಷಿಕ ಹಣದುಬ್ಬರ ದರವು ಶೂನ್ಯ ಶೇಕಡಾವಾರು ಪ್ರಮಾಣಕ್ಕಿಂತ ಕುಸಿದಾಗ ಹಣದುಬ್ಬರವಿಳಿತವು ಕಂಡುಬರುತ್ತದೆ.

 

ಹಣದುಬ್ಬರವಿಳಿತದ ಸಮಯದಲ್ಲಿ ಎಲ್ಲಾ ವಸ್ತುಗಳು ಮತ್ತು ಸೇವೆಗಳ ಬೆಲೆಗಳು ಕೈಗೆಟುಕುವ ಬೆಲೆಗಿಂತ ಕೆಳಮಟ್ಟದಲ್ಲಿರುತ್ತದೆ. ಇದರಿಂದ ಗ್ರಾಹಕರು ಸಾಕಷ್ಟು ಖುಷಿಯಾಗೋದು ಸಾಮಾನ್ಯ. ಆದರೆ ಬೆಲೆಯಲ್ಲಿನ ತೀವ್ರ ಕುಸಿತವು ದೇಶದ ಆರ್ಥಿಕತೆ ಮೇಲೆ ತೀವ್ರ ಪರಿಣಾಮ ಬೀರುತ್ತದೆ.

ಇದರಿಂದ ಆಗುವ ಪರಿಣಾಮದಿಂದಾಗಿ ವಸ್ತು, ಸೇವೆಗಳ ಬೆಲೆ ಇಳಿಕೆ ಒಂದೆಡೆಯಾದ್ರೆ, ಮತ್ತೊಂದೆಡೆ ಹಣದ ಮೌಲ್ಯದ ಕುಸಿತದ ಜೊತೆಗೆ ಹಣದ ಪೂರೈಕೆ ಕೂಡ ಕಡಿಮೆಯಾಗತೊಡಗುತ್ತದೆ. ಇದೇ ರೀತಿಯಲ್ಲಿ ಹಣದುಬ್ಬರವಿದ್ದಾಗ ವಿರುದ್ಧವಾಗಿ ವಸ್ತುಗಳ ಬೆಲೆ ಗಗನಕ್ಕೇರುತ್ತದೆ.

ವಸ್ತುಗಳ ಬೆಲೆ ಕುಸಿತದ ಜೊತೆಗೆ ಆಹಾರ ಬೆಲೆ, ಮನೆ ಒಟ್ಟಾರೆ ಮೌಲ್ಯವು ಕೂಡ ತಗ್ಗುತ್ತದೆ. ಆದರೆ ಈ ಸಮಯದಲ್ಲಿ ಜನರಿಗೆ ಖರೀದಿಗೂ ಸಾಧ್ಯವಾಗುವುದಿಲ್ಲ. ಏಕೆಂದರೆ ಜನರಿಗೆ ಕೊಂಡುಕೊಳ್ಳುವಷ್ಟು ಹಣದ ಪೂರೈಕೆಯು ಇರುವುದಿಲ್ಲ.

ಹಣದುಬ್ಬರವಿಳಿತ ಎಂದರೇನು? ಆರ್ಥಿಕತೆ ಮೇಲಿನ ಪರಿಣಾಮವೇನು?

ಹಣದುಬ್ಬರವಿಳಿತದ ಕುರಿತು ಉದಾಹರಣೆ ಹೇಳುವುದಾದದರೆ, ಕಂಪನಿಗಳು ತಮ್ಮ ಉತ್ಪನ್ನಗಳನ್ನು ಕಡಿಮೆ ಬೆಲೆ ಮಾರಾಟ ಮಾಡುತ್ತಾರೆ. ಆದರೆ ಉತ್ಪಾದನಾ ವೆಚ್ಚವನ್ನು ಹೆಚ್ಚು ಸಮಯದವರೆಗೆ ಸರಿದೂಗಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಕಂಪನಿಯು ವೇತನ ಕಡಿತ, ಉದ್ಯೋಗಿಗಳ ವಜಾಕ್ಕೆ ಮುಂದಾಗುತ್ತದೆ. ಇದರಿಂದಾಗಿ ಕೆಲವೇ ಕೆಲವು ಮಂದಿಯ ಬಳಿ ಹಣ ಉಳಿಕೆಯಾಗುತ್ತದೆ.

ಆದರೆ ಇವರೂ ಕೂಡ ಖರೀದಿಸಲು ಮುಂದಾಗುವುದು ಕಡಿಮೆ. ಏಕೆಂದರೆ ವಸ್ತು, ಸೇವೆಗಳ ಬೆಲೆ ಇನ್ನೂ ಕಡಿಮೆಯಾಗಬಹುದು ಎಂದು ಕಾಯುತ್ತಾರೆ. ಇದರ ಫಲಿತಾಂಶವು ಎಲ್ಲ ವಸ್ತು, ಸೇವೆಗಳನ್ನು ಹಣದುಬ್ಬರವಿಳಿನವು ನುಂಗಿ ಹಾಕುತ್ತದೆ.

ಇದನ್ನು ತಡೆಗಟ್ಟಲು ಕೇಂದ್ರ ಬ್ಯಾಂಕುಗಳು ಬಡ್ಡಿದರವನ್ನು ಕಡಿಮೆ ಮಾಡುತ್ತವೆ ಮತ್ತು ಸಾಲಗಳನ್ನು ನೀಡುತ್ತವೆ. ಇದರಿಂದಾಗಿ ಜನರ ಖರೀದಿ ಸಾಮರ್ಥ್ಯ ಹೆಚ್ಚಾಗುತ್ತದೆ ಎಂಬುದು ನಂಬಿಕೆಯಾಗಿದೆ.

English summary

What Is Deflation: How It Will Impact On Economy

Here the details of how deflation will start and how it will impact on any country's economy
Story first published: Monday, July 19, 2021, 19:17 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X