ವಾಟ್ಸಾಪ್ ಪೇ ಇಂಡಿಯಾ ಮುಖ್ಯಸ್ಥ ವಿನಯ್ ಚೋಲೆಟ್ಟಿ ತನ್ನ ಸ್ಥಾನಕ್ಕೆ ಬುಧವಾರ ರಾಜೀನಾಮೆ ನೀಡಿದ್ದಾರೆ. ತಾನು ಅಧಿಕವಾರ ವಹಿಸಿಕೊಂಡ 4 ತಿಂಗಳಿನಲ್ಲೇ ವಿನಯ್ ಚೋಲೆಟ್ಟಿ ವಾಟ್ಸಾಪ್ ಪೇ ಇಂಡಿಯಾ ಮುಖ್ಯಸ್ಥ ಸ್ಥಾನವನ್ನು ತೊರೆದಿದ್ದಾರೆ.
ವಾಟ್ಸಾಪ್ ಪೇ ಇಂಡಿಯಾ ಮುಖ್ಯಸ್ಥ ಸ್ಥಾನಕ್ಕೆ ಕಳೆದ ಸೆಪ್ಟೆಂಬರ್‌ನಲ್ಲಿ ಮನೇಶ್ ಮಹಾತ್ಮೆ ರಾಜೀನಾಮೆ ನೀಡಿದ್ದಾರೆ. ಹಾಗೆಯೇ ಅಮೆಜಾನ್‌ಗೆ ಸೇರ್ಪಡೆಯಾಗಿದ್ದಾರೆ. ಮನೇಶ್ ರಾಜೀನಾಮೆ ಬಳಿಕ ತೆರವಾದ ಸ್ಥಾನಕ್ಕೆ ನಾಲ್ಕು ತಿಂಗಳ ಹಿಂದೆಯಷ್ಟೇ ವಿನಯ್ ಚೋಲೆಟ್ಟಿಯನ್ನು ನೇಮಕ ಮಾಡಲಾಗಿದೆ. ಆದರೆ ಅವರು ಕೂಡಾ ರಾಜೀನಾಮೆ ನೀಡಿದ್ದಾರೆ.
ಕಳೆದ ವರ್ಷ ನ್ಯಾಷನಲ್ ಪೇಮೆಂಟ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ವಾಟ್ಸಾಪ್ ಪೇ ಸೇವೆಯನ್ನು 20 ಮಿಲಿಯನ್‌ನಿಂದ 40 ಮಿಲಿಯನ್‌ಗೆ ಏರಿಕೆ ಮಾಡಲು ಅನುಮತಿ ನೀಡಿದೆ. ಹಾಗೆಯೇ ಕಳೆದ ಏಪ್ರಿಲ್‌ನಲ್ಲಿ ವಾಟ್ಸಾಪ್‌ಗೆ ಈ ಸೇವೆಯನ್ನು 100 ಮಿಲಿಯನ್ ಬಳಕೆದಾರರಿಗೆ ವಿಸ್ತರಿಸಲು ಎನ್‌ಪಿಸಿಐ ಅನುಮತಿಸಿದೆ.
ವಿನಯ್ ಚೋಲೆಟ್ಟಿ ಬೇರೇನು ಉಲ್ಲೇಖಿಸಿದ್ದಾರೆ?
"ನಾನು ಜೀವನದ ಸಾಹಸಕ್ಕೆ ಧುಮುಕುತ್ತಿದ್ದೇವೆ, ವಾಟ್ಸಾಪ್ ಡಿಜಿಟಲ್ ಪೇಮೆಂಟ್‌ಗೆ ಪಾವತಿ ವಿಧಾನ ಬದಲಾಯಿಸಲಿದೆ, ಭಾರತದ ಹಣಕಾಸು ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಲಿದೆ ಎಂದು ನಂಬಿದ್ದೇನೆ. ಮುಂದಿನ ದಿನಗಳಲ್ಲಿ ನಾನು ವಾಟ್ಸಾಪ್‌ನ ಇನ್ನಷ್ಟು ಏಳಿಗೆ ಕಾಣಲು ಬಯಸುತ್ತೇನೆ," ಎಂದು ಲಿಂಕ್ಡಿನ್‌ನಲ್ಲಿ ವಿನಯ್ ಚೋಲೆಟ್ಟಿ ಬರೆದುಕೊಂಡಿದ್ದಾರೆ.
"ವಾಟ್ಸಾಪ್ ಪೇ ಬಳಕೆಯಲ್ಲಿ ಗ್ರಾಹಕರು ತೋರಿಸುವ ಆಸಕ್ತಿಗೆ ನಾನು ವಿಧೇಯನಾಗಿದ್ದೇನೆ. ನನ್ನ ಜೀವನದುದ್ದಕ್ಕೂ ನಾನು ಇದನ್ನು ಮರೆಯುವುದಿಲ್ಲ," ಎಂದು ಕೂಡಾ ಹೇಳಿಕೊಂಡಿದ್ದಾರೆ. ಹಾಗೆಯೇ "ಇಂದು ವಾಟ್ಸಾಪ್ ಪೇನಲ್ಲಿ ನನ್ನ ಕೊನೆಯ ದಿನವಾಗಿದ್ದು, ನಾನು ಸೈನ್ ಆಫ್ ಮಾಡುತ್ತೇನೆ. ಭಾರತದಲ್ಲಿ ವಾಟ್ಸಾಪ್ ಪ್ರಭಾವ ನೋಡುವುದು ಒಂದು ಉತ್ತಮ ಅನುಭವವಾಗಿದೆ ಎಂದು ನಾನು ಹೆಮ್ಮೆಯಿಂದ ಹೇಳುತ್ತೇನೆ," ಎಂದು ಕೂಡಾ ಉಲ್ಲೇಖ ಮಾಡಿದ್ದಾರೆ.
ಮನೇಶ್ ಮಹಾತ್ಮೆ ವಾಟ್ಸಾಪ್‌ನಲ್ಲಿ ಇದ್ದಿದ್ದು ಎಷ್ಟು ತಿಂಗಳು?
ಮೆಟಾ ಪ್ರಕಾರ ವಾಟ್ಸಾಪ್ ಪೇಮೆಂಟ್‌ನಲ್ಲಿ ಮನೇಶ್ ಮಹಾತ್ಮೆ ಸುಮಾರು 18 ತಿಂಗಳುಗಳ ಕಾಲ ಕಾರ್ಯನಿರ್ವಹಣೆ ಮಾಡಿದ್ದಾರೆ. ಭಾರತದಲ್ಲಿ ವಾಟ್ಸಾಪ್ ಪೇಮೆಂಟ್ ಅನ್ನು ಹೆಚ್ಚಿಸುವಲ್ಲಿ ಮಹಾತ್ಮೆ ಪ್ರಮುಖವಾದ ಪಾತ್ರವನ್ನು ವಹಿಸಿದ್ದಾರೆ. ಕಳೆದ ವರ್ಷ ಏಪ್ರಿಲ್‌ನಲ್ಲಿ ಮಹಾತ್ಮೆ ವಾಟ್ಸಾಪ್ ಪೇನ ಮುಖ್ಯಸ್ಥ ಹಾಗೂ ಡೈರೆಕ್ಟರ್ ಆಗಿ ಸಂಸ್ಥೆಗೆ ಸೇರಿದ್ದರು. ಆದರೆ ಸೆಪ್ಟೆಂಬರ್‌ನಲ್ಲಿ ರಾಜೀನಾಮೆ ನೀಡಿ ಅಮೆಜಾನ್‌ಗೆ ಸೇರ್ಪಡೆಯಾಗಿದ್ದಾರೆ.
ರಾಜೀನಾಮೆ ನೀಡಿದ್ದ ಅಭಿಜಿತ್, ರಾಜೀವ್ ಅಗರ್ವಾಲ್
ಈ ಹಿಂದೆ ನವೆಂಬರ್‌ನಲ್ಲಿ ವಾಟ್ಸಾಪ್ ಇಂಡಿಯಾ ಮುಖ್ಯಸ್ಥರಾದ ಅಭಿಜಿತ್ ಬೋಸ್ ಹಾಗೂ ಮೆಟಾ ಇಂಡಿಯಾ ಪಾಲಿಸಿ ಡೈರೆಕ್ಟರ್ ಆಗಿರುವ ರಾಜೀವ್ ಅಗರ್ವಾಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅದಕ್ಕೂ ಮೊದಲು ಮೆಟಾ ಇಂಡಿಯಾದ ಮುಖ್ಯಸ್ಥ ಅಜಿತ್ ಮೋಹನ್ ರಾಜೀನಾಮೆ ನೀಡಿದ್ದರು. ಇನ್ನು ಈ ಹಿಂದೆ ಅಭಿಜಿತ್ ಬೋಸ್ ತಮ್ಮ ರಾಜೀನಾಮೆ ಘೋಷಣೆ ಮಾಡಿದ ಬಳಿಕ ವಾಟ್ಸಾಪ್ ಮುಖ್ಯಸ್ಥ ವಿಲ್ ಕ್ಯಾತ್‌ಕಾರ್ಟ್‌ಗೆ ಧನ್ಯವಾದ ತಿಳಿಸಿದ್ದರು.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಚಿನ್ನದ ಬೆಲೆ ಇಂದು ಏರಿಕೆ? ಖರೀದಿಸುವ ಮುನ್ನ ಇದನ್ನು ನೋಡಿ

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?



Click it and Unblock the Notifications